9ನೇ ಪ್ರಕರಣದ (1)ನೇ ಉಪಪ್ರಕರಣದ (ಎ) ಖಂಡದ ಪರಂತುಕದಲ್ಲಿ ಉಲ್ಲೇಖಿಸಿದ ಸಾರ್ವಜನಿಕ ನೋಟೀಸು ಈ ಕೆಳಕಂಡ ವಿವರಗಳನ್ನು ಒಳಗೊಂಡಿರತಕ್ಕುದು, ಎಂದರೆ:-
(ಎ) ಸಂಬಂಧಪಟ್ಟ ಗಿರವಿದಾರನ ಹೆಸರು, ವ್ಯವಹಾರದ ಸ್ಥಳ ಮತ್ತು ಲೈಸೆನ್ಸಿನ ಸಂಖ್ಯೆ;
(ಬಿ) ವಸ್ತುವಿನ ಪೂರ್ಣ ಮತ್ತು ವಿವರವಾದ ವಿವರಣೆ (ಆಭರಣಗಳ ಸಂದರ್ಭದಲ್ಲಿ ತೂಕವನ್ನು ನಮೂದಿಸಬೇಕು);
(ಸಿ) ಗಿರವಿ ಇಟ್ಟವನ ಹೆಸರು ಮತ್ತು ವಿಳಾಸ; ಮತ್ತು
(ಡಿ) ಅರ್ಜಿದಾರನು, ಅವನ ಕ್ಲೇಮನ್ನು ಯಾವ ಆಧಾರದ ಮೇಲೆ ಮಾಡುವನೋ ಆ ಆಧಾರ ಎಂದರೆ, ಒತ್ತೆಯ ಒಡೆಯ ಆದರೆ, ಗಿರವಿ ಚೀಟಿಯನ್ನು ಹೊಂದಿಲ್ಲದ ಅಥವಾ ಗಿರವಿ ಚೀಟಿಯನ್ನು ಹೊಂದಲು ಹಕ್ಕುಳ್ಳವನಾಗಿರುವನೆಂದು ಕ್ಲೇಮು ಮಾಡುವ ಆದರೆ, ಅದು ಕಳೆದುಹೋಗಿದೆ, ಕೈಮರೆತು ಹೋಗಿದೆ, ಹಾಳಾಗಿದೆ, ಕಳುವಾಗಿದೆ ಅಥವಾ ಅವನಿಂದ ಮೋಸದಿಂದ ಪಡೆದುಕೊಳ್ಳಲಾಗಿದೆ ಎಂದು ಆಪಾದಿಸುವ ವ್ಯಕ್ತಿ.
(2) (1)ನೇ ಉಪನಿಯಮದ ಮೇರೆಗಿನ ನೋಟೀಸನ್ನು ಗಿರವಿದಾರನು ಅವನ ವ್ಯವಹಾರವನ್ನು ನಡೆಸಿಕೊಂಡು ಹೋಗುತ್ತಿರುವಂಥ ಮತ್ತು ಲೈಸೆನ್ಸ್ ಕೊಡುವ ಪ್ರಾಧಿಕಾರಿಯು, ಅಥವಾ ಲೇವಾದೇವಿಗಾರರ ಮತ್ತು ಗಿರವಿದಾರರ ಇನ್ಸ್ಪೆಕ್ಟರ್ ಅನುಮೋದಿಸಿರುವಂಥ ಸ್ಥಳದಲ್ಲಿ ಪ್ರಸಾರದಲ್ಲಿರುವ ಸುದ್ದಿ ಪತ್ರಿಕೆಯಲ್ಲಿ ನಿರಂತರವಾಗಿ ಎರಡು ದಿನಗಳು, ಅರ್ಜಿಯನ್ನು ಸಲ್ಲಿಸುವ ಇಪ್ಪತ್ತೊಂದು ದಿವಸಗಳಿಗೆ ಮುಂಚೆ ಪ್ರಕಟಿಸತಕ್ಕುದು. 18. 9(1)(ಬಿ) ಪ್ರಕರಣದ (1)ನೇ ಪರಂತುಕದ ಉದ್ದೇಶಕ್ಕಾಗಿ ನಿಯಮಿಸಿದ ಪ್ರಾಧಿಕಾರಿ.- 9ನೇ ಪ್ರಕರಣದ (1)ನೇ ಉಪಪ್ರಕರಣದ (ಬಿ) ಖಂಡದ (1)ನೇ ಪರಂತುಕದ ಉದ್ದೇಶಗಳಿಗಾಗಿನ ಪ್ರಾಧಿಕಾರಿಯು, ಗಿರವಿದಾರನು ಅವನು ವ್ಯವಹಾರ ಸ್ಥಳವನ್ನು ಹೊಂದಿರುವ ತಾಲ್ಲೂಕಿನ ತಹಸಿಲ್ದಾರನು ಅಥವಾ ತಹಸೀಲ್ದಾರನ ಪ್ರಭಾರವನ್ನು ಸ್ವತಂತ್ರವಾಗಿ ಉಪತಹಸಿಲ್ದಾರನು ಧಾರಣ ಮಾಡಿರುವಲ್ಲಿ ಅಂಥ ಉಪತಹಸೀಲ್ದಾರನು ಆಗಿರತಕ್ಕುದು. (19) ಗಿರವಿದಾರನಿಗೆ ಘೋಷಣೆಯನ್ನು ಕೊಡಬೇಕಾದ ಅವಧಿ.- 9ನೇಪ್ರಕರಣದ (1)ನೇ ಉಪಪ್ರಕರಣದ ಖಂಡದ (ii) ನೇ ಪರಂತುಕದಲ್ಲಿ ಉಲ್ಲೇಖಿಸಿದಂಥ ಘೋಷಣೆಯನ್ನು ಗಿರವಿದಾರನಿಗೆ ವಾಪಸು ಮಾಡಬೇಕಾದ ಅವಧಿಯು, ಅರ್ಜಿದಾರನಿಗೆ ಘೋಷಣೆಯ ನಮೂನೆಯನ್ನು ವಾಪಸು ಮಾಡಬೇಕಾದ ಅವಧಿಯು, ಅರ್ಜಿದಾರನಿಗೆ ಘೋಷಣೆಯ ನಮೂನೆಯನ್ನು ಕೊಟ್ಟ ತರುವಾಯ ಹದಿನೈದು ದಿವಸಗಳಾಗಿರತಕ್ಕುದು.