(1) ಅರ್ಜಿದಾರನು ಸಲ್ಲಿಸಿರುವ ಸೇವೆಯ ಆಧ್ಯತಾ ಪಟ್ಟಿ ತಯಾರಿಸುವಾಗ ಈ ಕಳಗೆ ನಿರ್ದಿಷ್ಟ ಪಡಿಸಿದಂತೆ ಸಂಬಂಧಪಟ್ಟ ವಲಯಗಳಲ್ಲಿ ಹಂಚಿಕೆಯಾದ ಮೌಲ್ಯದ ಅನುಪಾತದ ಮೂಲಕ ವಲಯ ಎಐ, ವಲಯ ಬಿ ಮತ್ತು ಗ್ರಾಮೀಣ ಪ್ರದೇಶಗಳೆಂದು ವರ್ಗೀಕರಿಸಿದ ಸ್ಮಳಗಳಲ್ಲಿ ಎಲ್ಲಾ ವೃಂದಗಳಲ್ಲಿ ಅರ್ಜಿದಾರನು ಸಲ್ಲಿಸಿದ ಸೇವೆಯ ವರ್ಷಗಳ ಸಂಖ್ಯೆಯನ್ನು ಗುಣಿಸುವ ಮೂಲಕ ಆದ್ಯತಾ ಪಟ್ಟಿಯನ್ನು ತಯಾರಿಸತಕ್ಕದ್ದು.
(ಎ) ವಲಯ ಎ: ವಲಯ- ಎದಲ್ಲಿ ಎಲ್ಲ ವೃಂದಗಳಲ್ಲಿ ಸಲ್ಲಿಸಿದ ಸೇವೆಯನ್ನು ಪೂರ್ಣಗೊಳಿಸಿ ವರ್ಷಗಳ ಸಂಖ್ಯೆ «1.00
(ಬಿ) ವಲಯ ಬಿ: ವಲಯ- ಬಿ ದಲ್ಲಿ ಎಲ್ಲ ವೃಂದಗಳಲ್ಲಿ ಸಲ್ಲಿಸಿದ ಸೇವೆಯನ್ನು ಪೂರ್ಣಗೊಳಿಸಿದ ವರ್ಷಗಳ ಸಂಖ್ಯೆ X 1.50.
(ಸಿ) ಗ್ರಾಮೀಣ ಪ್ರದೇಶ: ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ವೃಂದಗಳಲ್ಲಿ ಸಲ್ಲಿಸಿದ ಸೇವೆಯನ್ನು ಪೂರ್ಣಗೊಳಿಸಿದ ವರ್ಷಗಳ ಸಂಖ್ಯೆ «2.00
(2) ಆದ್ಯತೆ ಪಟ್ಟಿಯನ್ನು ಸಿದ್ಧಪಡಿಸುವಾಗ ಹೆಚ್ಚು ಮೌಲ್ಯದ ಸೇವೆಯನ್ನು ಹೊಂದಿರುವ ಸಿಬ್ಬಂದಿಯನ್ನು ಕಡಿಮೆ ಮೌಲ್ಯದ ಸೇವೆಯೊಂದಿಗಿನ ಸಿಬ್ಬಂದಿಯ ಮೇಲೆ ಪರಿಗಣಿಸತಕ್ಕದ್ದು, ಸಮಾನವಾಗಿರುವ ಸಂದರ್ಭದಲ್ಲಿ ವ್ಯಕ್ತಿಯ ಜೇಷ್ಠತೆಯನ್ನು ಪರಿಗಣಿನೆಗೆ ತೆಗೆದುಕೊಳ್ಳತಕ್ಕದ್ದು. ಜೀಷ್ಠತೆಯು.. ಸಮಾನವಾಗಿರುವ ಸಂದರ್ಭದಲ್ಲಿ ವಯಸ್ಸಿನಲ್ಲಿ ಹಿರಿಯರಾದವರಿಗೆ ಆದ್ಯತೆ ನೀಡತಕ್ಕದ್ದು.