(1)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಿದ ಎಲ್ಲಾ ದಾಖಲೆಗಳು ಅಥವಾ ಪುಸ್ತಕ, ಲೆಕ್ಕಪತ್ರಗಳು ಮತ್ತು ದಸ್ತಾವೇಜುಗಳಲ್ಲಿ ಮಾಡಿದ ನಮೂದುಗಳು ಒಂದು ವರ್ಷದ ತರುವಾಯದ ಪುನರವಲೋಕನಕ್ಕೆ ಒಳಪಟ್ಟು, ಈ ಕೆಳಗಿನ ಕೋಷ್ಟಕದ (2)ನೇ ಅಂಕಣದಲ್ಲಿ ನಮೂದಿಸಲಾದ ಪ್ರದೇಶದೊಳಗೆ ಇಂಗ್ಲೀಷಿನಲ್ಲಿಯೇ ಆಗಲಿ ಅಥವಾ ಹಿಂದಿಯಲ್ಲಿಯೇ ಆಗಲಿ ಅಥವಾ ಅದರ (3) ನೇ ಅಂಕಣದಲ್ಲಿನ ಸಂವಾದಿ ನಮೂದಿನಲ್ಲಿ ತಿಳಿಸಿರುವ ಭಾಷೆಯಲ್ಲಿ ಅಥವಾ ಭಾಷೆಗಳಲ್ಲಿ ಇರತಕ್ಕುದು.
| ಕೋಷ್ಟಕ | ||
| ಕ್ರಮ ಸಂಖ್ಯೆ ಪ್ರದೇಶ | ಭಾಷೆ ಅಥವಾ ಭಾಷೆಗಳು | |
| 1 2 | 3 | |
| 1. ಬೆಂಗಳೂರು ನಗರ. | ಕನ್ನಡ. | |
| 2. ಬೆಂಗಳೂರು, ಮಂಡ್ಯ, ಮೈಸೂರು. | ||
| 3. ಹಾಸನ, ಕೊಡಗು, ದಕ್ಷಿಣ ಕನ್ನಡ. | ||
| 4. ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು. | ||
| 5. ಚಿತ್ರದುರ್ಗ, ಧಾರವಾಡ. | ||
| 6. ಬಿಜಾಪುರ. | ||
| 7. ಕೋಲಾರ. | ||
| 8. ಬಳ್ಳಾರಿ. | ||
| 9. ಕಾರವಾರ ಮತ್ತು ಬೆಳಗಾವಿ. | ||
| 10. ರಾಯಚೂರು, ಗುಲ್ಬರ್ಗಾ ಮತ್ತು ಬೀದರ್. |