ಹೆಸರಿಸಲಾದ ಅಧಿಕಾರಿ, ಸಕ್ಷಮ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಗಳು ಅನುಕ್ರಮವಾಗಿ ನಮೂನೆ-ಉ-1, ಉ-2, ಉ-3 ಗಳಲ್ಲಿ ಎಲ್ಲಾ ಪ್ರಕರಣಗಳ ದಾಖಲೆಗಳನ್ನು ನಿರ್ವಹಿಸತಕ್ಕದ್ದು ಮತ್ತು ವಿಶೇಷವಾಗಿ ಉ-1 ನಮೂನೆ ಪ್ರಕಾರ ವಿಳಂಬ ಹಾಗೂ ವಿಫಲತೆ ಪ್ರಕರಣಗಳ ಬಗ್ಗೆ ತೆಗೆದುಕೊಂಡ ಕ್ರಮವನ್ನು ಸಾರ್ವಜನಿಕ ಪ್ರಾಧಿಕಾರದ ಮುಖ್ಯಸ್ಥರಿಗೆ ನಿಯತಕಾಲಿಕ ವರದಿಯನ್ನು ಕಳುಹಿಸತಕ್ಕದ್ದು. 7 ಪ್ರಕರಣದಿಂದ ಹೆಚ್ಚು ವಿಳಂಬ/ವಿಫಲತೆಯನ್ನು ಹೊಂದಿರತಕ್ಕಂಥ ಸರ್ಕಾರಿ ನೌಕರರಿಗೆ ನಮೂನೆ ಉ-4 ರಂತೆ ಇ-ಮೇಲ್ ಮೂಲಕ ಕಾರಣ ಕೇಳುವ ನೋಟೀಸ್ ನೀಡತಕ್ಕದ್ದು. ಕಾರಣಗಳು ಸಮರ್ಪಕವಾಗದೆ ಇರುವ ಸಂದರ್ಭದಲ್ಲಿ ಶಿಸ್ತಿನ ಕ್ರಮ ಜರುಗಿಸುವುದು.
ಸಕ್ಷಮ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರ ತನ್ನ ಸಮಯ ಮಿತಿಯನ್ನು ಮೀರಿದ್ದರೆ, ನಮೂನೆ ಉ-5 ರಂತೆ ಇ-ಮೇಲ್ ಮೂಲಕ ಕಾರಣ ಕೇಳುವ ನೋಟೀಸ್ ನೀಡತಕ್ಕದ್ದು. ಇಂಥ ಪ್ರಕರಣಗಳನ್ನು ತಿಂಗಳ ಅಂತ್ಯಕ್ಕೆ ನಮೂನೆ ಉ-6ರಲ್ಲಿ ಸಿ.ಆ.ಸು.ಇಲಾಖೆಗೆ ವರದಿ ಮಾಡತಕ್ಕದ್ದು.
ಸಾರ್ವಜನಿಕ ಪ್ರಾಧಿಕಾರದ ಮುಖ್ಯಸ್ಥರು ಈ ಕ್ರಮವನ್ನು ತನ್ನ ವಾರ್ಷಿಕ ವರದಿಯಲ್ಲಿ ಸೇರಿಸತಕ್ಕದ್ದು.
ವರ್ಷ ಅಂತ್ಯಕ್ಕೆ ಯಾವುದೇ ವಿಫಲರಾಗದೇ ಇರುವ ಅಧಿಕಾರಿಯ ಪಟ್ಟಿಯನ್ನು ಪ್ರಕಟಿಸಿ, ಶ್ಲಾಘನೆಪತ್ರ ನೀಡತಕ್ಕದ್ದು. (ನಮೂನೆ ಉ-7).