(1) ಅನುಸೂಚಿಯಲ್ಲಿ ನಮೂದಿಸಿರುವ ಒಂದು ಅಥವಾ ಹೆಚ್ಚಿನ ಸೇವೆಗಳನ್ನು ಪಡೆಯಲು ಬಯಸುವ ನಾಗರಿಕರು ನಿಗದಿತ ಅರ್ಜಿ ನಮೂನೆಯಲ್ಲಿ ತಾಳೆಪಟ್ಟಿಯಲ್ಲಿ ಹೇಳಿರುವ ಎಲ್ಲಾ ದಾಖಲಾತಿಗಳೊಂದಿಗೆ ಹೆಸರಿಸಲಾದ ಅಧಿಕಾರಿಗೆ ಅರ್ಜಿಯನ್ನು ಸ್ವೀಕೃತ ಕೌಂಟರುಗಳಲ್ಲಿ / ನೋಂದಣಿ ಅಂಚೆ ಸ್ವೀಕೃತಿ ಬಾಕಿ/ ಅಂಚೆ/ಇ-ಮೈಲ್ ಸಲ್ಲಿಸಬಹುದಾಗಿದೆ.
(2) ಹೆಸರಿಸಲಾದ ಅಧಿಕಾರಿ ಅಥವಾ ಅಧಿಕೃತ ವ್ಯಕ್ತಿಯು, ಲಿಖಿತ ರೂಪದಲ್ಲಿ ಅಥವಾ ನಿಯಮಿಸಿದೆಡೆಯಲ್ಲಿ ಅಂಥ ನಮೂನೆಯಲ್ಲಿ, ಅರ್ಜಿಯನ್ನು ಸ್ವೀಕರಿಸಿದಾಗ, ನಮೂನೆ-ಆ ಯಲ್ಲಿ ಅರ್ಜಿದಾರನಿಗೆ ಯುಕ್ತ ಸ್ವೀಕೃತಿಯನ್ನು ನೀಡತಕ್ಕದ್ದು. ಪ್ರತಿಯೊಂದು ಅರ್ಜಿಗೆ ಒಂದು ಗಣಕೀಕೃತ ಸ್ವೀಕೃತಿ ಸಂಖ್ಯೆಯನ್ನು ನೀಡತಕ್ಕದ್ದು.
(3) ಅರ್ಜಿಯೊಂದಿಗೆ ಯಾವುದೇ ಅವಶ್ಯಕ ದಸ್ತಾವೇಜುಗಳನ್ನು ಲಗತ್ತಿಸಿರದ ಸಂದರ್ಭದಲ್ಲಿ, ಅದನ್ನು ಸ್ವೀಕೃತಿಯಲ್ಲಿ ಸ್ಪಷ್ಟವಾಗಿ ನಮೂದಿಸತಕ್ಕದ್ದು ಮತ್ತು ಅಂಥ ಸ್ವೀಕೃತಿಗಳಲ್ಲಿ ಸೇವೆ ಒದಗಿಸುವ ದಿನಾಂಕವನ್ನು ನಮೂದಿಸತಕ್ಕದ್ದಲ್ಲ.
(4) ಅರ್ಜಿಯೊಂದಿಗೆ ಎಲ್ಲಾ ಅವಶ್ಯಕ ದಸ್ತಾವೇಜುಗಳನ್ನು ಲಗತ್ತಿಸಿದ್ದಲ್ಲಿ ಮತ್ತು ಅರ್ಜಿಯು ಎಲ್ಲಾ ವಿಧಗಳಲ್ಲಿಯೂ ಪೂರ್ಣವಾಗಿದ್ದಲ್ಲಿ, ಆಗ ಸೇವೆ ಒದಗಿಸುವ ದಿನಾಂಕವನ್ನು ನಮೂದಿಸತಕ್ಕದ್ದು.