(1) ಎಲ್ಲಾ LOG ಅರ್ಜಿಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ನಿರ್ದಿಷ್ಟಪಡಿಸಿದ ಅರ್ಜಿ ನಮೂನೆಯಲ್ಲಿ ಸರ್ಕಾರಿ ಆಸ್ಪತ್ರೆಗಳು/ಸಂಸ್ಮೆ ಅಥವಾ ಕಛೇರಿಗೆ ಸಂಬಂಧಿಸಿದಂತೆ ಮುಖ್ಯಸ್ಥರ ಮೂಲಕ ಸಲ್ಲಿಸತಕ್ಕದ್ದು, ಆದಾಗ್ಯೂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರ ಕಛೇರಿಯಲ್ಲಿ ಮತ್ತು ಆಯುಷ್ ಆಯುಕ್ತರ ಕಛೇರಿ ಮತ್ತು ಆಹಾರ ಮತ್ತು ಔಷದ ನಿಯಂತ್ರಣ ಆಯುಕ್ತರ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಸಂಬಂಧಪಟ್ಟ ಆಯುಕ್ತಾಲಯದ ಮುಖ್ಯ ಆಡಳಿತಾಧಿಕಾರಿಯವರಿಗೆ ಅವರ ವರ್ಗಾವಣೆ ಅರ್ಜಿಯನ್ನು ಸಲ್ಲಿಸತಕ್ಕದ್ದು,
(2) ಸಂಸ್ಥೆಯ ಮುಖ್ಯಸ್ಥರು ಅರ್ಜಿಗಳನ್ನು ಪರಿಶೀಲಿಸಿದ ನಂತರ ಸಂಬಂಧಪಟ್ಟಿ ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ, ಅಥವಾ ಸಹಾಯಕ ಔಷದ ನಿಯಂತ್ರಕ ಅಥವಾ ಸಂ೦ಧರ್ಭಾನುಸಾರ ಆ ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಿಕೊಡತಕ್ಕದ್ದು.
(3) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಣಾಧಿಕಾರಿ ಅಥವಾ ಸಹಾಯಕ ಔಷದ ನಿಯಂತ್ರಕ ಅಥವಾ ಸಂದರ್ಭಾನುಸಾರ ಜಿಲ್ಲಾ ಆಯುಷ್ ಅಧಿಕಾರಿ ಅರ್ಜಿಗಳನ್ನು ಕ್ರೊಡೀಕರಿಸತಕ್ಕದ್ದು, ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿಗಳನ್ನು ಕಳುಹಿಸತಕ್ಕದ್ದು,
(4) ಸಕ್ಷಮ ಪ್ರಾಧಿಕಾರವು ಅರ್ಜಿ ನಮೂನೆಯಲ್ಲಿ ಒದಗಿಸಲಾದ ವಿವರಣೆಗಳನ್ನು ಸರಿಯಾಗಿದೆಯೆಂದು ಪರಿಶೀಲಿಸತಕ್ಕದ್ದು ಮತ್ತು ಪ್ರಮಾಣಿಕರಿಸತಕ್ಕದ್ದು.
(5) ವರ್ಗಾವಣೆಗಳಿಗಾಗಿ ಬಂದ ಅರ್ಜಿಗಳನ್ನು ಪರಿಶೀಲನೆ ಮಾಡಿದ ನಂತರ ದತ್ತಾಂಶವನ್ನು ಗಣಕೀಕರಿಸತಕ್ಕದ್ದು.
(6) ಈ ಮೇಲೆ ಹೇಳಲಾದ ಅರ್ಜಿ ಸಲ್ಲಿಸುವ ಕ್ರಮವನ್ನು ಗಣಕೀಕೃತ ಕೌನ್ಸಿಲಿಂಗ್ ತಂತ್ರಾಶದಲ್ಲಿ ಸೇರಿಸತಕ್ಕದ್ದು.