ಈ ಮುಂದಿನವರುಗಳು ವಿಶ್ವವಿದ್ಯಾಲಯದ ಅಧಿಕಾರಿಗಳಾಗಿರತಕ್ಕದ್ದು, ಎಂದರೆ:-
(1) ಕುಲಾಧಿಪತಿಯವರು;
(2) ಸಹ ಕುಲಾಧಿಪತಿಯವರು;
(3) ಕುಲಪತಿಯವರು;
(4) ನಿರ್ದೇಶಕರುಗಳು;
(5) ಡೀನ್ಗಳು;
(6) ಕುಲಸಚಿವರು;
(7) ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್;
(8) ವಿಶ್ವವಿದ್ಯಾಲಯ ಗ್ರಂಥಪಾಲಕರು;
(9) ಶಾಸನಗಳ ಮೂಲಕ ವಿಶ್ವವಿದ್ಯಾಲಯದ ಅಧಿಕಾರಿಗಳೆಂದು ಘೋಷಿಸ ಬಹುದಾದಂತಹ ವಿಶ್ವವಿದ್ಯಾಲಯದ ಸೇವೆಯಲ್ಲಿರುವ ಇತರ ವ್ಯಕ್ತಿಗಳು; ಮತ್ತು
(10) ಲೆಕ್ಕ ನಿಯಂತ್ರಕರು;