ಗಿರವಿದಾರನು, ಅವನು ಗಿರವಿದಾರನ ವ್ಯವಹಾರವನ್ನು ನಡೆಸುತ್ತಿರುವ ಆವರಣದಲ್ಲಿ ಎದ್ದು ಕಾಣುವ ಸ್ಥಳದಲ್ಲಿ ಅವನ ಲೈಸೆನ್ಸನ್ನು ಪ್ರದರ್ಶಿಸತಕ್ಕುದು. ಅವನ ಲೈಸೆನ್ಸ್ ಸಂಖ್ಯೆಯನ್ನು, ಅವನು ಯಾವ ಹೆಸರಿನಲ್ಲಿ ವ್ಯವಹಾರವನ್ನು ನಡೆಸುವನೋ ಆ ಹೆಸರನ್ನು ಪ್ರದರ್ಶಿಸುವ ಗುರುತು ಹಲಗೆಯ ಮೇಲೆ ಸೂಚಿಸತಕ್ಕುದು:
ಪರಂತು, ಲೇವಾದೇವಿದಾರರ ರಿಜಿಸ್ಟ್ರಾರ್ ಜನರಲ್ ಅಥವಾ ಲೇವಾದೇವಿದಾರರ ರಿಜಿಸ್ಟ್ರಾರನು, ರಾಜ್ಯ ಸರ್ಕಾರದ ಸಾಮಾನ್ಯ ಅಥವಾ ವಿಶೇಷ ಆದೇಶಕ್ಕೆ ಒಳಪಟ್ಟು ಯಾವನೇ ಗಿರವಿದಾರನನ್ನು ಈ ನಿಯಮದ ಎಲ್ಲಾ ಅಥವಾ ಯಾವುದೇ ಉಪಬಂಧಗಳ ಪ್ರವರ್ತನೆಯಿಂದ ವಿನಾಯಿತಿಗೊಳಿಸಬಹುದು.