ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ಪ್ರಾಧಿಕಾರಗಳು,
(1) ಈ ಅಧಿನಿಯಮದಡಿಯಲ್ಲಿ ಉದ್ದೇಶಿಸಲಾದ ಹಕ್ಕುಗಳನ್ನು ಹೇಗೆ ಚಲಾಯಿಸಬೇಕೆಂಬುದರ ಬಗ್ಗೆ, ಸಾರ್ವಜನಿಕರಿಗೆ ನಿರ್ದಿಷ್ಟವಾಗಿ ಅವಕಾಶವಂಚಿತ ಸಮುದಾಯಗಳಿಗೆ ಹೆಚ್ಚಿನ ಅರಿವನ್ನು ಮೂಡಿಸಲು ಶಿಬಿರಗಳನ್ನು ಮತ್ತು ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸಂಘಟಿಸುವುದು;
(2) ಈ ಅಧಿನಿಯಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅವಶ್ಯವಿರುವ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸತಕ್ಕದ್ದು.
(3) ಅಧಿಸೂಚಿತ ಸೇವೆಗಳು ಮತ್ತು ಅರ್ಜಿಗಳ ವಿಲೆ ವಿಧಾನಗಳ ಬಗ್ಗೆ ಸಾರ್ವಜನಿಕ ಪ್ರಾಧಿಕಾರಗಳಿಂದ ಸಕಾಲಿಕ ಹಾಗೂ ನಿಖರ ಮಾಹಿತಿಯನ್ನು ಪರಿಣಾಮಕಾರಿಯಾಗಿ ನಾಗರಿಕರಿಗೆ ನೀಡುವುದು.
(4) ಈ ಅಧಿನಿಯಮದಡಿಯಲ್ಲಿ ಹೆಸರಿಸಲಾದ ಅಧಿಕಾರಿ, ಸಕ್ಷಮ ಅಧಿಕಾರಿ ಮತ್ತು ಸಂದರ್ಭಾನುಸಾರ, ಮೇಲ್ಮನವಿ ಪ್ರಾಧಿಕಾರಗಳನ್ನು ಅವರುಗಳ ಕರ್ತವ್ಯಗಳ ಬಗ್ಗೆ ತರಬೇತಿ ನೀಡುವುದು ಹಾಗೂ ಕೈಪಿಡಿ ಹೊರಡಿಸುವುದು.
(5) ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಈ ಅಧಿನಿಯಮದಡಿಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಹಕ್ಕನ್ನು ಚಲಾಯಿಸಲು ಬಯಸುವಂಥ ವ್ಯಕ್ತಿಗೆ ಯುಕ್ತವಾಗಿ ಅಗತ್ಯವಾಗಬಹುದಾದಂಥ ಮತ್ತು ಸುಲಭವಾಗಿ ಒಟ್ಟುಗೂಡಿಸಿರಬಹುದಾದಂಥ ಮಾಹಿತಿ ಹಾಗೂ ವಿಧಾನಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ರಚಿಸುವುದು.
(6) ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು, ಅವಶ್ಯಕವಾದಲ್ಲಿ, ಈ ಮುಂದಿನವುಗಳನ್ನು ಎಂದರೆ:-
(i) ಈ ಅಧಿನಿಯಮದ ಉದ್ದೇಶಗಳು;
(ii) ಹೆಸರಿಸಲಾದ ಅಧಿಕಾರಿ ಅಥವಾ ಸಕ್ಷಮ ಅಧಿಕಾರಿಗೆ ಸಲ್ಲಿಸತಕ್ಕಂಥ ಸೇವೆಗಳಿಗೆ ಸಂಬಂಧಿಸಿದ ಕೋರಿಕೆಯ ನಮೂನೆ ಮತ್ತು ವಿಧಾನ;
(iii) ಮೇಲ್ಮನವಿಗಳನ್ನು ದಾಖಲಿಸುವ ರೀತಿಯನ್ನು ಒಳಗೊಂಡಂತೆ ಸೇವೆಗಳ ವಿಳಂಬ ಅಥವಾ ತಿರಸ್ಕರಿಸುವುದಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಲಭ್ಯವಿರುವ ಎಲ್ಲಾ ಪರಿಹಾರಗಳು;
(iv) ಈ ಅಧಿನಿಯಮಕ್ಕೆ ಅನುಸಾರವಾಗಿ ಸೇವೆಗಳನ್ನು ಪಡೆಯುವ ಸಂಬಂಧದಲ್ಲಿ ರಚಿಸಲಾದ ಅಥವಾ ಹೊರಡಿಸಲಾದ ಯಾವುವೇ ಹೆಚ್ಚುವರಿ ವಿನಿಯಮಗಳು ಅಥವಾ ಸುತ್ತೋಲೆಗಳು;
- ಇವುಗಳನ್ನು ಒಳಗೊಳ್ಳತಕ್ಕಂಥ, ನಿರ್ದಿಷ್ಟವಾಗಿ ಮತ್ತು ಮೇಲಿನ ಉಪನಿಯಮ (5)ರ ಸಾಮಾನ್ಯಾನ್ವಯಕ್ಕೆ ಬಾಧಕವಾಗದಂತೆ ನಿಯತಮಧ್ಯಂತರಗಳಲ್ಲಿ ಮೇಲಿನ (5)ನೇ ಉಪನಿಯಮದ ಅಡಿಯಲ್ಲಿ ಉಲ್ಲೇಖಿಸಿದ ಮಾರ್ಗಸೂಚಿಗಳನ್ನು ಇಂದೀಕರಿಸತಕ್ಕದ್ದು ಮತ್ತು ಪ್ರಕಟಿಸತಕ್ಕದ್ದು.