ಅನುಸೂಚಿ - ಬಿ
ಕ.ಗೃ.ಮ.ಗೆ ಎರವಲು ಸೇವೆ ಮೇಲೆ ಬಂದಿರುವ ಅಧಿಕಾರಿಗಳಿಗೆ (ನಾನ್ ಗೆಜೆಟೆಡ್ ಅಧಿಕಾರಿಗಳು) ಕೆ.ಸಿ.ಎಸ್. (ಸಿ.ಸಿ ಮತ್ತು ಎ) ನಿಯಮಗಳು, 1957ರ 8ನೇ ನಿಯಮದ ಮೇರೆಗೆ ದಂಡನೆ ವಿಧಿಸಬಹುದಾದ ಪ್ರಾಧಿಕಾರಿ.
| ಹುದ್ದೆಗಳ ವರ್ಗ | ನೇಮಕಾತಿ ಮಾಡಿಕೊಳ್ಳಲು ಅಧಿಕಾರವುಳ್ಳ ಪ್ರಾಧಿಕಾರಿ | ದಂಡಗಳನ್ನು ವಿಧಿಸುವುದಕ್ಕೆ ಅಧಿಕಾರವುಳ್ಳ ಪ್ರಾಧಿಕಾರಿ ಮತ್ತು ಆ ಪ್ರಾಧಿಕಾರಿಯು ವಿಧಿಸಬಹುದಾದ ದಂಡನೆಗಳು | ಅಪೀಲು ಪ್ರಾಧಿಕಾರಿ | |
| ಅಧಿಕಾರಿ | ದಂಡನೆಗಳು (ನಿಯಮ 8) | |||
| 1 | 2 | 3 | 4 | 5 |
| 1. ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಡ್ರಾಪ್ಟ್ಸ್ಮನ್, ಟ್ರೇಸರ್ಗಳು, (ಪ್ರಧಾನ ಕಚೇರಿಯಲ್ಲಿ) | ಗೃಹ ನಿರ್ಮಾಣ ಆಯುಕ್ತರು | ಕಾರ್ಯದರ್ಶಿ, ಗೃಹನಿರ್ಮಾಣ ಆಯುಕ್ತರು | (ii) ರಿಂದ (iv) (v) ರಿಂದ (viii) | ಗೃಹ ನಿರ್ಮಾಣ ಆಯುಕ್ತರು, ಅಧ್ಯಕ್ಷರು | |
| 2. ಲೆಕ್ಕಪತ್ರಗಳ ಸೂಪರಿಂಟೆಂಡೆಂಟರ್ಗಳು, ತಾಲೂಕು ಶಿರಸ್ತೇದಾರ - ಕಂ - ಸೂಪರಿಂಡೆಂಡೆಂಟ್ಗಳು, ಪ್ರಥಮ ದರ್ಜೆ ಗುಮಾಸ್ತ, ಸ್ಟೆನೋಗ್ರಾಫರ್ಗಳು, ರೆವಿನ್ಯೂ ಇನ್ಸ್ಪೆಕ್ಟರುಗಳು ಮತ್ತು ಸರ್ವೇಯರ್ಗಳು | -ಅದೇ- | -ಅದೇ- | -ಅದೇ- | -ಅದೇ- | |
| 3. ದ್ವಿತೀಯ ದರ್ಜೆ ಗುಮಾಸ್ತರು | -ಅದೇ- | -ಅದೇ- | -ಅದೇ- | -ಅದೇ- | |
| 1 | 2 | 3 | 4 | 5 | |
| ವಿಭಾಗೀಯ ಮತ್ತು ಉಪ ವಿಭಾಗೀಯ ಸಿಬ್ಬಂದಿ ಅಧಿಕಾರಿಗಳಿಗಾಗಿ | |||||
| 1. ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಡ್ರಾಪ್ಟ್ಸ್ಮನ್, ಟ್ರೇಸರ್ಗಳು, (ಪ್ರಧಾನ ಕಚೇರಿಯಲ್ಲಿ) | ಗೃಹ ನಿರ್ಮಾಣ ಆಯುಕ್ತರು | ಕಾರ್ಯದರ್ಶಿ, ಗೃಹನಿರ್ಮಾಣ ಆಯುಕ್ತರು | (ii) ರಿಂದ (iv) (v) ರಿಂದ (viii) | ಗೃಹ ನಿರ್ಮಾಣ ಆಯುಕ್ತರು, ಅಧ್ಯಕ್ಷರು | |
| 4. ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಡ್ರಾಪ್ಟ್ಸ್ಮನ್, ಟ್ರೇಸರ್ಗಳು, ಪ್ರಥಮ ದರ್ಜೆ ಗುಮಾಸ್ತರುಗಳು, ಸ್ಟೆನೋಗ್ರಾಫರ್ಗಳು, ದ್ವಿತೀಯ ದರ್ಜೆ ಗುಮಾಸ್ತರುಗಳು | ಗೃಹನಿರ್ಮಾಣ ಆಯುಕ್ತರು | ಕಾರ್ಯ ನಿರ್ವಾಹಕ ಇಂಜಿನಿಯರ್, ಗೃಹನಿರ್ಮಾಣ ಆಯುಕ್ತರು | (ii) ರಿಂದ (iv) (v) ರಿಂದ (viii) | ಗೃಹ ನಿರ್ಮಾಣ ಆಯುಕ್ತರು, ಅಧ್ಯಕ್ಷರು | |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಖಾದರ್ ಮೊಹಿದ್ದೀನ್,
ಸರ್ಕಾರದ ಅಧೀನ ಕಾರ್ಯದರ್ಶಿ.
1 [ಕರ್ನಾಟಕ ಗೃಹನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1967
- ಕರ್ನಾಟಕ ರಾಜ್ಯಪತ್ರ ದಿನಾಂಕ: 27.7.1967 ರಲ್ಲಿ ಅಧಿಸೂಚನೆ ಸಂಖ್ಯೆ ಡಿಪಿಸಿ 97 ಡಿಎಚ್ಬಿ 66, ದಿನಾಂಕ: 18.7.1967ನ್ನು ಪ್ರಕಟಿಸಲಾಗಿದೆ. ಜಿಎಸ್ಆರ್ 322.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ (1963ರ ಕರ್ನಾಟಕ ಅಧಿನಿಯಮ 10) ರ 74ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ಕ್ಕೆ ತಿದ್ದುಪಡಿ ಮಾಡಲು ಈ ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದೆ ಮತ್ತು ಸದರಿ ಪ್ರಕರಣದ (1)ನೇ ಉಪಪ್ರಕರಣದ ಮೂಲಕ ಅಗತ್ಯಪಡಿಸಿದಂತೆ ಅದರ ಕರಡನ್ನು ಅಧಿಸೂಚನೆ ಸಂಖ್ಯೆ ಜಿಎಸ್ಆರ್ 71, ದಿನಾಂಕ 24ನೇ ಜನವರಿ 1967ರ ಕರ್ನಾಟಕ ರಾಜ್ಯಪತ್ರದ ಭಾಗ IV, ವಿಭಾಗ 2ಸಿ (i), ದಿನಾಂಕ 9ನೇ ಫೆಬ್ರವರಿ 1967 ರಲ್ಲಿ ಪ್ರಕಟಿಸಲಾಗಿತ್ತು, ಎಂದರೆ:-
- ಹೆಸರು.- ಈ ನಿಯಮಗಳನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು ಎಂದು ಕರೆಯತಕ್ಕದ್ದು.
- 3ನೇ ನಿಯಮದ ತಿದ್ದುಪಡಿ.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ರ 3ನೇ ನಿಯಮದಲ್ಲಿ (ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) (2)ನೇ ಉಪನಿಯಮಕ್ಕೆ ಈ ಮುಂದಿನ ಉಪನಿಯಮವನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:- ‘‘(2) ಮಂಡಲಿಯ ಒಬ್ಬ ಸದಸ್ಯನು, ಉಪವೇಶನದ ಪ್ರತಿದಿನಕ್ಕೆ ರೂಪಾಯಿ ಇಪ್ಪತ್ತು ಮಾತ್ರ ಉಪವೇಶನ ಶುಲ್ಕವನ್ನು ಮತ್ತು ಮಂಡಲಿಯ ವ್ಯವಹಾರದ ಸಂಬಂಧದಲ್ಲಿ ಒಂದು ಸ್ಥಳದಲ್ಲಿ ಅವನು ಹಾಜರಾಗುವುದು ಅಗತ್ಯವಾಗಿರುವಾಗ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳ ‘ಎ' ಅನುಬಂಧದ ‘ಎ' ಪಟ್ಟಿಯಲ್ಲಿ ನಿರ್ದಿಷ್ಟಪಡಿಸಿರುವ ದರಗಳಲ್ಲಿ ದಿನಭತ್ಯೆ ಮತ್ತು ಪ್ರಯಾಣ ಭತ್ಯೆಗಳನ್ನು ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದು:
ಪರಂತು, ಯಾವ ಸದಸ್ಯನ ಸಾಮಾನ್ಯ ವಾಸಸ್ಥಳವು ಅವನು ಹಾಜರಾಗುವುದು ಅಗತ್ಯವಾಗಿರುವಂಥ ಸ್ಥಳದ ಪುರಸಭಾ ಅಥವಾ ಪಂಚಾಯತ್ ಪರಿಮಿತಿಯೊಳಗೆ ಇದ್ದರೆ, ಅವನು ಮಂಡಲಿಯ ವ್ಯವಹಾರಗಳಿಗೆ ಹಾಜರಾಗುವುದಕ್ಕಾಗಿ ದಿನಭತ್ಯೆ ಮತ್ತು ಪ್ರಯಾಣ ಭತ್ಯೆಗಳನ್ನು ಪಡೆಯತಕ್ಕದ್ದಲ್ಲ:
ಮತ್ತೂ ಪರಂತು, ಯಾರೇ ಸದಸ್ಯನು ಅದೇ ದಿನಕ್ಕೆ ದಿನಭತ್ಯ ಮತ್ತು ಉಪವೇಶನ ಭತ್ಯೆ ಇವೆರಡನ್ನೂ ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದಲ್ಲ. 3. 11ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳಲ್ಲಿ 11ನೇ ನಿಯಮಕ್ಕೆ ಈ ಮುಂದಿನ ನಿಯಮವನ್ನು ಪ್ರತಿಯೋಜಿಸತಕ್ಕದ್ದು, ಎಂದರೆ,- ‘‘11. ನೋಟೀಸುಗಳು.- (1) 45ನೇ ಪ್ರಕರಣದ (1)ನೇ ಉಪಪ್ರಕರಣದ ಪರಂತುಕದ ಮೇರೆಗಿನ ಷೋಕಾಸ್ ನೋಟೀಸು IVನೇ ನಮೂನೆಯಲ್ಲಿರತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,