ಅನುಸೂಚಿ (2(31)ನೇ ಪ್ರಕರಣವನ್ನು ನೋಡಿ)
I. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು.
-
ತೋಟಗಾರಿಕೆ ಕಾಲೇಜು, ಮೂಡಿಗೆರೆ
-
ಭತ್ತ ಸಂಶೋಧನೆಯ ಮತ್ತು ಕೃಷಿ ವಿಜ್ಞಾನ ಕೇಂದ್ರ ಪ್ರದೇಶಗಳನ್ನು ಹೊರತುಪಡಿಸಿ ವಲಯ ಕೃಷಿ ಸಂಶೋಧನಾ ಕೇಂದ್ರ, ಮೂಡಿಗೆರೆ
-
ತೆಂಗು ಸಂಶೋಧನಾ ಕೇಂದ್ರ,, ಅರಸೀಕೆರೆ
-
ಕೃಷಿ ವಿಜ್ಞಾನ ಕೇಂದ್ರ ಪ್ರದೇಶವನ್ನು ಹೊರತುಪಡಿಸಿ ವಲಯ ಕೃಷಿ ಸಂಶೋಧನಾ ಕೇಂದ್ರ, ಹಿರಿಯೂರು
-
ಗೋಡಂಬಿ ಸಂಶೋಧನಾ ಕೇಂದ್ರ, ಉಲ್ಲಾಳ
-
ಅಡಿಕೆ ಸಂಶೋಧನಾ ಕೇಂದ್ರ, ಸಿಬಿನಕೆರೆ ತೋಟಗಾರಿಕೆ ಇಲಾಖೆಯ ಫಾರಂ, ತೀರ್ಥಹಳ್ಳಿ
II. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ.
-
ಕಿತ್ತೂರು ರಾಣಿ ಚೆನ್ನಮ್ಮ ತೋಟಗಾರಿಕೆ ಕಾಲೇಜು, ಅರಭಾವಿ
-
ತೋಟಗಾರಿಕೆ ಸಂಶೋಧನಾ ಕೇಂದ್ರ, ಕಣಬರಗಿ
-
ತೋಟಗಾರಿಕೆ ಸಂಶೋಧನಾ ಕೇಂದ್ರ, ಕುಂಬಾಪುರ
-
ತೋಟಗಾರಿಕೆ ಸಂಶೋಧನಾ ಕೇಂದ್ರ, ತಿಡಗುಂಡಿ
-
ಮೆಣಸು ಸಂಶೋಧನಾ ಕೇಂದ್ರ, ಶಿರಸಿ
-
ಮುಸುಕಿನ ಜೋಳ ಬೆಳೆದ ಪ್ರದೇಶವನ್ನು ಹೊರತುಪಡಿಸಿ ಮೆಣಸಿನಕಾಯಿ ಸಂಶೋಧನಾ ಕೇಂದ್ರ, ದೇವಿ ಹೊಸೂರು
-
ಬೀದರ್ ತೋಟಗಾರಿಕೆ ಕಾಲೇಜು, ಹೊಸ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವವರೆಗೆ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸ್ಥಾಪಿಸುವವರೆಗೆ ಜನವಾಡ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸತಕ್ಕದ್ದು.
-
ಬಾಗಲಕೋಟೆ ತೋಟಗಾರಿಕೆ ಕಾಲೇಜು.
ಈ ಮೇಲೆ ಪಟ್ಟಿ ಮಾಡಿದ ಎಲ್ಲಾ ಸಂಸ್ಥೆಗಳು, ತೋಟಗಾರಿಕೆ ಕಾಲೇಜುಗಳು, ಸಂಶೋಧನಾ ಕೇಂದ್ರಗಳು, ತೋಟಗಾರಿಕೆ ಬೆಳೆಗಳ ಮೇಲಿನ ಅಖಿಲ ಭಾರತ ಸಮನ್ವಯ ಯೋಜನೆಗಳು ಹಾಗೂ ಆವರ್ತಕ ನಿಧಿಗಳು ಇವುಗಳನ್ನು ಮೂಲಭೂತ ಸೌಲಭ್ಯಗಳು ಕಟ್ಟಡಗಳು, (ಬೋಧಕ ಮತ್ತು ಬೋಧಕೇತರ) ಸಿಬ್ಬಂದಿ, ಸ್ಥಿರ ಮತ್ತು ಚರ ಸ್ವತ್ತುಗಳ ಸಮೇತವಾಗಿ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಳ್ಳತಕ್ಕದ್ದು.
ರಾಮೇಶ್ವರ ಠಾಕೂರ್
ಕರ್ನಾಟಕ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ.ಕೆ. ಬೋರೇಗೌಡ
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ
ಸರ್ಕಾರಿ ಮುದ್ರಣಾಲಯ, ವಿಕಾಸ ಸೌಧ ಘಟಕ, ಬೆಂಗಳೂರು.