(1) ಈ ಕೆಳಗಿನ ಪಟ್ಟಿಯಲ್ಲಿ ಹೇಳಲಾದ ಕನಿಷ್ಠ ವರ್ಷಗಳ ನಿರಂತರ ಸೇವೆಯನ್ನು ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರಿ ಸಂಸ್ಥೆಯಲ್ಲಿ ಸಲ್ಲಿಸಿದ ಒಬ್ಬ ವೈದ್ಯಾಧಿಕಾರಿ ಅಥವಾ ಇತರ ಸಿಬ್ಬಂದಿಯನ್ನು ಅದೇ ಪ್ರದೇಶ ಅಥವಾ ವಲಯದ ಅಥವಾ ಇತರ ವಲಯ ಅಥವಾ ಪ್ರದೇಶದ ಸರ್ಕಾರಿ ಆಸ್ಪತ್ರೆ ಅಥವಾ ಸಂಸ್ಥೆಗೆ ವರ್ಗಾವಣೆ ಮಾಡಬಹುದು.
| 8). ಸಂ | ಹುದ್ದೆಗಳ ವರ್ಗಗಳು | ಒಂದು ಸ್ಥಳದಲ್ಲಿನ ಕನಿಷ್ಠ ಉಳಿಕೆ |
| 1 | ಗ್ರೂಪ್-ಎ ಹುದ್ದೆಗಳನ್ನು ಹೊಂದಿರುವ ಸರ್ಕಾರಿ ನೌಕರರು | ಮೂರು ವರ್ಷಗಳು |
| 2 | ಗ್ರೂಪ್-ಬಿ ಹುದ್ದೆಗಳನ್ನು ಹೊಂದಿರುವ ಸರ್ಕಾರಿ ನೌಕರರು | ನಾಲ್ಕು ವರ್ಷಗಳು |
| 3. | ಗ್ರೂಪ್-ಸಿ ಹುದ್ದೆಗಳನ್ನು ಹೊಂದಿರುವ ಸರ್ಕಾರಿ ನೌಕರರು | ಐದು ವರ್ಷಗಳು |
| 4 | ಗ್ರೂಪ್-ಡಿ ಹುದ್ದೆಗಳನ್ನು ಹೊಂದಿರುವ ಸರ್ಕಾರಿ ನೌಕರರು | ಏಳು ವರ್ಷಗಳು |
(2) ಅಧಿನಿಯಮದ ಪ್ರಕರಣ 6 ರ 1) ನೇ ಉಪ ಪ್ರಕರಣದ ಅಡಿಯಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ವರ್ಗಾವಣೆಗೆ ಅರ್ಹರಾದ ಕನಿಷ್ಠ ನಿಗಧಿತ ಅವಧಿಯನ್ನು ಪೂರೈಸಿದ ಮತ್ತು ಪ್ರಸ್ತುತ ಹುದೆ ಯಲ್ಲಿ ಆಸ್ಪತ್ರೆ ಅಥವಾ ಸಂಸ್ಥೆಯಲ್ಲಿ ಅಥವಾ ಕಛೇರಿಯಲ್ಲಿ ಹೆಚ್ಚು ಕಾಲಾವಧಿಯಿಂದ ಇರುವ ವೈದ್ಯಾಧಿಕಾರಿಗಳು ಅಥವಾ ಸಿಬ್ಬಂದಿಯ ಪಟ್ಟಿಯನ್ನು ಆಯ್ಕೆ ಮೂಲಕ ತಯಾರಿಸತಕ್ಕದ್ದು. ಇದು ವರ್ಗಾವಣೆಗೆ ನಿಯಮಗಳಲ್ಲಿ ನಿಗಧಿಪಡಿಸಿದ ಗರಿಷ್ಠ ಮಿತಿಗೆ ಒಳಪಟ್ಟಿರತಕ್ಕದ್ದು.
ಷರಂ೦ತು ವಲಯ ಎನಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಆ ವಲಯದಲ್ಲಿ ಪ್ರಸ್ತತ ಹುದ್ದೆಯಲ್ಲಿ ಸಲ್ಲಿಸಿದ ನಿರಂತರ ಸೇವೆಯ ಬದಲಾಗಿ, ಆ ವಲಯದಲ್ಲಿ ವಿವಿಧ ಹುದ್ದೆಗಳಲ್ಲಿ ವಿರಂತರವಾಗಿ ಸಲ್ಲಿಸಿದ ಎಲ್ಲಾ ಸೇವೆಯನ್ನು ಈ ನಿಯಮದ ಉದ್ದೇಶಕ್ಕಾಗಿ ಕೂಡಿಸತಕ್ಕದ್ದು.
(3) . ಅಧಿನಿಯಮದ ಪ್ರಕರಣ 6 ರ (1) ಉಪ ಪ್ರಕರಣದಡಿಯಲ್ಲಿ ಕೋರಿಕೆ ವರ್ಗಾವಣೆಗಳು ಅಥವಾ ವರ್ಗಾವಣೆಯಿಂದ ವಿನಾಯಿತಿ ಈ ಕೆಳಗಿನ ಪಟ್ಟೆಯ ಕಾಲಂ (2) ರಲ್ಲಿ ಹೇಳಲಾದ ವಿಶೇಷ ವರ್ಗದ ವ್ಯಕ್ತಿಗಳು ಕಾಲಂ (3) ರಲ್ಲಿ ಹೇಳಲಾದ ಪೂರಕ ದಾಖಲಾತಿಗಳೊಂದಿಗೆ ಸಲ್ಲಿಸತಕ್ಕದ್ದು.
| ಸ | ವಿನಾಯಿತಿ ಅಥವಾ ಅದ್ಯತೆಯ ಕೋರಿಕೆ | ಪೂರಕ ದಾಖಲಾತಿ |
| 1 | ಗಂಭೀರ ಕಾಯಿಲೆ ಅಥವಾ ಮಾರಣಾಂ೦ತಿಕ ಕಾಯಿಲೆ ಹೊಂದಿರುವ ವೈದ್ಯಾಧಿಕಾರಿ ಅಥವಾ ಸಿಬ್ಬಂದಿಗೆ ಅಥವಾ ಅವರ ಸಂಗಾತಿ ಅಥವಾ ಕರ್ನಾಟಕ ಸಿವಿಲ್. ಸೇವೆ. (ವೈದ್ಯಕೀಯ ಹಾಜರಾತಿ) ನಿಯಮಗಳು ಆಡಿಯಲ್ಲಿ ಘೋಷಿಸಲಾದ ಮಗು ಅಂತಹ ವೈದ್ಯಾಧಿಕಾರಿ ಅಥವಾ ಸಿಬ್ಬಂದಿ ಕೆಲಸ ಮಾಡುವ ಸ್ಥಳದಲ್ಲಿ ಸದರಿ ಖಾಯಿಲೆಗೆ ವೈದ್ಯೋಪಚಾರ ಲಭ್ಯವಿಲ್ಲದ ಸಂದರ್ಭದಲ್ಲಿ ವೈದ್ಯೋಪಚಾರ ಸಿಗುವ ಸ್ಥಳಕ್ಕೆ ವರ್ಗಾವಣೆ ಅಗತ್ಯ ಇದ್ದದ್ಲಿ. | ಜಿಲ್ಲಾ ಆರೋಗ್ಯ ಮಂಡಳಿಯಿಂದ ಪ್ರಮಾಣ ಪತ್ರ |
| 2 | ಒಂದು ವರ್ಷಕಿಂತ ಕಡಿಮೆ ವಯಸ್ಸಿನ ಮಗು ಇರುವ ಅಥವಾ ಗರ್ಭಿಣಿ ಮಹಿಳಾ ವೈದ್ಯಾಧಿಕಾರಿ ಅಥವಾ ಸಿಬ್ಬಂದಿ | ಜಿಲ್ಲಾ ಆರೋಗ್ಯ ಮಂಡಳಿಯಿಂದ ಪ್ರಮಾಣ ಪತ್ರ |
| 3 | 2 ವರ್ಷಗಳ ಒಳಗೆ ವಯೋನಿವೃತ್ತಿ ಆಗಲಿರುವ ವೈದ್ಯಾಧಿಕಾರಿ ಅಥವಾ ಸಿಬ್ಬಂದಿ ವರ್ಗದವರು | ವೇತನ ಪಾವತಿಸುವ ಅಧಿಕಾರಿಯಿಂದ ಪಡೆದ ಪ್ರಮಾಣ ಪತ್ರ |
| 4 | ಶೇ.40 ಅಥವಾ ಅದ್ದಕಿಂತ ಹೆಚ್ಚು ಅಂಗವೈಕಲ್ಯವುಳ್ಳ ವೈದ್ಯಾಧಿಕಾರಿ ಅಥವಾ ಸಿಬ್ಬಂದಿ ಅಥವಾ ಪತ್ನಿ ಅಥವಾ ಮಕ್ಕಳು | ಜಿಲ್ಲಾ ಆರೋಗ್ಯ ಮಂಡಳಿಯಿಂದ ಪ್ರಮಾಣ ಪತ್ರ |
| 5 | 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳುಳ್ಳ ವಿಧವೆ ಮತ್ತು ವಿಧುರ ಅಥವಾ ಖವಿಚ್ನೇಧಿತ ವೈದ್ಯಾಧಿಕಾರಿ ಅಥವಾ ಸಿಬ್ಬಂದಿ | ಸಂಗಾತಿಯ ಮರಣದ ಪ್ರಮಾಣ , ಪತ್ರ ಹಾಗೂ ಮರು ವಿವಾಹ ಅಗದಿರುವ ಬಗ್ಗೆ |
| ನ್ಯಾಯಾಲಯದ ಪ್ರಮಾಣ ಪತ್ರ. ಆದರೆ ನೋಟರಿ ಮುಂದೆ ಮಾಡಿದ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಆದರೆ ತಾತ್ಕಾಲಿಕ. ಪಟ್ಟಿಯ ಮೇಲೆ ಅಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನಾಂಕದ ವೇಳೆಗೆ ನ್ಯಾಯಾಲಯದಿಂದ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು. | ||
| 6 | ಕೇಂದ್ರ ಸರ್ಕಾರಿ ನೌಕರ ಅಥವಾ ರಾಜ್ಯ ಸರ್ಕಾರಿ ನೌಕರ ಅಥವಾ ಅನುದಾವಿತ ಸಂಸ್ಮೆಯ ನೌಕರರನ್ನು ವಿವಾಹವಾದ ವೈದ್ಯಾಧಿಕಾರಿ ಅಥವಾ ಸಿಬ್ಬಂದಿ | ಸಂಗಾತಿಯ ನೇಮಕಾತಿ ಪ್ರಾಧಿಕಾರ ಅಥವಾ ವೇತನ ವಿತರಣಾ ಅಧಿಕಾರಿ ಪ್ರಮಾಣ ಪತ್ರ. |
ಮತ್ತು ಆದರೆ ಅದ್ಯತೆಯನ್ನು ಮೇಲಿನ ಪಟ್ಟಿಯಲ್ಲಿನ ಆದ್ಯತೆಯಂತೆಯೇ ನೀಡತಕ್ಟದ್ದು.
ಮತ್ತು ಪರಂತು ವಿಶೇಷ ವರ್ಗದ ವ್ಯಕ್ತಿಗಳು ವರ್ಗಾವಣೆಗೆ ಕೋರಿಕೆ ಸಲ್ಲಿಸಿದ್ದಲ್ಲಿ ಸೇವೆಯಲ್ಲಿ ಒಂದು ಬಾರಿಗೆ ಮಾತ್ರ ನಿಯಮ 6 (1) ರಲ್ಲಿನ ಒಂದು ಸ್ಮಳದಲ್ಲಿ ಕನಿಷ್ಠ ಸೇವೆ ಸಲ್ಲಿಸಿರಬೇಕೆಂಬುದು ಅನ್ವಯಿಸುವುದಿಲ್ಲ.
(4) ಪ್ರಕರಣ 6 ರ (1) ನೇ ಉಪ ಪ್ರಕರಣದ ಆಡಿಯಲ್ಲಿ ವರ್ಗಾವಣೆಯ ಪ್ರಕ್ರಿಯೆಯು ಸರ್ಕಾರವು ಅನುಮೋದಿಸಿ ಅಧಿಸೂಚಿಸಿದ ಘಟನೆಗಳ ಕ್ಯಾಲೆಂಡರ್ ಅನುಗುಣವಾಗಿ ಈ ಕೆಳ?ಿನಂತೆ ಇರತಕ್ಕದ್ದು:-
(ಎ) AMPS ಕಾಲವಧಿಯೊಳಗೆ ನಿಯಮ 6 (3) ರ ಆಡಿಯಲ್ಲಿ ವರ್ಗಾವಣೆಗೆ ಅರ್ಜಿಗಳನ್ನು ಕರೆಯುವುದು:
(Q) ಅರ್ಜಿಗಳ ಪರಿಶೀಲನೆ;
(ಸಿ) ನಿಯಮ 6 (2) ರ ಅಡಿಯಲ್ಲಿ ಮತ್ತು ನಿಯಮ 9 ರಡಿಯಲ್ಲಿ ತಾತ್ಕಾಲಿಕ ಆದ್ಯತಾ ಪಟ್ಟಿಯನ್ನು ಪ್ರಕಟಿಸುವುದು. ಮತ್ತು ಉಪನಿಯಮ (0) ಅಡಿಯಲ್ಲಿ ಅಂ೦ತಿಮಗೊಳಿಸಲಾದ ಅರ್ಜಿಗಳನ್ನು ಸೇರಿಸಿ ಮತ್ತೊಮ್ಮೆ ಪ್ರಕಟಿಸುವುದು;
(ಡಿ) ಆಕ್ಷೇಪಣೆಗಳನ್ನು ಸಲ್ಲಿಸುವುದು:
(ಇ) ಅಂತಿಮ ಆದ್ಯತಾ ಪಟ್ಟಿಯನ್ನು ಪ್ರಕಟಿಸುವುದು:
(ಎಫ್) ಕೌನ್ಸಿಲಿಂಗ್ ಮಾಡುವುದು