ಈ ಮುಂದಿನವು ವಿಶ್ವವಿದ್ಯಾಲಯದ ಪ್ರಾಧಿಕಾರಗಳಾಗಿರತಕ್ಕದ್ದು ಎಂದರೆ :-
(1) ವ್ಯವಸ್ಥಾಪನಾ ಮಂಡಳಿ
(2) ವಿದ್ಯಾವಿಷಯಕ ಪರಿಷತ್ತು
(3) ಸಂಶೋಧನಾ ಪರಿಷತ್ತು
(4) ವಿಸ್ತರಣಾ ಶಿಕ್ಷಣ ಪರಿಷತ್ತು
(5) ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು ಮತ್ತು ಅವುಗಳ ಅಧ್ಯಯನ ಮಂಡಳಿಯನ್ನು ಒಳಗೊಂಡಂತೆ ಫ್ಯಾಕಲ್ಟಿಗಳು
(6) ಶಾಸನಗಳ ಮೂಲಕ ವಿಶ್ವವಿದ್ಯಾಲಯದ ಪ್ರಾಧಿಕಾರಗಳು ಎಂಬುದಾಗಿ ಘೋಷಿಸಿರಬಹುದಾದಂಥ ವಿಶ್ವವಿದ್ಯಾಲಯದ ಇತರ ನಿಕಾಯಗಳು