Annexure
ಸಿ.ಪಿ. ಮುನಿಯಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಗೃಹ ನಿರ್ಮಾಣ).
1 [ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1978
- ಕರ್ನಾಟಕ ರಾಜ್ಯಪತ್ರ, ದಿನಾಂಕ 02.02.1978 ರಲ್ಲಿ ಅಧಿಸೂಚನೆ ಸಂಖ್ಯೆ. ಎಚ್ಯುಡಿ 159 ಕೆಎಚ್ಬಿ 77, ದಿನಾಂಕ 25/28.01.1978ರ ಪುಟ 44 -45 ನ್ನು ಪ್ರಕಟಿಸಲಾಗಿದೆ. ಜಿಎಸ್ಆರ್ 42.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವ ಈ ಮುಂದಿನ ನಿಯಮಗಳ ಕರಡನ್ನು, ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ (1963ರ ಕರ್ನಾಟಕ ಅಧಿನಿಯಮ 10) 74ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಅಗತ್ಯಪಡಿಸಿದಂತೆ, ಅದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ 1978ರ ಜನವರಿ 5 ರಂದು ಅಥವಾ ಅದಕ್ಕೂ ಮೊದಲು ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಕೋರಿ ಅಧಿಸೂಚನೆ ಸಂಖ್ಯೆ. ಜಿಎಸ್ಆರ್ 164 (ಎಚ್ಯುಡಿ 159 ಕೆಎಚ್ಬಿ 77) ದಿನಾಂಕ 8ನೇ ಡಿಸೆಂಬರ್ 1977ರ ಮೂಲಕ ಕರ್ನಾಟಕ ರಾಜ್ಯಪತ್ರ ಭಾಗ IVರ ವಿಭಾಗ 2ಸಿ(i), ದಿನಾಂಕ 8ನೇ ಡಿಸೆಂಬರ್ 1977 ರಲ್ಲಿ ಪ್ರಕಟಿಸಿರುವುದರಿಂದ; ಮತ್ತು, ಸದರಿ ರಾಜ್ಯಪತ್ರವನ್ನು 1977ರ ಡಿಸೆಂಬರ್ 8 ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಿರುವುದರಿಂದ;
ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ (1963ರ ಕರ್ನಾಟಕ ಅಧಿನಿಯಮ 10) 74ನೇ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈಗ, ಈ ಮೂಲಕ ಈ ಮುಂದಿನ ನಿಯಮಗಳನ್ನು ರಚಿಸಿದೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1978 ಎಂದು ಕರೆಯತಕ್ಕದ್ದು.
(2) ಇವು ಈ ಕೂಡಲೇ ಜಾರಿಗೆ ಬರತಕ್ಕದ್ದು.
- 7ನೇ ನಿಯಮದ ತಿದ್ದುಪಡಿ.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ರ (ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳು ಎಂಬುದಾಗಿ ಉಲ್ಲೇಖಿಸಲಾಗಿದೆ) 7ನೇ ನಿಯಮದ (2)ನೇ ಉಪನಿಯಮಕ್ಕೆ ಬದಲಾಗಿ ಈ ಮುಂದಿನ ಉಪನಿಯಮವನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
‘‘(2) ಮಂಡಲಿಯು ಅಥವಾ ಮಂಡಲಿಯ ಪರವಾಗಿ ಅಥವಾ ಮಂಡಲಿಯ ಹೆಸರಿನಲ್ಲಿ ಕಾಮಗಾರಿಗಳನ್ನು ನಿರ್ವಹಿಸುವ ಬಗ್ಗೆ ಅಥವಾ ಯಾವುದೇ ಸಾಮಗ್ರಿ ಅಥವಾ ಸರಕುಗಳನ್ನು ಸರಬರಾಜು ಮಾಡುವ ಬಗ್ಗೆ, ಟೆಂಡರುಗಳು ಮತ್ತು ಕರಾರುಗಳ ಸಂಬಂಧದಲ್ಲಿ ಕರ್ನಾಟಕ ಲೋಕೋಪಯೋಗಿ ಇಲಾಖೆಯು ನಿಯಮಿಸಿದ ನಿಯಮಗಳನ್ನು ಮತ್ತು ನಮೂನೆಗಳನ್ನು ಅವು ಕರ್ನಾಟಕ ಗೃಹನಿರ್ಮಾಣ ಮಂಡಲಿ ಅಧಿನಿಯಮದ ಮತ್ತು ನಿಯಮಗಳ ಉಪಬಂಧಗಳಿಗೆ ಅಸಂಗತವಾಗಿಲ್ಲದಿರುವಷ್ಟು ಮಟ್ಟಿಗೆ ಅನುಸರಿಸತಕ್ಕದ್ದು.''
- 14ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 14ನೇ ನಿಯಮದ (1)ನೇ ಉಪನಿಯಮಕ್ಕೆ ಬದಲಾಗಿ ಈ ಮುಂದಿನ ಉಪನಿಯಮವನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
‘‘(1) ಕರ್ನಾಟಕ ಲೋಕೋಪಯೋಗಿ ಲೆಕ್ಕಪತ್ರಗಳ ಸಂಹಿತೆಯ ಮೇರೆಗೆ ನಿಯಮಿಸಲಾದ ನಮೂನೆಗಳು ಮತ್ತು ರಿಜಿಸ್ಟರುಗಳು, ಕರ್ನಾಟಕ ಗೃಹ ನಿರ್ಮಾಣ ಮಂಡಲಿಯ ಅಧಿನಿಯಮ ಮತ್ತು ನಿಯಮಗಳ ಉಪಬಂಧಗಳಿಗೆ ಅಸಂಗತವಾಗಿಲ್ಲದಿರುವಷ್ಟು ಮಟ್ಟಿಗೆ ಅವುಗಳನ್ನು ಜಮೀನುಗಳಿಗೆ ಮತ್ತು ಮಂಡಲಿಯು ನಿರ್ಮಿಸಿದ ಕಟ್ಟಡಗಳಿಗೆ ಸಂಬಂಧಪಟ್ಟಂತೆ ಮಂಡಲಿಯ ಲೆಕ್ಕಪತ್ರಗಳನ್ನು ನಿರ್ವಹಿಸುವುದಕ್ಕಾಗಿ ಅಂಗೀಕರಿಸತಕ್ಕದ್ದು. ಮಂಡಲಿಯ ಇತರ ವ್ಯವಹಾರಗಳಿಗೆ ಸಂಬಂಧಪಟ್ಟಂತೆ, ಕರ್ನಾಟಕ ಆರ್ಥಿಕ ಸಂಹಿತೆ, 1958ರ ಮತ್ತು ಸಾದಿಲ್ವಾರು ವೆಚ್ಚ ಕೈಪಿಡಿಯ ಮೂಲಕ ನಿಯಮಿಸಲಾದ ನಮೂನೆಗಳು ಮತ್ತು ರಿಜಿಸ್ಟರುಗಳು, ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ ಮತ್ತು ನಿಯಮಗಳ ಉಪಬಂಧಗಳಿಗೆ ಅಸಂಗತವಾಗಿಲ್ಲದಷ್ಟು ಮಟ್ಟಿಗೆ ಅವುಗಳನ್ನು ಅಂಗೀಕರಿಸತಕ್ಕದ್ದು.''
Annexure
ಎಲ್.ಬಿ. ಮನ್ನಿಕಟ್ಟಿ,
ವಿಶೇಷಾಧಿಕಾರಿ ಮತ್ತು ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿ,
ಗೃಹನಿರ್ಮಾಣ ಮತ್ತು ನಗರಾಭಿವೃದ್ಧಿ ಇಲಾಖೆ, (ಗೃಹ ನಿರ್ಮಾಣ).
1 [ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1978
- ಕರ್ನಾಟಕ ರಾಜ್ಯಪತ್ರ, ದಿನಾಂಕ 27.04.1978 ರಲ್ಲಿ ಅಧಿಸೂಚನೆ ಸಂಖ್ಯೆ. ಎಚ್ಯುಡಿ 119 ಕೆಎಚ್ಬಿ 76, ದಿನಾಂಕ 7/12.04.1978ನ್ನು ಪುಟ 1118 ಮತ್ತು 1119ನ್ನು ಪ್ರಕಟಿಸಲಾಗಿದೆ. ಎಸ್ಓ 1106.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವ ಒಂದು ಕರಡನ್ನು, ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ (1963ರ ಕರ್ನಾಟಕ ಅಧಿನಿಯಮ 10) 74ನೇ ಪ್ರಕರಣದ (1)ನೇ ಉಪಪ್ರಕರಣದ ಮೂಲಕ ಅಗತ್ಯಪಡಿಸಿದಂತೆ, ಅದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ 1978ರ ಫೆಬ್ರವರಿ 27 ರಂದು ಅಥವಾ ಅದಕ್ಕೂ ಮೊದಲು ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಕೋರಿ, 1978ರ ಫೆಬ್ರವರಿ 9ರ ಕರ್ನಾಟಕ ರಾಜ್ಯಪತ್ರ ಭಾಗ IV, ವಿಭಾಗ 2ಸಿ(i), ರಲ್ಲಿನ ಅಧಿಸೂಚನೆ ಸಂಖ್ಯೆ. ಎಚ್ಯುಡಿ 119 ಕೆಎಚ್ಬಿ 76 ದಿನಾಂಕ 28ನೇ ಜನವರಿ/ 1ನೇ ಫೆಬ್ರವರಿ 1978 ರಲ್ಲಿ ಪ್ರಕಟಿಸಲಾಗಿರುವುದರಿಂದ;
ಮತ್ತು, ಸದರಿ ರಾಜ್ಯಪತ್ರವನ್ನು 9ನೇ ಫೆಬ್ರವರಿ 1978 ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಿರುವುದರಿಂದ;
ಮತ್ತೂ ಅಲ್ಲದೆ, ರಾಜ್ಯ ಸರ್ಕಾರವು ಸದರಿ ಕರಡಿಗೆ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಸ್ವೀಕರಿಸದಿರುವುದರಿಂದ;
ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ (1963ರ ಕರ್ನಾಟಕ ಅಧಿನಿಯಮ 10) 74ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈಗ, ಈ ಮೂಲಕ ಈ ಮುಂದಿನ ನಿಯಮಗಳನ್ನು ರಚಿಸಿದೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1978 ಎಂದು ಕರೆಯತಕ್ಕದ್ದು.
(2) ಇವು ಈ ಕೂಡಲೆ ಜಾರಿಗೆ ಬರತಕ್ಕದ್ದು.
- 4ಎ ಹೊಸ ನಿಯಮದ ಸೇರ್ಪಡೆ.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ರ 4ನೇ ನಿಯಮದ ತರುವಾಯ ಈ ಮುಂದಿನ ನಿಯಮಗಳನ್ನು ಸೇರಿಸತಕ್ಕದ್ದು. ಎಂದರೆ:-
4ಎ. ಮಂಡಲಿಯ ಅಧಿಕಾರಿಗಳು ಮತ್ತು ನೌಕರರ ನೇಮಕಾತಿ.- ಮಂಡಲಿಗೆ ಈ ಕೆಳಕಂಡ ಹುದ್ದೆಗಳನ್ನು ನೇಮಕ ಮಾಡುವುದಕ್ಕೆ ಮೊದಲು ಕರ್ನಾಟಕ ಲೋಕಸೇವಾ ಆಯೋಗದೊಂದಿಗೆ ಸಮಾಲೋಚಿಸುವ ಅವಶ್ಯಕತೆ ಇರತಕ್ಕದ್ದು, ಎಂದರೆ:-
-
ಷರಾಫ್ಗಳು; 7. ಬಿಲ್ ಕಲೆಕ್ಟರುಗಳು;
-
ಜವಾನರು; 8. ಕಾವಲುಗಾರ;
-
ಚಾಲಕರು; 9. ಮಾಲಿಗಳು;
-
ದಲಾಯಿತರು; 10. ಸ್ವೀಪರ್ಗಳು; ಮತ್ತು
-
ಬೆರಳಚ್ಚುಗಾರರು; 11. ಪ್ರತಿನಿಯೋಜನೆಯ ಮೇಲೆ
-
ಶೀಘ್ರಲಿಪಿಗಾರರು; ಸರ್ಕಾರಿ ನೌಕರರ ನೇಮಕಾತಿ.
Annexure
ಯು. ಅನಂತ ಪದ್ಮನಾಭರಾವ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಗೃಹ ನಿರ್ಮಾಣ ಮತ್ತು ನಗರಾಭಿವೃದ್ಧಿ ಇಲಾಖೆ.
1 [ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1982
-
ಕರ್ನಾಟಕ ರಾಜ್ಯಪತ್ರ, ವಿಶೇಷ, ದಿನಾಂಕ 30.04.1983 ರಲ್ಲಿ ಅಧಿಸೂಚನೆ ಸಂಖ್ಯೆ ಎಚ್ಯುಡಿ 154 ಕೆಎಚ್ಬಿ 79, ದಿನಾಂಕ 20.04.1983ನ್ನು ಪ್ರಕಟಿಸಲಾಗಿದೆ. ಜಿಎಸ್ಆರ್ 103.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ (1963ರ ಕರ್ನಾಟಕ ಅಧಿನಿಯಮ 10) 10-ಎ ಪ್ರಕರಣದ (2)ನೇ ಉಪಪ್ರಕರಣದೊಂದಿಗೆ ಓದಲಾದ 74ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದೆ. ಅದರ ಕರಡನ್ನು, ಸದರಿ ಪ್ರಕರಣದ (1)ನೇ ಉಪಪ್ರಕರಣದ ಮೂಲಕ ಅಗತ್ಯಪಡಿಸಿದಂತೆ, 1981ರ ನವೆಂಬರ್ 13ನೇ ದಿನಾಂಕದ ಕರ್ನಾಟಕ ರಾಜ್ಯಪತ್ರ (ವಿಶೇಷ) ದ ಭಾಗ IV, ವಿಭಾಗ 2ಸಿ(i) ರಲ್ಲಿನ ಅಧಿಸೂಚನೆ ಸಂ. ಜಿಎಸ್ಆರ್ 243 ದಿನಾಂಕ: 6ನೇ ನವೆಂಬರ್ 1981ರಲ್ಲಿ ಮತ್ತು ತಿದ್ದೋಲೆ ಸಂಖ್ಯೆ. ಜಿಎಸ್ಆರ್ 247 ದಿನಾಂಕ: 13ನೇ ನವೆಂಬರ್ 1981 ರಲ್ಲಿ ತಿದ್ದುಪಡಿಯಾದಂತೆ ಪ್ರಕಟಿಸಲಾಗಿತ್ತು.
-
ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1982 ಎಂದು ಕರೆಯತಕ್ಕದ್ದು.
(2) ಇವು ಈ ಕೂಡಲೇ ಜಾರಿಗೆ ಬರತಕ್ಕದ್ದು.
- 5ನೇ ನಿಯಮದ ತಿದ್ದುಪಡಿ.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1964ರ 5ನೇ ನಿಯಮಕ್ಕೆ (1)ನೇ ಉಪನಿಯಮಕ್ಕೆ (1)ನೇ ಉಪನಿಯಮ ಎಂಬುದಾಗಿ ಪುನಃ ಸಂಖ್ಯೆ ನೀಡತಕ್ಕದ್ದು ಮತ್ತು ಹಾಗೆ ಪುನಃ ಸಂಖ್ಯೆ ನೀಡಲಾದ (1)ನೇ ಉಪಪ್ರಕರಣದ ತರುವಾಯ ಈ ಮುಂದಿನ ಉಪನಿಯಮವನ್ನು ಸೇರಿಸತಕ್ಕದ್ದು, ಎಂದರೆ:
(2) 1957ರ ಕರ್ನಾಟಕ ಸಿವಿಲ್ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು ಯಥೋಚಿತ ವ್ಯತ್ಯಾಸಗಳೊಂದಿಗೆ ಮಂಡಲಿಯ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಅನ್ವಯವಾಗತಕ್ಕದ್ದು. ನೇಮಕಾತಿ ಮಾಡಿಕೊಳ್ಳಲು ಅಧಿಕಾರವುಳ್ಳ ಪ್ರಾಧಿಕಾರಿಯು, ದಂಡನೆಗಳನ್ನು ವಿಧಿಸುವುದಕ್ಕೆ ಅಧಿಕಾರವುಳ್ಳ ಪ್ರಾಧಿಕಾರಿಯು ಮತ್ತು ಆ ಪ್ರಾಧಿಕಾರಿಯು ವಿಧಿಸಬಹುದಾದ ದಂಡನೆಗಳು ಮತ್ತು ಮಂಡಲಿಯ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸಂಬಂಧಿಸಿದ ಅಪೀಲು ಪ್ರಾಧಿಕಾರಿಯು ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿದಂತಿರತಕ್ಕದ್ದು,-