ಒತ್ತೆಗಳನ್ನು ಬಹಿರಂಗ ಹರಾಜಿನ ಮೂಲಕ ಮಾರಾಟಕ್ಕಾಗಿನ ಪ್ರಕ್ರಿಯೆಯು ಈ ಕೆಳಕಂಡಂತಿರತಕ್ಕುದು:-
(1) ಮಾರಾಟವನ್ನು, ಲೈಸೆನ್ಸ್ ಕೊಡುವ ಪ್ರಾಧಿಕಾರಿಯಿಂದ ಅಥವಾ ಲೇವಾದೇವಿದಾರರ ಮತ್ತು ಗಿರವಿದಾರರ ಇನ್ಸ್ಪೆಕ್ಟರ್ನಿಂದ ಅನುಮೋದಿತನಾದ ಹರಾಜುದಾರನ ಮೂಲಕ ನಡೆಸತಕ್ಕುದು.
(2) ಹರಾಜುದಾರನು:-
(i) ಎಲ್ಲಾ ಒತ್ತೆಗಳನ್ನು ಸಾರ್ವಜನಿಕರ ದೃಷ್ಟಿಗೆ ಕಾಣುವಂತೆ ಇಡತಕ್ಕುದು;
(ii) ಈ ಕೆಳಕಂಡ ವಿವರಣೆಗಳನ್ನು ಒಳಗೊಂಡ, ಹರಾಜಿನಲ್ಲಿ ಮಾರಾಟ ಮಾಡಬೇಕಾದ ಒತ್ತೆಗಳ ಒಂದು ಸೂಚಿ ಪಟ್ಟಿಯನ್ನು ಮುದ್ರಣ ಮಾಡತಕ್ಕುದು:-
(ಎ) ಸಂಬಂಧಪಟ್ಟ ಗಿರವಿದಾರನ ಹೆಸರು, ವ್ಯವಹಾರದ ಸ್ಥಳ ಮತ್ತು ಲೈಸೆನ್ಸಿನ ಸಂಖ್ಯೆ;
(ಬಿ) ಸಾಲದ ದಿನಾಂಕ;
(ಸಿ) ಒತ್ತೆಯ ಪುಸ್ತಕದಲ್ಲಿ ಒತ್ತೆಯ ಸಂಖ್ಯೆ;
(ಡಿ) ವಸ್ತುವಿನ ಪೂರ್ಣ ಮತ್ತು ವಿವರವಾದ ವಿವರಣೆ (ಆಭರಣಗಳ ಸಂದರ್ಭದಲ್ಲಿ ತೂಕವನ್ನು ಸೂಚಿಸಬೇಕು);
(ಇ) ಗಿರವಿ ಇಟ್ಟವನ ಹೆಸರು ಮತ್ತು ವಿಳಾಸ; ಮತ್ತು (ಎಫ್) ಮಾರಾಟದ ದಿನಾಂಕ, ವೇಳೆ ಮತ್ತು ಸ್ಥಳ;
(iii) ಗಿರವಿದಾರನ ವ್ಯವಹಾರದ ಸ್ಥಳದಲ್ಲಿ ಅದರ ಒಂದು ಪ್ರತಿಯನ್ನು ಅಂಟಿಸುವ ಮೂಲಕ ಮತ್ತು ಉದ್ದೇಶಿತ ಸವಾಲುದಾರರಿಗೆ ಪ್ರತಿಗಳನ್ನು ಹಂಚುವ ಮೂಲಕ ಮುದ್ರಿತ ಸೂಚಿಪಟ್ಟಿಯನ್ನು ಪ್ರಕಟಿಸತಕ್ಕುದು;
1 [(iv) (ಎ) ಮಾರಾಟಕ್ಕೆ ನಿಗದಿಪಡಿಸಿದ ದಿನಾಂಕಕ್ಕೆ ಮುಂಚೆ ಕನಿಷ್ಟ ಪಕ್ಷ ಒಂದುವಾರಕ್ಕೆ ಮೊದಲು, ಸೂಚಿಪಟ್ಟಿಯ ಎರಡು ಪ್ರತಿಗಳನ್ನು, ಯಾವ ಆವರಣದಲ್ಲಿ ಹರಾಜನ್ನು ನಡೆಸಬೇಕಾಗಿದೆಯೋ ಆ ಆವರಣದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಪೊಲೀಸ್ ಸ್ಟೇಷನ್ಗೆ, ಅದರ ನೋಟೀಸು ಬೋರ್ಡಿನ ಮೇಲೆ ಅಂಟಿಸುವುದಕ್ಕೆ ಒಂದು ಪ್ರತಿಯನ್ನು ಮತ್ತು ದಾಖಲೆಗಾಗಿ ಮತ್ತೊಂದು ಪ್ರತಿಯನ್ನು ಕಳುಹಿಸತಕ್ಕುದು;]1 1. ಸಂಖ್ಯೆ ಜಿಎಸ್ಆರ್ 347, ಅಧಿಸೂಚನೆ ಸಂಖ್ಯೆ ಡಿಪಿಸಿ 62 ಸಿಸಿಸಿ 69 ದಿನಾಂಕ 17-9-1969ರ ಮೂಲಕ 9-10- 1969ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
1 [(ಎಎ) ಮಾರಾಟಕ್ಕಾಗಿ ನಿಗದಿಪಡಿಸಿದ ದಿನಾಂಕಕ್ಕೆ ಮುಂಚೆ ಕನಿಷ್ಠ ಪಕ್ಷ ಒಂದು ವಾರಕ್ಕೆ ಮೊದಲು ಮುದ್ರಿತ ಸೂಚಿಪಟ್ಟಿಯ ಎರಡು ಪ್ರತಿಗಳನ್ನು, ಯಾವ ಆವರಣದಲ್ಲಿ ಹರಾಜನ್ನು ನಡೆಸಬೇಕಾಗಿದೆಯೋ ಆ ಆವರಣದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಲೈಸೆನ್ಸು ಕೊಡುವ ಪ್ರಾಧಿಕಾರಿಗೆ ಅವನ ಕಛೇರಿಯ ನೋಟೀಸು ಬೋರ್ಡಿನ ಮೇಲೆ ಅಂಟಿಸುವುದಕ್ಕಾಗಿ ಒಂದು ಪ್ರತಿಯನ್ನು ಮತ್ತು ದಾಖಲೆಗಾಗಿ ಮತ್ತೊಂದು ಪ್ರತಿಯನ್ನು ಕಳುಹಿಸತಕ್ಕುದು;
(ಬಿ) ಮುದ್ರಿತ ಸೂಚಿಪಟ್ಟಿಯ ಒಂದು ಪ್ರತಿಯನ್ನು, ಸಂಬಂಧಪಟ್ಟ ಗಿರುವಿದಾರನು ವ್ಯವಹಾರವನ್ನು ನಡೆಸುತ್ತಿರುವ ಸ್ಥಳದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಪೊಲೀಸ್ ಸ್ಟೇಷನ್ಗೆ ಅಥವಾ ಪ್ರತಿಯೊಂದು ಪೊಲೀಸ್ ಸ್ಟೇಷನ್ಗಳಿಗೆ ದಾಖಲೆಗಾಗಿ ಕಳುಹಿಸತಕ್ಕುದು; ಮತ್ತು
(ಸಿ) ಯಾವುದೇ ಸಂದರ್ಭದಲ್ಲಿ, ಸಂಬಂಧಪಟ್ಟ ಗಿರವಿದಾರನು ವ್ಯವಹಾರವನ್ನು ನಡೆಸುವ ಸ್ಥಳಗಳ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಪ್ರತಿಯೊಂದು ಪೊಲೀಸ್ ಸ್ಟೇಷನ್ನ್ನು ಮತ್ತು ಮಾರಾಟದ ಸ್ಥಳವನ್ನು ಅಥವಾ ಸ್ಥಳಗಳನ್ನು ಮತ್ತು ಅಂಥ ಹರಾಜಿನ ಮುಂದೂಡಿಕೆ ಮತ್ತು ಹರಾಜಿನ ಎಲ್ಲ ತರುವಾಯದ ದಿನಾಂಕಗಳನ್ನು ಸೂಚಿಸತಕ್ಕುದು;]1 1. ಸಂಖ್ಯೆ ಜಿಎಸ್ಆರ್ 66, ಅಧಿಸೂಚನೆ ಸಂಖ್ಯೆ ಡಿಪಿಸಿ 248 ಸಿಸಿಸಿ 69 ದಿನಾಂಕ 25-2-1971ರ ಮೂಲಕ 25- 2-1971ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
(v) ಮುದ್ರಿತ ಸೂಚಿಪಟ್ಟಿಯ ಒಂದು ಪ್ರತಿಯನ್ನು ಮಾರಾಟಕ್ಕಾಗಿ ನಿಗದಿಪಡಿಸಿದ ದಿನಾಂಕಕ್ಕೆ ಕನಿಷ್ಠ ಪಕ್ಷ ಒಂದು ವಾರಕ್ಕೆ ಮುಂಚೆ ಗಿರವಿ ಇಟ್ಟವನಿಗೆ ನೋಂದಾಯಿತ ಅಂಚೆಯ ಮೂಲಕ ಕಳುಹಿಸತಕ್ಕುದು.
(3) ಸೂಚಿಪಟ್ಟಿಯಲ್ಲಿನ ಪ್ರತಿಯೊಬ್ಬ ಗಿರವಿದಾರನ ಒತ್ತೆಗಳು, ಲೈಸೆನ್ಸು ಕೊಡುವ ಪ್ರಾಧಿಕಾರಿಯು ಅಥವಾ ಲೇವಾದೇವಿದಾರರ ಮತ್ತು ಗಿರವಿದಾರರ ಇನ್ಸ್ಪೆಕ್ಟರ್ ಅನುಮೋದಿಸಿದ ಸುದ್ದಿಪತ್ರಿಕೆಯಲ್ಲಿ ಆ ಮಾರಾಟವನ್ನು ಅಧಿಸೂಚಿಸುವ ಯಾರೇ ಇತರ ಗಿರವಿದಾರನ ಒತ್ತೆಗಳಿಂದ, ಈ ಕೆಳಕಂಡ ವಿವರಗಳನ್ನು ಸಹ ಒದಗಿಸಿ ಪ್ರತ್ಯೇಕವಾಗಿಡತಕ್ಕುದು:-
(ಎ) ಗಿರವಿದಾರನ ಹೆಸರು ಮತ್ತು ಅವನ ವ್ಯವಹಾರದ ಸ್ಥಳ; ಮತ್ತು
(ಬಿ) ಒತ್ತೆಗಳನ್ನು ಗಿರವಿ ಇಟ್ಟಂಥ ತಿಂಗಳುಗಳು.
(4) ಗಿರವಿದಾರನು ಸ್ವತಃ ಸವಾಲನ್ನು ಕೂಗಿದಲ್ಲಿ, ಹರಾಜುದಾರನು, ಇತರ ವ್ಯಕ್ತಿಗಳು ಸವಾಲನ್ನು ಕೂಗುವ ಪ್ರಮಾಣದಲ್ಲೇ ಯಾವ ರೀತಿಯಲ್ಲಿ ಅವನು ಸವಾಲನ್ನು ಒಪ್ಪಿಕೊಳ್ಳಬೇಕೋ ಅದನ್ನು ಬಿಟ್ಟು ಇತರ ರೀತಿಯಲ್ಲಿ ಸವಾಲನ್ನು ಒಪ್ಪಿಕೊಳ್ಳತಕ್ಕುದಲ್ಲ ಮತ್ತು ಹರಾಜುದಾರನು ಯಾವುದೇ ವಸ್ತು ಸವಾಲಿನಲ್ಲಿ ಗಿರವಿದಾರನ ಹೆಸರಿಗೆ ನಿಂತ ತತ್ಕ್ಷಣವೇ ಗಿರವಿದಾರನೇ ಖರೀದಿದಾರನೆಂದು ಎಲ್ಲರಿಗೂ ಕೇಳುವಂತೆ ಘೋಷಿಸತಕ್ಕುದು.
(5) ಹರಾಜುದಾರನು, ಮಾರಾಟದ ತರುವಾಯ ಹದಿನಾಲ್ಕು ದಿವಸಗಳೊಳಗೆ, ಗಿರವಿದಾರನಿಗೆ ಆ ಸೂಚಿಪಟ್ಟಿಯ ಅಥವಾ ಆ ಗಿರವಿದಾರನ ಒತ್ತೆಗಳಿಗೆ ಅದು ಸಂಬಂಧಪಡುವಷ್ಟರ ಮಟ್ಟಿಗೆ ಪ್ರತಿಯೊಂದು ವಸ್ತುವಿನ ಮಾರಾಟಕ್ಕಾಗಿನ ವೆಚ್ಚಗಳನ್ನು ಸಹ ಸೂಚಿಸಿ ಅಧಿಪ್ರಮಾಣಿತ ಪ್ರತಿಯನ್ನು ಕೊಡತಕ್ಕುದು.
(6) ಗಿರಿವಿದಾರನು, ಹರಾಜಿನ ತರುವಾಯ ಕನಿಷ್ಠ ಪಕ್ಷ ಮೂರು ವರ್ಷಗಳವರೆಗೆ ಪ್ರತಿಯೊಂದು ಅಂಥ ಸೂಚಿಪಟ್ಟಿಯನ್ನು ಸಂರಕ್ಷಿಸಿಡತಕ್ಕದ್ದು.
ನಮೂನೆಗಳು ನಮೂನೆ ‘ಎ'
(3ನೇ ನಿಯಮವನ್ನು ನೋಡಿ).
ಗಿರವಿದಾರನ ಲೈಸೆನ್ಸ್ಗಾಗಿ ಅರ್ಜಿಯ ನಮೂನೆ.
ಗೆ, ಲೇವಾದೇವಿದಾರರ ಸಹಾಯಕ ರಿಜಿಸ್ಟ್ರಾರ್.
- ಅರ್ಜಿದಾರನ ಹೆಸರು (ಪೂರ್ಣವಾಗಿ).
- ಪೂರ್ಣ ವಿಳಾಸ (ಯಾವುದೇ ತರುವಾಯದ ಬದಲಾವಣೆಯನ್ನು ತಿಳಿಸತಕ್ಕದ್ದು).
- ತಂದೆಯ ಹೆಸರು.
- ಅರ್ಜಿದಾರನು ಹೊಂದಿರುವ ಸ್ವತ್ತುಗಳ ಪಟ್ಟಿ.
- ಯಾವುದಕ್ಕೆ ಸಂಬಂಧಿಸಿದಂತೆ ಲೈಸೆನ್ಸಿಗಾಗಿ ಅರ್ಜಿಯನ್ನು ಹಾಕಿ ಕೊಳ್ಳಲಾಗಿದೆಯೋ ಆ ಅಂಗಡಿಯ ಅಥವಾ ವ್ಯವಹಾರದ ಸ್ಥಳದ ವಿಳಾಸ.
- ಅರ್ಜಿದಾರನು, ಒಂದಕ್ಕಿಂತ ಹೆಚ್ಚಿನ ಅಂಗಡಿಯನ್ನು ಅಥವಾ ವ್ಯವಹಾರದ ಸ್ಥಳವನ್ನು ಹೊಂದಿದ್ದರೆ, ಪ್ರತಿಯೊಂದು ಅಂಥ ಅಂಗಡಿಯ ಅಥವಾ ವ್ಯವಹಾರದ ಸ್ಥಳದ ವಿಳಾಸವನ್ನು ನಮೂದಿಸತಕ್ಕದ್ದು.
- 6ನೇ ಬಾಬಿನ ಬಗ್ಗೆ ನಮೂದಿಸಿರುವ ಪ್ರತಿಯೊಂದು ಅಂಗಡಿಗೆ ಅಥವಾ ವ್ಯವಹಾರದ ಸ್ಥಳಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಲೈಸೆನ್ಸಿಗಾಗಿ ಅರ್ಜಿದಾರನು ಅರ್ಜಿಯನ್ನು ಸಲ್ಲಿಸಿದ್ದಾನೆಯೇ? ಹಾಗಿದ್ದರೆ, ಲೈಸೆನ್ಸ್ ಮಂಜೂರಾಗಿದೆಯೇ ಇಲ್ಲವೇ? 8. ಸದ್ಯದ ಅರ್ಜಿಯನ್ನು ಹೊಸ ಲೈಸೆನ್ಸಿನ ಮಂಜೂರಾತಿಗಾಗಿ ಅಥವಾ ಹಿಂದಿನ ವರ್ಷದಲ್ಲಿ ಮಂಜೂರು ಮಾಡಲಾದ ಲೈಸೆನ್ಸಿನ ನವೀಕರಣಕ್ಕಾಗಿ ಸಲ್ಲಿಸಲಾಗಿದೆಯೇ? 9. ಯಾವ ಹಣಕಾಸು ವರ್ಷಕ್ಕಾಗಿ ಲೈಸನ್ಸಿಗೆ ಅರ್ಜಿ ಸಲ್ಲಿಸಲಾಗಿದೆಯೋ ಆ ಹಣಕಾಸು ವರ್ಷ.
- ಅರ್ಜಿದಾರನು, ಲೈಸೆನ್ಸಿಗಾಗಿ ನಿಯಮಿಸಲಾದ ಫೀಜನ್ನು ಸಂದಾಯ ಮಾಡಿದ್ದಾನೆಯೇ ? (ಖಜಾನೆ ರಸೀತಿಯನ್ನು ಲಗತ್ತಿಸತಕ್ಕದ್ದು) ಅರ್ಜಿದಾರನ ರುಜು. ಮೇಲೆ ಒದಗಿಸಿದ ವಿವರಗಳು, ನಾನು ತಿಳಿದಿರುವ ಮತ್ತು ನಂಬಿರುವ ಮಟ್ಟಿಗೆ ಸರಿಯಾಗಿವೆ ಎಂದು ನಾನು ಘೋಷಿಸುತ್ತೇನೆ.
ಅರ್ಜಿದಾರನ ರುಜು.
ನಮೂನೆ ‘‘ಬಿ''
(5ನೇ ನಿಯಮವನ್ನು ನೋಡಿ) ಕರ್ನಾಟಕ ಗಿರವಿದಾರರ ಅಧಿನಿಯಮ, 1961ರ ಮೇರೆಗೆ ನಿಯಮಿಸಲಾದ ಲೈಸೆನ್ಸು ಕೊಡುವ ಪ್ರಾಧಿಕಾರಿಯಾಗಿರುವ, ಲೇವಾದೇವಿದಾರರ ರಿಜಿಸ್ಟ್ರಾರನಾದ ನಾನು----ದ---ಇಲ್ಲಿ ಈಗ ವಾಸಿಸುತ್ತಿರುವ ಶ್ರೀ----------ಅವರಿಗೆ -------ಜಿಲ್ಲೆಯಲ್ಲಿ-----ಸಂಖ್ಯೆಯ ಆವರಣದಲ್ಲಿ ಗಿರವಿದಾರನ ವ್ಯವಹಾರವನ್ನು ನಡೆಸಲು----ದಿಂದ 31ನೇ ಮಾರ್ಚ್ವರೆಗೆ ಈ ಕೆಳಗೆ ನಮೂದಿಸಿದ ಷರತ್ತುಗಳ ಮೇಲೆ ಈ ಮೂಲಕ ಅಧಿಕೃತಗೊಳಿಸಿದ್ದೇನೆ ಮತ್ತು ಶಕ್ತಗೊಳಿಸಿದ್ದೇನೆ.
- ಈ ಲೈಸೆನ್ಸನ್ನು ಯಾರೇ ಇತರ ವ್ಯಕ್ತಿಗೆ ವರ್ಗಾವಣೆ ಮಾಡತಕ್ಕದ್ದಲ್ಲ.
- ಈ ಲೈಸೆನ್ಸನ್ನು, ಯಾರೇ ಲೈಸೆನ್ಸು ಕೊಡುವ ಪ್ರಾಧಿಕಾರಿಯು ಅಥವಾ ಲೇವಾದೇವಿದಾರರು ಮತ್ತು ಗಿರವಿದಾರರ ಇನ್ಸ್ಪೆಕ್ಟರ್ ಮತ್ತು ಅಂಥ ಅಧಿಕಾರಿಯು ತಗಾದೆ ಮಾಡಿದಾಗಲೆಲ್ಲ ಹಾಜರುಪಡಿಸತಕ್ಕದ್ದು.
- ಲೈಸೆನ್ಸುದಾರನು ಲೈಸೆನ್ಸು ಕೊಟ್ಟ ಆವರಣದಿಂದ ಕೆಟ್ಟನಡತೆಯ ವ್ಯಕ್ತಿಗಳನ್ನು ಹೊರಗಿಡತಕ್ಕದ್ದು.
- ಲೈಸೆನ್ಸುದಾರನು ಇಟ್ಟಿರುವ ಎಲ್ಲಾ ಪುಸ್ತಕಗಳನ್ನು, ಲೆಕ್ಕಪತ್ರಗಳನ್ನು ಮತ್ತು ದಸ್ತಾವೇಜುಗಳನ್ನು ಮತ್ತು ಅವನು ತೆಗೆದುಕೊಂಡಿರುವ ಎಲ್ಲಾ ಒತ್ತೆಗಳನ್ನು ಯಾರೇ ಲೈಸೆನ್ಸು ಕೊಡುವ ಪ್ರಾಧಿಕಾರಿ ಅಥವಾ ಲೇವಾದೇವಿದಾರರು ಗಿರವಿದಾರರರ ಇನ್ಸ್ಪೆಕ್ಟರ್ರ ಪರಿಶೀಲನೆಗೆ ಮುಕ್ತವಾಗಿಡತಕ್ಕದ್ದು.
- ಲೈಸೆನ್ಸುದಾರನು, ಅವನಲ್ಲಿ ಒತ್ತೆ ಇಟ್ಟಿರುವ ಯಾವುದೇ ವಸ್ತುವನ್ನು, ಲೈಸೆನ್ಸು ಕೊಡುವ ಪ್ರಾಧಿಕಾರಿಯ ಅಥವಾ ಲೇವಾದೇವಿದಾರರು ಮತ್ತು ಗಿರವಿದಾರರ ಇನ್ಸ್ಪೆಕ್ಟರರ ಬರಹದಲ್ಲಿನ ಅನುಮತಿ ಇಲ್ಲದೆ, ಯಾವ ಪಟ್ಟಣದಲ್ಲಿ ಅಥವಾ ಗ್ರಾಮದಲ್ಲಿ ಅವನು, ಗಿರವಿದಾರನ ವ್ಯವಹಾರವನ್ನು ನಡೆಸುತ್ತಿರುವನೋ ಆ ಪಟ್ಟಣದ ಅಥವಾ ಗ್ರಾಮದ ಹೊರಗೆ ಯಾವುದೇ ಸ್ಥಳಕ್ಕೆ ಸ್ಥಳಾಂತರಿಸತಕ್ಕದ್ದಲ್ಲ.
- ಮೇಲ್ಕಂಡ ಯಾವುದೇ ಷರತ್ತಿನ ಉಲ್ಲಂಘನೆಯು, ಅಧಿನಿಯಮದ 18ನೇ ಪ್ರಕರಣದ (1)ನೇ ಉಪಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ದಂಡನೀಯವಾಗಿರತಕ್ಕದ್ದು. ---ರ-----ದಿವಸದಂದು ನನ್ನ ಸಹಿಯೊಡನೆ ಮತ್ತು ಮೊಹರಿನೊಡನೆ ಕೊಡಲಾಗಿದೆ, 10 ರೂಪಾಯಿ ಫೀಜು ಸಂದಾಯ ಆಗಿದೆ.
ಲೇವಾದೇವಿದಾರರ ರಿಜಿಸ್ಟ್ರಾರ್.
(ಲೈಸೆನ್ಸನ್ನು ಕೊಡುವ ಅಧಿಕಾರಿ).
ನಮೂನೆ ‘‘ಸಿ''
(10ನೇ ನಿಯಮವನ್ನು ನೋಡಿ).
ಒಡೆಯನು ಒತ್ತೆಯನ್ನು ಕ್ಲೇಮು ಮಾಡಿದಾಗ ಮಾಡಬೇಕಾದ ಘೋಷಣೆ.
ಈ ಘೋಷಣೆಯು, ಯಾವ ದಿವಸದಂದು ನಮೂನೆಯನ್ನು ಗಿರವಿದಾರನು ಅರ್ಜಿದಾರನಿಗೆ ಕೊಟ್ಟಿದ್ದಾನೆಯೋ ಆ ದಿವಸದ ತರುವಾಯ ಹದಿನೈದು ದಿವಸಗಳನ್ನು ಮೀರದಂತೆ ಘೋಷಣೆಯನ್ನು ಕ್ರಮಬದ್ಧವಾಗಿ ಮಾಡಿದ್ದ, ಗಿರವಿದಾರನಿಗೆ ವಾಪಸ್ಸು ಕೊಟ್ಟ ಹೊರತು ಪರಿಣಾಮಕಾರಿಯಾಗಿರತಕ್ಕದ್ದಲ್ಲ.
ಗಿರವಿದಾರನಿಗೆ ವಾಪಸ್ಸು ಕೊಡುವುದಕ್ಕಾಗಿ ಕೊನೆಯ ದಿವಸ.
ಅರ್ಜಿದಾರನಾಗಿಯೇ ಆಗಲಿ ಅಥವಾ ಅರ್ಜಿದಾರನನ್ನು ಗುರತಿಸುವವನೆಂದಾಗಿಯೇ ಆಗಲಿ ಘೋಷಣೆಯನ್ನು ಅದು ಯಾವುದೇ ಮುಖ್ಯ ವಿವರದಲ್ಲಿ ಸುಳ್ಳಾಗಿರುವುದಾಗಿ ತಿಳಿದೂ ಮಾಡುವ ಯಾರೇ ವ್ಯಕ್ತಿಯು, ಅಧಿನಿಯಮದ 9ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗೆ ದಂಡನೀಯನಾಗುತ್ತಾನೆ.
---ದ-------ಆದ ನಾನು, ಕರ್ನಾಟಕ ಗಿರವಿದಾರರ ಅಧಿನಿಯಮ, 1961 (ಕರ್ನಾಟಕ ಅಧಿನಿಯಮ 1962ರ 13) ಕ್ಕನುಸಾರವಾಗಿ, ಈ ಕೆಳಗೆ ವಿವರಿಸಿರುವ ವಸ್ತು/ವಸ್ತುಗಳು ನನ್ನ ಸ್ವತ್ತು /ಸ್ವತ್ತುಗಳೆಂದು ಮತ್ತು ಅದನ್ನು/ಅವುಗಳನ್ನು------ದ ಅಂಗಡಿಯಲ್ಲಿ ಒತ್ತೆ ಇಟ್ಟಿರುವುದಾಗಿ ನಾನು ನಂಬಿರುತ್ತೇನೆಂದು ಶ್ರದ್ಧಾಪೂರ್ವಕವಾಗಿ ಮತ್ತು ಪ್ರಾಮಾಣಿಕವಾಗಿ ಘೋಷಿಸುತ್ತೇನೆ.
ಮೇಲೆ ಉಲ್ಲೇಖಿಸಿರುವ ವಸ್ತು/ವಸ್ತುಗಳು ಈ ಕೆಳಕಂಡ ವಿವರಣೆಯನ್ನು ಹೊಂದಿದೆ/ಹೊಂದಿವೆ:
ಒಡೆಯನ ರುಜು.
ಪದನಾಮ ವಿಳಾಸ.
-----ಆದ ನಾನು, ಸದರಿ ಅಧಿನಿಯಮಕ್ಕನುಸಾರವಾಗಿ ........ಎಂದು, ಮೇಲ್ಕಂಡ ಘೋಷಣೆಯನ್ನು ಈಗ ಮಾಡುತ್ತಿರುವ ವ್ಯಕ್ತಿಯು ನನಗೆ ಗೊತ್ತಿದ್ದಾನೆಂದು ಶ್ರದ್ಧಾಪೂರ್ವಕವಾಗಿ ಮತ್ತು ಪ್ರಾಮಾಣಿಕವಾಗಿ ಘೋಷಿಸುತ್ತೇನೆ.
ಗುರುತಿಸುವ ವ್ಯಕ್ತಿಯ ರುಜು.
ಪದನಾಮ ವಿಳಾಸ.
-----------ದ--------ದಿವಸದಂದು ನನ್ನ ಸಮಕ್ಷಮದಲ್ಲಿ ಘೋಷಿಸಲಾಗಿದೆ.
ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಾಧೀಶ.
ನಮೂನೆ ‘‘ಡಿ''
(10ನೇ ನಿಯಮವನ್ನು ನೋಡಿ).
ಗಿರವಿ ಚೀಟಿಯು ಕಳೆದು ಹೋಗಿದ್ದರೆ ಘೋಷಣೆ, ಇತ್ಯಾದಿ.
ಈ ಘೋಷಣೆಯು, ಯಾವ ದಿವಸದಂದು ಈ ನಮೂನೆಯನ್ನು ಗಿರವಿದಾರನು ಅರ್ಜಿದಾರನಿಗೆ ಕೊಟ್ಟಿದ್ದಾನೆಯೋ ಆ ದಿವಸದ ತರುವಾಯ ಹದಿನೈದು ದಿವಸಗಳನ್ನು ಮೀರದಂತೆ ಘೋಷಣೆಯನ್ನು ಕ್ರಮಬದ್ಧವಾಗಿ ಮಾಡಿದ್ದ, ಗಿರವಿದಾರನಿಗೆ ವಾಪಸ್ಸು ಕೊಟ್ಟ ಹೊರತು ಪರಿಣಾಮಕಾರಿಯಾಗತಕ್ಕದ್ದಲ್ಲ.
ಗಿರವಿದಾರನಿಗೆ ವಾಪಸ್ಸು ಕೊಡುವುದಕ್ಕಾಗಿ ಕೊನೆಯ ದಿವಸ.
ಅರ್ಜಿದಾರನಾಗಿಯೇ ಆಗಲಿ ಅಥವಾ ಅರ್ಜಿದಾರನನ್ನು ಗುರತಿಸುವವನೆಂದಾಗಿಯೇ ಆಗಲಿ ಘೋಷಣೆಯನ್ನು ಅದು ಯಾವುದೇ ಮುಖ್ಯ ವಿವರದಲ್ಲಿ ಸುಳ್ಳಾಗಿರುವುದಾಗಿ ತಿಳಿದೂ ಮಾಡುವ ಯಾರೇ ವ್ಯಕ್ತಿಯು ಈ ಅಧಿನಿಯಮದ 9ನೇ ಪ್ರಕರಣದ (2)ನೇ ಉಪ್ರಕರಣದ ಮೇರೆಗೆ ದಂಡನೀಯನಾಗುತ್ತಾನೆ.
------ದ---ಆದ ನಾನು, ಕರ್ನಾಟಕ ಗಿರವಿದಾರರ ಅಧಿನಿಯಮ, 1961 (ಕರ್ನಾಟಕ ಅಧಿನಿಯಮ 1962ರ 13)ಕ್ಕನುಸಾರವಾಗಿ, ನನ್ನ ಸ್ವತ್ತಾಗಿರುವ ಕೆಳಗೆ ವಿವರಿಸಿರುವ ವಸ್ತು/ವಸ್ತುಗಳನ್ನು------ಗಿರವಿದಾರನ ಅಂಗಡಿಯಲ್ಲಿ ನಾನು ಒತ್ತೆ ಇಟ್ಟಿದ್ದೇನೆಂದು ಮತ್ತು ಅದಕ್ಕಾಗಿ ಗಿರವಿ ಚೀಟಿಯನ್ನು ಸ್ವೀಕರಿಸಿದ್ದು, ಅದು----ನು---ನಿಂದ ಮತ್ತು ನಾನು ಅಥವಾ ನಾನು ತಿಳಿದಿರುವ ಮತ್ತು ನಂಬಿರುವಷ್ಟರ ಮಟ್ಟಿಗೆ ಯಾರೇ ವ್ಯಕ್ತಿಗೆ ಆ ಗಿರವಿ ಚೀಟಿಯನ್ನು ಮಾರಾಟ ಮಾಡಿಲ್ಲವೆಂದು ಅಥವಾ ವರ್ಗಾವಣೆ ಮಾಡಿಲ್ಲವೆಂದು ಶ್ರದ್ಧಾಪೂರ್ವಕವಾಗಿ ಮತ್ತು ಪ್ರಾಮಾಣಿಕವಾಗಿ ಘೋಷಿಸುತ್ತೇನೆ.
ಮೇಲೆ ಉಲ್ಲೇಖಿಸಿರುವ ವಸ್ತು/ವಸ್ತುಗಳು ಈ ಕೆಳಕಂಡ ವಿವರಣೆಯನ್ನು ಹೊಂದಿದೆ/ಹೊಂದಿವೆ.
ಗಿರವಿ ಇಟ್ಟವನ ರುಜು.
----- ರ----- ಆದ ನಾನು, ಸದರಿ ಅಧಿನಿಯಮಕ್ಕನುಸಾರವಾಗಿ,---------ಎಂದು ಮೇಲ್ಕಂಡ ಘೋಷಣೆಯನ್ನು ಈಗ ಮಾಡುತ್ತಿರುವ ವ್ಯಕ್ತಿಯು ನನಗೆ ಗೊತ್ತಿದ್ದಾನೆಂದು ಶ್ರದ್ಧಾಪೂರ್ವಕವಾಗಿ ಮತ್ತು ಪ್ರಮಾಣಿಕವಾಗಿ ಘೋಷಿಸುತ್ತೇನೆ.
ಗುರುತಿಸುವ ವ್ಯಕ್ತಿಯ ರುಜು.
ಪದನಾಮ ವಿಳಾಸ.
-----ದ-----ದಿವಸದಂದು ನನ್ನ ಸಮಕ್ಷಮದಲ್ಲಿ ಘೋಷಿಸಲಾಗಿದೆ.
ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಾಧೀಶ.
ನಮೂನೆ ‘‘ಇ'' (11ನೇ ನಿಯಮವನ್ನು ನೋಡಿ).
ಒತ್ತೆಯ ಪುಸ್ತಕ.
ಗಿರವಿ ಇಟ್ಟವನ ಹೆಸರು.
ಪೂರ್ಣ ವಿಳಾಸ.
- ಒತ್ತೆಯ ಸಂಖ್ಯೆ.
- ಸಾಲದ ದಿನಾಂಕ.
- ಸಾಲದ ಅಸಲಿನ ಮೊಬಲಗು.
- ವಿಧಿಸಲಾದ ಬಡ್ಡಿಯ ದರ.
- ಸಾಲವಾಗಿ ಸ್ವೀಕರಿಸಿದ ಪ್ರತಿಯೊಂದು ಸಂದಾಯದ ಮೊಬಲಗು ಮತ್ತು ದಿನಾಂಕ.
- ವಸ್ತುಗಳ ಪೂರ್ಣ ಮತ್ತು ವಿವರವಾದ ವಿವರಣೆ (ಆಭರಣಗಳ ಸಂದರ್ಭದಲ್ಲಿ ತೂಕವನ್ನು ನಮೂದಿಸತಕ್ಕದ್ದು).
- ವಸ್ತು ಅಥವಾ ವಸ್ತುಗಳ ಮೌಲ್ಯ.
- ಗಿರವಿಯನ್ನು ಬಿಡಿಸಿಕೊಳ್ಳುವುದಕ್ಕಾಗಿ ಒಪ್ಪಿಕೊಂಡಿರುವ ಕಾಲ.
- ಬಿಡಿಸಿಕೊಂಡ ಅಥವಾ ಹರಾಜಿನಲ್ಲಿ ಮಾರಾಟ ಮಾಡಿದ ದಿನಾಂಕ.
- ಅವನು ಗಿರವಿ ಇಟ್ಟವನಾಗಿಲ್ಲದಿದ್ದರೆ, ಒಡೆಯನ ಹೆಸರು ಮತ್ತು ವಿಳಾಸ.
- ಬಿಡಿಸಿಕೊಳ್ಳುವ ಅಥವಾ ಹರಾಜಿನ ಮಾರಾಟದಲ್ಲಿ ಖರೀದಿಸುವ ವ್ಯಕ್ತಿಯ ಹೆಸರು ಮತ್ತು ವಿಳಾಸ. ಟಿಪ್ಪಣಿ:- ಪ್ರತಿ ಒತ್ತೆಗೆ ಸಂಬಂಧಿಸಿದಂತೆ 5,9 ಮತ್ತು 11ನೇ ಬಾಬುಗಳನ್ನು ಹೊರತುಪಡಿಸಿ ಒತ್ತೆ ಪುಸ್ತಕದಲ್ಲಿನ ಎಲ್ಲಾ ನಮೂದುಗಳನ್ನು ವ್ಯವಹಾರಗ ಮಾಡುವಾಗಲೇ ಏಕಕಾಲದಲ್ಲಿ ಮಾಡತಕ್ಕದ್ದು. ನಮೂನೆ ‘‘ಎಫ್''
(12ನೇ ನಿಯಮವನ್ನು ನೋಡಿ).
ಗಿರವಿ ಚೀಟಿ.
ಒತ್ತೆಯ ಸಂಖ್ಯೆ.
ಗಿರವಿದಾರನ ಹೆಸರು ಮತ್ತು ವಿಳಾಸ.
ಗಿರವಿದಾರನ ಲೈಸೆನ್ಸಿನ ಸಂಖ್ಯೆ ಮತ್ತು ದಿನಾಂಕ.
ಈ ಕೆಳಕಂಡ ವಸ್ತು/ವಸ್ತುಗಳನ್ನು ನನ್ನ ಬಳಿ ಗಿರವಿ ಇಡಲಾಗಿದೆ/ವೆ.
- ಗಿರವಿ ಇಟ್ಟವನ ಹೆಸರು ಮತ್ತು ಪೂರ್ಣ ವಿಳಾಸ.
- ದಿನಾಂಕ.
- ಸಾಲದ ಅಸಲಿನ ಮೊಬಲಗು.
- ವಿಧಿಸಲಾದ ಬಡ್ಡಿಯ ದರ.
- ವಸ್ತುಗಳ ಪೂರ್ಣ ಮತ್ತು ವಿವರವಾದ ವಿವರಣೆ. (ಆಭರಣಗಳ ಸಂದರ್ಭದಲ್ಲಿ ತೂಕವನ್ನು ನಮೂದಿಸತಕ್ಕದ್ದು).
- ವಸ್ತು ಅಥವಾ ವಸ್ತುಗಳ ಮೌಲ್ಯ.
- ವಸ್ತುಗಳನ್ನು ಬಿಡಿಸಿಕೊಳ್ಳುವುದ್ಕಾಗಿ ಒಪ್ಪಿಕೊಂಡಿರುವ ಕಾಲ.
- ಗಿರವಿ ಇಟ್ಟವನ ರುಜು ಅಥವಾ ಹೆಬ್ಬೆರಳಿನ ಗುರುತು. (ಗಿರವಿ ಇಟ್ಟವನ ರುಜು/ಅವನ ಹೆಬ್ಬೆರಳಿನ ಗುರುತು).
ಗಿರವಿದಾರನ ಅಥವಾ ಅವನ ಏಜೆಂಟನ ರುಜು.
ಹಿಂಭಾಗ.
- ಯಾವುದೇ ಒತ್ತೆಯ ಮೇಲಿನ ಬಡ್ಡಿಯ ದರವು,- (ಎ) ಒಂದು ವರ್ಷಕ್ಕೆ ಶೇಕಡಾ 18 ರಷ್ಟು ಸರಳ ಬಡ್ಡಿಯನ್ನು (ಎಂದರೆ ಇಪ್ಪತ್ತೈದು ರೂಪಾಯಿಗಳು ಮತ್ತು ಅದಕ್ಕಿಂತ ಕಡಿಮೆಯಾದ ಸಾಲಗಳ ಸಂದರ್ಭದಲ್ಲಿ ಒಂದು ತಿಂಗಳಿಗೆ ಒಂದು ರೂಪಾಯಿಗೆ 1.25 ಪೈಸೆ ಸರಳ ಬಡ್ಡಿ), ಮತ್ತು (ಬಿ) ಒಂದು ವರ್ಷಕ್ಕೆ ಶೇಕಡಾ ಹದಿನೈದರಷ್ಟು ಸರಳ ಬಡ್ಡಿಯನ್ನು (ಎಂದರೆ ಇತರ ಸಂದರ್ಭಗಳಲ್ಲಿ ಒಂದು ತಿಂಗಳಿಗೆ ಒಂದು ರೂಪಾಯಿಗೆ 1.25 ಪೈಸೆ ಸರಳ ಬಡ್ಡಿ) -ಮೀರತಕ್ಕದ್ದಲ್ಲ.
- ಪ್ರತಿಯೊಂದು ಒತ್ತೆಯನ್ನು ಗಿರವಿ ಇಟ್ಟ ದಿವಸದಿಂದ (ಆ ದಿವಸವನ್ನು ಹೊರತುಪಡಿಸಿ) ಒಂದು ವರ್ಷದ ಅವಧಿಯೊಳಗೆ ಅಥವಾ ಪಕ್ಷಕಾರರ ನಡುವಣ ಕರಾರಿನಲ್ಲಿ ಕಲ್ಪಿಸಬಹುದಾದಂಥ ಇನ್ನೂ ದೀರ್ಘವಾದ ಅವಧಿಯೊಳಗೆ ಬಿಡಿಸಿಕೊಳ್ಳಬಹುದಾಗಿರತಕ್ಕದ್ದು ಮತ್ತು ಅದನ್ನು ಸದರಿ ಅವಧಿಯ ಮುಂದೆ ಬರುವ ರಿಯಾಯಿತಿಯ ಏಳು ದಿವಸಗಳಲ್ಲಿ ಬಿಡಿಸಿಕೊಳ್ಳಬಹುದಾಗಿರುವುದು ಮುಂದುವರಿಯತಕ್ಕದ್ದು.
- ಈ ಚೀಟಿಯ ಧಾರಕನನ್ನು, ಒತ್ತೆಯನ್ನು ಬಿಡಿಸಿಕೊಳ್ಳಲು ಹಕ್ಕುಳ್ಳವನಾದ ವ್ಯಕ್ತಿಯೆಂದು ಭಾವಿಸಬೇಕು.
- ಈ ಚೀಟಿಯು, ಕಳೆದು ಹೋದರೆ, ಕೈಮರೆತು ಹೋಗಿದ್ದರೆ, ಹಾಳಾಗಿದ್ದರೆ ಅಥವಾ ಕಳುವು ಆಗಿದ್ದರೆ ಅಥವಾ ಗಿರವಿ ಇಟ್ಟವನಿಂದ ಅದನ್ನು ಮೋಸದಿಂದ ಪಡೆದುಕೊಂಡಿದ್ದರೆ, ಆ ಗಿರವಿ ಇಟ್ಟವನು, ಮ್ಯಾಜಿಸ್ಟ್ರೇಟನ ಅಥವಾ ನ್ಯಾಯಾಧೀಶನ ಮುಂದೆ ಮಾಡಬೇಕಾಗಿರುವ ಘೋಷಣೆಯ ಮುದ್ರಿತ ನಮೂನೆಯನ್ನು ಉಚಿತವಾಗಿ ಸರಬರಾಜು ಮಾಡುವುದಕ್ಕಾಗಿ ಕೂಡಲೇ ಗಿರಿವಿದಾರನಿಗೆ ಅರ್ಜಿ ಸಲ್ಲಿಸತಕ್ಕದ್ದು, ಅವನು, ಗಿರವಿದಾರನು ಆ ನಮೂನೆಯನ್ನು ಕೊಟ್ಟ ದಿನಾಂಕದ ತರುವಾಯ ಹದಿನೈದು ದಿವಸಗಳನ್ನು ಮೀರದಂತೆ ಅದನ್ನು ಭರ್ತಿ ಮಾಡತಕ್ಕದ್ದು ಮತ್ತು ಗಿರವಿದಾರನಿಗೆ ವಾಪಸ್ಸು ಕೊಡತಕ್ಕದ್ದು. ಗಿರವಿ ಇಟ್ಟವನು ಆ ತರುವಾಯ ಅವನು ಗಿರವಿ ಚೀಟಿಯನ್ನು ಹಾಜರುಪಡಿಸಿದ್ದಿದ್ದರೆ ಹೇಗೋ ಹಾಗೆ ಅವೇ ಹಕ್ಕುಗಳು ಮತ್ತು ಪರಿಹಾರೋಪಾಯಗಳನ್ನು ಹೊಂದಿರತಕ್ಕದ್ದು.
- ಸಾಲವು ಇನ್ನೂರೈವತ್ತು ರೂಪಾಯಿಗಳನ್ನು ಮೀರಿರುವಲ್ಲಿ, ಆ ಅರ್ಜಿದಾರನು, ಗಿರವಿದಾರನಿಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಮುಂಚೆ, ಈ ಕೆಳಕಂಡ ವಿವರಗಳನ್ನು ಒಳಗೊಂಡಿರುವ ನೋಟೀಸನ್ನು ಪ್ರಕಟಿಸುವಂತೆ ಮಾಡತಕ್ಕದ್ದು, ಎಂದರೆ:- (ಎ) ಸಂಬಂಧಪಟ್ಟ ಗಿರವಿದಾರನ ಹೆಸರು, ವ್ಯವಹಾರದ ಸ್ಥಳ ಮತ್ತು ಲೈಸೆನ್ಸಿನ ಸಂಖ್ಯೆ; (ಬಿ) ವಸ್ತುಗಳ ಪೂರ್ಣ ಮತ್ತು ವಿವರವಾದ ವಿವರಣೆ (ಆಭರಣಗಳ ಸಂದರ್ಭದಲ್ಲಿ ತೂಕವನ್ನು ನಮೂದಿಸತಕ್ಕದ್ದು);
(ಸಿ) ಗಿರವಿ ಇಟ್ಟವನ ಹೆಸರು ಮತ್ತು ವಿಳಾಸ; ಮತ್ತು
(ಡಿ) ಅರ್ಜಿದಾರನು, ಅವನ ಕ್ಲೇಮನ್ನು ಯಾವ ಆಧಾರದ ಮೇಲೆ ಮಾಡುವನೋ ಅಂಥ ಆಧಾರ, ಎಂದರೆ, ಒತ್ತೆಯ ಒಡೆಯ ಆದರೆ, ಗಿರವಿ ಚೀಟಿಯನ್ನು ಹೊಂದಿಲ್ಲ ಅಥವಾ ಗಿರವಿ ಚೀಟಿಯನ್ನು ಧಾರಣ ಮಾಡಲು ಹಕ್ಕುಳ್ಳವನೆಂದು ಕ್ಲೇಮು ಮಾಡುವ, ಆದರೆ, ಅದು ಕಳೆದು ಹೋಗಿದೆ, ಕೈಮರೆತು ಹೋಗಿದೆ, ಹಾಳಾಗಿದೆ, ಕಳುವು ಮಾಡಲಾಗಿದೆ ಅಥವಾ ಅವನಿಂದ ಮೋಸದಿಂದ ಪಡೆದುಕೊಳ್ಳಲಾಗಿದೆ ಎಂದು ಆಪಾದಿಸುವ ವ್ಯಕ್ತಿ.
ಅಂಥ ನೋಟೀಸನ್ನು, ಗಿರವಿದಾರನು, ಅವನ ವ್ಯವಹಾರವನ್ನು ನಡೆಸುತ್ತಿರುವ ಸ್ಥಳದಲ್ಲಿ ಪ್ರಚಾರದಲ್ಲಿರುವ ಮತ್ತು ಲೈಸೆನ್ಸು ಕೊಡುವ ಪ್ರಾಧಿಕಾರಿಯು ಅಥವಾ ಲೇವಾದೇವಿದಾರರ ಮತ್ತು ಗಿರವಿದಾರರ ಇನ್ಸ್ಪೆಕ್ಟರ್ ಅನುಮೋದಿಸಿದ ಸುದ್ದಿಪತ್ರಿಕೆಯಲ್ಲಿ ಎರಡು ನಿರಂತರ ದಿವಸಗಳಂದು ಪ್ರಕಟಿಸತಕ್ಕದ್ದು.
ಘೋಷಣೆಯ ನಮೂನೆಗಾಗಿ ಅರ್ಜಿಯನ್ನು ಆ ನೋಟೀಸಿನ ಪ್ರಕಟಣೆಯ ತರುವಾಯ 21 ದಿವಸಗಳ ತರುವಾಯ ಸಲ್ಲಿಸತಕ್ಕದ್ದು.
ನಮೂನೆ ‘‘ಜಿ'' (12ನೇ ನಿಯಮವನ್ನು ನೋಡಿ).
ಒತ್ತೆಗಳ ಮಾರಾಟದ ಪುಸ್ತಕ.
ಮಾರಾಟದ ದಿನಾಂಕ ಮತ್ತು ಸ್ಥಳ.
ಹರಾಜುದಾರನ ಹೆಸರು ಮತ್ತು ವ್ಯವಹಾರದ ಸ್ಥಳ.
- ಒತ್ತೆಯ ಪುಸ್ತಕದಲ್ಲಿರುವ ಒತ್ತೆ ಸಂಖ್ಯೆ.
- ಗಿರವಿ ಇಟ್ಟ ದಿನಾಂಕ.
- ಗಿರವಿ ಇಟ್ಟವನ ಹೆಸರು.
- ಸಾಲದ ಮೊಬಲಗು.
- ಹರಾಜುದಾರನು ಹೇಳಿರುವಂತೆ ಒತ್ತೆಯು ಯಾವ ಮೊಬಲಗಿಗೆ ಮಾರಾಟ ಆಗಿದೆ.
- ಹರಾಜುದಾರ ಅಥವಾ ಅವನ ಏಜೆಂಟನ ರುಜು.
- ಖರೀದಿದಾರನ ಹೆಸರು ಮತ್ತು ವಿಳಾಸ. ನಮೂನೆ ‘‘ಎಚ್'' (12ನೇ ನಿಯಮವನ್ನು ನೋಡಿ).
ಒತ್ತೆಯನ್ನು ಬಿಡಿಸಿಕೊಂಡ ರಸೀದಿ.
ದಿನಾಂಕ.
----------ಸಂಖ್ಯೆಯ ಒತ್ತೆಯನ್ನು ಬಿಡಿಸಿಕೊಂಡ ಇವರಿಂದ ಸಾಲದ ಮೊಬಲಗನ್ನು/ ಬಡ್ಡಿಯನ್ನು ----- ಸ್ವೀಕರಿಸಲಾಗಿದೆ.
ಒಟ್ಟು.
ಗಿರವಿದಾರ ಅಥವಾ ಅವನ ಏಜೆಂಟನ ರುಜು.
ನಮೂನೆ ‘‘ಐ'' (12ನೇ ನಿಯಮವನ್ನು ನೋಡಿ).
ಗಿರವಿದಾರ ಅಥವಾ ಆತನ ಏಜೆಂಟನ ಪ್ರಮಾಣಪತ್ರ.
ಮೇಲೆ ಹೇಳಿರುವುದು,-----(ದಿನಾಂಕದಂದು)----ನು, ತೆಗೆದುಕೊಂಡ-----ರೂ.ಗಳ ಸಾಲಕ್ಕಾಗಿ ಕರ್ನಾಟಕ ಗಿರವಿದಾರರ ಅಧಿನಿಯಮ,1961(ಕರ್ನಾಟಕ ಅಧಿನಿಯಮ 1962ರ 13) ಇದರ 10ನೇ ಪ್ರಕರಣದ (1) ನೇ ಉಪಪ್ರಕರಣದ (ಎ) ಖಂಡದ ಮೇರೆಗೆ ಇಟ್ಟಿರುವ ಲೆಕ್ಕದ ಯಥಾಪ್ರತಿ ಎಂದು ಮತ್ತು ಆಸಸ ಲೆಕ್ಕದಲ್ಲಿ ಯಾವುದೇ ಬದಲಾವಣೆಗಳು ಅಥವಾ ಅಳಿಸುವಿಕೆಗಳು (ಈ ಕೆಳಕಂಡವನ್ನು ಹೊರತುಪಡಿಸಿ) ಇಲ್ಲವೆಂದು ನಾನು ಪ್ರಮಾಣೀಕರಿಸುತ್ತೇನೆ.
(1) (2) (3) ಗಿರಿವಿದಾರನ ಅಥವಾ ಅವನ ಏಜೆಂಟನ ರುಜು.
-
- The above translation of the Karnataka Pawn Brokers Act, 1961 and the Karnataka Pawn Brokers, Rules, 1966 Shall be authoritative text in the Kannada Language under section 5A of the Karnataka Official Language Act, 1963 (Karnataka Act No. 26 of 1963) Bangalore: GOVERNOR OF KARNATAKA
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಮ.ರಾ. ಹೆಗಡೆ)
ಸರ್ಕಾರದ ಕಾರ್ಯದರ್ಶಿ,
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.