ವರ್ಗಾವಣೆ ಮೂಲಕ ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳ ಪಟ್ನೆಯನ್ನು ಇಲಾಖಾ ವೈಬ್ಸೈಟ್ನಲ್ಲಿ ಪ್ರಕಟಿಸತಕ್ಕದ್ದು. ಖಾಲಿ ಹುದ್ದೆಗಳ ಪಟ್ಟಿಯಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳು ಹಾಗೂ ಗುತ್ತಿಗೆ ಅಧಾರದ ಮೇಲಿನ ಮತ್ತು ಕಡ್ಡಾಯ ವೈದ್ಯಕೀಯ ಸೇವೆಯ ವೈದ್ಯಾಧಿಕಾರಿ ಹಾಗೂ ಇತರ ಸಿಬ್ಬಂದಿಯಿಂದ ಭರ್ತಿಯಾಗಿದ್ದು, ಅಂತಿಮ ವರ್ಗಾವಣೆ ಪಟ್ಟಿಯಲ್ಲಿ ವರ್ಗಾವಣೆಯಾಗಿ ಖಾಲಿ ಆಗಬಹುದೆಂದು ಭಾವಿಸಬಹುದಾದ ಹುದ್ದೆಗಳು, ನಿಯಮ 6) ರಡಿಯಲ್ಲಿನ 1 ರಿಂದ 3 ರವರೆಗಿನ ವಿಶೇಷ ವರ್ಗದವರನ್ನು ಹೊರತುಪಡಿಸಿ (ಅಂತಹ ವಿಶೇಷ ವರ್ಗದ ವ್ಯಕ್ತಿಗಳು ಅದ್ಯತೆಯ ಪಟ್ಟಿಯಲ್ಲಿ ಮೇಲೆ ಇದ್ದು ಅವರಿಗೆ ವರ್ಗಾವಣೆ ಕೋರಲಾದ ಹುದ್ದೆ ಲಭ್ಯವಾದಲ್ಲಿ ಮಾತ್ರ ಅವುಗಳನ್ನು ಖಾಲಿ ಹುದ್ದೆಯೆಂದು ಪರಿಗಣಿಸತಕ್ಕದ್ದು) ಕೌನ್ಸಿಲಿಂಗ್ ಮೂಲಕ ಖಾಲಿ ಹುದ್ದೆಗಳನ್ನು ನೀಡುವಾಗ ತೀವ್ರ ಅಗತ್ಯವಿರುವ ಖಾಲಿ ಹುದ್ದೆಗಳನ್ನು ಇತರ ತೀವ್ರ ಅಗತ್ಯವಿಲ್ಲದ ಹುದ್ದೆಗಳಿಗಿಂತ ಆದ್ಯತೆಯ ಮೇಲೆ ನೀಡತಕ್ಕದ್ದು.
ಮತ್ತು ಪರಂತು ಗುತ್ತಿಗೆ ಅಧಾರದ ಮೇಲಿನ ವೈದ್ಯಾಧಿಕಾರಿಗಳಿಂದ ತುಂಬಲ್ಬಟ್ಟ ಹುದ್ದೆಗಳನ್ನು ತೀವ್ರ ಅಗತ್ಯವಿರುವ ಖಾಲಿ ಹುದ್ದೆಗಳು ಭರ್ತಿಯಾಗಿದೆ ಎಂದು ಪರಿಗಣಿಸತಕ್ಕದ್ದು.
ಮತ್ತು ಪರಂತು ಎಲ್ಲಿಯವರೆಗೆ ವರ್ಗಾವಣೆ ಪಟ್ಟಿಯಲ್ಲಿ ವೈದ್ಯಾಧಿಕಾರಿಗಳು ಅಥವಾ ಇತರ ಸಿಬ್ಬಂದಿಯು ತುರ್ತಾಗಿ ತುಂಬಬೇಕಾದ ಹುದ್ದೆಗಳಿಗಿಂತ ಹೆಚ್ಚಾಗಿದ್ದಲ್ಲಿ ಅಲ್ಲಿಯವರೆಗೂ ಅದ್ಯತೆಯ ಪಟ್ಟಿಯಲ್ಲಿ ಮೇಲಿರುವವರಿಗೆ ತೀವ್ರ ಅಗತ್ಯವಿಲ್ಲದ ಖಾಲಿ ಹುದ್ದೆಗಳನ್ನು ತೋರಿಸಬಹುದಾಗಿದೆ.
ಮತ್ತು ಪರಂತು ವಿಶೇಷ ವರ್ಗದ 1 ನೇ ವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ತೀವ್ರ ಅಗತ್ಯವಿರುವ ಹುದ್ದೆಗಳಲ್ಲಿ ಖಾಲಿ ಹುದ್ದೆ ಲಭ್ಯವಿಲ್ಲದಿದ್ದಲ್ಲಿ ತೀವ್ರ ಅಗತ್ಯವಿಲ್ಲದ ಖಾಲಿ ಹುದ್ದೆಗಳನ್ನು ನೀಡಬಹುದು.