(1) ಸಂಬಂಧಪಟ್ಟ ನೇಮಕಾತಿ ನಿಯಮಗಳಲ್ಲಿ ಹೇಳಿದಂತೆ ಎಲ್ಲಾ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಸಂಂಬಂಧಪಟ್ಟ ನೇಮಕಾತಿ ನಿಯಮದಲ್ಲಿ ಹೇಳಲಾದ ಕನಿಷ್ಠ ಅವಧಿಯ ಗ್ರಾಮೀಣ ಸೇವೆ ಸಲ್ಲಿಸದ ಹಾಗೂ 50 ವರ್ಷ ವಯಸ್ಸು ಮೀರದ ವೈದ್ಯಾಧಿಕಾರಿ ಅಥವಾ ಇತರ ಸಿಬ್ಬಂದಿಯನ್ನು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವರ್ಗಾಯಿಸುವುದು.
(2) ಸಕ್ಷಮ ಪ್ರಾಧಿಕಾರವು ಸಂಬಂಧಪಟ್ಟ ನೇಮಕಾತಿ ನಿಯಮಗಳನ್ವಯ ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸದ ಹಾಗೂ 50 ವರ್ಷ ಮೀರದ ಗ್ರಾಮೀಣೇತರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿಯನ್ನು ಗುರುತಿಸಿದ ತಕ್ಷಣವೇ ಅವರನ್ನು ಪುಸ್ತುತ ಹುದ್ದೆಯಿಂದ ಹಿಂಪಡೆದು ನಿಯಮ I ರಡಿಯಲ್ಲಿನ ಅದ್ಯತೆಯ ಮೇಲೆ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವರ್ಗಾವಣೆ ಮಾಡತಕ್ಕದ್ದು.