ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ‘‘ಅಧಿನಿಯಮ'' ಎಂದರೆ ಕರ್ನಾಟಕ ಗೃಹನಿರ್ಮಾಣ ಮಂಡಲಿ ಅಧಿನಿಯಮ, 1962 (1963ರ ಕರ್ನಾಟಕ ಅಧಿನಿಯಮ 10);
(ಬಿ) ‘‘ನಮೂನೆ'' ಎಂದರೆ ಈ ನಿಯಮಗಳಿಗೆ ಅನುಬಂಧಿಸಿದ ನಮೂನೆ;
(ಸಿ) ‘‘ಸರ್ಕಾರ'' ಎಂದರೆ ರಾಜ್ಯ ಸರ್ಕಾರ;
(ಡಿ) ‘‘ಅನುಸೂಚಿ'' ಎಂದರೆ ಈ ನಿಯಮಗಳಿಗೆ ಅನುಬಂಧಿಸಿದ ಅನುಸೂಚಿ;
(ಇ) ‘‘ಪ್ರಕರಣ'' ಎಂದರೆ ಅಧಿನಿಯಮದ ಪ್ರಕರಣ.