(1) ಸಾಲಕ್ಕಾಗಿ ಗಿರವಿಗೆ ಸರಕುಗಳನ್ನು ಮತ್ತು ಚರಸ್ವತ್ತುಗಳನ್ನು ತೆಗೆದುಕೊಳ್ಳುವ ವ್ಯವಹಾರವನ್ನು ನಡೆಸಲು ಇಚ್ಚಿಸುವ ವ್ಯಕ್ತಿಯು, ಗಿರವಿದಾರರ ಲೈಸೆನ್ಸಿಗಾಗಿ, ಅವನು ವ್ಯವಹಾರವನ್ನು ನಡೆಸುವಂಥ ಪ್ರದೇಶಕ್ಕಾಗಿನ ಲೈಸೆನ್ಸು ಕೊಡುವ ಪ್ರಾಧಿಕಾರಿಗೆ ಅವರ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸತಕ್ಕುದು, ಅರ್ಜಿಯನ್ನು ಲೇವಾದೇವಿದಾರರ ಅಧಿನಿಯಮ, 1961ರ ಮೇರೆಗೆ ಹಾಗೆಂದು ನೇಮಕಗೊಂಡ ಲೇವಾದೇವಿದಾರರ ಸಹಾಯಕ ರಿಜಿಸ್ಟ್ರಾರ್ನ ಕಛೇರಿಯಲ್ಲಿ, ಕಛೇರಿಯ ವೇಳೆಗಳಲ್ಲಿ, ಅರ್ಜಿದಾರನು ಖುದ್ದಾಗಿಯೇ ಆಗಲಿ ಅಥವಾ ಈ ಬಗ್ಗೆ ಬರವಣಿಗೆಯಲ್ಲಿ ಕ್ರಮಬದ್ಧವಾಗಿ ಅಧಿಕೃತಗೊಳಿಸಿದ ಏಜೆಂಟನ ಮೂಲಕವಾಗಿಯೇ ಆಗಲಿ ಒಪ್ಪಿಸತಕ್ಕುದು ಅಥವಾ ಅಂಥ ಸಹಾಯಕ ರಿಜಿಸ್ಟ್ರಾರನಿಗೆ ಅವರ ವಿಳಾಸಕ್ಕೆ ನೋಂದಾಯಿತ ಅಂಚೆಯ ಮೂಲಕ ಕಳುಹಿಸತಕ್ಕುದು.
(2) ಮೊದಲನೆಯ ಬಾರಿಗಾಗಿ ಲೈಸೆನ್ಸನ್ನು ಮಂಜೂರು ಮಾಡುವುದಕ್ಕಾಗಿನ ಅರ್ಜಿಯನ್ನು ಯಾವುದೇ ಕಾಲದಲ್ಲಿ ಸಲ್ಲಿಸಬಹುದು ಮತ್ತು ಲೈಸೆನ್ಸಿನ ನವೀಕರಣಕ್ಕಾಗಿನ ಅರ್ಜಿಯನ್ನು, 1 [ಪ್ರತಿ ವರ್ಷದ ಅಕ್ಟೋಬರ್ ಕೊನೆಯ ದಿನಾಂಕಕ್ಕೆ ಮೊದಲು ಸಲ್ಲಿಸತಕ್ಕದ್ದು:
- ಜಿಎಸ್ಅರ್ 77 ಅಧಿಸೂಚನೆ ಸಂಖ್ಯೆ ಸಿಎಮ್ಡಬ್ಲ್ಯೂ 2 ಸಿಎಮ್ಎಲ್ 88, ದಿನಾಂಕ: 16-3-1988ರ ಮೂಲಕ 16- 3-1988ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 1 [ಪರಂತು, ಮೊದಲನೆಯ ಬಾರಿಗೆ ಲೈಸೆನ್ಸು ಮಂಜೂರು ಮಾಡುವುದಕ್ಕಾಗಿ ಅರ್ಜಿಯನ್ನು ಆ ವರ್ಷದ ನವೆಂಬರ್ ಮೊದಲನೆಯ ದಿನದ ಮತ್ತು ಡಿಸೆಂಬರ್ ಮೂವತ್ತೊಂದನೇ ದಿನದ ನಡುವೆ ಸಲ್ಲಿಸಿದ್ದರೆ, ತರುವಾಯ ಬರುವ ವರ್ಷಕ್ಕಾಗಿ ಲೈಸೆನ್ಸು ನವೀಕರಣದ ಅರ್ಜಿಯನ್ನು ಲೈಸೆನ್ಸಿನ ಅವಧಿಯ ಮುಕ್ತಾಯಕ್ಕೆ ಮುಂಚೆ ಸಲ್ಲಿಸತಕ್ಕುದು .
- ಜಿಎಸ್ಅರ್ 77 ಅಧಿಸೂಚನೆ ಸಂಖ್ಯೆ ಸಿಎಮ್ಡಬ್ಲ್ಯೂ 2 ಸಿಎಮ್ಎಲ್ 88, ದಿನಾಂಕ: 16-3-1988ರ ಮೂಲಕ 16-3-1988 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.