ನಮೂನೆ - Iv
(11ನೇ ನಿಯಮ ನೋಡಿ)
ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧಿನಿಯಮ, 1962 (1963ರ ಕರ್ನಾಟಕ ಅಧಿನಿಯಮ ಸಂಖ್ಯೆ 10)ರ 45ನೇ ಪ್ರಕರಣದ (1)ನೇ ಉಪಪ್ರಕರಣದ ಉಪಬಂಧದ ಮೇರೆಗೆ ‘‘ಷೋಕಾಸ್'' ನೋಟೀಸಿನ ನಮೂನೆ.
........................... ಜಿಲ್ಲೆಯ ........................... ತಾಲ್ಲೂಕಿನ ....................... ನಲ್ಲಿ ವಾಸವಾಗಿರುವ ಶ್ರೀ/ ಶ್ರೀಮತಿ/ ಕುಮಾರಿ ........................ ಇವರಿಗೆ
(i) *ಇದಕ್ಕೆ ಲಗತ್ತಿಸಿರುವ ಅನುಸೂಚಿಯಲ್ಲಿ ವಿವರಿಸಿದ ಆವರಣಕ್ಕೆ ಸಂಬಂಧಪಟ್ಟಂತೆ ನೀವು ಎರಡು ತಿಂಗಳಿಗಿಂತ ಹೆಚ್ಚಿನ ಅವಧಿಯ ಕಾನೂನು ಸಮ್ಮತವಾಗಿ ಬಾಕಿ ಇರುವ ಬಾಡಿಗೆಯನ್ನು ಸಂದಾಯ ಮಾಡದಿರುವುದರಿಂದ;
(ii) *ಇದಕ್ಕೆ ಲಗತ್ತಿಸಿರುವ ಅನುಸೂಚಿಯಲ್ಲಿ ವಿವರಿಸಿದ ಪೂರ್ಣ ಆವರಣವನ್ನು ಅಥವಾ ಅದರ ಭಾಗವನ್ನು ಮಂಡಲಿಯ ಅನುಮತಿ ಇಲ್ಲದೇ ನೀವು ಒಳ ಬಾಡಿಗೆಗೆ ಕೊಟ್ಟಿರುವುದರಿಂದ;
(iii) *ನೀವು ಆವರಣದ ಅನುಭೋಗವನ್ನು ಕೊನೆಗೊಳಿಸಿರುವುದರಿಂದ ಮತ್ತು ಅದನ್ನು ಹಾಗೆಯೇ ಬಿಟ್ಟುಹೋಗಿರುವುದರಿಂದ;
(iv) *ಇದಕ್ಕೆ ಲಗತ್ತಿಸಿರುವ ಅನುಸೂಚಿಯಲ್ಲಿ ವಿವರಿಸಿದ ಆವರಣವನ್ನು ನೀವು ಅನಧಿಕೃತವಾಗಿ ಅನುಭೋಗಿಸುತ್ತಿರುವುದರಿಂದ;
(v) *ನೀವು *................. ಮಾಡಿ, ಆ ಮೂಲಕ ಇದಕ್ಕೆ ಲಗತ್ತಿಸಿರುವ ಅನುಸೂಚಿಯಲ್ಲಿ ವಿವರಿಸಿದ ಆವರಣವನ್ನು ಯಾವ ನಿಬಂಧನೆಗಳ ಪ್ರಕಾರ ಅನುಭೋಗಿಸಲು ಮತ್ತು ಉಪಯೋಗಿಸಲು ನಿಮ್ಮನ್ನು ಅಧಿಕೃತಗೊಳಿಸಲಾಗಿತ್ತೋ ಆ ನಿಬಂಧನೆಗಳನ್ನು ಉಲ್ಲಂಘಿಸಿರುವುದರಿಂದ.
ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ 45ನೇ ಪ್ರಕರಣದ (1)ನೇ ಉಪಪ್ರಕರಣದ ಪರಂತುಕದ ಮೇರೆಗಿನ ಈ ನೋಟೀಸನ್ನು ನೀವು ಸ್ವೀಕರಿಸಿದ ಹತ್ತು ದಿವಸಗಳ ಒಳಗೆ ಈ ಕೆಳಗೆ ಸಹಿ ಮಾಡಿರುವವರಿಗೆ ಸಮಾಧಾನವಾಗುವ ಹಾಗೆ, ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ 45ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಕೂಡದು ಮತ್ತು ನಿಮ್ಮನ್ನು ಆ ಆವರಣದಿಂದ ಹೊರಹಾಕಲು ನಿಮ್ಮ ವಿರುದ್ಧ ಆದೇಶವನ್ನು ಏಕೆ ಹೊರಡಿಸ ಕೂಡದು ಎಂಬ ಬಗ್ಗೆ ಕಾರಣ ತೋರಿಸುವಂತೆ ಇದನ್ನು ತಮಗೆ ಜಾರಿ ಮಾಡಲಾಗಿದೆ.