10ನೇಪ್ರಕರಣದ (1)ನೇ ಉಪಪ್ರಕರಣದ (ಡಿ) ಖಂಡದಲ್ಲಿ ಉಲ್ಲೇಖಿಸಿದ ಲೆಕ್ಕಗಳ ವಿವರಪತ್ರವನ್ನು, ಗಿರವಿ ಇಟ್ಟವನಿಗೆ, ಗಿರವಿ ಇಟ್ಟವನು ಕೊಟ್ಟಿರುವ ಕೋರಿಕೆಯಲ್ಲಿ ತಿಳಿಸಿರುವ ವಿಳಾಸಕ್ಕೆ ನೋಂದಾಯಿತ ಅಂಚೆಯ ಮೂಲಕ ತಲುಪೊಪ್ಪಿಗೆ ಸಹಿತ ಕಳುಹಿಸತಕ್ಕುದು:
ಪರಂತು, ಗಿರವಿ ಇಟ್ಟವನು, ವಿವರ ಪತ್ರವನ್ನು ಖುದ್ದಾಗಿ ತೆಗೆದುಕೊಳ್ಳಲು ಬರಹದಲ್ಲಿ ಒಪ್ಪಿಕೊಂಡಿದ್ದರೆ, ಅದನ್ನು ನೋಂದಾಯಿತ ಅಂಚೆಯ ಮೂಲಕ ಕಳುಹಿಸುವುದು ಅವಶ್ಯಕವಾಗಿರತಕ್ಕುದಲ್ಲ.
(2) ಗಿರವಿ ಇಟ್ಟವನು ಲೆಕ್ಕದ ವಿವರಪತ್ರವನ್ನು ಖುದ್ದಾಗಿ ತೆಗೆದುಕೊಂಡಲ್ಲಿ, ಅವನು ಅದರ ಸ್ವೀಕೃತಿ ಪತ್ರವನ್ನು ಬರವಣಿಗೆಯಲ್ಲಿ ಕೊಡತಕ್ಕುದು. ಗಿರವಿ ಇಟ್ಟವನು ಸ್ವೀಕೃತಿ ಪತ್ರಕ್ಕೆ ರುಜು ಹಾಕತಕ್ಕುದು ಅಥವಾ ಅವನು ಅನಕ್ಷರಸ್ಥನಾಗಿದ್ದರೆ ಅದಕ್ಕೆ ಅವನ ಹೆಬ್ಬೆರಳಿನ ಗುರುತನ್ನು ಹಾಕತಕ್ಕುದು.
(3) ಲೆಕ್ಕದ ವಿವರ ಪತ್ರವನ್ನು ನೋಂದಾಯಿತ ಅಂಚೆಯ ಮೂಲಕ ಕಳುಹಿಸಿದ್ದರೆ, ಅಂಚೆಯ ರಸೀತಿ ಮತ್ತು ತಲುಪೊಪ್ಪಿಗೆಯ ಹಾಜರುಪಡಿಸುವಿಕೆಯು ಅಂಥ ವಿವರಪತ್ರವನ್ನು ಕಳುಹಿಸಿರುವ ಬಗ್ಗೆ ಸಾಕಷ್ಟು ರುಜುವಾತಾಗಿರತಕ್ಕುದು.
(4) ನೋಂದಾಯಿತ ಅಂಚೆಯ ಮೂಲಕ ವಿವರ ಪತ್ರವನ್ನು ಕಳುಹಿಸುವುದಕ್ಕಾಗಿನ ವೆಚ್ಚಗಳನ್ನು, ಲೆಕ್ಕಪತ್ರಗಳಲ್ಲಿ ನಮೂದಿಸತಕ್ಕುದು ಮತ್ತು ಅವುಗಳು ಸಾಲದ ಮೊಬಲಗಿನೊಂದಿಗೆ ಗಿರವಿದಾರನಿಂದ ವಸೂಲೀಯವಾಗತಕ್ಕುದು. ಆದರೆ ಅಂಥ ವೆಚ್ಚಗಳ ಮೇಲೆ ಯಾವುದೇ ಬಡ್ಡಿಯನ್ನು ವಿಧಿಸತಕ್ಕುದಲ್ಲ.