ಸಕ್ಷಮ ಪ್ರಾಧಿಕಾರವು ಸ್ಮಳದಲ್ಲಿ ಅಭ್ಯರ್ಥಿಯ ಆಯ್ಕೆಯನುಸಾರ ವರ್ಗಾವಣೆಯ ಆದೇಶವನ್ನು ನೀಡತಕ್ಕದ್ದು. ಖಾಲಿ ಹುದ್ದೆಗಳ ಪಟ್ಟಿಯಿಂದ ಆ ಖಾಲಿ ಹುದ್ದೆಯನ್ನು ಕ್ರಮಬದ್ಧವಾಗಿ ತೆಗೆದು ಹಾಕತಕ್ಕದ್ದು ಮತ್ತು ಅಂಥ ವರ್ಗಾವಣೆ ಆದೇಶಕ್ಕೆ ಉಂಟಾದ ಹೊಸ ಖಾಲಿ ಹುದ್ದೆಯನ್ನು ಸಹ ಸೇರಿಸತಕ್ಕದ್ದು. ಕೌನ್ಸಿಲಿಂಗ್ಗೆ ಹಾಜರಾಗಲು ವಿಫಲವಾಗುವಂಥ ಅಥವಾ ಕೌನ್ಸಿಲಿಂಗ್ ಮಾಡುವ ಅವಧಿಯಲ್ಲಿ ಆಯ್ಕೆಯನ್ನು ಮಾಡಿಕೊಳ್ಳಲು ವಿಫಲನಾಗಿರುವಂಥ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವು ವರ್ಗಾವಣೆ ಆದೇಶಗಳನ್ನು ನೀಡತಕ್ಕದ್ದು. ಕೌನ್ಸಿಲಿಂಗ್ ಸಮಯದಲ್ಲಿ ತಾವಾಗಿಯೇ ಮಾಡಿದ ಹಂಚಿಕೆಯನುಸಾರ ಅಂಥ ಆದೇಶದ ಪ್ರತಿಗಳನ್ನು ಸಂಬಂಧಪಟ್ನ ಪ್ರಾಧಿಕಾರಕ್ಕೆ ಸಹ ಕಳುಹಿಸತಕ್ಕದ್ದು.
Loading…