ಅನುಸೂಚಿ
ಸಕ್ಷಮ ಪ್ರಾಧಿಕಾರಿಯ ಸಹಿ ಮತ್ತು
ದಿನಾಂಕ: ಸಕ್ಷಮ ಪ್ರಾಧಿಕಾರಿಯ ಸಹಿ ಮತ್ತು
ಮೊಹರು.
- ಇವುಗಳ ಪೈಕಿ ಯಾವುದು ಅನ್ವಯವಾಗುತ್ತದೆಯೋ ಅದನ್ನು ನಿರ್ದಿಷ್ಟಪಡಿಸಬೇಕು.
ಯಾವುದು ಅನ್ವಯಿಸುವುದಿಲ್ಲಮೋ ಅದನ್ನು ಹೊಡೆದುಹಾಕಿ.
1 [ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1971
- ಕರ್ನಾಟಕ ರಾಜ್ಯಪತ್ರ, ದಿನಾಂಕ: 27.2.1971 ರ ವಿಶೇಷ ಸಂಚಿಕೆಯಲ್ಲಿ ಅಧಿಸೂಚನೆ ಸಂ. ಡಿಪಿಸಿ 29 ಡಿಎಚ್ಬಿ 71, ದಿನಾಂಕ: 27.2.1971ನ್ನು ಪ್ರಕಟಿಸಲಾಗಿದೆ. ಜಿಎಸ್ಆರ್ 61.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ನ್ನು ಮತ್ತಷ್ಟು ತಿದ್ದುಪಡಿ ಮಾಡುವ ನಿಯಮಗಳ ಒಂದು ಕರಡನ್ನು, ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ (1963ರ ಕರ್ನಾಟಕ ಅಧಿನಿಯಮ 10) 74ನೇ ಪ್ರಕರಣದ (1)ನೇ ಉಪಪ್ರಕರಣದ ಮೂಲಕ ಅಗತ್ಯಪಡಿಸಿದಂತೆ 24ನೇ ಫೆಬ್ರವರಿ 1971 ರಂದು ಅಥವಾ ಅದಕ್ಕೆ ಮೊದಲು, ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಆಹ್ವಾನಿಸಿ, 1971ರ ಫೆಬ್ರವರಿ 17ನೇ ದಿನಾಂಕದ ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ, ಅಧಿಸೂಚನೆ ಸಂಖ್ಯೆ ಜಿಎಸ್ಆರ್ 50, ದಿನಾಂಕ 17ನೇ ಫೆಬ್ರವರಿ 1971ರಲ್ಲಿ ಪ್ರಕಟಿಸಿರುವುದರಿಂದ;
ಮತ್ತು, ಸದರಿ ರಾಜ್ಯಪತ್ರವನ್ನು 17ನೇ ಫೆಬ್ರವರಿ 1971 ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಿರುವುದರಿಂದ;
ಅಲ್ಲದೆ, ರಾಜ್ಯ ಸರ್ಕಾರವು ಸದರಿ ಕರಡಿಗೆ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಸ್ವೀಕರಿಸದಿರುವುದರಿಂದ;
ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ (1963ರ ಕರ್ನಾಟಕ ಅಧಿನಿಯಮ 10) ಪ್ರಕರಣ 74ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈಗ ಈ ಮೂಲಕ ಈ ಮುಂದಿನ ನಿಯಮಗಳನ್ನು ರಚಿಸಿದೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಗೃಹನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1971 ಎಂದು ಕರೆಯತಕ್ಕದ್ದು.
(2) ಇವು ಈ ಕೂಡಲೇ ಜಾರಿಗೆ ಬರತಕ್ಕದ್ದು.
- 3ನೇ ನಿಯಮದ ತಿದ್ದುಪಡಿ.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ರ (ಇಲ್ಲಿ ಇನ್ನುಮುಂದೆ ಸದರಿ ನಿಯಮಗಳು ಎಂದು ಉಲ್ಲೇಖಿಸಲಾಗಿದೆ) 3ನೇ ನಿಯಮದಲ್ಲಿ, (ಬಿ) ಖಂಡಕ್ಕೆ ಈ ಮುಂದಿನ ಖಂಡವನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
‘‘(ಬಿ) ಅವರು ಸರ್ಕಾರಿ ಅಧಿಕಾರಿಯಾಗಿದ್ದರೆ, ಸಂದರ್ಭಾನುಸಾರ, ರಾಜ್ಯ ಸಿವಿಲ್ ಸೇವೆಯ ಅಥವಾ ಅಖಿಲ ಭಾರತ ಸೇವೆಯ ಸದಸ್ಯನಾಗಿ ಕಾಲಕಾಲಕ್ಕೆ ಗ್ರಾಹ್ಯವಾಗುವಂಥ ಸಂಬಳ ಮತ್ತು ಭತ್ಯೆಗಳನ್ನು ಪಡೆಯಲು ಅರ್ಹನಾಗತಕ್ಕದ್ದು.''
- 4ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 4ನೇ ನಿಯಮಕ್ಕೆ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
‘‘ಪರಂತು, ಅಧ್ಯಕ್ಷರು ಸರ್ಕಾರಿ ಅಧಿಕಾರಿಯಾಗಿದ್ದರೆ, ಸಂದರ್ಭಾನುಸಾರ, ರಾಜ್ಯ ಸಿವಿಲ್ ಸೇವೆಯ ಅಥವಾ ಅಖಿಲ ಭಾರತ ಸೇವೆಯ ಅಧಿಕಾರಿಯಾಗಿ ಅವರಿಗೆ ಕಾಲಕಾಲಕ್ಕೆ ಅನ್ವಯವಾಗುವಂಥ ರೀತಿಯಲ್ಲಿ ಮತ್ತು ಅದೇ ರೀತಿಯ ನಿಬಂಧನೆಗಳಿಗೆ ಮತ್ತು ಷರತ್ತುಗಳಿಗೊಳಪಟ್ಟು ರಜೆಗೆ ಹಕ್ಕುಳ್ಳವರಾಗಿರತಕ್ಕದ್ದು.''
1 [ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1972
-
ಕರ್ನಾಟಕ ರಾಜ್ಯಪತ್ರ, ದಿನಾಂಕ 01.03.1973 ರಲ್ಲಿ ಅಧಿಸೂಚನೆ ಸಂಖ್ಯೆ. ಡಿಪಿಸಿ 24 ಡಿಎಚ್ಬಿ 72, ದಿನಾಂಕ 17.02.1973 ನ್ನು ಪ್ರಕಟಿಸಲಾಗಿದೆ. ಜಿಎಸ್ಆರ್ 44.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ (1963ರ ಕರ್ನಾಟಕ ಅಧಿನಿಯಮ 10) 74ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ಕ್ಕೆ ತಿದ್ದುಪಡಿ ಮಾಡಲು ಈ ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದೆ. ಸದರಿ ಪ್ರಕರಣದ (1)ನೇ ಉಪಪ್ರಕರಣದಲ್ಲಿ ಅಗತ್ಯಪಡಿಸಿದಂತೆ ಅದರ ಕರಡನ್ನು ಕರ್ನಾಟಕ ರಾಜ್ಯಪತ್ರ, ದಿನಾಂಕ 10ನೇ ಆಗಸ್ಟ್ 1972ರ ಭಾಗ IV, ವಿಭಾಗ 2ಸಿ(i) ರಲ್ಲಿ ಅಧಿಸೂಚನೆ ಸಂಖ್ಯೆ ಜಿಎಸ್ಆರ್ 279, ದಿನಾಂಕ 17ನೇ ಆಗಸ್ಟ್ 1972ರಲ್ಲಿ ಪ್ರಕಟಿಸಲಾಗಿತ್ತು, ಎಂದರೆ:-
-
ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1972 ಎಂದು ಕರೆಯತಕ್ಕದ್ದು.
(2) ಇವು ಈ ಕೂಡಲೇ ಜಾರಿಗೆ ಬರತಕ್ಕದ್ದು.
- 3ನೇ ನಿಯಮದ ತಿದ್ದುಪಡಿ.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ರ 2ನೇ ನಿಯಮದಲ್ಲಿ,-
(i) ‘‘ರೂಪಾಯಿ ಇಪ್ಪತ್ತು'' ಎಂಬ ಪದಗಳಿಗೆ ಬದಲಾಗಿ ‘‘ರೂಪಾಯಿ ನಲವತ್ತು'' ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು, ಮತ್ತು
(ii) ಎರಡನೇ ಪರಂತುಕದ ತರುವಾಯ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
‘‘ಮತ್ತೂ ಪರಂತು, ಸದಸ್ಯನು ರೈಲು ಸಂಪರ್ಕ ಹೊಂದಿರುವ ಸ್ಥಳಗಳ ನಡುವೆ ತನ್ನ ಸ್ವಂತ ಕಾರಿನಲ್ಲಿ ರಸ್ತೆ ಪ್ರಯಾಣವನ್ನು ಕೈಗೊಳ್ಳಬಹುದು ಮತ್ತು ಎರಡೂ ಕಡೆಯ ಮಾರ್ಗಕ್ಕೆ ರಸ್ತೆ ಮೈಲೇಜನ್ನು ಕ್ಲೇಮು ಮಾಡಬಹುದು. ಅಂಥ ಪ್ರಯಾಣದ ಸಂಬಂಧದಲ್ಲಿ ಸದಸ್ಯನು, ತಾನು ತನ್ನ ಸ್ವಂತ ಕಾರಿನಲ್ಲಿ ಪ್ರಯಾಣ ಮಾಡಿದ್ದೇನೆಂದು ಪ್ರಮಾಣೀಕರಿಸತಕ್ಕದ್ದು.''
1 [ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1974
- ಕರ್ನಾಟಕ ರಾಜ್ಯಪತ್ರ ವಿಶೇಷ ಸಂಚಿಕೆ, ದಿನಾಂಕ 15.05.1974 ರಲ್ಲಿ ಅಧಿಸೂಚನೆ ಸಂಖ್ಯೆ ಡಿಪಿಸಿ 140 ಡಿಎಚ್ಬಿ 74 ದಿನಾಂಕ 14.05.1974ನ್ನು ಪ್ರಕಟಿಸಲಾಗಿದೆ. ಜಿಎಸ್ಆರ್ 150.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವ ಕರಡನ್ನು, ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ (1963ರ ಕರ್ನಾಟಕ ಅಧಿನಿಯಮ 10) 74ನೇ ಪ್ರಕರಣದ (1)ನೇ ಉಪಪ್ರಕರಣದ ಮೂಲಕ ಅಗತ್ಯಪಡಿಸಿದಂತೆ, ಅದರಿಂದ ಬಾಧಿತರಾಗುವ ಎಲ್ಲಾ ವ್ಯಕ್ತಿಗಳಿಂದ 13ನೇ ಮೇ 1974 ರಂದು ಅಥವಾ ಅದಕ್ಕೂ ಮುಂಚೆ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಆಹ್ವಾನಿಸಿ, ಕರ್ನಾಟಕ ರಾಜ್ಯಪತ್ರ, ವಿಶೇಷ ಸಂಚಿಕೆ ಭಾಗ IV, ವಿಭಾಗ 2ಸಿ(i), ದಿನಾಂಕ 8ನೇ ಮೇ, 1974 ರಲ್ಲಿನ ಅಧಿಸೂಚನೆ ಸಂಖ್ಯೆ ಡಿಪಿಸಿ 140 ಡಿಎಚ್ಬಿ 74, ದಿನಾಂಕ 8ನೇ ಮೇ 1974ರಲ್ಲಿ ಪ್ರಕಟಿಸಿರುವುದರಿಂದ;
ಮತ್ತು, ಸದರಿ ರಾಜ್ಯಪತ್ರವನ್ನು 8ನೇ ಮೇ 1974 ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಿರುವುದರಿಂದ;
ಅಲ್ಲದೆ, ರಾಜ್ಯ ಸರ್ಕಾರವು ಸದರಿ ಕರಡಿಗೆ ಮೇಲೆ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಸ್ವೀಕರಿಸದಿರುವುದರಿಂದ;
ಕರ್ನಾಟಕ ಗೃಹ ನಿರ್ಮಾಣ ಮಂಡಲಿ, 1962ರ (1963ರ ಕರ್ನಾಟಕ ಅಧಿನಿಯಮ 10) 74ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈಗ ಈ ಮೂಲಕ ಈ ಮುಂದಿನ ನಿಯಮಗಳನ್ನು ರಚಿಸಿದೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1974 ಎಂದು ಕರೆಯತಕ್ಕದ್ದು
(2) ಇವು ಈ ಕೂಡಲೇ ಜಾರಿಗೆ ಬರತಕ್ಕದ್ದು.
-
3ನೇ ನಿಯಮದ ತಿದ್ದುಪಡಿ.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ರ (ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳು ಎಂದು ಉಲ್ಲೇಖಿಸಲಾಗಿದೆ) 3ನೇ ನಿಯಮದ (1)ನೇ ಉಪನಿಯಮದ (ಎ) ಖಂಡದ (i)ನೇ ಬಾಬನ್ನು ಬಿಟ್ಟುಬಿಡತಕ್ಕದ್ದು.
-
4ನೇ ನಿಯಮವನ್ನು ಬಿಟ್ಟುಬಿಡುವುದು.- ಸದರಿ ನಿಯಮದ 4ನೇ ನಿಯಮವನ್ನು ಬಿಟ್ಟುಬಿಡತಕ್ಕದ್ದು.
1 [ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1976
- ಕರ್ನಾಟಕ ರಾಜ್ಯಪತ್ರ, ದಿನಾಂಕ 08.07.1976 ರಲ್ಲಿ ಅಧಿಸೂಚನೆ ಸಂಖ್ಯೆ ಎಫ್ಡಿ 133 ಕೆಎಚ್ಬಿ 75, ದಿನಾಂಕ 26.06.1976ನ್ನು ಪ್ರಕಟಿಸಲಾಗಿದೆ. ಜಿಎಸ್ಆರ್ 180.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವ ಒಂದು ಕರಡನ್ನು, ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ (1963ರ ಕರ್ನಾಟಕ ಅಧಿನಿಯಮ 10) 74ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಅಗತ್ಯಪಡಿಸಿದಂತೆ, ಅದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ, 1976ರ ಏಪ್ರಿಲ್ 19 ರಂದು ಅಥವಾ ಅದಕ್ಕೂ ಮೊದಲು ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಕೋರಿ ಕರ್ನಾಟಕ ರಾಜ್ಯಪತ್ರ, ಭಾಗ IV, ವಿಭಾಗ 2ಸಿ(i), ದಿನಾಂಕ 25ನೇ ಮಾರ್ಚ್ 1976 ರಲ್ಲಿನ ಅಧಿಸೂಚನೆ ಸಂಖ್ಯೆ ಜಿಎಎಸ್ಆರ್ 96, ಎಫ್ಡಿ 133 ಕೆಎಚ್ಬಿ 75, ದಿನಾಂಕ 16ನೇ ಮಾರ್ಚ್ 1976ರಲ್ಲಿ ಪ್ರಕಟಿಸಿರುವುದರಿಂದ.
ಮತ್ತು, ಸದರಿ ರಾಜ್ಯಪತ್ರವನ್ನು 25ನೇ ಮಾರ್ಚ್, 1976 ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಿರುವುದರಿಂದ;
ಮತ್ತೂ ಅಲ್ಲದೆ, ಸದರಿ ಕರಡಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಸ್ವೀಕರಿಸದಿರುವುದರಿಂದ;
ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿನಿಯಮ, 1962ರ (1963ರ ಕರ್ನಾಟಕ ಅಧಿನಿಯಮ 10) 74ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮುಂದಿನ ನಿಯಮಗಳನ್ನು ಈಗ ಈ ಮೂಲಕ ರಚಿಸಿದೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ತಿದ್ದುಪಡಿ) ನಿಯಮಗಳು, 1976 ಎಂದು ಕರೆಯತಕ್ಕದ್ದು.
(2) ಇವು ಈ ಕೂಡಲೇ ಜಾರಿಗೆ ಬರತಕ್ಕದ್ದು.
- 3ನೇ ನಿಯಮದ ತಿದ್ದುಪಡಿ.- ಕರ್ನಾಟಕ ಗೃಹ ನಿರ್ಮಾಣ ಮಂಡಲಿ ನಿಯಮಗಳು, 1964ರ 3ನೇ ನಿಯಮದ (2)ನೇ ಉಪನಿಯಮದಲ್ಲಿ ‘‘ರೂಪಾಯಿ ನಲವತ್ತು'' ಎಂಬ ಪದಗಳಿಗೆ ಬದಲಾಗಿ ‘‘ರೂಪಾಯಿ ಎಪ್ಪತ್ತೈದು'' ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.