(1) ಕರ್ನಾಟಕ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಯಮ 1963ರಲ್ಲಿ (1963ರ ಕರ್ನಾಟಕ ಅಧಿನಿಯಮ 22) ಏನೇ ಇದ್ದರೂ ಅನುಸೂಚಿ - I ರಲ್ಲಿ ನಿರ್ದಿಷ್ಟಪಡಿಸಿದ ಕಾಲೇಜುಗಳು, ಸಂಶೋಧನಾ ಕೇಂದ್ರಗಳು, ತೋಟಗಾರಿಕೆ ಬೆಳೆಗಳ ಬಗ್ಗೆ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆಗಳು ಮತ್ತಿತರ ಸಂಸ್ಥೆಗಳು ಹಾಗೂ ಕೃಷಿ ಮತ್ತು ತೋಟಗಾರಿಕೆಯ ರಾಜ್ಯ ಸರ್ಕಾರದ ಇಲಾಖೆಗಳ ಫಾರಂಗಳು ಮತ್ತು ಅವಕ್ಕೆ ಲಗತ್ತಾದ ವಿದ್ಯಾರ್ಥಿ ನಿಲಯಗಳು ಹಾಗೂ ಇತರ ಕಟ್ಟಡಗಳು, ತಮ್ಮ ಪೀಠೋಪಕರಣ ಸಾಮಾಗ್ರಿಗಳು, ಗ್ರಂಥಾಲಯಗಳು, ಪುಸ್ತಕಗಳು, ಪ್ರಯೋಗಾಲಯಗಳು, ದಾಸ್ತಾನು ಮಳಿಗೆಗಳು, ಉಪಕರಣಗಳು, ಸಾಧನಗಳು, ಪರಿಕರಗಳು ಮತ್ತು ಸಲಕರಣೆಗಳ ಸಮೇತವಾಗಿ ಹಾಗೂ ನಿರ್ದಿಷ್ಟಪಡಿಸಿದ ದಿನಾಂಕಕ್ಕೆ ಮೊದಲು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ ರಾಜ್ಯ ಸರ್ಕಾರವು ಮಾಲೀಕತ್ವ ಹೊಂದಿದ್ದ ಮತ್ತು ನಿರ್ವಹಿಸುತ್ತಿದ್ದ ಚರ ಮತ್ತು ಸ್ಥಿರ ಸ್ವತ್ತುಗಳೆರಡು ಸೇರಿದಂತೆ ಇತರ ಎಲ್ಲಾ ಸ್ವತ್ತುಗಳು, ಆಸ್ತಿಗಳು, ಹೊಣೆಗಾರಿಕೆಗಳು ಮತ್ತು ದಾಯಿತ್ವಗಳ ಸಹಿತವಾಗಿ ಅದರ ಎಲ್ಲಾ ಸ್ವತ್ತುಗಳು ಈ ವಿಶ್ವವಿದ್ಯಾಲಯಕ್ಕೆ ವರ್ಗಾಯಿತವಾಗತಕ್ಕದ್ದು ಮತ್ತು ಅದರಲ್ಲಿ ನಿಹಿತವಾಗತಕ್ಕದ್ದು.
(2) ನಿರ್ದಿಷ್ಟಪಡಿಸಿದ ದಿನಾಂಕಕ್ಕೆ ಮೊದಲು ಸಂದರ್ಭಾನುಸಾರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಅಥವಾ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಯಾವುದೇ ಪರೀಕ್ಷೆಗಾಗಿ ವ್ಯಾಸಂಗ ಮಾಡುತ್ತಿರುವ, (1)ನೇ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಒಂದು ಕಾಲೇಜಿನ ಅಥವಾ ಸಂಸ್ಥೆಯ ಯಾಮೊಬ್ಬ ವಿದ್ಯಾರ್ಥಿಯು ಅದಕ್ಕಾಗಿ ಸಿದ್ದತೆ ನಡೆಸಿದ ತನ್ನ ವ್ಯಾಸಂಗ ಕ್ರಮವನ್ನು ಪೂರ್ಣಗೊಳಿಸಲು ಅನುಮತಿ ನೀಡತಕ್ಕದ್ದು ಮತ್ತು ವಿಶ್ವವಿದ್ಯಾಲಯವು ಅಂತಹ ವಿದ್ಯಾರ್ಥಿಗಳಿಗಾಗಿ ಪರೀಕ್ಷೆಗಳನ್ನು ನಡೆಸಲು ವ್ಯವಸ್ಥೆ ಮಾಡತಕ್ಕದ್ದು.
(3) ನಿರ್ದಿಷ್ಟಪಡಿಸಿದ ದಿನಾಂಕಕ್ಕೆ ಮೊದಲು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ ಇವು ಪರೀಕ್ಷೆಗಳನ್ನು ನಡೆಸಿ ಫಲಿತಾಂಶಗಳನ್ನು ಘೋಷಿಸಿದ್ದರೆ ಮತ್ತು ಸಂಬಂಧಪಟ್ಟ ಪದವಿಯನ್ನು ಪ್ರದಾನ ಮಾಡಿರದಿದ್ದರೆ ಅಥವಾ ನೀಡಿರದಿದ್ದರೆ ಅಥವಾ ವ್ಯಾಸಂಗ ಕ್ರಮದ ಅಗತ್ಯತೆಗಳನ್ನು ಪೂರೈಸಿದ್ದರೂ ಅಂತಹ ಪರೀಕ್ಷೆಯ ಫಲಿತಾಂಶಗಳನ್ನು ಘೋಷಿಸಿರದಿದ್ದರೆ, ಆಗ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಸಂದರ್ಭಾನುಸಾರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ ಇವುಗಳು ಫಲಿತಾಂಶವನ್ನು ಘೋಷಿಸತಕ್ಕದ್ದು ಮತ್ತು ಪದವಿಯನ್ನು ಪ್ರದಾನ ಮಾಡತಕ್ಕದ್ದು.
(4) ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ ಇವುಗಳಿಂದ ನಿಯೋಜಿತರಾಗಿದ್ದ, ಯಾವುದೇ ಕಾಲೇಜಿನಲ್ಲಿ, ಸಂಶೋಧನಾ ಕೇಂದ್ರದಲ್ಲಿ ಅಥವಾ (1)ನೇ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಸಂಸ್ಥೆಗಳಲ್ಲಿ ಸೇವೆಸಲ್ಲಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ನಿರ್ದಿಷ್ಟಪಡಿಸಿದ ದಿನಾಂಕದಿಂದ ಈ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸತಕ್ಕದ್ದು ಹಾಗೂ ಷರತ್ತುಗಳನ್ನು ಮಾರ್ಪಾಡಿಸಿದ ಹೊರತು ಮತ್ತು ಮಾರ್ಪಾಡಿಸುವ ವರೆಗೆ ಹಾಗೇ ವರ್ಗಾವಣೆ ಮಾಡುವ ಬದಲು ಅನ್ವಯವಾಗುತ್ತಿದ್ದ ಸೇವಾ ಷರತ್ತುಗಳ ಮೇಲೆ ಆತನು ವರ್ಗಾಯಿತನಾಗತಕ್ಕದ್ದು ಮತ್ತು ಅವೇ ಸೇವಾ ಷರತ್ತುಗಳು ಅನ್ವಯಿಸುವುದು ಮುಂದುವರೆಯತಕ್ಕದ್ದು.
(5) ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಅಥವಾ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ ಇವುಗಳಿಂದ ನಿಯೋಜಿತರಾಗಿದ್ದ ಯಾವುದೇ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರದಲ್ಲಿ ಅಥವಾ (1)ನೇ ಉಪ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದರದ ಸಂಸ್ಥೆಗಳಲ್ಲಿ ಸೇವೆಸಲ್ಲಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ನಿರ್ದಿಷ್ಟಪಡಿಸಿದ ದಿನಾಂಕದಿಂದ ಆತನ ಆಯ್ಕೆಯ ಮೇಲೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಹುದ್ದೆಗಳ ಲಭ್ಯತೆಯ ಆಧಾರದ ಮೇಲೆ ವರ್ಗಾಯಿತನಾಗತಕ್ಕದ್ದು. ಅಂತಹ ವ್ಯಕ್ತಿಯ ಒಪ್ಪಿಗೆಯೊಡನೆ ಷರತ್ತುಗಳನ್ನು ಮಾರ್ಪಾಡಿಸಿದ ಹೊರತು ಮತ್ತು ಮಾರ್ಪಾಡಿಸುವವರೆಗೆ, ಹಾಗೆ ವರ್ಗಾವಣೆ ಮಾಡುವುದಕ್ಕೆ ಮೊದಲು ಅನ್ವಯವಾಗುತ್ತಿದ್ದ ಸೇವಾ ಷರತ್ತುಗಳ ಮೇಲೆ ಆತನು ವರ್ಗಾಯಿತನಾಗತಕ್ಕದ್ದು ಹಾಗೂ ಅವೇ ಸೇವಾ ಷರತ್ತುಗಳು ಅನ್ವಯಿಸುವುದು ಮುಂದುವರೆಯತಕ್ಕದ್ದು.
(6) (1)ನೇ ಉಪ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ ಇವುಗಳ ಯಾವುದೇ ಕಾಲೇಜುಗಳಲ್ಲಿ ಸಂಶೋಧನಾ ಕೇಂದ್ರಗಳು/ಸಂಸ್ಥೆಗಳಲ್ಲಿ ಬೋಧಕೇತರ ಸಿಬ್ಬಂದಿಯನ್ನು ಹೊರತುಪಡಿಸಿ ಪ್ರತಿಯೊಬ್ಬ ವ್ಯಕ್ತಿಯು ನಿರ್ದಿಷ್ಟಪಡಿಸಿದ ದಿನಾಂಕದಿಂದ ಆತನ ಆಯ್ಕೆಯ ಮೇಲೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಹುದ್ದೆಗಳ ಲಭ್ಯತೆಯ ಆಧಾರದ ಮೇಲೆ ವರ್ಗಾಯಿತನಾಗತಕ್ಕದ್ದು. ಅಂತಹ ವ್ಯಕ್ತಿಯ ಒಪ್ಪಿಗೆಯೊಡನೆ ಷರತ್ತುಗಳನ್ನು ಮಾರ್ಪಾಡಿಸಿದ ಹೊರತು ಮತ್ತು ಮಾರ್ಪಾಡಿಸುವವರೆಗೆ, ಹಾಗೆ ವರ್ಗಾವಣೆ ಮಾಡುವುದಕ್ಕೆ ಮೊದಲು ಅನ್ವಯವಾಗುತ್ತಿದ್ದ ಸೇವಾ ಷರತ್ತುಗಳ ಮೇಲೆ ಆತನು ವರ್ಗಾಯಿತನಾಗತಕ್ಕದ್ದು ಹಾಗೂ ಅವೇ ಸೇವಾ ಷರತ್ತುಗಳು ಅನ್ವಯಿಸುವುದು ಮುಂದುವರೆಯತಕ್ಕದ್ದು.
(7) ಕೃಷಿ ಮತ್ತು ಸಂಬಂಧಿಸಿದ ವಿಜ್ಞಾನಗಳ ಯಾಮೊಬ್ಬ ಅಧ್ಯಾಪಕ ಮತ್ತು ಬೋಧಕೇತರ ವ್ಯಕ್ತಿಯು ತನ್ನ ಮಾತೃ ವಿಶ್ವವಿದ್ಯಾಲಯದಲ್ಲೇ ಉಳಿದು ಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದರೆ ಮೂರು ವರ್ಷಗಳ ತರುವಾಯ ಮಾತ್ರವೇ ಅವರನ್ನು ತೋಟಗಾರಿಕೆ ವಿಶ್ವವಿದ್ಯಾಲಯ ಮತ್ತು ಮಾತೃ ವಿಶ್ವವಿದ್ಯಾಲಯ ಈ ಎರಡೂ ವಿಶ್ವವಿದ್ಯಾಲಯಗಳ ಕುಲಪತಿಗಳ ಪರಸ್ವರ ಒಪ್ಪಿಗೆಯ ಮೇಲೆ ಹೊಸ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಮಾಡತಕ್ಕದ್ದು:
ಪರಂತು, ರಾಜ್ಯ ಸರ್ಕಾರದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡಕ್ಕೆ ಪ್ರತಿನಿಯೋಜಿಸಲಾದ ಯಾವ ವ್ಯಕ್ತಿಯನ್ನೂ ರಾಜ್ಯ ಸರ್ಕಾರದ ಪೂರ್ವಾನುಮೋದನೆ ಇಲ್ಲದೆ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸತಕ್ಕದ್ದಲ್ಲ:
ಮತ್ತು ಪರಂತು, ರಾಜ್ಯ ಸರ್ಕಾರವು ನಿಯೋಜಿಸಿದ ಆದರೆ ಅನುಸೂಚಿಯಲ್ಲಿ ಹೇಳಿದ ಕಾಲೇಜುಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾಮೊಬ್ಬ ವ್ಯಕ್ತಿಯನ್ನು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸತಕ್ಕದ್ದು. ಆತನ ನಿಯೋಜನೆಯ ದರ್ಜೆ ಬಗ್ಗೆ ರಾಜ್ಯ ಸರ್ಕಾರವು ತೀರ್ಮಾನವನ್ನು ಕೈಗೊಂಡ ಹೊರತು ಮತ್ತು ಆಲ್ಲಿಯವರೆಗೆ ಅವನು ಯಾವ ವೃಂದ ಮತ್ತು ನೇಮಕಾತಿ ನಿಯಮಗಳಡಿಯಲ್ಲಿ ನೇಮಕವಾಗಿರುವನ್ನೋ ಅವೇ ನಿಯಮಗಳಿಗೆ ಒಳಪಟ್ಟಿರುವುದು ಮುಂದುವರಿಯತಕ್ಕದ್ದು.
(8) ತೋಟಗಾರಿಕೆಯ ಸ್ನಾತಕೋತ್ತರ ಶಿಕ್ಷಣ ವಿಭಾಗವು ರಾಜ್ಯ ಸರ್ಕಾರವು ಈ ಸಂಬಂಧದಲ್ಲಿ ಅಧಿಸೂಚನೆಯನ್ನು ಹೊರಡಿಸುವವರೆಗೆ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಜಿಕೆವಿಕೆ ಕ್ಯಾಂಪಸ್ನಲ್ಲಿಯೇ ಮುಂದುವರೆಯತಕ್ಕದ್ದು.
(9) ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಫ್ಯಾಕಲ್ಟಿಯನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಜಿಕೆವಿಕೆ ಕ್ಯಾಂಪಸ್ ಇಲ್ಲಿಯ ತೋಟಗಾರಿಕೆ ವಿಭಾಗದಿಂದ ರಾಜ್ಯ ಸರ್ಕಾರವು ಪಡೆದುಕೊಳ್ಳತಕ್ಕದ್ದು.
(10) ಜಿಕೆವಿಕೆ ಕ್ಯಾಂಪಸ್ನ ಅರವತ್ತು ಹೆಕ್ಟೇರಗಳನ್ನು ಒಳಗೊಂಡ ತೋಟಗಾರಿಕೆ ವಿಭಾಗದ ಮೂಲಭೂತ ಸೌಲಭ್ಯವನ್ನು ರಾಜ್ಯ ಸರ್ಕಾರವು ಈ ಸಂಬಂಧದಲ್ಲಿ ಅಧಿಸೂಚನೆಯನ್ನು ಹೊರಡಿಸುವ ಮೂಲಕ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸತಕ್ಕದು.