ಸಹಾಯಕ ರಿಜಿಸ್ಟ್ರಾರನು ಲೈಸೆನ್ಸಿಗಾಗಿನ ಅರ್ಜಿದಾರನ ಪ್ರಾಮಾಣಿಕತೆಯ ಬಗ್ಗೆ ಅಂಥ ವಿಚಾರಣೆಗಳನ್ನು ಮಾಡಿದ ತರುವಾಯ, ಲೈಸೆನ್ಸು ಕೊಡುವ ಪ್ರಾಧಿಕಾರಿಗೆ ಅರ್ಜಿಗಳನ್ನು ಕಳುಹಿಸತಕ್ಕುದು. ಅವನು ಸೂಕ್ತವೆಂದು ಭಾವಿಸುವಂಥ ಇನ್ನೂ ಹೆಚ್ಚಿನ ವಿಚಾರಣೆ ಯಾವುದಾದರೂ ಇದ್ದರೆ ಅದನ್ನು ಮಾಡಿದ ತರುವಾಯ 4ನೇ ಪ್ರಕರಣದ ಉಪಬಂಧಗಳಿಗೆ ಒಳಪಟ್ಟು ಆದೇಶದ ಮೂಲಕ ಆ ಲೈಸೆನ್ಸನ್ನು ಮಂಜೂರು ಮಾಡಬಹುದು, ನವೀಕರಿಸಬಹುದು, ಅದನ್ನು ಮಂಜೂರು ಮಾಡಲು ಅಥವಾ ನವೀಕರಿಸಲು ನಿರಾಕರಿಸಬಹುದು. ಲೈಸೆನ್ಸನ್ನು ಮಂಜೂರು ಮಾಡಿದರೆ ಅಥವಾ ಅದನ್ನು ನವೀಕರಿಸಿದರೆ, ಅದು ಅದರಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳಿಗೊಳಪಟ್ಟು, ‘ಬಿ' ಮತ್ತು ‘ಸಿ' ನಮೂನೆಗಳಲ್ಲಿ ಇರತಕ್ಕುದು.
Loading…