(1) ಈ ಅಧ್ಯಾದೇಶದಲ್ಲಿ ಪರಿಭಾಷಿಸಲಾದಂತೆ, ವಿಶ್ವವಿದ್ಯಾಲಯದ ಅಥವಾ ಕಾಲೇಜು ಮಟ್ಟದಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣ ಕಾರ್ಯಕ್ರಮಗಳ ಭೋಧನೆಗೆ ಸಂಬಂಧಪಟ್ಟಂತೆ ಈ ವಿಶ್ವವಿದ್ಯಾಲಯದ ಅಧಿಕಾರ ವ್ಯಾಪ್ತಿ ಮತ್ತು ಜವಾಬ್ದಾರಿಯು ಇಡೀ ಕರ್ನಾಟಕ ರಾಜ್ಯಕ್ಕೆ ವ್ಯಾಪ್ತವಾಗಿರತಕ್ಕದ್ದು.
(2) ವಿಶ್ವವಿದ್ಯಾಲಯವು ಸ್ಥಾಪನೆಯಾದ ದಿನಾಂಕದಂದು ಮತ್ತು ದಿನಾಂಕದಿಂದ ವಿಶ್ವವಿದ್ಯಾಲಯದ ಘಟಕ ಅಥವಾ ಸಂಯೋಜಿತ ಕಾಲೇಜು ಆಗಿ ಅಲ್ಲದೆ ಅನ್ಯಥಾ ತೋಟಗಾರಿಕೆಯಲ್ಲಿ ಶಿಕ್ಷಣವನ್ನು ನೀಡುವ ಯಾವುದೇ ಹೊಸ ಕಾಲೇಜನ್ನು ಸ್ಥಾಪಿಸತಕ್ಕದ್ದಲ್ಲ.
(3) ವಿಶ್ವವಿದ್ಯಾಲಯದ ಅಧಿಕಾರ ಕ್ಷೇತ್ರ ವ್ಯಾಪ್ತಿ ಮತ್ತು ಪ್ರಾಧಿಕಾರದಡಿಯಲ್ಲಿ ಬರುವ ಎಲ್ಲಾ ತೋಟಗಾರಿಕೆ ಕಾಲೇಜುಗಳು, ತೋಟಗಾರಿಕೆ ಸಂಶೋಧನಾ ಕೇಂದ್ರಗಳು, ತೋಟಗಾರಿಕೆ ವಿಜ್ಞಾನ ಕೇಂದ್ರಗಳು ಮತ್ತು ಇತರ ಸಂಸ್ಥೆಗಳು ವಿಶ್ವವಿದ್ಯಾಲಯದ ಘಟಕ ಭಾಗಗಳಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಪ್ರಾಧಿಕಾರಗಳ ಪೂರ್ಣ ಆಡಳಿತ ನಿರ್ವಹಣೆ ಮತ್ತು ನಿಯಂತ್ರಣದಡಿಯಲ್ಲಿ ಬರತಕ್ಕದ್ದು. ವಿಶ್ವವಿದ್ಯಾಲಯದಿಂದ ಸಂಯೋಜಿತ ಕಾಲೇಜು ಎಂದು ಮಾನ್ಯತೆ ಪಡೆದ ಹೊರತು ಯಾವ ಘಟಕವನ್ನು ಸಂಯೋಜಿತ ಕಾಲೇಜು ಎಂದು ಮಾನ್ಯ ಮಾಡತಕ್ಕದ್ದಲ್ಲ.
(4) ವಿಶ್ವವಿದ್ಯಾಲಯವು ಪ್ರಾದೇಶಿಕ ಅಧಿಕಾರ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ಅಧಿಕಾರ ವ್ಯಾಪ್ತಿಯಿಂದ ಹೊರಗೆ ಸಂಶೋಧನೆ ವಿಸ್ತರಣೆ ಮತ್ತು ನಿರ್ವಹಣೆಗಳನ್ನೊಳಗೊಂಡ ತನ್ನ ಘಟಕ ನಿಕಾಯಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಜವಾಬ್ದಾರಿಯನ್ನು ವಹಿಸಕೊಳ್ಳಬಹುದು.
(5) ಪ್ರತಿಯೊಂದು ವಿಶ್ವವಿದ್ಯಾಲಯವು ಅನೇಕ ವಿಭಿನ್ನ ಶಾಸ್ತ್ರಗಳ ದೃಷ್ಟಿಯಿಂದ ಅಧ್ಯಯನ ಮಾಡುವ ವಿದ್ಯಾ ವಿಷಯಕ ಕಾರ್ಯಕ್ರಮಗಳ ಮತ್ತು ಸಂಶೋಧನಾ ಯೋಜನೆಗಳ ಸಂಬಂಧದಲ್ಲಿ ಇತರ ವಿಶ್ವವಿದ್ಯಾಲಯಗಳು ಅಥವಾ ಭಾರತದ ಮತ್ತು ವಿದೇಶದ ಖ್ಯಾತ ಸಂಸ್ಥೆಗಳೊಂದಿಗೆ ವಿದ್ಯಾವಿಷಯಕ ಕಾರ್ಯಕ್ರಮಗಳ ಸಹಯೋಗ ಮಾಡಿಕೊಳ್ಳಬಹುದು.