(1) ಈ ಮುಂದಿನ ಸದಸ್ಯರನ್ನೊಳಗೊಂಡ ಒಂದು ವಿಸ್ತರಣಾ ಶಿಕ್ಷಣ ಪರಿಷತ್ತು ಇರತಕ್ಕದ್ದು, ಎಂದರೆ:-
(i) ಕುಲಪತಿಯವರು - ಅಧ್ಯಕ್ಷರು;
(ii) ತೋಟಗಾರಿಕೆ ಇಲಾಖೆಯ ನಿರ್ದೇಶಕರು, ಕರ್ನಾಟಕ ಸರ್ಕಾರ ಅಥವಾ ಜಂಟಿ ನಿರ್ದೇಶಕರ ದರ್ಜೆಗಿಂತ ಕಡಿಮೆಯಿಲ್ಲದ ದರ್ಜೆಯ ಅವರ ನಾಮನಿರ್ದೇಶಿತರು;
(iii) ಕೃಷಿ ಇಲಾಖೆಯ ನಿರ್ದೇಶಕರು, ಕರ್ನಾಟಕ ಸರ್ಕಾರ ಅಥವಾ ಜಂಟಿ ನಿರ್ದೇಶಕರ ದರ್ಜೆಗಿಂತ ಕಡಿಮೆಯಿಲ್ಲದ ದರ್ಜೆಯ ಅವರ ನಾಮನಿರ್ದೇಶಿತರು;
(iv) ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕರು, ಕರ್ನಾಟಕ ಸರ್ಕಾರ ಅಥವಾ ಜಂಟಿ ನಿರ್ದೇಶಕರ ದರ್ಜೆಗಿಂತ ಕಡಿಮೆಯಿಲ್ಲದ ದರ್ಜೆಯ ಅವರ ನಾಮನಿರ್ದೇಶಿತರು;
(v) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು, ಕರ್ನಾಟಕ ಸರ್ಕಾರ;
(vi) ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ವಿಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ;
(vii) ಭಾರತೀಯ ತೋಟಗಾರಿಕೆ ಸಂಸ್ಥೆಯ ನಿರ್ದೇಶಕರು, ಬೆಂಗಳೂರು ಅಥವಾ ಅವರ ನಾಮನಿರ್ದೇಶಿತರು;
(viii) ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ, ಮೈಸೂರು ಇದರ ನಿರ್ದೇಶಕರು ಅಥವಾ ಅವರ ನಾಮನಿರ್ದೇಶಿತರು;
(ix) ಕರ್ನಾಟಕ ರಾಜ್ಯ ವ್ಯವಸಾಯೋತ್ಪನ್ನ ಸಂಸ್ಕರಣಾ ಮತ್ತು ರಫ್ತು ನಿಗಮ ನಿಯಮಿತ (ಕೆಎಪಿಪಿಇಸಿ), ಬೆಂಗಳೂರು ಇದರ ನಿರ್ದೇಶಕರು ಅಥವಾ ಅವರ ನಾಮನಿರ್ದೇಶಿತರು;
(x) ಸಫಲ್ ಮಾರುಕಟ್ಟೆ ಘಟಕ, ಬೆಂಗಳೂರು (ಮದರ್ ಡೈರಿ ಆಹಾರ ಸಂಸ್ಕರಣಾ ನಿಯಮಿತ) ಇದರ ಮಹಾ ವ್ಯವಸ್ಥಾಪಕರು ಅಥವಾ ಮುಖ್ಯಸ್ಥರು;
(xi) ಜಲವಿಭಾಜಕ ಕ್ಷೇತ್ರ ಅಭಿವೃದ್ಧಿ ಇಲಾಖೆ ನಿರ್ದೇಶಕರು, ಕರ್ನಾಟಕ ಸರ್ಕಾರ;
(xii) ವಿಶ್ವವಿದ್ಯಾಲಯದ ಎಲ್ಲಾ ನಿರ್ದೇಶಕರು ಮತ್ತು ಡೀನ್ಗಳು;
(xiii) ಕುಲಸಚಿವರು;
(xiv) ಸಂಶೋಧನೆಯ ಎಲ್ಲಾ ಸಹವರ್ತಿ ನಿರ್ದೇಶಕರು ಮತ್ತು ವಿಸ್ತರಣಾ ಶಿಕ್ಷಣದ ಸಹವರ್ತಿ ನಿರ್ದೇಶಕರುಗಳು;
(xv) ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳ ಮುಖ್ಯಸ್ಥರು;
(xvi) ತೋಟಗಾರಿಕೆ ಮತ್ತು ಇತರ ಸಂಬಂಧಿತ ಶಾಖೆಗಳಲ್ಲಿ ವಿಶೇಷ ಪರಿಣಿತಿಯುಳ್ಳ, ಪ್ರಗತಿಪರ ರೈತರ ವಿಶೇಷ ಜ್ಞಾನ ಹಾಗೂ ಅನುಭವದ ಪ್ರಯೋಜನವನ್ನು ಪಡೆದುಕೊಳ್ಳಲು ಕುಲಪತಿಯವರು ನಾಮನಿರ್ದೇಶನ ಮಾಡಿದಂಥ ಇಬ್ಬರು ಪ್ರಗತಿಪರ ರೈತರು;
(xvii) ಯಾವುದೇ ಸಭೆಯ ಸಂಬಂಧದಲ್ಲಿ ಅಂಥ ಸಭೆಯ ಕಾರ್ಯಸೂಚಿಯಲ್ಲಿನ ವಿಷಯಗಳ ಬಗ್ಗೆ ಅವರ ವಿಶೇಷ ಜ್ಞಾನದ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕಾಗಿ ಕುಲಪತಿಯವರು ನಾಮನಿರ್ದೇಶನ ಮಾಡಿದ ವಿಶ್ವವಿದ್ಯಾಲಯಕ್ಕೆ ಹೊರಗಿನವರಾದ ಒಬ್ಬ ಖ್ಯಾತ ವಿಸ್ತರಣಾ ಶಿಕ್ಷಣ ತಜ್ಞರು;
(xviii) ಯಾವುದೇ ಸಭೆಯ ಸಂದರ್ಭದಲ್ಲಿ ಅಂಥ ಸಭೆಯ ಕಾರ್ಯಸೂಚಿಯಲ್ಲಿನ ವಿಷಯಗಳ ಬಗ್ಗೆ ಅವರ ವಿಶೇಷ ಜ್ಞಾನದ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕಾಗಿ ಕುಲಪತಿಯವರು ನಾಮನಿರ್ದೇಶನ ಮಾಡಿದ ಒಬ್ಬ ವ್ಯವಸಾಯೋದ್ಯಮಿಗಳು;
(xix) ವ್ಯವಸ್ಥಾಪಕ ನಿರ್ದೇಶಕರು, ತೋಟಗಾರಿಕೆ ಉತ್ಪನ್ನ ಬೆಳೆಗಾರರ ಸಹಕಾರಿ ಮಾರುಕಟ್ಟೆ ಸಂಸ್ಥೆ;
(xx) ಕುಲಪತಿಗಳು ನಾಮನಿರ್ದೇಶಿಸಿದ ತೋಟಗಾರಿಕೆಗೆ ಸಂಬಂಧಿಸಿದ ಸರ್ಕಾರೇತರ ಸಂಸ್ಥೆಗಳಿಂದ ಒಬ್ಬ ಪ್ರತಿನಿಧಿ;
(xxi) ಕುಲಪತಿಯವರ ಕೋರಿಕೆಗನುಸಾರ ಐವರಿಗೆ ಮಿತಿಗೊಳಿಸಿದ ಈ ಮುಂದಿನ ಸಂಸ್ಥೆಗಳ ಒಬ್ಬೊಬ್ಬ ಪ್ರತಿನಿಧಿ.-
(ಎ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ.
(ಬಿ) ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ.
(ಸಿ) ಜಲಸಂಪನ್ಮೂಲ ಇಲಾಖೆ, ಕರ್ನಾಟಕ ಸರ್ಕಾರ.
(ಡಿ) ಭಾರತದ ರಾಸಾಯನಿಕ ನಿಗಮ.
(ಇ) ರಾಷ್ಟ್ರೀಯ ಬೀಜಗಳ ನಿಗಮ
(ಎಫ್) ಯಾವುದೇ ಇತರ ವ್ಯವಸಾಯೋದ್ಯಮ ಅಥವಾ ವ್ಯವಸಾಯ ಸೇವಾಸಂಸ್ಥೆ/ಬೀಜ ಕಂಪೆನಿಗಳು.
(ಜಿ) ಕರ್ನಾಟಕ ರಾಜ್ಯ ಬೀಜಗಳ ನಿಗಮ.
(ಹೆಚ್) ಕರ್ನಾಟಕ ರಾಜ್ಯ ಬೀಜ ಪ್ರಮಾಣಪತ್ರ ನೀಡಿಕೆ ಏಜೆನ್ಸಿ.
(xxii) ವಿಸ್ತರಣಾ ಶಿಕ್ಷಣ ನಿರ್ದೇಶಕರು - ಸದಸ್ಯ ಕಾರ್ಯದರ್ಶಿ.
(2) ಪದನಿಮಿತ್ತ ಸದಸ್ಯರುಗಳನ್ನು ಹೊರತುಪಡಿಸಿ ವಿಸ್ತರಣಾ ಶಿಕ್ಷಣ ಪರಿಷತ್ತಿನ ಎಲ್ಲಾ ಸದಸ್ಯರುಗಳ ಪದಾವಧಿಯು ಎರಡು ವರ್ಷಗಳಾಗಿರತಕ್ಕದ್ದು ಮತ್ತು ಅವರು ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರಕ್ಕೆ ಮರುನಾಮನಿರ್ದೇಶನ ಹೊಂದಲು ಅರ್ಹರಾಗಿರತಕ್ಕದ್ದಲ್ಲ.