(1) ಲೈಸೆನ್ಸನ್ನು ಮಂಜೂರು ಮಾಡಲು ಅಥವಾ ನವೀಕರಿಸಲು ನಿರಾಕರಿಸುವ ಲೈಸೆನ್ಸು ಕೊಡುವ ಪ್ರಾಧಿಕಾರಿಯ ಆದೇಶದ ವಿರುದ್ಧ ಅಪೀಲನ್ನು, ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961ರ ಮೇರೆಗೆ ಹಾಗೆಂದು ನೇಮಕಗೊಂಡ ಲೇವಾದೇವಿದಾರರ ರಿಜಿಸ್ಟ್ರಾರ್ ಜನರಲ್ನಿಗೆ ಸಲ್ಲಿಸತಕ್ಕುದು ಮತ್ತು ಅದನ್ನು, ನಿರಾಕರಣೆಯ ಆದೇಶವನ್ನು ಅರ್ಜಿದಾರನಿಗೆ ತಿಳಿಸಿದಂಥ ದಿನಾಂಕದಿಂದ 30 ದಿವಸಗಳ ಅವಧಿಯೊಳಗೆ ದಾಖಲು ಮಾಡತಕ್ಕುದು.
(2) ಪ್ರಾಧಿಕಾರಿಯು, ಸಂದರ್ಭಾನುಸಾರ ಅಪೀಲುದಾರನಿಗೆ ಅಥವಾ ಅವನ ನ್ಯಾಯವಾದಿಗೆ ಅಹವಾಲನ್ನು ಹೇಳಿಕೊಳ್ಳಲು ಯುಕ್ತ ಅವಕಾಶವನ್ನು ಕೊಟ್ಟ ತರುವಾಯ ಅಪೀಲನ್ನು ತೀರ್ಮಾನಿಸತಕ್ಕುದು.