(1) ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ಪ್ರಾರಂಭಿಕ ನೇಮಕಾತಿ, ಮುಂಬಡ್ತಿ ಮತ್ತು ವರ್ಗಾವಣೆಗಳನ್ನು ಗಣಕಿಕೃತ ಕೌನ್ಸಿಲಿಂಗ್ ಮೂಲಕ ವರ್ಗಾವಣೆಯನ್ನು ಮಾಡತಕ್ಕದ್ದು, (2 ಎಲ್ಲಾ ವರ್ಗಾವಣೆಗಳನ್ನು ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್ - ಮೇ ತಿಂಗಳಲ್ಲಿ ಮಾಡತಕ್ಕದ್ದು, ಆದರೆ ಸರ್ಕಾರವು ಸಕಾರಣಗಳಿಗೆ ಈ ಅವಧಿಯನ್ನು ವಿಸ್ತರಿಸಬಹುದು.
(3) . ಸರ್ಕಾರವು ಸಾರ್ವಜನಿಕ ಹಿತದೃಷ್ಠಿಯಿಂದ ತುರ್ತು ಆಡಳಿತ್ಕಾತಕ ಹಿತದೃಷ್ಠಿಯಿಂದ ವರ್ಷದ ಯಾವುದೇ ಸಂದರ್ಭದಲ್ಲಿ ಒಂದೇ ಸ್ಮಾನದಲ್ಲಿ ಹೆಚ್ಚು ವರ್ಷ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಕಳಕಂಡ ಷರತ್ತುಗಳಿಗೊಳಪಟ್ಟು ವರ್ಗಾವಣೆ ಮಾಡಬಹುದು;-
(ಎ) ಅಂತಹ ವರ್ಗಾವಣೆ ತೀವ್ರ ಅಗತ್ಯವಿರುವ ಖಾಲಿ ಹುದ್ದೆಗಳಿಗೆ ಮಾತ್ರ ಮಾಡತಕ್ಕದ್ದು.
(ಬಿ) ಪ್ರಕರಣ 6) ರಡಿಯಲ್ಲಿನ ನಿಗಧಿಪಡಿಸಿದ FAW, ಅವಧಿಯ ಷರತ್ತು ಪೂರೈಸಿರುವ ಎಲ್ಲಾ ವ್ಯಕ್ತಿಗಳಿಗೆ ತೀವ್ರ ಅಗತ್ಯವಿರುವ ಖಾಲಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿ ಖಾಲಿ ಹುದ್ದೆಗಳಿಗೆ ವರ್ಗಾವಣೆ ಮಾಡಬಹುದು.
ಪರಂತು ನಿಯಮ 6 (1 ರಡಿಯಲ್ಲಿ ತಯಾರಿಸಿದ ಪಟ್ಟಿಯಲ್ಲಿ ಹೆಚ್ಚು ಕಾಲಾವಧಿ ಸೇವೆ ಸಲ್ಲಿಸಿದವರು ಅಂತಹ ಹುದ್ದೆಗಳನ್ನು ಆಯ್ಕೆ ಮಾಡದಿದ್ದಲ್ಲಿ ಅದೇ ಜಿಲ್ಲೆಯ ಹೆಚ್ಚು ಸೇವೆ ಸಲ್ಲಿಸಿದ ವ್ಯಕ್ತಿಯಿಂದ ಹಾಗೂ ಅಂತಹ ವ್ಯಕ್ತಿ ಯಾರು ಇಲ್ಲದೆ ಇದ್ದಲ್ಲಿ ಅದೇ ವಲಯದಿಂದ ಹೆಚ್ಚು ಸೇವೆ ಸಲ್ಲಿಸಿದ ವ್ಯಕ್ತಿಯಿಂದ ಹಾಗೂ ಅಂತಹ ವ್ಯಕ್ತಿಯು ಲಭ್ಯವಿಲ್ಲದಿದ್ದಲ್ಲಿ ರಾಜ್ಯದ ಪಟ್ಟಿಯಿಂದ ತುಂಬತಕ್ಕದ್ದು, (ಸಿ). ಉಪ ನಿಯಮ 3 (ಬಿ) ಉದ್ದೇಶಕ್ಕಾಗಿ ಪ್ರಕರಣ 6 ರ ಉಪ ಪ್ರಕರಣ (3) ರಡಿಯಲ್ಲಿ ತಯಾರಿಸಲಾದ ಪಟ್ಟೆಯು ವಿಶೇಷ ವರ್ಗದವರಿಗೆ ನೀಡಲಾದ ಷರತ್ತು ಮತ್ತು ವಿನಾಯಿತಿಗಳಿಗೆ ಒಳಪಟ್ಟಿರತಕ್ಕದ್ದು.
(ಡಿ) ಅಂತಹ ವರ್ಗಾವಣೆಯು ಮತ್ತೊಂದು ತೀವ್ರ ಅಗತ್ಯವಿರುವ ಖಾಲಿ ಹುದ್ದೆಯನ್ನು ಸೃಷ್ಠಿಸಬಾರದು.
(4) ಪ್ರೊಬೇಷನರಿ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸದೆ. ಇರುವಂತ ಸಿಬ್ಬಂದಿಯನ್ನು ವರ್ಗಾವಣೆಗೆ ಪರಿಗಣಿಸತಕ್ಕದ್ದಲ್ಲ.
(5) ಗುತ್ತಿಗೆ ಅಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಈ ನಿಯಮಗಳ ಆಡಿಯಲ್ಲಿ ವರ್ಗಾವಣೆಗೆ ಪರಿಗಣಿಸತಕ್ಕದಲ್ಲ.
- ಪ್ರತಿ ವೃಂದದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆಗಳು ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಬಲದ ಶೇಕಡಾ 15 ರಷ್ಟು ಮೀರತಕ್ಕದಲ್ಲ ಮುಂದುವರೆದು ಈ ಶೇಕಡಾ 15 ರೊಳಗೆ ಕೋರಿಕೆ ವರ್ಗಾವಣೆಗಳು ನಿಯಮ 6) ರಡಿಯಲ್ಲಿ, ಅಂದರೆ ಮಾರಾಣಾಂತಿಕ ಖಾಯಿಲೆಗಳನ್ನು ಹೊರತುಪಡಿಸಿ, ಒಂದು ವರ್ಷದಲ್ಲಿ ಶೇಕಡಾ 5 ರಷ್ಟು ಮೀರತಕ್ಕದಲ್ಲ.
(7) ಆಡಳಿತ್ಕಾತಕ ಹುದ್ದೆಗಳು ಸಮಾಲೋಚನೆ ಮೂಲಕ ತುಂಬಲು ಅಧಿನಿಯಮದಲ್ಲಿ ಅವಕಾಶವಿಲ್ಲ. ಆದರೆ ಅಂತಹ ಆಡಳಿತ್ಕಾತಕ ಹುದ್ದೆಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಶೇಷ ಮಾನದಂ೦ಂಡಕ್ಕೆ ಒಳಪಟ್ಟು ಸಮಾಲೋಚನೆ ಮೂಲಕ ತುಂಬತಕ್ಕದ್ದು.
(8) ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿ ಆ ವಲಯದಲ್ಲಿ ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿದ್ದಲ್ಲಿ ಮಾತ್ರ ವರ್ಗಾವಣೆಗೆ ಅರ್ಹರಾಗುತ್ತಾರೆ DOW ಷರತ್ತು ಪೂರೈಸಬೇಕು ಹಾಗೂ ಈ ಅಧಿನಿಯಮದ ಮತ್ತು ನಿಯಮಗಳ ಇತರ ಷರತ್ತುಗಳನ್ನು ಪೂರೈಸತಕ್ಕದ್ದು.
(9). ಮಹತ್ವದ ದಂಡ ಹಾಗೂ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ವೈದ್ಯಾಧಿಕಾರಿ ಅಥವಾ ಸಿಬ್ಬಂದಿ ಅವರು ಕಾರ್ಯನಿರ್ವಹಿಸುತ್ತಿರುವ ವಲಯ ಅಥವಾ ಪ್ರದೇಶಕ್ಕಿಂತ ಹೆಚ್ಚಿನ ಹಂತದ ವಲಯ ಅಥವಾ ಪ್ರದೇಶಕ್ಕೆ ವರ್ಗಾವಣೆ ಮಾಡತಕ್ಕದಲ್ಲ. 11. ಗಣಕೀಕೃತ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗಳ ಪ್ರಕ್ರಿಯೆ: ಅದ್ಯತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಇಲಾಖಾ ವೈಬ್ಸೈಟ್ ಮತ್ತು ಪತ್ರಿಕಾ ಪ್ರಕಟಣೆಗಳ ಮೂಲಕ ಕೌನ್ಸಿಲಿಂಗ್ಗೆ ನಿಗದಿಪಡಿಸಿದ ದಿನಾಂಕಗಳನ್ನು ತಿಳಿಸತಕ್ಕದ್ದು. ಕೌನ್ಸಿಲಿಂಗ್ ದಿನಾಂಕದಂದು ಆದ್ಯತಾ ಸ್ರಮಾನುಸಾರ ಅಭ್ಯರ್ಥಿಗಳನ್ನು ಕರೆಯತಕ್ಕದ್ದು ಮತ್ತು ಗಣಕಯಂತ್ರದ ಪರದೆಯ ಮೇಲೆ ಪ್ರದರ್ಶಿತವಾಗಿರುವಂತೆ ಅಂಥ ಅವಧಿಯಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲು ತಿಳಿಸತಕ್ಕದ್ದು. ಆ ಸೂಕ್ತ ಸಮಯದಲ್ಲಿ ಆತನ ಪಾಳಿ ಅನುಸಾರ ತಮ್ಮ ವಿರ್ಧಾರವನ್ನು ತೆಗೆದುಕೊಳ್ಳಲು ಅಭ್ಯರ್ಥಿ ಐವಿಫಲನಾದರೆ... ಆತನ ಕ್ಲೇಮು ಮುಕ್ತಾಯವಾಗತಕ್ಕದ್ದು ಮತ್ತು ಹಾಜರಾದ ನಂತರದ ಅಭ್ಯರ್ಥಿಯನ್ನು ಕೌನ್ಸಿಲಿಂಗ್ ಕರೆಯತಕ್ಕದ್ದು. ಕೌನ್ಸಿಲಿಂಗ್ ಗೆ. ಹಾಜರಾಗಲು ಅಭ್ಯರ್ಥಿಯ ಕ್ಲೇಮು ಮುಕ್ತಾಯವಾದ ಸಂದರ್ಭದಲ್ಲಿ ಅಂಥ ಅಭ್ಯರ್ಥಿಯನ್ನು Fn) CON, ಕೊನೆ ಅವಧಿಯಲ್ಲಿ ಅಥವಾ ದಿನದ ಕೊನೆಯಲ್ಲಿ ಇದರಲ್ಲಿ ಯಾವುದೋ ಮೊದಲೊ ಅದರಂ೦ತೆ ಅಭ್ಯರ್ಥಿಯನ್ನು ಕೌನ್ಸಿಲಿಂಗ್ಗೆ ಪರಿಗಣಿಸಬಹುದು. ಅಭ್ಯರ್ಥಿಯು ಕೌನ್ಸಿಲಿಂಗ್ಗೆ ಹಾಜರಾಗಲು ವಿಫಲನಾಧ ಸಂದರ್ಭದಲ್ಲಿ ಮತ್ತು ಕೌನ್ಸಿಲಿಂಗ್ ಸಮಯದಲ್ಲಿ ಅಭ್ಯರ್ಥಿಯು ಆಯ್ಕೆ ಮಾಡಿಕೊಳ್ಳಲು ವಿಫಲನಾದ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರವು ತನ್ತಾನಾಗಿಯೇ ಪರಿಗಣಿಸಬಹುದು ಮತ್ತು ದಿನದ ಮುಕ್ತಾಯದ ಅವಧಿಯಲ್ಲಿ ಖಾಲಿ ಸ್ಮಾನಗಳನ್ನು ಹಂಚಬಹುದು.