(1) ರಾಜ್ಯ ಸರ್ಕಾರವು ಕಾಲಕಾಲಕ್ಕೆ ಆದೇಶದ ಮೂಲಕ, ವಿರ್ದಿಷ್ಟ ಸ್ಮಾತಕೋತ್ತರ ಪದವಿ ಅಥವಾ ಸ್ಮಾತಕೋತರ ಡಿಪ್ಲೋಮಗಳಿಗೆ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷಜ್ಞರು ಹಾಗೂ ಹಿರಿಯ ವಿಶೇಷಣ್ಞರಿಗೆ ನಿರ್ದಿಷ್ಟಪಡಿಸಿದ ಹುದ್ದೆಗಳನ್ನು, ಗೊತ್ತುಪಡಿಸತಕ್ಕದ್ದು,
(2) ಸಕ್ಷಮ ಪ್ರಾಧಿಕಾರವು ವಿಶೇಷಜ್ಞರು ಮತ್ತು ಹಿರಿಯ ವಿಶೇಷಜ್ಞರು ಅವರ ವಿಶೇಷ ವಿದ್ಯಾರ್ಹತೆಗೆ ಗೊತ್ತುಪಡಿಸದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಲ್ಲಿ. ಅವರ ಸೇವೆಯನ್ನು ಕೂಡಲೇ ಹಿಂಪಡೆಯತಕ್ಕದ್ದು ಹಾಗೂ ನಿಯಮ 9 ರಲ್ಲಿ ನಿಗದಿಪಡಿಸಿದ ಅದ್ಯತೆಯ ಮೇಲೆ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಅವರ ವಿಶೇಷ ವಿದ್ಯಾರ್ಹತೆಗೆ ಗೊತ್ತುಪಡಿಸಿದ ಹುದ್ದೆಗಳಿಗೆ ವರ್ಗಾವಣೆ ಮಾಡತಕ್ಕದ್ದು.