ನಮೂನೆ Iv - ಎ
(ಕರ್ನಾಟಕ ಗೃಹನಿರ್ಮಾಣ ಮಂಡಲಿ ಅಧಿನಿಯಮ, 1962ರ (1963ರ ಕರ್ನಾಟಕ ಅಧಿನಿಯಮ 10) 45ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗೆ ಅಂತಿಮ ನೋಟೀಸು.)
ಶ್ರೀ / ಶ್ರೀಮತಿ / ಕುಮಾರಿ..................................................... ಇವರು ಈ ಕೆಳಕಂಡ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಮಂಡಲಿಯ ಆವರಣಗಳ ಅನಧಿಕೃತ ಅಧಿಭೋಗದಲ್ಲಿದ್ದಾರೆಂದು ಈ ಕೆಳಗೆ ದಾಖಲು ಮಾಡಿರುವ ಕಾರಣಗಳಿಂದ ಈ ಕೆಳಗೆ ಸಹಿಮಾಡಿರುವ ನನಗೆ ಮನವರಿಕೆಯಾಗಿರುವುದರಿಂದ:
ಕಾರಣಗಳು
ಆದುದರಿಂದ, ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ 45ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ನಾನು, ಸದರಿ ಶ್ರೀ / ಶ್ರೀಮತಿ / ಕುಮಾರಿ ...................................... ಮತ್ತು ಸದರಿ ಆವರಣದ ಅಥವಾ ಅದರ ಯಾವುದೇ ಭಾಗದ ಅಧಿಭೋಗದಲ್ಲಿರಬಹುದಾದ ಎಲ್ಲ ವ್ಯಕ್ತಿಗಳು ಈ ಆದೇಶವು ಜಾರಿಯಾದ ದಿನಾಂಕದಿಂದ ಒಂದು ತಿಂಗಳೊಳಗೆ ಸದರಿ ಆವರಣಗಳನ್ನು ತೆರವು ಮಾಡತಕ್ಕುದೆಂದು ಈಗ ಈ ಮೂಲಕ ಆದೇಶ ಮಾಡಿದ್ದೇ. ಮೇಲೆ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಆದೇಶವನ್ನು ಪಾಲಿಸಲು ನಿರಾಕರಿಸಿದರೆ ಅಥವಾ ತಪ್ಪಿದರೆ ಸದರಿ ಶ್ರೀ / ಶ್ರೀಮತಿ/ಕುಮಾರಿ ............... ಇವರು ಮತ್ತು ಸಂಬಂಧಪಟ್ಟ ಇತರ ಎಲ್ಲಾ ವ್ಯಕ್ತಿಗಳು, ಅಗತ್ಯವೆಂದು ಕಂಡುಬಂದರೆ ಅವಶ್ಯಕವಾಗಬಹುದಾದಂಥ ಬಲವನ್ನು ಉಪಯೋಗಿಸುವ ಮೂಲಕ ಸದರಿ ಆವರಣದಿಂದ ಹೊರಹಾಕಲ್ಪಡಲು ಬದ್ಧರಾಗತಕ್ಕದ್ದು.