(1) ಅಧ್ಯಕ್ಷರಿಗೆ-
(ಎ) ಅವರು ಅಧಿಕಾರೇತರ ಸದಸ್ಯರಾಗಿದ್ದರೆ-
1 1 (i) [xxx] 1. ಜಿ.ಎಸ್.ಆರ್. 150, ದಿನಾಂಕ 14-5-1974ರ ಮೂಲಕ (i)ನೇ ಬಾಬನ್ನು ಬಿಟ್ಟುಬಿಡಲಾಗಿದೆ.
(ii) ಕರ್ನಾಟಕ ಸರ್ಕಾರಿ ಸೇವಾ ನಿಯಮಗಳ VIIIನೇ ಭಾಗದ ಮೇರೆಗೆ ಉನ್ನತ ವರ್ಗದ ಅಧಿಕಾರಿಗೆ ಅನುಮತಿಸಲಾಗುವ ದರಗಳಲ್ಲಿ ಪ್ರಯಾಣ ಭತ್ಯೆಯನ್ನು;
1 [(ಬಿ) ಅವರು ಸರ್ಕಾರಿ ಅಧಿಕಾರಿಯಾಗಿದ್ದರೆ, ಸಂದರ್ಭಾನುಸಾರ ರಾಜ್ಯ ಸಿವಿಲ್ ಸೇವೆಯ ಅಥವಾ ಅಖಿಲ ಭಾರತ ಸೇವೆಗಳ ಸದಸ್ಯರಾಗಿರುವುದಕ್ಕಾಗಿ ಕಾಲಕಾಲಕ್ಕೆ ಸಂಬಳ ಮತ್ತು ಭತ್ಯೆಗಳನ್ನು - ಸಂದಾಯ ಮಾಡತಕ್ಕದ್ದು.
- ಜಿ.ಎಸ್.ಆರ್. 61, ದಿನಾಂಕ 27-2-1971 ರ ಮೂಲಕ (ಬಿ) ಖಂಡವನ್ನು ಪ್ರತಿಯೋಜಿಸಲಾಗಿದೆ. 1 [(2) ಮಂಡಲಿಯ ಒಬ್ಬ ಸದಸ್ಯನು, ಉಪವೇಶನದ ಪ್ರತಿದಿನಕ್ಕೆ 2 [ರೂಪಾಯಿ ಎಪ್ಪತ್ತೈದು ಮಾತ್ರ ಉಪವೇಶನ ಶುಲ್ಕವನ್ನು ಮತ್ತು ಮಂಡಲಿಯ ವ್ಯವಹಾರದ ಸಂಬಂಧದಲ್ಲಿ ಒಂದು ಸ್ಥಳದಲ್ಲಿ ಅವನು ಹಾಜರಾಗುವುದು ಅಗತ್ಯವಾಗಿರುವಾಗ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳ ‘ಎ' ಅನುಬಂಧದ ‘ಎ' ಪಟ್ಟಿಯಲ್ಲಿ ನಿರ್ದಿಷ್ಟಪಡಿಸಿರುವ ದರಗಳಲ್ಲಿ ದಿನ ಭತ್ಯ ಮತ್ತು ಪ್ರಯಾಣ ಭತ್ಯಗಳನ್ನು ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದು.
- ಜಿಎಸ್ಆರ್ 322, ದಿನಾಂಕ 18-7-1967ರ ಮೂಲಕ ಉಪನಿಯಮ (2)ನ್ನು ಪ್ರತಿಯೋಜಿಸಲಾಗಿದೆ.
- ಜಿಎಸ್ಆರ್ 180ರ ದಿನಾಂಕ: 26-6-1976 ರ ಮೂಲಕ ‘‘ನಲವತ್ತು ರೂಪಾಯಿಗಳು'' ಎಂಬ ಪದಗಳ ಬದಲಾಗಿ ಪ್ರತಿಯೋಜಿಸಲಾಗಿದೆ. ಪರಂತು, ಯಾವ ಸದಸ್ಯನ ಸಾಮಾನ್ಯ ವಾಸಸ್ಥಳವು ಅವನು ಹಾಜರಾಗುವುದು ಅಗತ್ಯವಾಗಿರುವಂಥ ಸ್ಥಳದ ಪುರಸಭಾ ಅಥವಾ ಪಂಚಾಯತ್ ಪರಿಮಿತಿಯೊಳಗೆ ಇದ್ದರೆ, ಅವನು ಮಂಡಲಿಯ ವ್ಯವಹಾರಗಳಿಗೆ ಹಾಜರಾಗುವುದಕ್ಕಾಗಿ ದಿನ ಭತ್ಯ ಮತ್ತು ಪ್ರಯಾಣ ಭತ್ಯಗಳನ್ನು ಪಡೆಯತಕ್ಕದ್ದಲ್ಲ:
ಮತ್ತೂ ಪರಂತು, ಯಾರೇ ಸದಸ್ಯನು ಅದೇ ದಿನಕ್ಕೆ ದಿನ ಭತ್ಯ ಮತ್ತು ಉಪವೇಶನ ಭತ್ಯ ಇವೆರಡನ್ನೂ ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದಲ್ಲ.
1 [ಪರಂತು, ಅಧ್ಯಕ್ಷರು ಸರ್ಕಾರದ ಅಧಿಕಾರಿಯಾಗಿದ್ದರೆ, ಸಂದರ್ಭಾನುಸಾರ ರಾಜ್ಯ ಸಿವಿಲ್ ಸೇವೆಗಳ ಅಥವಾ ಅಖಿಲ ಭಾರತ ಸೇವೆಗಳ ಅಧಿಕಾರಿಯಾಗಿರುವುದಕ್ಕಾಗಿ ಕಾಲಕಾಲಕ್ಕೆ ಅವರಿಗೆ ಅನ್ವಯವಾಗುವಂಥ ರೀತಿಯಲ್ಲಿ ಮತ್ತು ಅದೇ ರೀತಿಯ ನಿಬಂಧನೆಗಳಿಗೆ ಮತ್ತು ಷರತ್ತುಗಳಿಗೊಳಪಟ್ಟು ರಜೆಗೆ ಹಕ್ಕುಳ್ಳವರಾಗಿರತಕ್ಕದ್ದು.
- ಜಿಎಸ್ಆರ್ 44ರ ದಿನಾಂಕ 17-2-1973 ರ ಮೂಲಕ ಮೂರನೇ ಪರಂತುಕವನ್ನು ಸೇರಿಸಲಾಗಿದೆ. 1 1 [4. ಅಧ್ಯಕ್ಷರಿಗೆ ರಜೆ.- x x x] 1. ಜಿಎಸ್ಆರ್ 150ರ ದಿನಾಂಕ 14-5-1974 ರ ಮೂಲಕ 4ನೇ ನಿಯಮವನ್ನು ಬಿಟ್ಟುಬಿಡಲಾಗಿದೆ. 1 [4ಎ. ಮಂಡಲಿಯ ಅಧಿಕಾರಿಗಳು ಮತ್ತು ನೌಕರರ ನೇಮಕಾತಿ.- ಮಂಡಲಿಗೆ ಈ ಕೆಳಕಂಡ ಹುದ್ದೆಗಳನ್ನು ನೇಮಕ ಮಾಡುವುದಕ್ಕೆ ಮೊದಲು ಕರ್ನಾಟಕ ಲೋಕಸೇವಾ ಆಯೋಗದೊಂದಿಗೆ ಸಮಾಲೋಚಿಸುವ ಅವಶ್ಯಕತೆ ಇರತಕ್ಕದ್ದಲ್ಲ, ಎಂದರೆ:-
- ಷರಾಫ್ಗಳು; 7. ಬಿಲ್ ಕಲೆಕ್ಟರುಗಳು;
- ಜವಾನರು; 8. ಕಾವಲುಗಾರ;
- ಚಾಲಕರು; 9. ಮಾಲಿಗಳು;