ನಮೂನೆ ಉ-7
ಕರಡು ಪ್ರಶಂಸನಾ ಪತ್ರ
ಕರ್ನಾಟಕ ನಾಗರಿಕರಿಗೆ ಸೇವೆ ಖಾತ್ರಿ ಅಧಿನಿಯಮ-2011ರ ಅಡಿಯಲ್ಲಿ ತಾವು ನಾಗರಿಕರಿಗೆ ವರ್ಷಾದ್ಯಂತ ಸಕಾಲಿಕ ಸೇವೆಯನ್ನು ನೀಡಿರುತ್ತೀರಿ ಎಂಬುದು ಹೆಮ್ಮೆಯ ವಿಷಯ. ತಮ್ಮ ಉತ್ತಮ ಸೇವೆ ನಿರ್ವಹಣೆಯಿಂದ ಇಲಾಖೆಗೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ, ಹಾಗೂ ನಾಗರಿಕರಲ್ಲಿ ಈ ಅಧಿನಿಯಮ ಹಾಗೂ ಸರ್ಕಾರದ ಆಡಳಿತ ಸುಧಾರಣೆಗೆ ತೆಗೆದುಕೊಂಡ ಕ್ರಮದ ಬಗ್ಗೆ ವಿಶ್ವಾಸ ಮೂಡಿದೆ. ತಮ್ಮ ಸೇವೆಯ ಮಾದರಿಯಿಂದ ತಮ್ಮ ಸಹೋದ್ಯೋಗಿಗಳು ಉತ್ತೇಜನ ಹಾಗೂ ಪ್ರೇರಣೆ ಪಡೆಯುತ್ತಾರೆ ಎಂದು ಭಾವಿಸಿದೆ. ಮುಂದಿನ ದಿವಸಗಳಲ್ಲಿ ಇಲಾಖೆಯ ಎಲ್ಲಾ ಸಿಬ್ಬಂದಿಗಳೂ, ಸರ್ಕಾರ ಹಾಗೂ ನಾಗರಿಕರ ಪ್ರಶಂಸೆಗೆ ಪಾತ್ರರಾಗುತ್ತಾರೆ ಎಂದು ಆಶಿಸುತ್ತಾ, ತಮ್ಮ ಸೇವಾವಧಿಯಲ್ಲಿ ತಮಗೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ಅಪೇಕ್ಷಿಸುತ್ತಾ ಸರ್ಕಾರದ ಪರವಾಗಿ ತಮಗೆ ಅಭಿನಂದನೆಗಳು.
ಇಲಾಖಾ ಕಾರ್ಯದರ್ಶಿಗಳು
ಸರ್ಕಾರಿ ಮುದ್ರಣಾಲಯ, ವಿಕಾಸಸೌಧ ಘಟಕ, ಬೆಂಗಳೂರು, ಪಿ7, ಕಾ.ಸೂ. , ಪ್ರತಿಗಳು: