ಸಕ್ಷಮ ಅಧಿಕಾರಿಯು, ಪರಿಹಾರವನ್ನು ಪಾವತಿ ಮಾಡಿದ ಅರ್ಜಿಯ ಪ್ರತಿಯನ್ನು ಆತನಿಗೆ ಒದಗಿಸುವಲ್ಲಿ ವಿಳಂಬಕ್ಕೆ ಅಥವಾ ತಪ್ಪಿಗೆ ಹೊಣೆಗಾರನಾದ ಹೆಸರಿಸಲಾದ ಅಧಿಕಾರಿ ಅಥವಾ ಅಧೀನ ಸಿಬ್ಬಂದಿಗೆ ನೋಟೀಸನ್ನು ನೀಡತಕ್ಕದ್ದು ಮತ್ತು ಪಾವತಿ ಮಾಡಿದ ಪರಿಹಾರ ವೆಚ್ಚವನ್ನು ಆತನಿಂದ ಏಕೆ ವಸೂಲು ಮಾಡಬಾರದೆಂಬುದಕ್ಕೆ ಕಾರಣಗಳನ್ನು ಕೇಳತಕ್ಕದ್ದು. ತಪ್ಪಿತಸ್ಥ ಅಥವಾ ವಿಳಂಬ ಮಾಡಿದ ಅಧಿಕಾರಿ ಅಥವಾ ಸಿಬ್ಬಂದಿಗೆ ಕಾರಣಗಳನ್ನು ಯಾವ ಕಾಲಮಿತಿಯೊಳಗೆ ಒದಗಿಸಬೇಕೆಂಬುದನ್ನೂ ಆತನು ಸೂಚಿಸತಕ್ಕದ್ದು. (ನಮೂನೆ-ಇ)
Loading…