ಹೆಸರಿಸಲಾದ ಪ್ರಾಧಿಕಾರದ ಅಥವಾ ಸಕ್ಷಮ ಪ್ರಾಧಿಕಾರದ ಆದೇಶಗಳ ಮೇಲಿನ ತೀರ್ಮಾನವು ಈ ಮುಂದಿನ ಹಂತಗಳನ್ನು ಒಳಗೊಂಡಿರತಕ್ಕದ್ದು, ಎಂದರೆ:-
(1) ಸಂಬಂಧಿಸಿದ ದಸ್ತಾವೇಜುಗಳು, ಸಾರ್ವಜನಿಕ ದಾಖಲೆಗಳು ಅಥವಾ ಅವುಗಳ ಪ್ರತಿಗಳ ಪುನರೀಕ್ಷಣೆ;
(2) ಅಸಾಧಾರಣ ಸಂದರ್ಭಗಳಲ್ಲಿ ಅಗತ್ಯ ತಪಾಸಣೆಗಾಗಿ ಯಾಮೊಬ್ಬ ಇತರೆ ಅಧಿಕಾರಿಯನ್ನು ಪ್ರಾಧಿಕೃತಗೊಳಿಸಬಹುದು;
(3) ಅಹವಾಲನ್ನು ಕೇಳುವುದಕ್ಕಾಗಿ ಪುನರೀಕ್ಷಣೆಯ ಯಾವುದೇ ಸಮಯದಲ್ಲಿ ಹೆಸರಿಸಲಾದ ಅಧಿಕಾರಿ ಅಥವಾ ಸಕ್ಷಮ ಅಧಿಕಾರಿಯನ್ನು ಸಮನು ಮಾಡಬಹುದು.