ಈ ನಿಯಮಗಳಲ್ಲಿ ಸಂದರ್ಭವು ಅನ್ಯತಾ ಅಗತ್ಯಪಡಿಸಿದ ಹೊರತು,-
(ಎ) “ಅಧಿನಿಯಮ” ಎಂದರೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2011 (2011 ರ ಕರ್ನಾಟಕ ಅಧಿವಿಯಮ 2);
(ಬಿ) "ತೀವ್ರ ಅಗತ್ಯವಿರುವ ಖಾಲಿ ಸ್ಮಾನ” BOBS ಯಾವುದೇ ಒಂದು ವೃಂದದಲ್ಲಿ ಆಡಳಿತ ತುರ್ತು ಪರಿಸ್ಥಿತಿಯಲ್ಲಿ ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉತ್ತಮ ಹಿತದೃಷ್ಠಿಯಿಂದ ಹಾಗೆ. ಮುಂದುವರೆಸಲು ಸಾಧ್ಯವಾಗದ ಖಾಲಿ ಸ್ಥಾನಗಳು ಮತ್ತು ಈ ಮುಂದಿನವುಗಳನ್ನು ಒಳಗೊಂಡಿರತಕ್ಕದ್ದು,-
(i) ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಉಪ ಕೇಂದ್ರ ಅಲ್ಲದ ಯಾವುದೇ ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರಿ ಸಂಸ್ಕೆಯಲ್ಲಿನ ಯಾವುದೇ ವೃಂದದ ಶೇಕಡಾ 50ಕ್ಕಿಂತ ಹೆಚ್ಚಿನ ಖಾಲಿ ಸ್ಥಾನಗಳು ಇದ್ದಲ್ಲಿ;
(ii) ಯಾವುದೇ ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರಿ ಸಂಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಅರೈಕೆ ಮಾಡಲು ಬಹಳ ಅವಶ್ಯಕವಾಗಿರುವ ಮೂವರು ವಿಶೇಷಣಜ್ಞರಲ್ಲಿ ಅಂದರೆ ಮಕ್ಕಳ ತಜ್ಞರು, ಅವಳಿಕೆ ತಜ್ಞ, BAS ಮತ್ತು ಸಿರೋಗ ತಜ್ಞರು ಈ ಮೂವರಲ್ಲಿ ಯಾವುದಾದರೂ ಒಂದು ವಿಶೇಷಜ್ಞರ ಖಾಲಿ ಹುದ್ದೆ ಇದ್ದಲ್ಲಿ;
ತೀವ್ರ ಅಗತ್ಯವಿರುವ ಖಾಲಿ ಸ್ನಾನ ಎಂದು ಪರಿಗಣಿಸತಕ್ಕದ್ದು;
(ಸಿ) “ಮಗು” ಎಂದರೆ ವೈದ್ಯಾಧಿಕಾರಿ ಅಥವಾ ಸಿಬ್ಬಂದಿಯ ಅವಿವಾಹಿತ ಅವಲಂಬಿತ ಮಗು;
(ಡಿ) “ವಿಶೇಷ ವರ್ಗಕ್ಕೆ ಸೇರಿದ ವ್ಯಕ್ತಿಗಳು” ಅಂದರೆ, ನಿಯಮ 6 (3) ಇದರಡಿಯಲ್ಲಿನ ಪಟ್ಟಿಯಲ್ಲಿ ಹೇಳಲಾದ ವರ್ಗದ ವ್ಯಕ್ತಿಗಳು;
(ಇ) “ಪ್ರಕರಣದ” ಎಂದರೆ ಅಧಿವಿಯಮದ ಪ್ರಕರಣ.
(2... ಈ ನಿಯಮಗಳಲ್ಲಿ ಬಳಸಿರುವ ಮತ್ತು ಪರಿಭಾಷಿಸದ ಪದಗಳು ಮತ್ತು ಪದ ಪುಂಜಗಳು ಅಧಿನಿಯಮದಲ್ಲಿ ನೀಡಲಾದ ಅರ್ಥಗಳನ್ನೇ ಹೊಂದಿರುತ್ತದೆ.