ಸಂದರ್ಭಗಳ ಸಂಬಂಧದಲ್ಲಿ ಗಿರವಿದಾರನು ಗಿರವಿ ಇಟ್ಟವನಿಂದ ತಗಾದೆ ಮಾಡಬಹುದಾದ ಮತ್ತು ತೆಗೆದುಕೊಳ್ಳಬಹುದಾದಂಥ ಚಾರ್ಜುಗಳು, ಈ ಕೆಳಗೆ ಸೂಚಿಸಿರುವಂತೆ ಇರತಕ್ಕುದು, ಎಂದರೆ:-
(ಎ) 10ನೇ ಪ್ರಕರಣದ (1)ನೇ ಉಪಪ್ರಕರಣದ (ಬಿ) ಖಂಡದ (ii)ನೇ ಉಪಖಂಡದಲ್ಲಿ ಉಲ್ಲೇಖಿಸಿದ ಒತ್ತೆಗಳ ಮಾರಾಟ ಪುಸ್ತಕದಲ್ಲಿ ಮಾರಾಟದ ನಮೂದನ್ನು ಪರಿಶೀಲಿಸುವುದಕ್ಕಾಗಿ ಆರು ಪೈಸೆ.
(ಬಿ) 10ನೇ ಪ್ರಕರಣದ (1)ನೇ ಉಪಪ್ರಕರಣದ (ಡಿ) ಖಂಡದ ಮೇರೆಗೆ ಗಿರವಿದಾರನು ಒದಗಿಸಿದ ಲೆಕ್ಕಪತ್ರಗಳ ವಿವರಪತ್ರಕ್ಕಾಗಿ:-
ರೂ.ಪೈ.
1 ಸಾಲದ ಮೊಬಲಗು 50 ರೂ.ಗಳನ್ನು ಮೀರದಿದ್ದರೆ. 0-60 2 ಸಾಲದ ಮೊಬಲಗು 50 ರೂ.ಗಳನ್ನು ಮೀರಿದ್ದು ಆದರೆ 100 0-12 ರೂ.ಗಳಿಗಿಂತ ಕಡಿಮೆ ಇದ್ದರೆ. 3. ಸಾಲದ ಮೊಬಲಗು 100 ರೂ.ಗಳನ್ನು ಮೀರಿದ್ದು ಆದರೆ 300 0-19 ರೂ.ಗಳಿಗಿಂತ ಕಡಿಮೆ ಇದ್ದರೆ. 4. ಸಾಲದ ಮೊಬಲಗು 300 ರೂ.ಗಳನ್ನು ಮೀರಿದ್ದು ಆದರೆ 500 0-25 ರೂ.ಗಳಿಗಿಂತ ಕಡಿಮೆ ಇದ್ದರೆ. 5. -ಅದೇ--ಅದೇ- 500 ರೂ.ಗಳು 0-37 ಅದೇ--ಅದೇ-1,000ರೂ.ಗಳು. 6. -ಅದೇ--ಅದೇ-1,000 ರೂ.ಗಳು. 0-50 (2) ಪ್ರತಿಯೊಂದು ಸಾಲ ಮತ್ತು ಪ್ರತಿಯೊಂದು ಕೋರಿಕೆಯ ಸಂಬಂಧದಲ್ಲಿ ಪ್ರತ್ಯೇಕ ಫೀಜನ್ನು ವಿಧಿಸಬಹುದು. (3) (1)ನೇ ಉಪನಿಯಮದ ಮೇರೆಗೆ ವಿಧಿಸಿದ ಚಾರ್ಜುಗಳನ್ನು, ಸಾಲದಲ್ಲಿಯೇ ಅವುಗಳನ್ನು ಸೇರಿಸಲಾಗಿದ್ದರೆ ಹೇಗೋ ಹಾಗೆ ಗಿರವಿದಾರನು ವಸೂಲು ಮಾಡಬಹುದು. ಆದರೆ, ಅಂಥ ಚಾರ್ಜುಗಳ ಮೇಲೆ ಬಡ್ಡಿಯನ್ನು ವಿಧಿಸತಕ್ಕುದಲ್ಲ.
(4) ಒತ್ತೆಯನ್ನು ಬಹಿರಂಗ ಹರಾಜಿನಲ್ಲಿ ಮಾರಾಟದ ಮೂಲಕ ವಾಸ್ತವವಾಗಿ ವಿಲೆ ಮಾಡುವುದಕ್ಕೆ ಮುಂಚೆ ಗಿರವಿ ಇಟ್ಟವನು ಒತ್ತೆಯನ್ನು ಬಿಡಿಸಿಕೊಂಡಲ್ಲಿ, ಗಿರವಿದಾರನು ಅವನಿಂದ ಆ ಒತ್ತೆಯನ್ನು ಹರಾಜಿಗೆ ತರುವಲ್ಲಿ ಅವನು ವಹಿಸಿದ ವೆಚ್ಚಗಳು ಯಾವುದಾದರೂ ಇದ್ದರೆ, ಅವುಗಳನ್ನು ತಗಾದೆ ಮಾಡಬಹುದು ಮತ್ತು ತೆಗೆದುಕೊಳ್ಳಬಹುದು.