(1) ಈ ಅಧ್ಯಾದೇಶವನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಧ್ಯಾದೇಶ, 2009 ಎಂದು ಕರೆಯತಕ್ಕದ್ದು.
(2) ಇದು, 22 ನೇ ನವಂಬರ್ 2008 ರಿಂದ ಜಾರಿಗೆ ಬಂದಿದೆ ಎಂದು ಭಾವಿಸತಕ್ಕದ್ದು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಧ್ಯಾದೇಶ, 2009, Horticulture Department
2009 · PDF page 4
Hover any section to copy its link or text, ask Copilot about it, or bookmark it.
ಈ ಅಧ್ಯಾದೇಶದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(1) ‘‘ವಿದ್ಯಾವಿಷಯಕ ಪರಿಷತ್ತು (ಅಕಾಡೆಮಿಕ್ ಕೌನ್ಸಿಲ್)'' ಎಂದರೆ, ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತು;
(2) ‘‘ಸಂಯೋಜಿತ ಕಾಲೇಜು'' ಎಂದರೆ, ವಿಶ್ವವಿದ್ಯಾಲಯದ ಅಧಿಕಾರ ಕ್ಷೇತ್ರದಲ್ಲಿ ಇರುವ ಮತ್ತು ನಿಯಮಿಸಲಾದ ಶಾಸನಗಳಿಗೆ ಅನುಸಾರವಾಗಿ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾದ ಮತ್ತು ವಿಶ್ವವಿದ್ಯಾಲಯದ ಪದವಿಗಳು, ಡಿಪ್ಲೋಮಾಗಳು ಅಥವಾ ಇತರ ಶೈಕ್ಷಣಿಕ ಪ್ರಶಸ್ತಿಗಳಿಗಾಗಿ ನಡೆಸುವ ಪರೀಕ್ಷೆಗಳಿಗೆ ಪ್ರವೇಶ ಪಡೆಯಲು ಅವಶ್ಯವಾದ ವ್ಯಾಸಂಗ ಕ್ರಮಗಳನ್ನು ಒದಗಿಸುವ ಕಾಲೇಜು ಅಥವಾ ಸಂಸ್ಥೆ;
(3) ‘‘ಪ್ರಾಧಿಕಾರ'' ಎಂದರೆ, 12ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಲಾದ ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರ;
(4) ‘‘ಮಂಡಳಿ'' ಎಂದರೆ, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ;
(5) "ಅಧ್ಯಯನ ಮಂಡಳಿ" ಎಂದರೆ ಫ್ಯಾಕಲ್ಟಿ ಹಂತದಲ್ಲಿ ವಿದ್ಯಾ ವ್ಯವಹಾರಗಳ ಸಮಿತಿ;
(6) "ಕ್ಯಾಂಪಸ್" ಎಂದರೆ ತೋಟಗಾರಿಕೆಗೆ ಸಂಬಂಧಿಸಿದಂತೆ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗೆ ಸಂಬಂಧಿಸಿದ ಕಾಲೇಜು, ವಿದ್ಯಾರ್ಥಿನಿಲಯಗಳು, ಸಿಬ್ಬಂದಿ ನಿವಾಸಗಳು, ಹೊಲಭೂಮಿಗಳು, ಮತ್ತಿತರ ಸೊತ್ತುಗಳನ್ನು ಒಳಗೊಳ್ಳುವ ಒಂದು ಆವರಣ;
(7) ‘‘ಕಾಲೇಜು'' ಎಂದರೆ, ವಿಶ್ವವಿದ್ಯಾಲಯದ ನೇರ ಆಡಳಿತದ ಅಡಿಯಲ್ಲಿ ಬರುವ ಮತ್ತು ಅದರ ವ್ಯವಸ್ಥಾಪನೆ ಅಡಿಯಲ್ಲಿ ಬರುವ ಕೇಂದ್ರ ಕಾರ್ಯಸ್ಥಾನದಲ್ಲಿ, ಕ್ಯಾಂಪಸ್ನಲ್ಲಿ ಅಥವಾ ಯಾವುದೇ ಇತರ ಸ್ಥಳದಲ್ಲಿ ಇರುವಂಥ ಘಟಕ ಕಾಲೇಜು;
(8) "ಕುಲಾಧಿಪತಿ" ಎಂದರೆ ವಿಶ್ವವಿದ್ಯಾಲಯದ ಕುಲಾಧಿಪತಿ;
(9) " ಲೆಕ್ಕ ನಿಯಂತ್ರಕರು " ಎಂದರೆ ವಿಶ್ವವಿದ್ಯಾಲಯದ ಲೆಕ್ಕ ನಿಯಂತ್ರಕರು;
(10) ‘‘ಡೀನ್'' ಎಂದರೆ, ವಿಶ್ವವಿದ್ಯಾಲಯದ ಘಟಕ ಕಾಲೇಜಿನ ಅಥವಾ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ;
(11) "ಡೀನ್ - ವಿದ್ಯಾರ್ಥಿ ಕ್ಷೇಮಾಭಿವೃದ್ಧಿ" ಎಂದರೆ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ, ಸಲಹೆ ನೀಡಿಕೆ ಮತ್ತು ವಿದ್ಯಾರ್ಥಿಗಳ ಉದ್ಯೋಗ ನಿಯೋಜನೆಯ ಡೀನ್;
(12) "ನಿರ್ದೇಶಕ" ಎಂಬುದು ವಿದ್ಯಾ ನಿರ್ದೇಶಕರು, ಸಂಶೋಧನಾ ನಿರ್ದೇಶಕರು ಮತ್ತು ವಿಸ್ತರಣಾ ನಿರ್ದೇಶಕರನ್ನು ಒಳಗೊಂಡಿರುತ್ತದೆ;
(13) "ದೂರ ಶಿಕ್ಷಣ" ಎಂದರೆ ವ್ಯಾಸಂಗ ಕ್ರಮಗಳನ್ನು ಖುದ್ದು ಹಾಜರಾಗಿ ಕಲಿಯಲಾಗದ ಭೌತಿಕವಾಗಿ ಬೋಧನಾ ಸ್ಥಳದಿಂದ ದೂರ ಇರುವಂಥ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ತಲುಪಿಸುವ ಉದ್ದೇಶವುಳ್ಳ ಶಿಕ್ಷಣ ಕ್ಷೇತ್ರ. ಇಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಮಗೆ ಅನುಕೂಲವಾದಂಥ ಸಮಯದಲ್ಲಿ ಮುದ್ರಿತ/ವಿದ್ಯುನ್ಮಾನ/ಅಥವಾ ಇತರ ತಾಂತ್ರಿಕ ಮಾಧ್ಯಮಗಳ ಮೂಲಕ ವಿಚಾರ ವಿನಿಮಯ ಮಾಡಿ ಪರಸ್ಪರ ಸಂವಾದ ನಡೆಸಬಹುದು;
(14) "ವಿಸ್ತರಣಾ ಶಿಕ್ಷಣ ಪರಿಷತ್ತು" ಎಂದರೆ, ವಿಶ್ವವಿದ್ಯಾನಿಲಯದ ವಿಸ್ತರಣಾ ಶಿಕ್ಷಣ ಪರಿಷತ್ತು;
(15) "ವಿಸ್ತರಣಾ ಶಿಕ್ಷಣ" ಎಂದರೆ, ತೋಟಗಾರಿಕೆ ಮತ್ತು ಸಂಬಂಧಪಟ್ಟ ವಿಜ್ಞಾನಗಳು ಹಾಗೂ ತೋಟಗಾರಿಕೆ ಉತ್ಪಾದನೆಗಳು ಮತ್ತು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ವೈಜ್ಞಾನಿಕ ತಂತ್ರಜ್ಞಾನದ ವಿವಿಧ ಹಂತಗಳಿಗೆ ಸಂಬಂಧಪಟ್ಟ ರೈತರು, ಗೃಹಿಣಿಯರು, ಉದ್ಯಮಿಗಳು ಮತ್ತಿತರ ಸಮೂಹಗಳಿಗೆ ತರಬೇತಿಯನ್ನು ನೀಡುವುದಕ್ಕಾಗಿ ಸಂಬಂಧಪಟ್ಟ ಶೈಕ್ಷಣಿಕ ಚಟುವಟಿಕೆಗಳು ಮತ್ತು ಇದು ವಿಶ್ವವಿದ್ಯಾಲಯದ ವಿಭಾಗಗಳು, ವಿಜ್ಞಾನ ಕೇಂದ್ರಗಳು ಮತ್ತು ಅದಕ್ಕೆ ಸಂಯೋಜಿತವಾದ ಕಾಲೇಜುಗಳ ಮೂಲಕ ಹೊಸ ಹೊಸ ತಂತ್ರಜ್ಞಾನಗಳು ಮತ್ತು ಸಂಶೋಧನೆಗಳನ್ನು ಹೊಲಗಳು ಮತ್ತು ಹೊಲಮನೆಗಳ ಬಾಗಿಲುಗಳಿಗೆ ಕೊಂಡೊಯ್ಯುವಂಥ ಪ್ರಾತ್ಯಕ್ಷಿಕೆಗಳನ್ನೂ ಒಳಗೊಳ್ಳುತ್ತದೆ;
(16) ‘‘ಫ್ಯಾಕಲ್ಟಿ'' ಎಂದರೆ, ಅಧ್ಯಾದೇಶ ಮತ್ತು ಶಾಸನಗಳಲ್ಲಿ ನಿರ್ದಿಷ್ಟವಾಗಿ ಹೇಳಿರುವ ವಿಶ್ವವಿದ್ಯಾಲಯದ ಫ್ಯಾಕಲ್ಟಿ;
(17) "ಸರ್ಕಾರ" ಎಂದರೆ ಕರ್ನಾಟಕ ಸರ್ಕಾರ;
(18) "ವಿಭಾಗ ಮುಖ್ಯಸ್ಥ" ಎಂದರೆ ವಿಶ್ವವಿದ್ಯಾಲಯ ಮತ್ತು ಘಟಕ ಕಾಲೇಜುಗಳ ಒಂದು ವಿಭಾಗದ ಮುಖ್ಯಸ್ಥ;
(19) ‘‘ತೋಟಗಾರಿಕೆ'' ಎಂಬುದು,
(ಎ) ತರಕಾರಿಗಳು, ಹಣ್ಣುಗಳು, ಹೂ, ಸಾಂಬಾರ ಪದಾರ್ಥಗಳು ನೆಡುತೋಪು ಬೆಳೆಗಳು, ಔಷಧೀಯ ಮತ್ತು ಸುಗಂಧ ಸಸ್ಯಗಳು ಮುಂತಾದ ತೋಟಗಾರಿಕೆ ಬೆಳೆಗಳ ಎಲ್ಲಾ ಅಂಶಗಳು;
(ಬಿ) ಕೃಷಿ ಬೆಳೆಗಳು;
(ಸಿ) ಪ್ರಾಕೃತಿಕ ಸಂಪನ್ಮೂಲ ನಿರ್ವಹಣೆ;
(ಡಿ) ಭೂಸಾರ ಮತ್ತು ಜಲನಿಧಿ ನಿರ್ವಹಣೆ;
(ಇ) ಉತ್ಪಾದನೆ ಮತ್ತು ಸಂರಕ್ಷಣೆಯೂ ಸೇರಿದಂತೆ ಬೆಳೆ ಸುಧಾರಣೆ;
(ಎಫ್) ನೀರಾವರಿ ಮತ್ತು ಕಳೆ ನಿರ್ವಹಣೆ;
(ಜಿ) ಬೀಜ ಮತ್ತು ಸಸಿ ಸಾಮಾಗ್ರಿಗಳ ಉತ್ಪಾದನೆ;
(ಎಚ್) ಭೂಬಳಕೆ ಯೋಜನೆ ಮತ್ತು ನಿರ್ವಹಣೆ;
(ಐ) ಭೂ-ಪ್ರಸಾಧನ ಕಲೆ; (ಜೆ) ತೋಟದ ಮರಗಳ ಕೃಷಿ, ಫಾರಂ ವನ ವಿಜ್ಞಾನ ಮತ್ತು ಅರಣ್ಯ ಹಾಗೂ ವನ್ಯಜೀವಿ ನಿರ್ವಹಣೆ; (ಕೆ) ತೋಟಗಾರಿಕೆ ಅರ್ಥಶಾಸ್ತ್ರ; (ಎಲ್) ಮಾರಾಟಗಾರಿಕೆ, ಸಹಕಾರ ಮತ್ತು ವ್ಯವಹಾರ ನಿರ್ವಹಣೆ; (ಎಂ) ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ; (ಎನ್) ಸಂಸ್ಕರಣೆಯೂ ಸೇರಿದಂತೆ ಸುಗ್ಗಿ ತರುವಾಯದ ನಿರ್ವಹಣೆ; (ಒ) ಜೈವಿಕ ತಂತ್ರಜ್ಞಾನ; (ಪಿ) ಅಣಬೆ ಕೃಷಿ; (ಕ್ಯೂ) ತೋಟಗಾರಿಕೆ ಇಂಜಿನಿಯರಿಂಗ್; (ಆರ್) ಕೋಳಿ ಸಾಗಾಣಿಕೆಯೂ ಸೇರಿದಂತೆ ಪಶು ವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳು; (ಎಸ್) ಹೈನುಗಾರಿಕೆ ವಿಜ್ಞಾನ ಮತ್ತು ತಂತ್ರಜ್ಞಾನ; (ಟಿ) ಮೀನು ಕೃಷಿ ಮತ್ತು ಮೀನುಗಾರಿಕೆ ನಿರ್ವಹಣೆ; (ಯು) ಗ್ರಾಮೀಣಾಭಿವೃದ್ಧಿ; (ವಿ) ಆಕರ ವಿಜ್ಞಾನಗಳು ಮತ್ತು ಮಾನವಿಕ ಶಾಸ್ತ್ರಗಳು; (ಡಬ್ಲ್ಯೂ) ಜೇನು ಸಾಕಾಣಿಕೆ ಮತ್ತು ರೇಷ್ಮೆ ವ್ಯವಸಾಯ; (ಎಕ್ಸ್) ಸರ್ಕಾರ/ ಭಾರತೀಯ ಕೃಷಿ ಸಂಶೋಧನೆ ಪರಿಷತ್ತು ಸಲಹೆ ನೀಡುವ ತೋಟಗಾರಿಕೆಗೆ ಸಂಬಂಧಿಸಿದ ಯಾವುದೇ ಇತರ ವಿಷಯ. - ಇವುಗಳ ಮೂಲಭೂತ ಮತ್ತು ಅನ್ವಯಿಕ ವಿಜ್ಞಾನಗಳು ಒಳಗೊಳ್ಳುತ್ತವೆ. (20) "ತೋಟಗಾರಿಕೆ ಸಂಶೋಧನಾ ಕೇಂದ್ರ" ಎಂದರೆ ವಲಯ ತೋಟಗಾರಿಕೆ ಸಂಶೋಧನಾ ಕೇಂದ್ರ. ಪ್ರಮುಖ ತೋಟಗಾರಿಕೆ ಸಂಶೋಧನಾ ಕೇಂದ್ರ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಕೇಂದ್ರ, ವಿಶ್ವವಿದ್ಯಾಲಯದ ತೋಟಗಾರಿಕೆ ಸಂಶೋಧನಾ ಕೇಂದ್ರ ಅಥವಾ ಇನ್ಯಾವುದೇ ಸಂಶೋಧನಾ ಕೇಂದ್ರ . (21) ‘‘ವಿದ್ಯಾರ್ಥಿನಿಲಯ'' ಎಂದರೆ, ಈ ಅಧಿನಿಯಮದ ಉಪಬಂಧಗಳಿಗನುಸಾರವಾಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ವಿಶ್ವವಿದ್ಯಾಲಯದ ಭಾಗವಾಗಿ ಅಥವಾ ಪ್ರತ್ಯೇಕವಾಗಿ ವಿಶ್ವವಿದ್ಯಾಲಯವು ನಿರ್ವಹಿಸುತ್ತಿರುವ ಅಥವಾ ಮನ್ನಣೆ ನೀಡಿರುವ ಒಂದು ನಿವಾಸ ಘಟಕ; (22) "ಅಧಿಕಾರಿ" ಎಂದರೆ, ಅಧ್ಯಾದೇಶ ಅಥವಾ ಶಾಸನಗಳಲ್ಲಿ ನಿರ್ದಿಷ್ಟಪಡಿಸಿರುವಂತೆ ವಿಶ್ವವಿದ್ಯಾಲಯದ ಅಧಿಕಾರಿ. (23) "ಸಾರ್ವಜನಿಕ - ಖಾಸಗಿ ಪಾಲುಗಾರಿಕೆ" ಎಂದರೆ, ತೋಟಗಾರಿಕೆ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ವಿಶ್ವವಿದ್ಯಾನಿಲಯ ಮತ್ತು ಸಾರ್ವಜನಿಕ/ಖಾಸಗಿ ಸಂಘಗಳ ನಡುವೆ ಮಾಡಿಕೊಂಡ ಜಂಟಿ ಉದ್ಯಮ. (24) "ಸಂಶೋಧನೆ" ಎಂದರೆ, ತಂತ್ರಜ್ಞಾನಗಳ ಅಭಿವೃದ್ಧಿ. (25) “ಆವರ್ತಕ ನಿಧಿ" ಎಂದರೆ, ತಂತ್ರಜ್ಞಾನಗಳನ್ನು, ಬೀಜ ಮತ್ತು ಸಸಿ ಸಾಮಾಗ್ರಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಮುಂದಿನ ಅಭಿವೃದ್ಧಿಗಾಗಿ ಅದೇ ಹಣವನ್ನೇ ಪುನರಾವರ್ತಿಸಿ ತೊಡಗಿಸುವುದಕ್ಕಾಗಿ ವ್ಯಕ್ತಿಗಳಿಗೆ/ಸಂಸ್ಥೆಗಳಿಗೆ ಹಂಚಲಾದ ಬಜೆಟ್. (26) ‘‘ನಿಯಮಿಸಲಾದುದು'' ಎಂದರೆ, ವಿಶ್ವವಿದ್ಯಾಲಯದ ಶಾಸನಗಳಿಂದ ನಿಯಮಿಸಲಾದುದು; (27) "ಕುಲಸಚಿವ" ಎಂದರೆ ವಿಶ್ವವಿದ್ಯಾಲಯದ ಕುಲಸಚಿವ. (28) ‘‘ವಿನಿಯಮಗಳು'' ಎಂದರೆ, 49ನೇ ಪ್ರಕರಣದ ಅಡಿಯಲ್ಲಿ ರಚಿಸಲಾದ ವಿನಿಯಮಗಳು;
(29) "ಸಂಶೋಧನಾ ಪರಿಷತ್ತು" ಎಂದರೆ ವಿಶ್ವವಿದ್ಯಾಲಯದ ಸಂಶೋಧನಾ ಪರಿಷತ್ತು.
(30) ‘‘ಅನುಸೂಚಿ'' ಎಂದರೆ, ಈ ಅಧ್ಯಾದೇಶಕ್ಕೆ ಅನುಬಂಧಿಸಲಾದ ಅನುಸೂಚಿ;
(31) "ಶಾಸನಗಳು" ಎಂದರೆ, ಈ ಅಧ್ಯಾದೇಶದ ಅಡಿಯಲ್ಲಿ ರಚಿಸಲಾದ ನೀತಿಗಳು, ಕಾರ್ಯವಿಧಾನಗಳು ಮುಂತಾದ ಅಂಶಗಳಿಗೆ ವ್ಯಾಪಿಸುವ ವಿಶ್ವವಿದ್ಯಾಲಯದ ಶಾಸನಗಳು;
(32) "ವಿದ್ಯಾರ್ಥಿ" ಎಂದರೆ, ವಿಶ್ವವಿದ್ಯಾಲಯದಲ್ಲಿ ಕ್ರಮಬದ್ಧವಾಗಿ ಸ್ಥಾಪಿಸಲಾದ ಪದವಿ, ಡಿಪ್ಲೊಮಾ ಅಥವಾ ಇತರ ಶೈಕ್ಷಣಿಕ ಪ್ರಶಸ್ತಿಗಳನ್ನು ಪಡೆಯಲು ವ್ಯಾಸಂಗ ಕ್ರಮದಲ್ಲಿ ಅಧ್ಯಯನ ಮಾಡುವುದಕ್ಕಾಗಿ ವಿಶ್ವವಿದ್ಯಾಲಯದ ಘಟಕ ಕಾಲೇಜಿನಲ್ಲಿ ಅಥವಾ ಒಂದು ಸಂಯೋಜಿತ ಕಾಲೇಜಿನಲ್ಲಿ ಪ್ರವೇಶ ನೀಡಿ ಹೆಸರುಪಟ್ಟಿಯಲ್ಲಿ ಸೇರಿಸಲಾಗಿರುವಂಥ ಒಬ್ಬ ವ್ಯಕ್ತಿ;
(33) "ಅಧ್ಯಾಪಕರು" ಎಂದರೆ, ಸಹಾಯಕ ಪ್ರಾಧ್ಯಾಪಕರ ದರ್ಜೆಗೆ ಕಡಿಮೆಯಿಲ್ಲದ ಬೋಧನೆ ನೀಡುವ ಅಥವಾ ಸಂಶೋಧನೆ ಮತ್ತು /ಅಥವಾ ವಿಸ್ತರಣಾ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುವ ಮತ್ತು ಅದಕ್ಕೆ ಮಾರ್ಗದರ್ಶನ ನೀಡುವ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯದಿಂದ ನೇಮಕಗೊಂಡ ಅಥವಾ ಮಾನ್ಯತೆ ಪಡೆದ ಒಬ್ಬ ವ್ಯಕ್ತಿ ಮತ್ತು ಇದು ಅಧ್ಯಾಪಕರೆಂದು ಶಾಸನಗಳ ಮೂಲಕ ಘೋಷಿಸಲ್ಪಡಬಹುದಾದ ಇತರೆ ಯಾವುದೇ ವ್ಯಕ್ತಿಯನ್ನೂ ಒಳಗೊಳ್ಳಬಹುದು.
(34) "ತಂತ್ರಜ್ಞಾನ ವರ್ಗಾವಣೆ (ಟಿಓಟಿ) ಘಟಕಗಳು" ಎಂದರೆ, ವಿಜ್ಞಾನ ಕೇಂದ್ರ, ವಿಸ್ತರಣಾ ಶಿಕ್ಷಣ ಘಟಕಗಳು (ಇಇಯುಎಸ್), ಸಿಬ್ಬಂದಿ ತರಬೇತಿ ಘಟಕಗಳು (ಎಸ್ಟಿಯು), ತೋಟಗಾರಿಕೆ ತಂತ್ರಜ್ಞಾನ ಮಾಹಿತಿ ಕೇಂದ್ರ (ಹೆಚ್ಟಿಐಸಿ). ಬೇಕರಿ ತರಬೇತಿ ಘಟಕ(ಬಿಟಿಯು), ಸುಗ್ಗಿ ತರುವಾಯದ ತಂತ್ರಜ್ಞಾನದ ಸಂಸ್ಥೆ (ಪಿಹೆಚ್ಟಿಐ) ಮತ್ತು ವಿಶ್ವವಿದ್ಯಾಲಯವು ಸ್ಥಾಪಿಸಿದಂಥ ಇತರ ಕೇಂದ್ರಗಳು.
(35) "ಘಟಕ" ಎಂದರೆ, ಕಾಲೇಜು/ಸಂಶೋಧನಾ ಕೇಂದ್ರ/ ವಿಸ್ತರಣಾ ಶಿಕ್ಷಣ ಘಟಕಗಳು/ ತೋಟಗಾರಿಕೆ ವಿಜ್ಞಾನ ಕೇಂದ್ರಗಳು ಮತ್ತು ತೋಟಗಾರಿಕೆಗೆ ಸಂಬಂಧಪಟ್ಟ ಇತರ ಸಂಸ್ಥೆಗಳು.
(36) ‘‘ವಿಶ್ವವಿದ್ಯಾಲಯ'' ಎಂದರೆ, 3ನೇ ಪ್ರಕರಣದ ಅಡಿಯಲ್ಲಿ ಸ್ಥಾಪಿತವಾದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ;
(37) ‘‘ವಿಶ್ವವಿದ್ಯಾಲಯ ಪ್ರದೇಶ'' ಎಂದರೆ, ವಿಶ್ವವಿದ್ಯಾಲಯದ ಅಧಿಕಾರ ಕ್ಷೇತ್ರ ವ್ಯಾಪ್ತಿಯಲ್ಲಿನ ಪ್ರದೇಶ;
(38) "ಕುಲಪತಿ" ಎಂದರೆ, ವಿಶ್ವವಿದ್ಯಾಲಯದ ಕುಲಪತಿ.
(39) "ವಿಜ್ಞಾನ ಕೇಂದ್ರ " ಎಂದರೆ, ತೋಟಗಾರಿಕೆ ವಿಜ್ಞಾನ ಕೇಂದ್ರ (ಟಿವಿಕೆ), ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ).