Annexure
(2) 45ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗಿನ ಅಂತಿಮ ನೋಟೀಸು IV-ಎ ನಮೂನೆಯಲ್ಲಿರತಕ್ಕದ್ದು.
(3) 46ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗಿನ ನೋಟೀಸು Vನೇ ನಮೂನೆಯಲ್ಲಿರತಕ್ಕದ್ದು.
(4) 46ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗಿನ ನೋಟೀಸು VIನೇ ನಮೂನೆಯಲ್ಲಿರತಕ್ಕದ್ದು.
- ಹೊಸ ನಿಯಮ 11ಎ ಸೇರ್ಪಡೆ.- ಸದರಿ ನಿಯಮಗಳಲ್ಲಿ 11ನೇ ನಿಯಮದ ತರುವಾಯ ಈ ಮುಂದಿನ ನಿಯಮವನ್ನು ಸೇರಿಸತಕ್ಕದ್ದು, ಎಂದರೆ:-
‘‘11ಎ. ಅಪೀಲುಗಳಲ್ಲಿನ ಪ್ರಕ್ರಿಯೆ.- (1) ಅಧಿನಿಯಮದ 48ನೇ ಪ್ರಕರಣದ ಮೇರೆಗೆ ಸಲ್ಲಿಸುವ ಅಪೀಲು ಬರವಣಿಗೆಯಲ್ಲಿರತಕ್ಕದ್ದು ಮತ್ತು ಅದರಲ್ಲಿ ಯಾವ ಆದೇಶದ ವಿರುದ್ಧ ಅಪೀಲು ಸಲ್ಲಿಸಲಾಗಿದೆಯೋ ಆ ಆದೇಶಕ್ಕೆ ಮಾಡಿದ ಆಕ್ಷೇಪಣೆಯ ಕಾರಣಗಳನ್ನು ಸಂಕ್ಷಿಪ್ತವಾಗಿ ನಿರೂಪಿಸಿರತಕ್ಕದ್ದು ಮತ್ತು ಅದಕ್ಕೆ ಅಂಥ ಆದೇಶದ ಒಂದು ಪ್ರತಿಯನ್ನು ಲಗತ್ತಿಸಿರತಕ್ಕದ್ದು.
(2) ಅಪೀಲನ್ನು ಸ್ವೀಕರಿಸಿದ ತರುವಾಯ ಮತ್ತು ಸಕ್ಷಮ ಪ್ರಾಧಿಕಾರದ ಸಮ್ಮುಖದಲ್ಲಿ ನಡೆದ ವ್ಯವಹರಣೆಗಳ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸಿದ ತರುವಾಯ ಅಪೀಲು ಅಧಿಕಾರಿಯು ಅಪೀಲಿನ ವಿಚಾರಣೆಗಾಗಿ ಸಮಯ ಮತ್ತು ಸ್ಥಳವನ್ನು ಗೊತ್ತುಪಡಿಸತಕ್ಕದ್ದು ಮತ್ತು ಯಾವ ಸಕ್ಷಮ ಪ್ರಾಧಿಕಾರದ ಆದೇಶದ ವಿರುದ್ಧ ಅಪೀಲನ್ನು ಸಲ್ಲಿಸಲಾಗಿದೆಯೋ ಆ ಸಕ್ಷಮ ಪ್ರಾಧಿಕಾರಕ್ಕೆ ಮತ್ತು ಅಪೀಲುದಾರನಿಗೆ ಆ ಬಗ್ಗೆ ನೋಟೀಸು ಕೊಡತಕ್ಕದ್ದು.
- ನಮೂನೆ IVರ ತಿದ್ದುಪಡಿ.- ಸದರಿ ನಿಯಮಗಳಲ್ಲಿ IVನೇ ನಮೂನೆಗೆ ಬದಲಾಗಿ, ಈ ಮುಂದಿನ ನಮೂನೆಯನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-