ಈ .ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ‘‘ಅಧಿನಿಯಮ'' ಎಂದರೆ ಕರ್ನಾಟಕ ಗಿರವಿದಾರರ ಅಧಿನಿಯಮ, 1961;
(ಬಿ) ‘‘ನಮೂನೆ'' ಎಂದರೆ ಈ ನಿಯಮಗಳಿಗೆ ಜೋಡಿಸಲಾದ ನಮೂನೆ;
(ಸಿ) ‘‘ಲೈಸೆನ್ಸ್ ಕೊಡುವ ಪ್ರಾಧಿಕಾರಿ'' ಎಂದರೆ ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961 ಇದರ ಮೇರೆಗೆ ನೇಮಕಗೊಂಡ ಲೇವಾದೇವಿದಾರರ ರಿಜಿಸ್ಟ್ರಾರ್;
(ಡಿ) ‘‘ಪ್ರಕರಣ'' ಎಂದರೆ ಈ ಅಧಿನಿಯಮದ ಪ್ರಕರಣ.
1 [2ಎ. ಗೊತ್ತುಪಡಿಸಿದ ಪ್ರಾಧಿಕಾರಿ,- ಲೇವಾದೇವಿದಾರರ ರಿಜಿಸ್ಟ್ರಾರ್ ಜನರಲ್ನು 4ಬಿ ಪ್ರಕರಣದ ಉದ್ದೇಶಕ್ಕಾಗಿ ಗೊತ್ತುಪಡಿಸಿದ ಪ್ರಾಧಿಕಾರಿಯಾಗಿರತಕ್ಕುದ್ದು.1 ] 1. ಜಿಎಸ್ಅರ್ 223 ಅಧಿಸೂಚನೆ ಸಂಖ್ಯೆ ಸಿಎಮ್ಡಬ್ಲ್ಯೂ 2 ಸಿಎಮ್ಎಲ್ 85, ದಿನಾಂಕ: 12/13-9-1985ರ ಮೂಲಕ 17-9- 1985ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.