(1) ಈ ಅಧ್ಯಾದೇಶದ ಉಪಬಂಧಗಳಿಗೊಳಪಟ್ಟು, ವಿಶ್ವವಿದ್ಯಾಲಯದಲ್ಲಿ ಶಿಕ್ಷಣವು ನಿಯಮಿಸಲಾದಂತೆ ತೋಟಗಾರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ವಿಜ್ಞಾನಗಳ ವಿಷಯದಲ್ಲಿ ಪದವಿಯ, ಸ್ನಾತಕೋತ್ತರ ಪದವಿಯ ಮತ್ತು ಡಾಕ್ಟರಲ್ ಡಿಗ್ರಿ ಕಾರ್ಯಕ್ರಮಗಳು ಮತ್ತು ಅಲ್ಪಾವಧಿ ಡಿಪ್ಲೊಮಾ/ ಸರ್ಟಿಫಿಕೇಟ್ ಕೋರ್ಸುಗಳನ್ನು ಒಳಗೊಂಡಿರತಕ್ಕದ್ದು.
(2) ಈ ಶೈಕ್ಷಣಿಕ ಕಾರ್ಯಕ್ರಮಗಳು ರಾಜ್ಯ ಮತ್ತು ರಾಷ್ಟ್ರೀಯ ಕಾರ್ಯನೀತಿಗಳಿಗೆ ಅನುಗುಣವಾಗಿರತಕ್ಕದ್ದು. (3) ವಿಶ್ವವಿದ್ಯಾಲಯವು ಇ-ಕಲಿಕೆ, ವಿತರಿತ/ದೂರ ಶಿಕ್ಷಣ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಆಧಾರಿತ ಜ್ಞಾನವನ್ನು ಹಂಚಿಕೊಳ್ಳುವುದು ಈ ಸಾಧನಗಳನ್ನು ಬಳಸಿಕೊಳ್ಳತಕ್ಕದ್ದು.
(4) ಸಕ್ಷಮ ಮತ್ತು ಕುಶಲ ಪದವೀಧರರನ್ನು ಮತ್ತು ಸ್ನಾತಕೋತ್ತರ ಪದವೀಧರರನ್ನು ತಯಾರಿಸುವ ಗುರಿಯನ್ನು ತೋಟಗಾರಿಕೆ ಶಿಕ್ಷಣ ಕಾರ್ಯಕ್ರಮಗಳು ಹೊಂದಿರತಕ್ಕದ್ದು.