ಅನುಸೂಚಿ - ಬಿ
ಕ.ಗೃ.ಮ. ಗೆ ಎರವಲು ಸೇವೆ ಮೇಲೆ ಬಂದಿರುವ ಅಧಿಕಾರಿಗಳಿಗೆ (ನಾನ್ ಗೆಜೆಟೆಡ್ ಅಧಿಕಾರಿಗಳು) ಕೆ.ಸಿ.ಎಸ್. (ಸಿ.ಸಿ ಮತ್ತು ಎ) ನಿಯಮಗಳು, 1957ರ ನಿಯಮ 8ನೇ ನಿಯಮದ ಮೇರೆಗೆ ದಂಡನೆ ವಿಧಿಸಬಹುದಾದ ಪ್ರಾಧಿಕಾರಿ.
| ಹುದ್ದೆಗಳ ವರ್ಗ | ನೇಮಕಾತಿ ಮಾಡಿಕೊಳ್ಳಲು ಅಧಿಕಾರವುಳ್ಳ ಪ್ರಾಧಿಕಾರಿ | ದಂಡಗಳನ್ನು ವಿಧಿಸುವುದಕ್ಕೆ ಅಧಿಕಾರವುಳ್ಳ ಪ್ರಾಧಿಕಾರಿ ಮತ್ತು ಆ ಪ್ರಾಧಿಕಾರಿಯು ವಿಧಿಸಬಹುದಾದ ದಂಡನೆಗಳು | ಅಪೀಲು ಪ್ರಾಧಿಕಾರಿ | ||
| ಅಧಿಕಾರಿ | ದಂಡನೆಗಳು (ನಿಯಮ 8) | ||||
| 1 | 2 | 3 | 4 | 5 | |
| 1. | ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಡ್ರಾಫ್ಟ್ಸ್ಮನ್, ಟ್ರೇಸರ್ಗಳು (ಪ್ರಧಾನ ಕಚೇರಿಯಲ್ಲಿ) | ಗೃಹ ನಿರ್ಮಾಣ ಆಯುಕ್ತರು | ಕಾರ್ಯದರ್ಶಿ, ಗೃಹನಿರ್ಮಾಣ ಆಯುಕ್ತರು | (ii) ರಿಂದ (iv) (v) ರಿಂದ (viii) | ಗೃಹ ನಿರ್ಮಾಣ ಆಯುಕ್ತರು, ಅಧ್ಯಕ್ಷರು |
| 2. | ಲೆಕ್ಕ ಪತ್ರಗಳ ಸೂಪರಿಂಟೆಂಡೆಂಟರ್ಗಳು, ತಾಲೂಕು ಶಿರಸ್ತೇದಾರ -ಕಂ- ಸೂಪರಿಂಟೆಂಡೆಂಟ್ಗಳು, ಪ್ರಥಮ ದರ್ಜೆ ಗುಮಾಸ್ತ, ಸ್ಟೆನೋಗ್ರಾಫರ್ಗಳು, ರೆವಿನ್ಯೂ ಇನ್ಸ್ಸ್ಪೆಕ್ಟರುಗಳು ಮತ್ತು ಸರ್ವೆಯರ್ಗಳು | -ಅದೇ- | -ಅದೇ- | -ಅದೇ- | -ಅದೇ- |
| 3. | ದ್ವಿತೀಯ ದರ್ಜೆ ಗುಮಾಸ್ತರು | -ಅದೇ- | -ಅದೇ- | -ಅದೇ- | -ಅದೇ- |
ವಿಭಾಗೀಯ ಮತ್ತು ಉಪ ವಿಭಾಗೀಯ ಸಿಬ್ಬಂದಿ ಅಧಿಕಾರಿಗಳಿಗಾಗಿ
| 4. | ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಡ್ರಾಫ್ಟ್ಸ್ಮನ್, ಟ್ರೇಸರ್ಗಳು, ಪ್ರಥಮ ದರ್ಜೆ ಗುಮಾಸ್ತರು, ಸ್ಟೆನೋಗ್ರಾಫರ್ಗಳು, ದ್ವಿತೀಯ ದರ್ಜೆ ಗುಮಾಸ್ತರುಗಳು | ಗೃಹನಿರ್ಮಾಣ ಆಯುಕ್ತರು | ಕಾರ್ಯ ನಿರ್ವಾಹಕ ಇಂಜಿನಿಯರ್, ಗೃಹ ನಿರ್ಮಾಣ ಆಯುಕ್ತರು | (ii) ರಿಂದ (iv) (v) ರಿಂದ (viii) | ಅಧ್ಯಕ್ಷರು, ಗೃಹ ನಿರ್ಮಾಣ ಆಯುಕ್ತರು]5 |
- ಸಮಿತಿಗಳು.- (1) ಮಂಡಲಿಯು ತನ್ನ ಸದಸ್ಯರ ಪೈಕಿಯಿಂದ ತಾನು ಅವಶ್ಯವೆಂದು ಭಾವಿಸಬಹುದಾದಂಥ ಸಮಿತಿಗಳನ್ನು ನೇಮಕ ಮಾಡಬಹುದು.
(2) ಯಾವುದೇ ಸಮಿತಿಯ ಸದಸ್ಯರ ಸಂಖ್ಯೆಯು ಐದನ್ನು ಮೀರತಕ್ಕದ್ದಲ್ಲ.
(3) ಸಮಿತಿಯ ಸದಸ್ಯರು ಮಂಡಲಿಯ ಇಷ್ಟಪರ್ಯಂತ ಪದಧಾರಣ ಮಾಡತಕ್ಕದ್ದು.
(4) ಅಧ್ಯಕ್ಷರು, ಸಮಿತಿಯ ಸದಸ್ಯನಾಗಿದ್ದು ಹಾಜರಿದ್ದರೆ ಅವರು ಆ ಸಮಿತಿಯ ಪ್ರತಿಯೊಂದು ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು ಮತ್ತು ಅವರ ಗೈರುಹಾಜರಿಯಲ್ಲಿ ಅಧ್ಯಕ್ಷತೆ ವಹಿಸಲು ಹಾಜರಿರುವ ಸದಸ್ಯರು ಆಯ್ಕೆ ಮಾಡಿದ ಯಾರೇ ಸದಸ್ಯನು ಅಧ್ಯಕ್ಷತೆ ವಹಿಸತಕ್ಕದ್ದು. ಅಧ್ಯಕ್ಷರು ಯಾವುದೇ ಸಮಿತಿಯ ಸದಸ್ಯನಾಗಿರದಿದ್ದರೆ, ಆ ಸಮಿತಿಯು ತನ್ನ ಅಧ್ಯಕ್ಷನನ್ನು ಆಯ್ಕೆ ಮಾಡತಕ್ಕದ್ದು.
(5) ಸಮಿತಿಯ ಸದಸ್ಯರ ಒಟ್ಟು ಸಂಖ್ಯೆಯ ಅರ್ಧದಷ್ಟು ಜನ ಸಮಿತಿಯ ಸಭೆಯ ಕೋರಂ ಆಗಿರತಕ್ಕದ್ದು ಮತ್ತು ಮುಂದೂಡಿದ ಸಭೆಗೆ ಕೋರಂನ ಅವಶ್ಯಕತೆ ಇರತಕ್ಕದ್ದಲ್ಲ.
- ಕರಾರುಗಳನ್ನು ಮಾಡಿಕೊಳ್ಳುವುದು.- (1) ಐದು ಸಾವಿರ ರೂಪಾಯಿಗಳನ್ನು ಮೀರುವ ವೆಚ್ಚವನ್ನೊಳಗೊಂಡ ಯಾವುದೇ ಕಾಮಗಾರಿಯ ನಿರ್ವಹಣೆ ಬಗ್ಗೆ ಅಥವಾ ಯಾವುವೇ ಸಾಮಗ್ರಿಗಳ ಅಥವಾ ಸರಕುಗಳ ಸರಬರಾಜು ಬಗ್ಗೆ ಮಾಡಿಕೊಳ್ಳಲಾಗುವ ಪ್ರತಿಯೊಂದು ಕರಾರನ್ನು, ಮಂಡಲಿಯ ಸಾಮಾನ್ಯ ಮುದ್ರೆಯನ್ನು ಒತ್ತುವ ಮೂಲಕ ಮಾಡಿಕೊಳ್ಳತಕ್ಕದ್ದು.
1 [(2) ಮಂಡಲಿಯು ಅಥವಾ ಮಂಡಲಿಯ ಪರವಾಗಿ ಅಥವಾ ಮಂಡಲಿಯ ಹೆಸರಿನಲ್ಲಿ ಕಾಮಗಾರಿಗಳನ್ನು ನಿರ್ವಹಿಸುವ ಬಗ್ಗೆ ಅಥವಾ ಯಾವುದೇ ಸಾಮಗ್ರಿ ಅಥವಾ ಸರಕುಗಳನ್ನು ಸರಬರಾಜು ಮಾಡುವ ಬಗ್ಗೆ, ಟೆಂಡರುಗಳು ಮತ್ತು ಕರಾರುಗಳ ಸಂಬಂಧದಲ್ಲಿ ಕರ್ನಾಟಕ ಲೋಕೋಪಯೋಗಿ ಇಲಾಖೆಯು ನಿಯಮಿಸಿದ ನಿಯಮಗಳನ್ನು ಮತ್ತು ನಮೂನೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಮತ್ತು ಅವು ಕರ್ನಾಟಕ ಗೃಹನಿರ್ಮಾಣ ಮಂಡಲಿ ಅಧಿನಿಯಮದ ಮತ್ತು ನಿಯಮಗಳ ಉಪಬಂಧಗಳಿಗೆ ಅಸಂಗತವಾಗಿಲ್ಲ ದಿರುವಷ್ಟು ಮಟ್ಟಿಗೆ ಅನುಸರಿಸತಕ್ಕದ್ದು.
-
ಜಿಎಸ್ಆರ್ 42, ದಿನಾಂಕ 25/28.1.1978 ಕೆಜಿಡಿ 2.2.1978ರ ಮೂಲಕ 7ನೇ ನಿಯಮದಲ್ಲಿ (2)ನೇ ಉಪನಿಯಮವನ್ನು ಪ್ರತಿಯೋಜಿಸಲಾಗಿದೆ.
-
ವಾರ್ಷಿಕ ಗೃಹನಿರ್ಮಾಣ ಕಾರ್ಯಕ್ರಮ, ಗೃಹನಿರ್ಮಾಣ ಯೋಜನೆ, ಬಜೆಟ್ ಮತ್ತು ಸಿಬ್ಬಂದಿ ಪಟ್ಟಿ - ಇವುಗಳನ್ನು ತಯಾರಿಸುವುದು ಮತ್ತು ಸಲ್ಲಿಸುವುದು.-
(i) ವಾರ್ಷಿಕ ಗೃಹನಿರ್ಮಾಣ ಕಾರ್ಯಕ್ರಮವನ್ನು ನಮೂನೆ - I ರಲ್ಲಿ ತಯಾರಿಸತಕ್ಕದ್ದು;
(ii) ಮುಂದಿನ ವರ್ಷದ ಬಜೆಟ್ಟನ್ನು ನಮೂನೆ II ರಲ್ಲಿ ತಯಾರಿಸತಕ್ಕದ್ದು; ಮತ್ತು
(iii) ಈಗಾಗಲೇ ನಿಯೋಜಿತರಾಗಿರುವ ಮತ್ತು ವರ್ಷದ ಅವಧಿಯಲ್ಲಿ ನಿಯೋಜಿತರಾಗುವ ಅಧಿಕಾರಿಗಳ ಮತ್ತು ನೌಕರರ ಸಿಬ್ಬಂದಿ ಪಟ್ಟಿಯನ್ನು ನಮೂನೆ III ರಲ್ಲಿ ತಯಾರಿಸತಕ್ಕದ್ದು.
(2) ಮಂಡಲಿಯು ಪ್ರತಿಯೊಂದು ಗೃಹನಿರ್ಮಾಣ ಯೋಜನೆಯನ್ನು, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ರ ಮೇರೆಗೆ ಯಾವುದೇ ಪ್ರದೇಶಕ್ಕಾಗಿ ರೂಪಿಸಿದ ಅಭಿವೃದ್ಧಿಯ ರೂಪರೇಖೆ ಯೋಜನೆಗೆ ಅಥವಾ ಸಂದರ್ಭಾನುಸಾರ ವ್ಯಾಪಕ ಅಭಿವೃದ್ಧಿ ಯೋಜನೆಗೆ ಅನುಗುಣವಾಗಿ ರೂಪಿಸತಕ್ಕದ್ದು.
- ಜಮೀನಿನ ವಿಲೆ.- (1) ಮಂಡಲಿಯು ತನ್ನಲ್ಲಿ ನಿಹಿತವಾಗಿರುವ ಮತ್ತು ಯಾವುದೇ ಗೃಹನಿರ್ಮಾಣ ಯೋಜನೆಯಲ್ಲಿ ಒಳಗೊಂಡಿರುವ ಪ್ರದೇಶದಲ್ಲಿರುವ ಯಾವುದೇ ಜವಿೂನನ್ನು ಸರ್ಕಾರದಿಂದ ಪಡೆದ ಯಾವುದೇ ಸಾಲವನ್ನು ತೀರಿಸುವ ಸಲುವಾಗಿ ಸರ್ಕಾರಕ್ಕೆ ವರ್ಗಾಯಿಸಬಹುದು.
(2) ಹಾಗೆ ವರ್ಗಾವಣೆ ಮಾಡಿದ ಮೇಲೆ, ಸರ್ಕಾರವು ನೀಡಿದ ಸಾಲವು ಹಾಗೆ ವರ್ಗಾವಣೆ ಮಾಡಿದ ಜವಿೂನಿನ ಮಾರುಕಟ್ಟೆ ಬೆಲೆ ಮತ್ತು ಅದರ ನಿರ್ವಹಣೆ ಮತ್ತು ಅಭಿವೃದ್ಧಿಯ ಬಗ್ಗೆ ವ್ಯವಸ್ಥಾಪನೆಯ ಮೇಲಣ ಮೊಬಲಗು ಸೇರಿದ ಮೊಬಲಗಿನಷ್ಟು ಕಡಿಮೆಯಾಗತಕ್ಕದ್ದು.
(3) ಮಂಡಲಿಯು, ತನ್ನಲ್ಲಿ ನಿಹಿತವಾದ ಯಾವುದೇ ಜವಿೂನನ್ನು, ಸಂಬಂಧಪಟ್ಟ ಗೃಹನಿರ್ಮಾಣ ಯೋಜನೆಯನ್ನು ನಿಯಂತ್ರಿಸುವಂಥ ಅಥವಾ ಮಂಡಲಿಯು ವಿಶೇಷ ಸಂದರ್ಭದಲ್ಲಿ ನಿರ್ಧರಿಸಬಹುದಾದಂಥ ನಿಬಂಧನೆಗಳಿಗೆ ಮತ್ತು ಷರತ್ತುಗಳಿಗೊಳಪಟ್ಟು ಗೇಣಿಗೆ ಕೊಡಬಹುದು, ಮಾರಾಟ ಮಾಡಬಹುದು ಅಥವಾ ಅನ್ಯಥಾ ವಿಲೆ ಮಾಡಬಹುದು.
- ವಾಸದ ಮನೆಯ ಅಧಿಭೋಗಕ್ಕೆ ಸಂಬಂಧಿಸಿದ ಷರತ್ತುಗಳು.- ಮಂಡಲಿಯು ಒದಗಿಸಿದ ಯಾವುದೇ ವಾಸದ ಮನೆಯನ್ನು ಯಾರೇ ನೌಕರ ಅನುಭೋಗಿಸುವುದು ಈ ಕೆಳಕಂಡ ಷರತ್ತುಗಳಿಗೊಳಪಟ್ಟಿರತಕ್ಕದ್ದು, ಎಂದರೆ:-
(ಎ) ನೌಕರನು, ಮಂಡಲಿಯು ಕಾಲಕಾಲಕ್ಕೆ ನಿಗದಿಪಡಿಸಬಹುದಾದಂಥ ದರಗಳಲ್ಲಿ ಮಾಸಿಕ ಬಾಡಿಗೆಯನ್ನು ಸಂದಾಯ ಮಾಡತಕ್ಕದ್ದು;
(ಬಿ) ಅವನು, ದರಗಳಲ್ಲಿ, ತೆರಿಗೆಗಳಲ್ಲಿ, ಉಪಕರಗಳಲ್ಲಿ ಅಥವಾ ಇತರ ಸೇವಾ ವೆಚ್ಚಗಳಲ್ಲಿ ಆದ ಯಾವುದೇ ಹೆಚ್ಚಳದ ಕಾರಣ ಅಥವಾ ಯಾವುವೇ ಹೆಚ್ಚಿನ ಸೇರ್ಪಡೆಗಳು ಅಥವಾ ಬದಲಾವಣೆಗಳು ಅಥವಾ ಅವೆರಡರ ಅಥವಾ ಒದಗಿಸಿದ ಯಾವುವೇ ಸೌಕರ್ಯಗಳ ಕಾರಣ ಸದರಿ ಮಾಸಿಕ ಬಾಡಿಗೆ ಮತ್ತು ಇತರ ವೆಚ್ಚಗಳಲ್ಲಿ ಮಂಡಲಿಯು ವಿಧಿಸುವುದು ಯುಕ್ತವೆಂದು ಅಥವಾ ವಿಹಿತವೆಂದು ಪರಿಗಣಿಸುವಂಥ ಹೆಚ್ಚಳವನ್ನು ಸಂದಾಯಮಾಡತಕ್ಕದ್ದು;
(ಸಿ) ಅವನು, ಆವರಣದಲ್ಲಿ ಅಥವಾ ಅದರ ಹತ್ತಿರ ಯಾವುದೇ ಕಸ ಸಂಗ್ರಹವಾಗಲು ಅವಕಾಶ ಕೊಡತಕ್ಕದ್ದಲ್ಲ ಮತ್ತು ಅವನು ಮಂಡಲಿಗೆ ಪೂರ್ಣ ತೃಪ್ತಿಯಾಗುವ ಹಾಗೆ ಸದರಿ ಆವರಣವನ್ನು ಮತ್ತು ಹೊರಗಿನ ಸ್ಥಳವನ್ನು ಮತ್ತು ಅದಕ್ಕೆ ಹೊಂದಿಕೊಂಡಿರುವ ಬೀದಿಗಳನ್ನು ಸ್ವಚ್ಫವಾಗಿ, ಅಚ್ಚುಕಟ್ಟಾಗಿ ಮತ್ತು ಚೊಕ್ಕಟವಾಗಿ ಇಡತಕ್ಕದ್ದು;
(ಡಿ) ಅವನು, ಮಂಡಲಿಯಿಂದ ಲಿಖಿತದಲ್ಲಿ ಮೊದಲೇ ಅನುಮತಿ ಪಡೆಯದೆ ಸದರಿ ಆವರಣಕ್ಕೆ ಯಾವುವೇ ಸೇರ್ಪಡೆಗಳನ್ನು ಅಥವಾ ಬದಲಾವಣೆಗಳನ್ನು ಮಾಡತಕ್ಕದ್ದಲ್ಲ. ಎಲ್ಲಾ ಬದಲಾವಣೆಗಳು ಮತ್ತು ಸೇರ್ಪಡೆಗಳು (ಜೋಡಣೆಗಳೂ ಸೇರಿ) ಮಂಡಲಿಯ ಸ್ವತ್ತಾಗತಕ್ಕದ್ದು ಮತ್ತು ಅಧಿಭೋಗವನ್ನು ಕೊನೆಗೊಳಿಸಿದ ತರುವಾಯ ಆ ಅಧಿಭೋಗದಾರನು ಅವುಗಳನ್ನು ಸ್ಥಳಾಂತರಿಸಲು ಅಥವಾ ಸ್ಥಳಾಂತರಿಸದಿದ್ದ ಸಂದರ್ಭದಲ್ಲಿ, ಆ ಸಂಬಂಧದಲ್ಲಿ ಯಾವುದೇ ಪರಿಹಾರವನ್ನು ಕ್ಲೇಮು ಮಾಡಲು ಹಕ್ಕುಳ್ಳವನಾಗಿರತಕ್ಕದ್ದಲ್ಲ. ಪರಂತು, ಅಂಥ ಯಾವುದೇ ಬದಲಾವಣೆಯನ್ನು ಅಥವಾ ಸೇರ್ಪಡೆಯನ್ನು ನೌಕರನು ತನ್ನ ಸ್ವಂತ ಖರ್ಚಿನಲ್ಲಿ ಸ್ಥಳಾಂತರಿಸುವಂತೆ ಮತ್ತು ಸದರಿ ಆವರಣಗಳು ಅಧಿಭೋಗದ ಪ್ರಾರಂಭದ ದಿನಾಂಕದಂದು ಯಾವ ಸ್ಥಿತಿಯಲ್ಲಿದ್ದಮೋ ಅದೇ ಸ್ಥಿತಿಗೆ ತರುವಂತೆ ಅವನನ್ನು ಕೇಳಲು ಮಂಡಲಿಯು ಪೂರ್ಣ ಹಕ್ಕು ಹೊಂದಿರತಕ್ಕದ್ದು.
(ಇ) ಅವನು, ಆವರಣದ ಅಥವಾ ಅದರ ಯಾವುದೇ ಭಾಗದ ಸ್ವಾಧೀನವನ್ನು ಹಸ್ತಾಂತರಿಸತಕ್ಕದ್ದಲ್ಲ. ಒಳಗೇಣಿಗೆ ಕೊಡತಕ್ಕದ್ದಲ್ಲ ಅಥವಾ ಅನ್ಯಥಾ ವರ್ಗಾಯಿಸತಕ್ಕದ್ದಲ್ಲ.
(ಎಫ್) ಅವನು, ಆ ಆವರಣದಲ್ಲಿ ದಹ್ಯ ಅಥವಾ ಅಪಾಯಕಾರಿ ಸ್ವರೂಪದ ಯಾವುವೇ ವಸ್ತುಗಳನ್ನು ಇಡತಕ್ಕದ್ದಲ್ಲ ಅಥವಾ ದಾಸ್ತಾನು ಮಾಡತಕ್ಕದ್ದಲ್ಲ ಅಥವಾ ಆ ಆವರಣದಲ್ಲಿ ಅಥವಾ ಅದರ ಸುತ್ತ ಕಾಂಪೌಂಡ್ ಇದ್ದರೆ ಅದರಲ್ಲಿ ಯಾವುದೇ ಪ್ರಾಣಿಯನ್ನಾಗಲಿ ಅಥವಾ ಕೋಳಿಯನ್ನಾಗಲೀ ಇಡತಕ್ಕದ್ದಲ್ಲ.
(ಜಿ) ಅವನು, ಮಂಡಲಿಗೆ ಅಥವಾ ಅದರ ಅಧಿಕಾರಿಗಳಿಗೆ, ಏಜೆಂಟರಿಗೆ, ಅಥವಾ ನೌಕರರಿಗೆ ಅಥವಾ ಮಂಡಲಿಯು ಯುಕ್ತವಾಗಿ ಅಧಿಕೃತಗೊಳಿಸಿದ ಯಾರೇ ಇತರ ವ್ಯಕ್ತಿಗೆ ಆವರಣದ ಹಿತದೃಷ್ಟಿಯಿಂದ ಆ ಪ್ರದೇಶದಲ್ಲಿ ಇರುವ ಮನೆಗಳ ಅಧಿಭೋಗದಾರರ ಪೈಕಿ ಯಾರೊಬ್ಬರ ಸಾಮಾನ್ಯ ಹಿತದೃಷ್ಟಿಯಿಂದ, ಅಥವಾ ಸಾಮಾನ್ಯ ನಿರ್ವಹಣೆ ಹಿತದೃಷ್ಟಿಯಿಂದ ಆ ಆವರಣಗಳಿಗೆ ಪ್ರವೇಶಿಸಲು ಮತ್ತು ಅವುಗಳನ್ನು ಪರಿಶೀಲಿಸಲು ಮತ್ತು ಅವುಗಳಿಗೆ ಮೇಲೆ ಅವಶ್ಯವಿರಬಹುದಾದಂಥ ಸೇರ್ಪಡೆ ಮತ್ತು ಬದಲಾವಣೆಯ ಕಾಮಗಾರಿಯನ್ನು ನಿರ್ವಹಿಸಲು ಯಾವುದೇ ದಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಅಥವಾ ಮಂಡಲಿಯು ಅಥವಾ ಅದರ ಅಧಿಕಾರಿಗಳು, ನೌಕರರು ಅಥವಾ ಏಜೆಂಟರು ಅಥವಾ ಹಾಗೆ ಅಧಿಕೃತಗೊಂಡ ವ್ಯಕ್ತಿಗಳು ಹಾಗೆ ಮಾಡುವುದು ಅವಶ್ಯವೆಂದು ಭಾವಿಸುವಂಥ ಯಾವುದೇ ಇತರ ಸಮಯದಲ್ಲಿ ಹಾಗೆ ಮಾಡಲು ಅನುಮತಿಸತಕ್ಕದ್ದು;
(ಹೆಚ್)ಅವನು, ಕಾಂಪೌಂಡಿನಲ್ಲಿ ಅಥವಾ ಬೀದಿಯಲ್ಲಿ ಬೆಳೆದು ನಿಂತಿರುವ ಮರಗಳನ್ನು ಅಥವಾ ದೊಡ್ಡ ಪೊದೆಗಳನ್ನು ಕತ್ತರಿಸತಕ್ಕದ್ದಲ್ಲ, ಸವರತಕ್ಕದ್ದಲ್ಲ ಅಥವಾ ಅವುಗಳಿಗೆ ಹಾನಿಯುಂಟುಮಾಡತಕ್ಕದ್ದಲ್ಲ ಅಥವಾ ಆ ಮರಗಳಿಂದ ಹಣ್ಣುಗಳನ್ನು ಅಥವಾ ಹೂವುಗಳನ್ನು ಕೀಳತಕ್ಕದ್ದಲ್ಲ;
(ಐ) ಅವನು, ಅಧಿಭೋಗದ ಕೊನೆಯಲ್ಲಿ ಅಥವಾ ಅಧಿಭೋಗವನ್ನು ಕೊನೆಗೊಳಿಸಿದಾಗ ಅದಕ್ಕಿಂತ ಮುಂಚಿತವಾಗಿ ಆ ಆವರಣಗಳ ಸ್ವಾಧೀನವನ್ನು, ಯುಕ್ತವಾದ ಸವೆತಗಳನ್ನುಳಿದು, ಅಧಿಭೋಗದ ಪ್ರಾರಂಭದಂದು ಯಾವ ಸ್ಥಿತಿಯಲ್ಲಿದ್ದತೋ ಅದೇ ಸ್ಥಿತಿಯಲ್ಲಿ ಶಾಂತವಾಗಿಯೂ ಮತ್ತು ಸಮಾಧಾನದಿಂದಲೂ ಮಂಡಲಿಗೆ ಒಪ್ಪಿಸತಕ್ಕದ್ದು. ಯುಕ್ತವಾದ ಸವೆತ ಎಷ್ಟು ಎಂಬ ಪ್ರಶ್ನೆಯನ್ನು ಮಂಡಲಿಯು ತೀರ್ಮಾನಿಸತಕ್ಕದ್ದು ಮತ್ತು ಮಂಡಲಿಯ ತೀರ್ಮಾನವು ಅಂತಿಮವಾಗಿರತಕ್ಕದ್ದು ಮತ್ತು ಬಂಧನಕಾರಿಯಾಗಿರತಕ್ಕದ್ದು. ಆವರಣಗಳಿಗೆ ಉಂಟುಮಾಡಿದ ಹಾನಿಗಳು ಅಥವಾ ನಷ್ಟ ಏನಾದರೂ ಇದ್ದಲ್ಲಿ ಅದನ್ನು ತುಂಬಿಕೊಡತಕ್ಕದ್ದು ಮತ್ತು ಬಾಡಿಗೆಯ ಮುಂಗಡ ಯಾವುದಾದರೂ ಇದ್ದಲ್ಲಿ ಅದರಿಂದ ಸರಿ ಹೊಂದಿಸಲು ಮಂಡಲಿಗೆ ಹಕ್ಕಿರತಕ್ಕದ್ದು;
(ಜೆ) ಅವನು, ಮಂಡಲಿಯ ಹೆಸರಿಗೆ ಬರೆದುಕೊಡಬೇಕಾದ ಯಾವುದೇ ದಸ್ತಾವೇಜಿಗೆ ಸಂಬಂಧಿಸಿ ಸಂದಾಯ ಮಾಡಬೇಕಾದ ಸ್ಟಾಂಪು ಮತ್ತು ನೋಂದಣಿ ಚಾರ್ಜುಗಳನ್ನು ಸಂದಾಯ ಮಾಡತಕ್ಕದ್ದು;
(ಕೆ) ಅವನು, ತನ್ನ ಮತ್ತು ತನ್ನ ಕುಟುಂಬದ ಸದಸ್ಯರ ವಾಸದ ಉದ್ದೇಶಗಳಿಗಾಗಿ ಮಾತ್ರ ಆ ಆವರಣವನ್ನು ಉಪಯೋಗಿಸತಕ್ಕುದು ಮತ್ತು ಅಧಿಭೋಗಿಸತಕ್ಕುದು ಮತ್ತು ಮಂಡಲಿಯು ಅಗತ್ಯಪಡಿಸಿದಾಗಲೆಲ್ಲ ಆವರಣದಲ್ಲಿ ಅವನೊಂದಿಗೆ ವಾಸಿಸುತ್ತಿರುವ ಎಲ್ಲಾ ವ್ಯಕ್ತಿಗಳಿಗೆ ಸಂಬಂಧಿಸಿದಂತೆ, ಅವರ ಸಂಬಂಧ, ವಯಸ್ಸು ಮತ್ತು ಮಾಸಿಕ ಆದಾಯದ ಬಗ್ಗೆ ಪೂರ್ಣ ಮಾಹಿತಿಯನ್ನು ಮತ್ತು ಮಂಡಲಿಯು ಅಗತ್ಯಪಡಿಸಬಹುದಾದಂಥ ಇತರ ವಿವರಗಳನ್ನು ಒದಗಿಸತಕ್ಕದ್ದು;
(ಎಲ್) ಅವನು, ತನ್ನ ಅಧಿಭೋಗದ ಅವಧಿಯಲ್ಲಿ ಬೆಂಕಿ ಅಥವಾ ಅಪಘಾತ ಅಥವಾ ಯಾವುದೇ ಇತರ ಕಾರಣದಿಂದ ಉಂಟಾದ ನಷ್ಟ ಯಾವುದಾದರೂ ಇದ್ದರೆ, ಆ ಬಗ್ಗೆ ಮಂಡಲಿಯಿಂದ ಯಾವುದೇ ನಷ್ಟಭರ್ತಿಯನ್ನು ಕ್ಲೇಮು ಮಾಡಲು ಹಕ್ಕುಳ್ಳವನಾಗತಕ್ಕದ್ದಲ್ಲ;
(ಎಂ) ಅವನು, ಆ ಆವರಣವನ್ನು ವಾಸದ ಉದ್ದೇಶಕ್ಕಾಗಿ ಹೊರತು ಇತರೆ ಉದ್ದೇಶಗಳಿಗಾಗಿ ಉಪಯೋಗಿಸತಕ್ಕುದಲ್ಲ ಮತ್ತು ಅದಕ್ಕೆ ಹೊಂದಿಕೊಂಡಿರುವ ಅಧಿಭೋಗದಾರರಿಗೆ ಅಥವಾ ನೆರೆಹೊರೆಯವರಿಗೆ ಯಾವುದೇ ಅನಾನುಕೂಲ, ಉಪದ್ರವ ಅಥವಾ ಕಿರುಕುಳವನ್ನು ಉಂಟುಮಾಡವ ರೀತಿಯಲ್ಲಿ ಉಪಯೋಗಿಸತಕ್ಕುದಲ್ಲ. ಯಾವುದೇ ಕೃತ್ಯವು ಯಾವುದೇ ಉಪದ್ರವವನ್ನು ಉಂಟು ಮಾಡುವುದೇ ಅಥವಾ ಇಲ್ಲವೇ ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರಿಯ ತೀರ್ಮಾನವು ಅಂತಿಮವಾಗಿರತಕ್ಕದ್ದು ಮತ್ತು ಅವನು ಅದಕ್ಕೆ ಬದ್ಧನಾಗಿರತಕ್ಕದ್ದು;
(ಎನ್) ಅವನು, ಯಾವುದೇ ಕೊಳಾಯಿಯಿಂದ ನೀರು ವ್ಯರ್ಥವಾಗಿ ಹರಿದು ಹೋಗಲು ಅವಕಾಶ ಕೊಡತಕ್ಕುದಲ್ಲ ಮತ್ತು ಆವರಣದಿಂದ ಹೊರಕ್ಕೆ ನೀರನ್ನು ಅಥವಾ ಯಾವುದೇ ಇತರೆ ವಸ್ತುವನ್ನು ಎಸೆಯತಕ್ಕದ್ದಲ್ಲ ಮತ್ತು ಸ್ನಾನದ ಕೊಠಡಿಗಳನ್ನು ಅಥವಾ ವಠಾರದ ಯಾವುದೇ ಭಾಗವನ್ನು ಕಕ್ಕಸು ಅಥವಾ ಮೂತ್ರಿಗಳನ್ನಾಗಿ ಉಪಯೋಗಿಸತಕ್ಕದ್ದಲ್ಲ ಅಥವಾ ಉಪಯೋಗಿಸಲು ಅವಕಾಶ ಕೊಡತಕ್ಕದ್ದಲ್ಲ;
(ಒ) ಅವನು ಅಥವಾ ಆವರಣವನ್ನು ಅನುಭೋಗಿಸಲು ಅಧಿಕೃತನಾದ ಅವನ ಕುಟುಂಬದ ಯಾರೇ ವ್ಯಕ್ತಿಯು, ಮಂಡಲಿಯಿಂದ ಅಥವಾ ಲಿಖಿತದಲ್ಲಿ ಮೊದಲೇ ಅನುಮತಿ ಪಡೆಯದೆ 14 ದಿನಗಳ ನಿರಂತರ ಅವಧಿಗೆ ಆ ಆವರಣದ ಅನುಭೋಗವನ್ನು ನಿಲ್ಲಿಸಿದರೆ ಅನುಭೋಗಿಸಲು ನೀಡಿದ ಅನುಮತಿಯು ಕೂಡಲೇ ಕೊನೆಗೊಳ್ಳತಕ್ಕದ್ದು;
(ಪಿ) (ಎ) ಷರತ್ತಿನ ಮೇರೆಗೆ ನಿಗದಿಪಡಿಸಿದ ಮಾಸಿಕ ಬಾಡಿಗೆಯ ಅಥವಾ ಅದರ ಯಾವುದೇ ಭಾಗವು ಬಾಕಿ ಇದ್ದರೆ ಮತ್ತು ಬಾಕಿ ಇದ್ದಾಗಲೆಲ್ಲ, ಅದನ್ನು ಭೂ ಕಂದಾಯದ ಬಾಕಿಯಂತೆ ಮಂಡಲಿಯು ವಸೂಲು ಮಾಡತಕ್ಕದ್ದು ಮತ್ತು ಅಂಥ ಬಾಡಿಗೆಯು ಅಥವಾ ಅದರ ಯಾವುದೇ ಭಾಗವು ಎರಡು ತಿಂಗಳ ಅವಧಿಯವರೆಗೆ ಬಾಕಿಯಾಗಿದ್ದು ಅದನ್ನು ಕಾನೂನು ಸಮ್ಮತವಾಗಿ ತಗಾದೆ ಮಾಡಿರಲಿ ಅಥವಾ ಇಲ್ಲದಿರಲಿ ಅಥವಾ ಇದರಲ್ಲಿ ಒಳಗೊಂಡಿರುವ ಯಾವುದೇ ಇತರೆ ಉಪಬಂಧದ ಉಲ್ಲಂಘನೆಯಾಗಿದ್ದರೆ ಮತ್ತು ಆಗಿರುವಾಗಲೆಲ್ಲ ಅಧಿಭೋಗದ ಹಕ್ಕನ್ನು ಸಮಾಪ್ತಗೊಳಿಸಿರುವುದಾಗಿ ಭಾವಿಸತಕ್ಕದ್ದು ಮತ್ತು ಮಂಡಲಿಯು ಆ ತರುವಾಯ ಆ ಆವರಣವನ್ನು ಪುನಃ ಪ್ರವೇಶಿಸಬಹುದು;
(ಕ್ಯೂ) ಅವನು, (ಎ) ದಿಂದ (ಪಿ) ವರೆಗಿನ ಷರತ್ತುಗಳಲ್ಲಿ ಒಳಗೊಂಡಿರುವ ಉಪಬಂಧಗಳ ಪೈಕಿ ಯಾವುದೇ ಉಪಬಂಧವನ್ನು ಉಲ್ಲಂಘಿಸಿದರೆ, ಅವನು ಅಂಥ ಉಲ್ಲಂಘನೆಯನ್ನು ಮುಂದುವರೆಸಿದಂಥ ಅವಧಿಗೆ, ಮಂಡಲಿಯು ಕಾಲಕಾಲಕ್ಕೆ ನಿರ್ಧರಿಸಬಹುದಾದಂಥ ದರಗಳಲ್ಲಿ ಸದರಿ ಆವರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿಸಿದ ಬಾಡಿಗೆಯನ್ನು ಸಂದಾಯ ಮಾಡಲು ಸಹ ಬದ್ಧನಾಗತಕ್ಕದ್ದು;
(ಆರ್) ಅವನು ಸಂದಾಯ ಮಾಡಿದ ಮುಂಗಡ ಬಾಡಿಗೆಯ ಮೊಬಲಗನ್ನು, ಷರತ್ತುಗಳ ಪೈಕಿ ಯಾವುದೇ ಷರತ್ತನ್ನು ಉಲ್ಲಂಘಿಸಿದ ಬಗ್ಗೆ ಮುಟ್ಟುಗೋಲು ಹಾಕಿಕೊಳ್ಳದಿದ್ದರೆ, ಅವನು ಎಲ್ಲಾ ಬಾಡಿಗೆಗಳನ್ನು ಸಂದಾಯ ಮಾಡಿದ್ದರೆ ಮತ್ತು ಇದರಲ್ಲಿ ಒಳಗೊಂಡಿರುವ ಎಲ್ಲಾ ನಿಬಂಧನೆಗಳನ್ನು ಪಾಲಿಸಿದ್ದರೆ ಮತ್ತು ಮಂಡಲಿಗೆ ಅವನಿಂದ ಸಂದಾಯ ಬಾಕಿ ಇರುವ ಯಾವುವೇ ಮೊತ್ತಗಳನ್ನು ಅದರಿಂದ ಮುರಿದುಕೊಂಡ ನಂತರ ಮಂಡಲಿಗೆ ಸಲ್ಲತಕ್ಕ ಬಾಕಿಗಳು ಅಂಥ ಮುಂಗಡದ ಮೊಬಲಗನ್ನು ವಿೂರಿದ್ದ ಸಂದರ್ಭದಲ್ಲಿ ಅದನ್ನು ಆ ಕೂಡಲೆ ಸಂದಾಯ ಮಾಡುವುದಾಗಿ ಮಾತು ಕೊಟ್ಟರೆ ಅನುಭೋಗವನ್ನು ಮುಕ್ತಾಯಗೊಳಿಸಿದ ತರುವಾಯ ಅವನಿಗೆ ಮರುಪಾವತಿ ಮಾಡತಕ್ಕದ್ದು. ಅನುಭೋಗವನ್ನು ಮುಂದುವರಿಸಿದ ಅವಧಿಯಲ್ಲಿ ಸದರಿ ಮುಂಗಡದಿಂದ ಯಾವುದೇ ಮೊತ್ತವನ್ನು ಮುರಿದುಕೊಂಡಿರುವ ಸಂದರ್ಭದಲ್ಲಿ, ಅವನು, ಆ ಕೂಡಲೇ, ಹಾಗೆ ಮುರಿದುಕೊಂಡಿದ್ದ ಮೊಬಲಗಿಗೆ ತಗಾದೆ ಮಾಡಿದರೆ ಸಂದಾಯ ಮಾಡತಕ್ಕುದು ಮತ್ತು ಅಧಿಭೋಗದ ಅವಧಿಯುದ್ದಕ್ಕೂ ಮುಂಗಡದ ಮೊಬಲಗನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗತಕ್ಕದ್ದು, ಮುಂಗಡವು ನಗದು ರೂಪದಲ್ಲಿರತಕ್ಕದ್ದು ಮತ್ತು ಅದಕ್ಕೆ ಯಾವುದೇ ಬಡ್ಡಿ ಸಂದಾಯವಾಗತಕ್ಕದ್ದಲ್ಲ.
(ಎಸ್) ಮಂಡಲಿಯು ತೀರ್ಮಾನಿಸಬೇಕಾದ ಯಾವುದೇ ವಿಷಯವನ್ನು ಮತ್ತು ಮಂಡಲಿಯು ನೀಡಬೇಕಾದ ಯಾವುದೇ ನೋಟೀಸನ್ನು, ಅನುಮತಿಯನ್ನು ಅಥವಾ ಸಮ್ಮತಿಯನ್ನು ತತ್ಕಾಲದ ಸಕ್ಷಮ ಪ್ರಾಧಿಕಾರಿಯು ಅಥವಾ ಮಂಡಲಿಯು ಯುಕ್ತವಾಗಿ ಅಧಿಕೃತಗೊಳಿಸಿದ ಇತರ ಯಾವನೇ ಅಧಿಕಾರಿಯು ತೀರ್ಮಾನಿಸಬಹುದು ಮತ್ತು ನೀಡಬಹುದು ಮತ್ತು ಸದರಿ ಸಕ್ಷಮ ಪ್ರಾಧಿಕಾರಿಯು ಅಥವಾ ಮಂಡಲಿಯು ಕ್ರಮಬದ್ಧವಾಗಿ ಅಧಿಕೃತಗೊಳಿಸಿದ ಇತರ ಅಧಿಕಾರಿಯು ಸಹಿಮಾಡಿ ಅವನ ವಿಳಾಸಕ್ಕೆ ನೋಂದಾಯಿತ ಅಂಚೆ ಮೂಲಕ ಕಳುಹಿಸಿದ ಅಥವಾ ಸದರಿ ಆವರಣದಲ್ಲಿ ಇಟ್ಟುಹೋದ ಅಥವಾ ವೈಯಕ್ತಿಕವಾಗಿ ಕೊಟ್ಟ ಅಥವಾ ಸದರಿ ಆವರಣದ ಎದ್ದು ಕಾಣುವ ಭಾಗದಲ್ಲಿ ಅಂಟಿಸಿದ ಯಾವುದೇ ತಿಳುವಳಿಕೆಯನ್ನು ಸಾಕಷ್ಟು ಜಾರಿಯೆಂಬುದಾಗಿ ಪರಿಣಿಸತಕ್ಕದ್ದು;
(ಟಿ) ಅನುಭೋಗವನ್ನು ಇಬ್ಬರಲ್ಲಿ ಒಬ್ಬರು ಮತ್ತೊಬ್ಬನಿಗೆ ಒಂದು ತಿಂಗಳ ನೋಟೀಸನ್ನು ಕೊಡುವ ಮೂಲಕ ಕೊನೆಗೊಳಿಸಬಹುದು. ಅನುಭೋಗದಾರನು ಅಂಥ ನೋಟೀಸನ್ನು ಕೊಡದೆ ಆವರಣವನ್ನು ಬಿಟ್ಟುಹೋದರೆ, ಅಂಥ ನೋಟೀಸಿಗೆ ಬದಲಾಗಿ ಅವನು ಒಂದು ತಿಂಗಳ ಬಾಡಿಗೆಯನ್ನು ಮತ್ತು ನೋಟೀಸಿನ ಅವಧಿಯ ಬಗ್ಗೆ ಇಲ್ಲಿ ಉಪಬಂಧಿಸಿರುವ ಹಾಗೆ ಅವನಿಂದ ಬಾಕಿ ಇರುವ ಇತರ ಎಲ್ಲಾ ಚಾರ್ಜುಗಳನ್ನು ಸಂದಾಯ ಮಾಡಲು ಬದ್ಧನಾಗಿರತಕ್ಕದ್ದು;
(ಯು) ಸದರಿ ಆವರಣವನ್ನು ಕಾರ್ಖಾನೆಗಳ ಅಧಿನಿಯಮ, 1948ರ 2 (1)ನೇ ಪ್ರಕರಣದ ವ್ಯಾಪ್ತಿಗೆ ಒಳಪಡುವ ಕೈಗಾರಿಕಾ ಕಾರ್ಮಿಕನಾಗಿರುವ ಕಾರಣದಿಂದ ಸಬ್ಸಿಡಿ ಬಾಡಿಗೆಯ ಮೇಲೆ ಅನುಭೋಗಿಸಲು ಲೈಸೆನ್ಸು ಕೊಟ್ಟಿದ್ದರೆ ಆ ಲೈಸೆನ್ಸು, ಅವನು ಕೈಗಾರಿಕಾ ಕಾರ್ಮಿಕನಾಗಿರುವುದು ಮುಕ್ತಾಯವಾದ ಕೂಡಲೇ ಕೊನೆಗೊಳ್ಳತಕ್ಕದ್ದು;
(ವಿ) ಅನುಭೋಗವು, ಅಧಿನಿಯಮದ ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳು, ವಿನಿಯಮಗಳು ಮತ್ತು ಉಪವಿಧಿಗಳ ಉಪಬಂಧಗಳಿಗೆ ಒಳಪಟ್ಟಿರತಕ್ಕದ್ದು;
(ಡಬ್ಲ್ಯೂ) ಅವನು, ಹಿಂದೆ ಹೇಳಿದ ಷರತ್ತುಗಳಲ್ಲಿ ಮಾಡಿದ ಬದಲಾವಣೆಗಳಿಗೆ ಅಥವಾ ಅವುಗಳಿಗೆ ಮಾಡಿದ ಸೇರ್ಪಡೆಗಳಿಗೆ ಬದ್ಧನಾಗಿರತಕ್ಕದ್ದು, ಪರಂತು, ಅಂಥ ಬದಲಾವಣೆಗಳನ್ನು, ಆ ಬಗ್ಗೆ ಅವನಿಗೆ ನೋಟೀಸನ್ನು ಕೊಟ್ಟ ತರುವಾಯ ಮಾಡಬೇಕು;
(ಎಕ್ಸ್) ಅವನು, ಮೇಲೆ ತಿಳಿಸಿರುವ ಷರತ್ತುಗಳನ್ನು ಒಳಗೊಂಡಿರುವ ಒಪ್ಪಂದವನ್ನು ಸೂಕ್ತ ಸ್ಟಾಂಪ್ ಕಾಗದದ ಮೇಲೆ ಬರೆದುಕೊಡತಕ್ಕದ್ದು;
(ವೈ) ಅವನು, ಅಧಿನಿಯಮದ ಉಪಬಂಧಗಳ ಮೇರೆಗಿನ ಅನುಭೋಗದ ಷರತ್ತುಗಳ ಪೈಕಿ ಯಾವುದೇ ಷರತ್ತನ್ನು ಉಲ್ಲಂಘಿಸಿದರೆ ಮಂಡಲಿಯು ಆವರಣದಿಂದ ಹೊರ ಹಾಕಲ್ಪಡುವುದಕ್ಕೆ ಒಳಪಟ್ಟಿರತಕ್ಕದ್ದು.
1 [11. ನೋಟೀಸುಗಳು.- (1) 45ನೇ ಪ್ರಕರಣದ (1)ನೇ ಉಪ-ಪ್ರಕರಣದ ಪರಂತುಕದ ಮೇರೆಗಿನ ಷೋಕಾಸ್ ನೋಟೀಸು IVನೇ ನಮೂನೆಯಲ್ಲಿರತಕ್ಕದ್ದು.
(2) 45ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗಿನ ಅಂತಿಮ ನೋಟೀಸು IV-ಎ ನಮೂನೆಯಲ್ಲಿರತಕ್ಕದ್ದು.
(3) 46ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗಿನ ನೋಟೀಸು Vನೇ ನಮೂನೆಯಲ್ಲಿರತಕ್ಕದ್ದು.
(4) 46ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೇರೆಗಿನ ನೋಟೀಸು VIನೇ ನಮೂನೆಯಲ್ಲಿರತಕ್ಕದ್ದು.
- ಜಿಎಸ್ಆರ್ 322, ದಿನಾಂಕ 18-7-1967ರ ಮೂಲಕ ನಿಯಮ 11ನ್ನು ಪ್ರತಿಯೋಜಿಸಲಾಗಿದೆ. 1 [11ಎ. ಅಪೀಲುಗಳಲ್ಲಿನ ಪ್ರಕ್ರಿಯೆ.- (1) ಅಧಿನಿಯಮದ 48ನೇ ಪ್ರಕರಣದ ಮೇರೆಗೆ ಸಲ್ಲಿಸುವ ಅಪೀಲು ಬರವಣಿಗೆಯಲ್ಲಿರತಕ್ಕದ್ದು ಮತ್ತು ಅದರಲ್ಲಿ ಯಾವ ಆದೇಶದ ವಿರುದ್ಧ ಅಪೀಲು ಸಲ್ಲಿಸಲಾಗಿದೆಯೋ ಆ ಆದೇಶಕ್ಕೆ ಮಾಡಿದ ಆಕ್ಷೇಪಣೆಯ ಕಾರಣಗಳನ್ನು ಸಂಕ್ಷಿಪ್ತವಾಗಿ ನಿರೂಪಿಸಿರತಕ್ಕದ್ದು ಮತ್ತು ಅದಕ್ಕೆ ಅಂಥ ಆದೇಶದ ಒಂದು ಪ್ರತಿಯನ್ನು ಲಗತ್ತಿಸಿರತಕ್ಕದ್ದು.
(2) ಅಪೀಲನ್ನು ಸ್ವೀಕರಿಸಿದ ತರುವಾಯ ಮತ್ತು ಸಕ್ಷಮ ಪ್ರಾಧಿಕಾರದ ಸಮ್ಮುಖದಲ್ಲಿ ನಡೆದ ವ್ಯವಹರಣೆಗಳ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸಿದ ತರುವಾಯ ಅಪೀಲು ಅಧಿಕಾರಿಯು ಅಪೀಲಿನ ವಿಚಾರಣೆಗಾಗಿ ಸಮಯ ಮತ್ತು ಸ್ಥಳವನ್ನು ಗೊತ್ತುಪಡಿಸತಕ್ಕದ್ದು ಮತ್ತು ಯಾವ ಸಕ್ಷಮ ಪ್ರಾಧಿಕಾರದ ಆದೇಶದ ವಿರುದ್ಧ ಅಪೀಲನ್ನು ಸಲ್ಲಿಸಲಾಗಿದೆಯೋ ಆ ಸಕ್ಷಮ ಪ್ರಾಧಿಕಾರಕ್ಕೆ ಮತ್ತು ಅಪೀಲುದಾರನಿಗೆ ಆ ಬಗ್ಗೆ ನೋಟೀಸು ಕೊಡತಕ್ಕದ್ದು.
-
ಜಿಎಸ್ಆರ್ 322, ದಿನಾಂಕ 18-7-1967ರ ಮೂಲಕ ನಿಯಮ 11-ಎ ಯನ್ನು ಸೇರಿಸಲಾಗಿದೆ.
-
ಸ್ವಾಧೀನವನ್ನು ತೆಗೆದುಕೊಳ್ಳುವ ಪ್ರಕ್ರಿಯೆ.- (1) 45ನೇ ಪ್ರಕರಣದ ಮೇರೆಗೆ ಆವರಣದ ಸ್ವಾಧೀನವನ್ನು ತೆಗೆದುಕೊಳ್ಳುವ ಉದ್ದೇಶಕ್ಕಾಗಿ ಸಕ್ಷಮ ಪ್ರಾಧಿಕಾರವು ಸದರಿ ಪ್ರಕರಣದ ಮೂಲಕ ಅಗತ್ಯಪಡಿಸಲಾದ ನೋಟೀಸನ್ನು ಕೊಟ್ಟ ತರುವಾಯ ಮತ್ತು ಅನುಭೋಗದಾರನಿಗೆ ಅಹವಾಲು ಹೇಳಿಕೊಳ್ಳಲು ಯುಕ್ತ ಅವಕಾಶವನ್ನು ಕೊಟ್ಟ ತರುವಾಯ ಸೂರ್ಯೋದಯದ ಮುಂಚೆ ಅಥವಾ ಸೂರ್ಯಸ್ತವಾದ ತರುವಾಯ ಹೊರತು ಯಾವುದೇ ಸಮಯದಲ್ಲಿ ಆ ಆವರಣವನ್ನು ಪ್ರವೇಶಿಸಬಹುದು.
(2) ಸಕ್ಷಮ ಪ್ರಾಧಿಕಾರವು (1)ನೇ ಉಪನಿಯಮದ ಮೇರೆಗೆ ಪ್ರವೇಶಿಸುವ ಉದ್ದೇಶಗಳಿಗಾಗಿ ಯಾವುದೇ ಬೀಗವನ್ನು ಒಡೆದು ತೆಗೆಯಬಹುದು ಮತ್ತು ಸಂಬಂಧಪಟ್ಟ ವ್ಯಕ್ತಿಯು ಅಂಥ ವಸ್ತುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ನಿರಾಕರಿಸಿದರೆ ಸಾಕ್ಷಿಗಳ ಸಮ್ಮುಖದಲ್ಲಿ ಆವರಣದಲ್ಲಿ ಕಂಡುಬಂದ ಯಾವುವೇ ವಸ್ತುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬಹುದು.
(3) (2)ನೇ ಉಪ-ನಿಯಮದ ಮೇರೆಗೆ ವಸ್ತುಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಾಗ, ಸಕ್ಷಮ ಪ್ರಾಧಿಕಾರವು ಪ್ರತಿಯೊಂದು ಸಂದರ್ಭದಲ್ಲಿ ನಿಗದಿಪಡಿಸಬಹುದಾದಂಥ ಅಭಿರಕ್ಷೆ ಚಾರ್ಜುಗಳನ್ನು ಸಂದಾಯಮಾಡಿದ ತರುವಾಯ ಸದರಿ ವಸ್ತುಗಳನ್ನು ಸ್ವೀಕರಿಸಲು ಅನುಭೋಗದಾರನಿಗೆ ನೋಟೀಸನ್ನು ಕೊಡತಕ್ಕದ್ದು.
(4) (3)ನೇ ಉಪನಿಯಮದ ಮೇರೆಗೆ ಯಾವ ವ್ಯಕ್ತಿಗೆ ನೋಟೀಸನ್ನು ಕೊಡಲಾಗಿದೆಯೋ ಆ ವ್ಯಕ್ತಿಯು, ಸ್ವಾಧೀನಕ್ಕೆ ತೆಗೆದುಕೊಳ್ಳಲು ತಪ್ಪಿದರೆ, ಸಕ್ಷಮ ಪ್ರಾಧಿಕಾರವು ಆ ವಸ್ತುಗಳನ್ನು ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಬಹುದು ಮತ್ತು ಅದರಿಂದ ಬಂದ ಉತ್ಪತ್ತಿಯನ್ನು ಸಂಬಂಧಪಟ್ಟ ವ್ಯಕ್ತಿಯ ಲೆಕ್ಕಕ್ಕೆ ಜಮೆಮಾಡಬಹುದು.
- ಅನಧಿಕೃತ ಅನುಭೋಗದಿಂದಾದ ಹಾನಿಗಳ ನಿರ್ಧರಣೆ.- (1) ಮಂಡಲಿಗೆ ಸೇರಿದ ಯಾವುವೇ ಆವರಣಗಳ ಅನಧಿಕೃತ ಅನುಭೋಗದಿಂದಾದ ಹಾನಿಗಳನ್ನು ನಿರ್ಧರಿಸುವಾಗ ಸಕ್ಷಮ ಪ್ರಾಧಿಕಾರವು ಈ ಕೆಳಕಂಡ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳತಕ್ಕದ್ದು, ಎಂದರೆ:-
(ಎ) ಮಂಡಲಿಯ ಆವರಣಗಳನ್ನು ಯಾವ ಉದ್ದೇಶ ಮತ್ತು ಎಷ್ಟು ಅವಧಿಯವರೆಗೆ ಅನಧಿಕೃತವಾಗಿ ಅನುಭೋಗಿಸಲಾಯಿತೋ ಆ ಉದ್ದೇಶ ಮತ್ತು ಅವಧಿ;
(ಬಿ) ಅಂಥ ಆವರಣದಲ್ಲಿ ಲಭ್ಯವಿರುವ ವಸತಿಯ ಸ್ವರೂಪ, ಗಾತ್ರ ಮತ್ತು ಗುಣಮಟ್ಟ;
(ಸಿ) ಅನಧಿಕೃತ ಅನುಭೋಗದ ಅವಧಿಯಲ್ಲಿ ಆ ಆವರಣವನ್ನು ಬಾಡಿಗೆಗೆ ಕೊಟ್ಟಿದ್ದಿದ್ದರೆ ಪ್ರಾಪ್ತವಾಗಬಹುದಾಗಿದ್ದ ಬಾಡಿಗೆ;
(ಡಿ) ಅನಧಿಕೃತ ಅನುಭೋಗದ ಅವಧಿಯಲ್ಲಿ ಆವರಣಕ್ಕೆ ಉಂಟಾದ ಯಾವುದೇ ಹಾನಿ;
(ಇ) ಹಾನಿಯನ್ನು ನಿರ್ಧರಿಸುವ ಉದ್ದೇಶಕ್ಕಾಗಿ ಸಕ್ಷಮ ಪ್ರಾಧಿಕಾರದ ಅಭಿಪ್ರಾಯದಲ್ಲಿ ಸುಸಂಗತವಾಗಿರುವ ಯಾವುದೇ ಇತರ ವಿಷಯ.
(2) ಹಾನಿಯನ್ನು ನಿರ್ಧರಿಸುವುದಕ್ಕೆ ಮುಂಚೆ, ಸಕ್ಷಮ ಪ್ರಾಧಿಕಾರವು ಅನಧಿಕೃತ ಅನುಭೋಗದಲ್ಲಿದ್ದ ವ್ಯಕ್ತಿಗೆ ಅಹವಾಲು ಹೇಳಿಕೊಳ್ಳುವ ಅವಕಾಶವನ್ನು ನೀಡತಕ್ಕದ್ದು.
1 14. ಲೆಕ್ಕ ಪತ್ರಗಳ ತಯಾರಿಕೆ ಮತ್ತು ನಿರ್ವಹಣೆ.- [(1) ಕರ್ನಾಟಕ ಲೋಕೋಪಯೋಗಿ ಲೆಕ್ಕಪತ್ರಗಳ ಸಂಹಿತೆಯ ಮೇರೆಗೆ ನಿಯಮಿಸಲಾದ ನಮೂನೆಗಳು ಮತ್ತು ರಿಜಿಸ್ಟರುಗಳು, ಕರ್ನಾಟಕ ಗೃಹ ನಿರ್ಮಾಣ ಮಂಡಲಿಯ ಅಧಿನಿಯಮ ಮತ್ತು ನಿಯಮಗಳ ಉಪಬಂಧಗಳಿಗೆ ಅಸಂಗತವಾಗಿಲ್ಲದಷ್ಟು ಮಟ್ಟಿಗೆ ಅವುಗಳನ್ನು ಜವಿೂನುಗಳಿಗೆ ಮತ್ತು ಮಂಡಲಿಯು ನಿರ್ಮಿಸಿದ ಕಟ್ಟಡಗಳಿಗೆ ಸಂಬಂಧಪಟ್ಟಂತೆ ಮಂಡಲಿಯ ಲೆಕ್ಕಪತ್ರಗಳನ್ನು ನಿರ್ವಹಿಸುವುದಕ್ಕಾಗಿ ಅಂಗೀಕರಿಸತಕ್ಕದ್ದು. ಮಂಡಲಿಯ ಇತರ ವ್ಯವಹಾರಗಳಿಗೆ ಸಂಬಂಧಪಟ್ಟಂತೆ, ಕರ್ನಾಟಕ ಆರ್ಥಿಕ ಸಂಹಿತೆ, 1958ರ ಮತ್ತು ಸಾದಿಲ್ವಾರು ವೆಚ್ಚ ಕೈಪಿಡಿಯ ಮೂಲಕ ನಿಯಮಿಸಲಾದ ನಮೂನೆಗಳು ಮತ್ತು ರಿಜಿಸ್ಟರುಗಳು, ಕರ್ನಾಟಕ ಗೃಹನಿರ್ಮಾಣ ಮಂಡಲಿ ಅಧಿನಿಯಮ ಮತ್ತು ನಿಯಮಗಳ ಉಪಬಂಧಗಳಿಗೆ ಅಸಂಗತವಾಗಿಲ್ಲದಷ್ಟು ಮಟ್ಟಿಗೆ ಅವುಗಳನ್ನು ಅಂಗೀಕರಿಸತಕ್ಕದ್ದು.
- ಜಿಎಸ್ಆರ್ 42, ದಿನಾಂಕ 25/28-1-1978 ಕೆಜಿಡಿ, ದಿನಾಂಕ: 2-2-1978ರ ಮೂಲಕ 14ನೇ ನಿಯಮದ (1)ನೇ ಉಪನಿಯಮವನ್ನು ಪ್ರತಿಯೋಜಿಸಲಾಗಿದೆ.
(2) ಮಂಡಲಿಯು, ತನ್ನ ಜಮೆಗಳು ಮತ್ತು ವೆಚ್ಚದ ವಾರ್ಷಿಕ ತಃಖ್ತೆಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸತಕ್ಕದ್ದು ಮತ್ತು ಸದರಿ ಲೆಕ್ಕಪತ್ರಗಳ ಪ್ರತಿಗಳನ್ನು ಕಾಲಕಾಲಕ್ಕೆ ತಾನು ನಿಗದಿಪಡಿಸಬಹುದಾದಂಥ ದರಗಳಲ್ಲಿ ಮಾರಾಟಕ್ಕೆ ದೊರೆಯುವಂತೆ ಇಡತಕ್ಕದ್ದು.
- ಬಾಡಿಗೆಯನ್ನು ನಿಗದಿಪಡಿಸುವುದು.- (1) 59ನೇ ಪ್ರಕರಣದ ಮೇರೆಗೆ ನೌಕರನಿಗೆ ಮಂಡಲಿಯು ಒದಗಿಸಿದ ವಾಸದ ಮನೆಯ ಬಾಡಿಗೆಯನ್ನು -
(i) ಕಟ್ಟಡದ ಬಂಡವಾಳ ವೆಚ್ಚವನ್ನು ;
(ii) ನಿರ್ವಹಣೆ ವೆಚ್ಚವನ್ನು ;
(iii) ಸಂದಾಯವಾಗಬೇಕಾದ ಪುರಸಭಾ ತೆರಿಗೆಗಳನ್ನು ;
(iv) ನೀರು ಮತ್ತು ವಿದ್ಯುಚ್ಫಕ್ತಿ ಸರಬರಾಜು ವೆಚ್ಚಗಳನ್ನು ; ಮತ್ತು
(v) ಆವರಣಗಳು ಖಾಲಿಯಾಗಿದ್ದ ಅವಧಿಗಳನ್ನು
- ಗಣನೆಗೆ ತೆಗೆದುಕೊಂಡು ನಿಗದಿಪಡಿಸತಕ್ಕದ್ದು.
(2) ಬಾಡಿಗೆ ದರವನ್ನು ಮಂಡಲಿಯು ಕಾಲಕಾಲಕ್ಕೆ ಪರಿಷ್ಕರಿಸಬಹುದು.
- ನಿಯೋಜಕನು ಸಂದಾಯ ಮಾಡಿದ ಬಾಡಿಗೆಗೆ ಸಂಬಂಧಿಸಿದ ರಿಜಿಸ್ಟರುಗಳು.- (1) ಮಂಡಲಿಯು ಯಾವ ನಿಯೋಜಕನ ನೌಕರರಿಗಾಗಿ ವಾಸದ ಮನೆಗಳನ್ನು ಒದಗಿಸಿದೆಯೋ ಅಂಥ ಪ್ರತಿಯೊಬ್ಬ ನಿಯೋಜಕನು 59ನೇ ಪ್ರಕರಣದ (5)ನೇ ಉಪಪ್ರಕರಣದ (ii)ನೇ ಖಂಡದ ಮೇರೆಗೆ ಮಾಡಲಾದ ಎಲ್ಲಾ ಕಳೆತಗಳ ವಿವರಗಳನ್ನು ತೋರಿಸುವ ಒಂದು ರಿಜಿಸ್ಟರನ್ನು VII ನೇ ನಮೂನೆಯಲ್ಲಿ ಇಡತಕ್ಕದ್ದು.
(2) ಪ್ರತಿ ತಿಂಗಳಿಗೆ ಸಂಬಂಧಿಸಿದಂತೆ ಅಂಥ ರಿಜಿಸ್ಟರುಗಳಲ್ಲಿ ಮಾಡಿದ ನಮೂದುಗಳನ್ನು ಗೃಹನಿರ್ಮಾಣ ಮಂಡಲಿಯ ಅಧಿಕಾರಿಯು ಅಥವಾ ಪರಿಶೀಲಕನು ಸರಿನೋಡತಕ್ಕುದು ಮತ್ತು ಹಾಗೆ ಸರಿನೋಡಿರುವುದಕ್ಕೆ ಸಂಕೇತವಾಗಿ ಅವನು ಅದಕ್ಕೆ ಸಹಿ ಹಾಕತಕ್ಕದ್ದು.
-
ಬಾಡಿಗೆ ಸಂದಾಯ ಮಾಡುವ ರೀತಿ.- ಮಂಡಲಿಗೆ ಸಂದಾಯ ಮಾಡುವ ಎಲ್ಲಾ ಬಾಡಿಗೆಗಳನ್ನು ಅಂಚೆ ಮನಿಆರ್ಡರ್, ಚೆಕ್ ಮೂಲಕ ಅಥವಾ ಖಜಾನೆಗೆ ಅಥವಾ ಸಂದಾಯಗಳನ್ನು ಸ್ವೀಕರಿಸಲು ಮಂಡಲಿಯು ಸೂಚಿಸಬಹುದಾದಂಥ ಅಧಿಕೃತವಾದ ಬ್ಯಾಂಕಿಗೆ ಜಮೆಮಾಡುವ ಮೂಲಕ ಮಂಡಲಿಗೆ ಪಾವತಿ ಮಾಡತಕ್ಕದ್ದು
-
ವಸತಿಯ ಗುಣಮಟ್ಟ.- (1) ಈ ಅಧಿನಿಯಮದ ಪ್ರಾರಂಭದ ತರುವಾಯ ನಿಯೋಜಕನು ತನ್ನ ನೌಕರರಿಗಾಗಿ ವಾಸದ ಮನೆಗಳನ್ನು ಒದಗಿಸಿದಾಗಲೆಲ್ಲ ಅಂಥ ಪ್ರತಿಯೊಂದು ಕಟ್ಟಡದ ಗಾತ್ರವು VII ನೇ ನಮೂನೆಯಲ್ಲಿ ನಮೂದಿಸಿದ ವಿಶಿಷ್ಟ ವಿವರಣೆಗೆ ಅನುಸಾರವಾಗಿರತಕ್ಕದ್ದು.
(2) ವಾಸದ ಮನೆಗಳನ್ನು ಸಾರ್ವಜನಿಕ ಆರೋಗ್ಯಕ್ಕೆ ಪ್ರತಿಕೂಲವಾದ ಅನೈರ್ಮಲ್ಯ ಪರಿಸ್ಥಿತಿಯಿಂದ ಮುಕ್ತವಾದ ಪ್ರದೇಶದಲ್ಲಿ ಒದಗಿಸತಕ್ಕದ್ದು.
(3) ಕಾರ್ಮಿಕರ ಮನೆಗಳ ಪೈಕಿ ಪ್ರತಿಯೊಂದು ಘಟಕವೂ ಪಯಾಲ್ ಹೊಂದಿರುವ ಮುಂಭಾಗದ ವರಾಂಡ, ಒಂದು ಹಾಲು, ಒಂದು ಮಲಗುವ ಕೋಣೆ, ಒಂದು ಅಡುಗೆ ಮನೆ, ಒಂದು ಸ್ನಾನದ ಕೋಣೆ ಮತ್ತು ಶೌಚಾಲಯ ಇವುಗಳನ್ನು ಒಳಗೊಂಡಿರತಕ್ಕದ್ದು.
(4) ಒದಗಿಸಲಾದ ವಸತಿಯು ಕಾಲಕಾಲಕ್ಕೆ ಮಂಡಲಿಯ ಅಧಿಕಾರಿಗಳ ಪರಿಶೀಲನೆಗೊಳಪಟ್ಟಿರತಕ್ಕದ್ದು ಮತ್ತು ನಿಯೋಜಕನು ಆ ವಸತಿಯ ನಿರ್ವಹಣೆಗೆ ಸಂಬಂಧಿಸಿ ಸದರಿ ಅಧಿಕಾರಿಗಳು ಕೊಡಬಹುದಾದಂಥ ನಿರ್ದೇಶನಗಳನ್ನು ಪಾಲಿಸತಕ್ಕದ್ದು.
- ನಿಯೋಜಕರು ಸಲ್ಲಿಸಬೇಕಾದ ರಿಟರ್ನುಗಳು.- ಪ್ರತಿಯೊಬ್ಬ ನಿಯೋಜಕನು ಮಂಡಲಿಗೆ ಅಥವಾ ಈ ಬಗ್ಗೆ ಮಂಡಲಿಯು ಅಧಿಕೃತಗೊಳಿಸಬಹುದಾದಂಥ ಅಧಿಕಾರಿಗೆ ಈ ಕೆಳಕಂಡ ರಿಟರ್ನುಗಳನ್ನು ಒದಗಿಸತಕ್ಕದ್ದು, ಎಂದರೆ:-
(i) ಅವನು ತನ್ನ ನೌಕರರಿಗೆ ಒದಗಿಸಿದ ಮತ್ತು ಮಂಡಲಿಯು ಒಳ್ಳೆಯ ವಾಸಯೋಗ್ಯ ಸ್ಥಿತಿಯಲ್ಲಿರುವುದಾಗಿ ಅನುಮೋದಿಸಿದ ಎಲ್ಲಾ ಮನೆಗಳ ಪಟ್ಟಿ;
(ii) ಯಾವ ನೌಕರರಿಗೆ ವಾಸದ ಮನೆಗಳನ್ನು ಒದಗಿಸಿಲ್ಲಮೋ ಆ ನೌಕರರ ಸಂಖ್ಯೆ;
(iii) 59ನೇ ಪ್ರಕರಣದ ಮೇರೆಗೆ ಸಂದಾಯ ಮಾಡಬೇಕಾದ ಬಾಡಿಗೆಗೆ ಸಂಬಂಧಪಟ್ಟಂತೆ ತನ್ನ ನೌಕರರ ಮಜೂರಿಗಳಿಂದ ಮಾಡಿದ ಕಳೆತಗಳ ವಿವರಗಳು.
- ಮಂಡಲಿಯು ಒದಗಿಸಬೇಕಾದ ರಿಟರ್ನುಗಳು.- ಮಂಡಲಿಯು ಈ ಕೆಳಕಂಡ ರಿಟರ್ನುಗಳನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು, ಎಂದರೆ:-
(i) ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಬಹುದಾದಂಥ ನಮೂನೆಯಲ್ಲಿ ವಿವಿಧ ಗೃಹನಿರ್ಮಾಣ ಯೋಜನೆಗಳ ತ್ರೈಮಾಸಿಕ ಪ್ರಗತಿ ವರದಿಗಳು;
(ii) ವಿವಿಧ ಗೃಹನಿರ್ಮಾಣ ಯೋಜನೆಗಳ ವಾರ್ಷಿಕ ಪ್ರಗತಿಯ ವರದಿಗಳು;
(iii) ಬಾಡಿಗೆ ಮತ್ತು ಸಾಲದ ತಗಾದೆ, ವಸೂಲಿ ಮತ್ತು ಬಾಕಿ;
(iv) ಮಂಡಲಿಯ ನಡೆವಳಿಕೆಗಳ ಪ್ರತಿಗಳು;
(v) ಜಮೆಗಳು ಮತ್ತು ವೆಚ್ಚಗಳ ವಾರ್ಷಿಕ ತಃಖ್ತೆ.
- ವಾರ್ಷಿಕ ತಃಖ್ತೆಯನ್ನು ಪ್ರಕಟಿಸುವುದು.- ಮಂಡಲಿಯ ಜಮೆಗಳು ಮತ್ತು ವೆಚ್ಚದ ವಾರ್ಷಿಕ ತಃಖ್ತೆಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸತಕ್ಕದ್ದು.
ಸದರಿ ಲೆಕ್ಕಪತ್ರಗಳ ಪ್ರತಿಗಳನ್ನು ಕಾಲಕಾಲಕ್ಕೆ ಮಂಡಲಿಯು ನಿಗದಿಪಡಿಸಬಹುದಾದ ದರಗಳಲ್ಲಿ ಮಾರಾಟ ಮಾಡಲಾಗುವುದು.
- ಮಂಡಲಿಯ ರದ್ದಿಯಾತಿ.- (1) 86ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗೆ ಮಂಡಲಿಯನ್ನು ರದ್ದುಪಡಿಸುವ ಆದೇಶವನ್ನು ಅಂಗೀಕರಿಸುವುದಕ್ಕೆ ಮುಂಚೆ, ಸರ್ಕಾರವು ಮಂಡಲಿಗೆ ಅಹವಾಲು ಹೇಳಿಕೊಳ್ಳುವುದಕ್ಕೆ ಅವಕಾಶವನ್ನು ನೀಡತಕ್ಕದ್ದು ಮತ್ತು ಆ ಆದೇಶದಲ್ಲಿ, ಆದೇಶವನ್ನು ಮಾಡಿದ್ದಕ್ಕೆ ಕಾರಣಗಳನ್ನು ಮತ್ತು ರದ್ದಿಯಾತಿಯು ಯಾವ ದಿನಾಂಕದಿಂದ ಜಾರಿಗೆ ಬರತಕ್ಕುದೆಂಬುದನ್ನು ನಿರ್ದಿಷ್ಟಪಡಿಸತಕ್ಕದ್ದು.
(2) ರದ್ದಿಯಾತಿಯ ಆದೇಶದ ಒಂದು ಪ್ರತಿಯನ್ನು ಮಂಡಲಿಯ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಜಾರಿಮಾಡತಕ್ಕದ್ದು.
(3) ರದ್ದಿಯಾತಿಯ ಆದೇಶವನ್ನು ಮಾಡಿದ ತರುವಾಯ ಅಧ್ಯಕ್ಷರು ಮತ್ತು ಮಂಡಳಿಯ ಇತರ ಎಲ್ಲಾ ಸದಸ್ಯರು ಆದೇಶದಲ್ಲಿ ನಿರ್ದಿಷ್ಟಪಡಿಸಿರುವ ದಿನಾಂಕದಿಂದ ತಮ್ಮ ಪದಗಳನ್ನು ತೆರವು ಮಾಡತಕ್ಕದ್ದು.
ನಮೂನೆ - I (8ನೇ ನಿಯಮ ನೋಡಿ) ಕರ್ನಾಟಕ ಗೃಹ ನಿರ್ಮಾಣ ಮಂಡಳಿ ........ವರ್ಷದ ಗೃಹನಿರ್ಮಾಣ ಕಾರ್ಯಕ್ರಮ I. ಧನಸಹಾಯ ಘೋಷಿತ ಕೈಗಾರಿಕಾ ಗೃಹ ನಿರ್ಮಾಣ ಯೋಜನೆ (.............................ಲಕ್ಷಗಳ ರಾಜ್ಯ ಬಜೆಟ್ ಏರ್ಪಾಡು)
ಎ. ರಾಜ್ಯ ಸರ್ಕಾರದ ಯೋಜನೆಗಳು
| ಕ್ರಮ ಸಂಖ್ಯೆ | ಯೋಜನೆಯ ಹೆಸರು | ಮನೆಗಳ ಸಂಖ್ಯೆ | ಅಂದಾಜು ವೆಚ್ಚ | ಹಿಂದಿನ ವರ್ಷದ ಮಾರ್ಚ್ ಕೊನೆಯ ವರೆಗೆ ವಹಿಸಿದ ವೆಚ್ಚ | ಮಂಜೂರಾದ ವೆಚ್ಚದಲ್ಲಿ ಉಳಿದಿರುವ ಶಿಲ್ಕು |
ಬಿ. ನಿಯೋಜಕನ ಯೋಜನೆಗಳು
| ಕ್ರಮ ಸಂಖ್ಯೆ | ಯೋಜನೆಯ ಹೆಸರು | ಮನೆಗಳ ಸಂಖ್ಯೆ | ಯೋಜನೆಯ ಅಂದಾಜು ವೆಚ್ಚ | ನೆರವು | ಹಿಂದಿನ ವರ್ಷದ ಮಾರ್ಚ್ ಕೊನೆಯವರೆಗೆ ವಿತರಿಸಲಾದ ನೆರವು | ||
| ಸಾಲ | ಸಹಾಯಧನ | ಒಟ್ಟು | |||||
| ಸಿ. | (ರಾಜ್ಯ ಸರ್ಕಾರದ | ವಲಯದಲ್ಲಿ | ಮತ್ತು | ನಿಯೋಜಕರ | ವಲಯದಲ್ಲಿ) | ಹೊಸ | ಯೋಜನೆಗಳು, ಕಾಲಕ್ರಮದಲ್ಲಿ |
ವಿವರಗಳನ್ನು ನಿಗದಿಪಡಿಸಲಾಗುವುದು. ಏಕಗಂಟಿನ ಏರ್ಪಾಡು.
| ಅಗತ್ಯತೆಗಳ ಘೋಷ್ವಾರೆ | ಹಣಕಾಸು ಸ್ಥಿತಿ | |
| ರೂಪಾಯಿ ಲಕ್ಷಗಳಲ್ಲಿ | ||
| ಒಟ್ಟು ಎ | ಪ್ರಾರಂಭದ ಶಿಲ್ಕು | |
| ಒಟ್ಟು ಬಿ | ಬಜೆಟ್ ಹಂಚಿಕೆ | |
| ಒಟ್ಟು ಸಿ | ಅವಧಿಯಲ್ಲಿ ವೆಚ್ಚಕ್ಕೆ ಲಭ್ಯವಿರುವ ಒಟ್ಟು ನಿಧಿಗಳು | |
II. ಅಲ್ಪ ವರಮಾನ ಸಮೂಹದ ಗೃಹನಿರ್ಮಾಣ ಯೋಜನೆ
( _ವರ್ಷಕ್ಕೆ ರಾಜ್ಯ ಬಜೆಟ್ನಲ್ಲಿ ಏರ್ಪಾಡು)
ಮಂಡಲಿಯ ಪೂರ್ಣಗೊಳ್ಳದ ಕಾಮಗಾರಿಗಳಿಗಾಗಿ ಅಗತ್ಯವಿರುವ ಮೊಬಲಗು
| ಕಾಮಗಾರಿಯ ಹೆಸರು | ಅಂದಾಜು ವೆಚ್ಚ | ಹಿಂದಿನ ವರ್ಷದ ಮಾರ್ಚ್ ಕೊನೆಯವರೆಗೆ ಆದ ವೆಚ್ಚ |
ಪೂರ್ಣಗೊಳ್ಳದ ಕಾಮಗಾರಿಗಳಿಗಾಗಿ ಅಗತ್ಯವಿರುವ ಒಟ್ಟು ಮೊಬಲಗು.
ಪ್ರಸ್ತಾವಿಸಲಾದ ಹೊಸ ಕಾಮಗಾರಿಗಳು
| ಕಾಮಗಾರಿಯ ಹೆಸರು | ಮನೆಗಳ ಸಂಖ್ಯೆ | ಸಂಭವನೀಯ ಖರ್ಚು |
ಮುಂದುವರೆದದ್ದು
ಅಪೂರ್ಣ ಕಾಮಗಾರಿಗಳನ್ನು ಪೂರ್ಣ
ಗೊಳಿಸಲು ಅಗತ್ಯವಾದ ಮೊಬಲಗು.
ಗೊಳಿಸಲು ಅಗತ್ಯವಾದ ಮೊಬಲಗು. ---------------
ವ್ಯಕ್ತಿಗಳಿಗೆ ಮಂಡಲಿಯು ನೀಡಿದ ನಗದು ಸಾಲಗಳು. --------------- ಹಿಂದಿನ ವರ್ಷದ ಮಾರ್ಚ್ ಕೊನೆಯವರೆಗಿನ ಒಟ್ಟು ಮಂಜೂರಾತಿಗಳು. --------------- ಹಿಂದಿನ ವರ್ಷದ ಮಾರ್ಚ್ ಕೊನೆಯವರೆಗಿನ ಒಟ್ಟು ಸಂದಾಯಗಳು. ---------------
ಸ್ಥಳೀಯ ಮಂಡಲಿಗಳಿಗೆ ಸಾಲಗಳು ಹಿಂದಿನ ವರ್ಷದ ಮಾರ್ಚ್ ಕೊನೆಯವರೆಗಿನ ಒಟ್ಟು ಮಂಜೂರಾತಿ. --------------- ಹಿಂದಿನ ವರ್ಷದ ಮಾರ್ಚ್ ಕೊನೆಯವರೆಗಿನ ಒಟ್ಟು ಸಂದಾಯಗಳು ---------------
ಹೊಸ ಪ್ರಕರಣಗಳು
ಹೊಸ ಕಾಮಗಾರಿಗಳು
ವರ್ಷದ ಅವಧಿಯಲ್ಲಿ
ಮಂಜೂರು ಮಾಡಬೇಕಾದ ನಗದು ಸಾಲಗಳು
ಒಟ್ಟು ಜುಮ್ಲಾ
ಪ್ರಾರಂಭದ ಶಿಲ್ಕು : ...............ವರ್ಷಕ್ಕೆ ಹಂಚಿಕೆ : ವರ್ಷದ ಅವಧಿಯಲ್ಲಿ ವೆಚ್ಚಕ್ಕೆ ಲಭ್ಯವಿರುವ ಒಟ್ಟು ನಿಧಿಗಳು :
III ಧನ ಸಹಾಯ ಘೋಷಿತ ಬಾಡಿಗೆ ಗೃಹನಿರ್ಮಾಣ ಯೋಜನೆ
(ಯೋಜನೆಯಿಂದ........................ಲಕ್ಷ ರೂ. ಗಳ ಹಂಚಿಕೆ. ಅಲ್ಪ ವರಮಾನ ಸಮೂಹದ ಗೃಹ ನಿರ್ಮಾಣ ಯೋಜನೆಯ ಮೇರೆಗೆ..........ಲಕ್ಷ ರೂ. ಏರ್ಪಾಡು).
| ಮನೆಗಳ ಸಂಖ್ಯೆ | ಅಂದಾಜು ವೆಚ್ಚ | ವೆಚ್ಚ | |
| (ಎ) ಅಪೂರ್ಣ ಕಾಮಗಾರಿ | |||
| (ಬಿ) ಪ್ರಸ್ತಾವಿತ ಕಾಮಗಾರಿ | |||
| ಅಪೂರ್ಣ ಕಾಮಗಾರಿಗಳಿಗೆ ಅವಶ್ಯ ವಿರುವ ಮೊಬಲಗು ಪ್ರಸ್ತಾವಿತ ಕಾಮಗಾರಿಗಳಿಗೆ ಅವಶ್ಯ ವಿರುವ ಮೊಬಲಗು ಆರ್ಥಿಕ ಸ್ಥಿತಿ,- | |||
| ಇದ್ದಂತೆ ಪ್ರಾರಂಭದ ಶಿಲ್ಕು ಸ್ಥಿತಿ. .......................ವರ್ಷಕ್ಕೆ ಹಂಚಿಕೆ | |||
| ವರ್ಷದ ಅವಧಿಯಲ್ಲಿ ವೆಚ್ಚಕ್ಕೆ ಲಭ್ಯವಿರುವ ಒಟ್ಟು ನಿಧಿಗಳು |
IV. ಮಧ್ಯಮ ವರಮಾನ ಸಮೂಹದ ಗೃಹ ನಿರ್ಮಾಣ ಯೋಜನೆ
(ರಾಜ್ಯ ಬಜೆಟ್ ಏರ್ಪಾಡು.......ಲಕ್ಷ ರೂಪಾಯಿಗಳು)
ಒಪ್ಪಿಕೊಂಡಿರುವುವುಗಳ ಮುಂದುವರಿಕೆ:
() ವ್ಯಕ್ತಿಗಳಿಗೆ ನಗದು ಸಾಲಗಳು
(1) ವ್ಯಕ್ತಿಗಳಿಗೆ ನಗದು ಸಾಲಗಳು - -
ಮಂಜೂರಾತಿ
ಸಂದಾಯ
(2) ಸ್ಥಳೀಯ ಸಂಸ್ಥೆಗಳಿಗೆ ಥಿ ಥಿ
(2) ಸ್ಥಳೀಯ ಸಂಸ್ಥೆಗಳಿಗೆ - -
ಸಾಲಗಳು
(3) ಅಪೂರ್ಣ ಕಾಮಗಾರಿಗಳು:
(3) ಅಪೂರ್ಣ ಕಾಮಗಾರಿಗಳು: - -
| ಕ್ರಮ ಸಂಖ್ಯೆ | ಸ್ಥಳದ ಹೆಸರು | ಮನೆಗಳ ಸಂಖ್ಯೆ | ಅಂದಾಜು ವೆಚ್ಚ | ಹಿಂದಿನ ವರ್ಷದ ಮಾರ್ಚ್ ಕೊನೆಯವರೆಗೆ ವೆಚ್ಚ |
| ಪ್ರಸ್ತಾವಿತ ಹೊಸ ಮಂಜೂರಾತಿಗಳು: | ||||
| (1) | ವ್ಯಕ್ತಿಗಳಿಗೆ ನಗದು ಸಾಲಗಳು (ವಿಲೆಯಾಗಬೇಕಾದ ಅರ್ಜಿಗಳು) |
| (2) | ಸ್ಥಳೀಯ ಸಂಸ್ಥೆಗಳಿಗೆ ನಗದು ಸಾಲ (ವಿಲೆಯಾಗಬೇಕಾದ ಅರ್ಜಿಗಳು) | ||||
| ಗ ಗ್ರ ಜ್ | ಕೈಕೊಳ್ಳಬೇಕಾದ ಹೊಸಕಾಮಗಾರಿಗಳು (ವಿವರಗಳನ್ನು ಕಾಲಕ್ರಮದಲ್ಲಿ ಅಂತಿಮಗೊಳಿಸಲಾಗುವುದು) | ||||
| ಹಣಕಾಸಿನ ಏರ್ಪಾಡು | |||||
| ಪ್ರಾರಂಭದ ಶಿಲ್ಕು ............... ವರ್ಷಕ್ಕೆ ಹಂಚಿಕೆ | |||||
| ಬಜೆಟ್ ಏರ್ಪಾಡು | |||||
| ವರ್ಷದ ಅವಧಿಯಲ್ಲಿ ವೆಚ್ಚಕ್ಕೆ ಲಭ್ಯವಿರುವ ಒಟ್ಟು ನಿಧಿಗಳು | |||||
V. ಪ್ಲಾಂಟೇಷನ್ ಕಾರ್ಮಿಕರ ಗೃಹನಿರ್ಮಾಣ ಯೋಜನೆ
| ಹಂಚಿಕೆ | ರೂ.ಗಳು | ಲಕ್ಷಗಳು |
| ವಾಸ್ತವಿಕ ಗುರಿ | ಮನೆಗಳು |