(1) ನಾಗರಿಕ ಸಂಬಂಧಿ ಸೇವೆಗಳಿಗಾಗಿ ಅರ್ಜಿಯನ್ನು ಸಲ್ಲಿಸಿರುವ ನಾಗರಿಕನು, ನಮೂನೆ - ಆ ಪ್ರತಿಯನ್ನು ಸಕ್ಷಮ ಅಧಿಕಾರಿಗೆ ಸಲ್ಲಿಸಿ/ಕರೆ ಕೇಂದ್ರದ ಮೂಲಕವೂ ದಾಖಲಿಸಿ ಪರಿಹಾರದ ವೆಚ್ಚವನ್ನು ಕೋರುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದು.
(2) ಸಕ್ಷಮ ಅಧಿಕಾರಿಯು, ಪರಿಹಾರದ ವೆಚ್ಚಕ್ಕಾಗಿನ ಅರ್ಜಿಯನ್ನು, ದಿನಾಂಕ ಮತ್ತು ಮೊಹರಿನೊಂದಿಗೆ, ಸ್ವೀಕರಿಸತಕ್ಕದ್ದು ಅಥವಾ ಸ್ವೀಕರಿಸುವಂತೆ ಮಾಡತಕ್ಕದ್ದು.
(3) ಪರಿಹಾರ ವೆಚ್ಚಕ್ಕಾಗಿನ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ಅರ್ಜಿದಾರನು ಅರ್ಹನಾದ ಪರಿಹಾರ ವೆಚ್ಚವನ್ನು ಸಕ್ಷಮ ಅಧಿಕಾರಿಯು ಆನ್ಲೈನ್ ಮಾಹಿತಿ ಆಧಾರದ ಮೇಲೆ ಮೌಲ್ಯಮಾಪನ ಮಾಡತಕ್ಕದ್ದು ಮತ್ತು ಅದನ್ನು ಪಾವತಿ ಮಾಡುವುದಕ್ಕೆ ಕಚೇರಿಯ ಇಂಪ್ರೆಸ್ಟ್ ಮೊತ್ತದಿಂದ ತಕ್ಷಣ ಪಾವತಿಸಿ ಸ್ವೀಕೃತಿ ಸಹಿಯನ್ನು ಪಡೆಯತಕ್ಕದ್ದು. ತದನಂತರ ಆತನು 11ನೇ ಪ್ರಕರಣದ ಅಡಿಯಲ್ಲಿ ಅನುಸೂಚಿಯಲ್ಲಿ ನಿಗದಿಪಡಿಸಿರುವ ಕಾಲಮಿತಿಯಲ್ಲಿ ತಪ್ಪಿತಸ್ಥ ಸಾರ್ವಜನಿಕ ನೌಕರನಿಂದ ಅದನ್ನು 30 ದಿನಗಳು ವಸೂಲು ಮಾಡಲು ಕ್ರಮವಹಿಸತಕ್ಕದ್ದು.