ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
ಎ) ‘ಅಧಿನಿಯಮ’ ಎಂದರೆ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997 ಮತ್ತು ‘ಪ್ರಕರಣ’ ಎಂದರೆ ಆ ಅಧಿನಿಯಮದ ಒಂದು ಪ್ರಕರಣ;
1 [(ಎಎ) ‘ಆಡಳಿತಗಾರ’ ಎಂದರೆ ಅಧಿನಿಯಮದ ಪ್ರಕರಣ 38 ಅಥವಾ 57ಎ ಅಡಿ ನೇಮಕವಾದ ಆಡಳಿತಗಾರ.] ಬಿ) ‘ಡಿಕ್ರಿ’ ಎಂದರೆ 43ನೇ ಪ್ರಕರಣದಲ್ಲಿ ಉಲ್ಲೇಖಿಸಲಾದ ಯಾವುದೇ ಆದೇಶ, ತೀರ್ಮಾನ ಅಥವಾ ಅವಾರ್ಡು;
ಸಿ) ‘ಡಿಕ್ರಿದಾರ’ ಎಂದರೆ (ಬಿ) ಖಂಡದಲ್ಲಿ ಪರಿಭಾಷಿಸಲಾದ ಡಿಕ್ರಿಯನ್ನು ಹೊಂದಿರುವ ಯಾಮೊಬ್ಬ ವ್ಯಕ್ತಿ;
ಡಿ) ‘ನಮೂನೆ’ ಎಂದರೆ ಈ ನಿಯಮಗಳಿಗೆ ಲಗತ್ತಿಸಿರುವ ನಮೂನೆ;
ಇ) ‘ತೀರ್ಪುಋಣಿ’ ಎಂದರೆ (ಬಿ) ಖಂಡದಲ್ಲಿ ಪರಿಭಾಷಿಸಲಾದ ಡಿಕ್ರಿಯನ್ನು ಯಾವ ಸಹಕಾರಿ ಅಥವಾ ವ್ಯಕ್ತಿಯ ವಿರುದ್ಧವಾಗಿ ಪಡೆಯಲಾಗಿದೆಯೋ ಆ ಸಹಕಾರಿ ಅಥವಾ ವ್ಯಕ್ತಿ;
ಎಫ್) ‘ವಸೂಲಿ ಅಧಿಕಾರಿ’ ಎಂದರೆ ರಿಜಿಸ್ಟ್ರಾರನಿಗೆ ಅಧೀನನಾಗಿರುವ ಮತ್ತು 43ನೇ ಪ್ರಕರಣದ ಅಡಿಯಲ್ಲಿ ರಿಜಿಸ್ಟ್ರಾರನ ಅಧಿಕಾರವನ್ನು ಚಲಾಯಿಸಲು ಅಧಿಕಾರ ಹೊಂದಿರುವ ಒಬ್ಬ ವ್ಯಕ್ತಿ;
ಜಿ) ‘ಮಾರಾಟ ಅಧಿಕಾರಿ’ ಎಂದರೆ, ತೀರ್ಪುಋಣಿಯ ಸ್ವತ್ತನ್ನು ಜಫ್ತಿ ಮಾಡುವುದಕ್ಕೆ ಮತ್ತು ಸ್ವತ್ತಿನ ಮಾರಾಟದ ಮೂಲಕ ಯಾವುದೇ ಡಿಕ್ರಿಯನ್ನು ಜಾರಿಗೊಳಿಸುವುದಕ್ಕೆ ರಿಜಿಸ್ಟ್ರಾರನಿಂದ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಅಧಿಕೃತನಾದ ಒಬ್ಬ ಅಧಿಕಾರಿ;
1 [(ಜಿ-1) ‘ವಿಶೇಷಾಧಿಕಾರಿ’ ಎಂದರೆ ಅಧಿನಿಯಮದ ಪ್ರಕರಣ 38ಎ ಅಡಿ ನೇಮಕವಾದ ವಿಶೇಷಾಧಿಕಾರಿ;
2 [(ಜಿ-2) ‘ಚುನಾವಣಾಧಿಕಾರಿ’ ಎಂದರೆ * [ಸಹಕಾರ ಚುನಾವಣಾ ಪ್ರಾಧಿಕಾರ]ದಿಂದ ಆ ಜಿಲ್ಲೆಗಾಗಿ, ಪ್ರಾಂತಕ್ಕಾಗಿ, ರಾಜ್ಯಕ್ಕಾಗಿ ಚುನಾವಣಾಧಿಕಾರಿಯಾಗಿ ನೇಮಿಸಲ್ಪಟ್ಟ ಒಬ್ಬ ಅಧಿಕಾರಿ.
ಪರಂತು, ಸಹಕಾರ ಇಲಾಖೆಯ ಸಂಬಂಧಿಸಿದ ಕಾರ್ಯವ್ಯಾಪ್ತಿಯ ಸಹಾಯಕ ನಿಬಂಧಕರು, ಉಪನಿಬಂಧಕರು ಅಥವಾ ಜಂಟಿ ನಿಬಂಧಕರನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸತಕ್ಕದ್ದಲ್ಲ.] 3 [(ಜಿ-3) ‘ರಿಟರ್ನಿಂಗ್ ಅಧಿಕಾರಿ’ ಎಂದರೆ ಚುನಾವಣಾ ಪ್ರಾಧಿಕಾರ ಅಥವಾ ಚುನಾವಣಾಧಿಕಾರಿಯಿಂದ ಆಯಾ ಸಹಕಾರ ಸಂಘಗಳಿಗೆ ರಿಟರ್ನಿಂಗ್ ಅಧಿಕಾರಿ ಎಂಬುದಾಗಿ ನೇಮಸಲ್ಪಟ್ಟ ರಾಜ್ಯ ಸರ್ಕಾರದ ಅಥವಾ ಸ್ಥಳೀಯ ಸಂಸ್ಥೆಯ ಒಬ್ಬ ಅಧಿಕಾರಿ ಮತ್ತು ರಿಟರ್ನಿಂಗ್ ಅಧಿಕಾರಿಯ ಕರ್ತವ್ಯಗಳನ್ನು ನಿರ್ವಹಿಸುವ ಒಬ್ಬ ಸಹಾಯಕ ರಿಟರ್ನಿಂಗ್ ಅಧಿಕಾರಿಯನ್ನು ಒಳಗೊಂಡಿರುತ್ತದೆ.
ಪರಂತು, ಸಹಕಾರ ಇಲಾಖೆಯ ಸಂಬಂಧಿಸಿದ ಕಾರ್ಯವ್ಯಾಪ್ತಿಯ ಸಹಾಯಕ ನಿಬಂಧಕರು, ಉಪನಿಬಂಧಕರು ಅಥವಾ ಜಂಟಿ ನಿಬಂಧಕರನ್ನು ಅಧಿಕಾರಿಯನ್ನಾಗಿ ನೇಮಿಸತಕ್ಕದ್ದಲ್ಲ;]] ಎಚ್) ಅಧಿನಿಯಮದಲ್ಲಿ ಪರಿಭಾಷಿಸಿರುವ ಇತರ ಪದಗಳು ಮತ್ತು ಪದಾವಳಿಗಳು ಆ ಅಧಿನಿಯಮದಲ್ಲಿ ಅವುಗಳಲ್ಲಿ ಕೊಟ್ಟಿರುವ ಅರ್ಥವನ್ನೇ ಹೊಂದಿರತಕ್ಕದ್ದು.
- ಅಧಿಸೂಚನೆ ಸಂಖ್ಯೆ ಸಿಒ 15 ಸಿಎಲ್ಎಂ 2013 ಮೂಲಕ ಸೇರಿಸಲ್ಪಟ್ಟು 19.09.2013ರಿಂದ ಜಾರಿಗೆ ಬಂದಿರುತ್ತದೆ.
- ಅಧಿಸೂಚನೆ ಸಂಖ್ಯೆ ಸಿಒ 15 ಸಿಎಲ್ಎಂ 2013 ಮೂಲಕ ಸೇರಿಸಲ್ಪಟ್ಟು 19.09.2013ರಿಂದ ಜಾರಿಗೆ ಬಂದಿರುತ್ತದೆ.
- ಅಧಿಸೂಚನೆ ಸಂಖ್ಯೆ ಸಿಒ 6 ಸಿಎಲ್ಎಂ 2015 ಮೂಲಕ ಬದಲಾಯಿಸಲ್ಪಟ್ಟು 20.06.2015ರಿಂದ ಜಾರಿಗೆ ಬಂದಿರುತ್ತದೆ.
- ಅಧಿಸೂಚನೆ ಸಂಖ್ಯೆ ಸಿಒ 6 ಸಿಎಲ್ಎಂ 2015 ಮೂಲಕ ಬದಲಾಯಿಸಲ್ಪಟ್ಟು 20.06.2015ರಿಂದ ಜಾರಿಗೆ ಬಂದಿರುತ್ತದೆ.
- ಅಧಿಸೂಚನೆ ಸಂಖ್ಯೆ ಸಿಒ 6 ಸಿಎಲ್ಎಂ 2015 ಮೂಲಕ ಬದಲಾಯಿಸಲ್ಪಟ್ಟು 20.06.2015ರಿಂದ ಜಾರಿಗೆ ಬಂದಿರುತ್ತದೆ. (ಎಲ್ಲಾ ಸ್ಥಳಗಳಲ್ಲಿ ಪ್ರತ್ಯೇಕ ಅಡಿ ಟಿಪ್ಪಣಿ ನೀಡಿರುವುದಿಲ್ಲ.)