ನಮೂನೆ - 8
ನಿಯಮ 17(2) (ಡಿ)
-
ನಂ. ................. ನೇ ................... ಸಹಕಾರಿಯ ಸುಸ್ತಿದಾರ .................... ನಿಂದ ಬಾಕಿಯಾಗಿರುವ ...................ರೂಪಾಯಿಗಳ ಸಂದಾಯದ ಬಗ್ಗೆ ಈ ಕೆಳಗೆ ನಮೂದಿಸಲಾದ ಸ್ಥಿರ ಸ್ವತ್ತುಗಳ ಜಫ್ತಿಯನ್ನು 200......... ನೇ ಇಸವಿ .................. ತಿಂಗಳ ............. ದಿನಾಂಕ ............ ವಾರದಂದು ಬಹಿರಂಗ ಹರಾಜು ಮೂಲಕವಾಗಿ ಅಥವಾ ಹರಾಜನ್ನು ಮುಂದೂಡಲಾದ ದಿನಾಂಕದಂದು ............... ಜಿಲ್ಲೆ .............ತಾಲ್ಲೂಕು ..................................... ಗ್ರಾಮದಲ್ಲಿ ಬಹಿರಂಗ ಹರಾಜನ್ನು ಮಾಡಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ. ಸದರಿ ಹರಾಜು ಹಗಲು ...................... ಗಂಟೆಗೆ ಪ್ರಾರಂಭವಾಗಿ ಅತ್ಯಧಿಕ ಬಿಡ್ ಕೂಗುವುವವರಿಗೆ ಸ್ವತ್ತನ್ನು ಮೂರು ಸಲಕ್ಕಾಗಿ, ಖಾಯಂ ಮಾಡಿ ಕೊಡಲಾಗುವುದು.
-
ಬಿಡ್ಡುದಾರರು ಹರಾಜಿನ ಮೊಬಲಗಿನ ಪೈಕಿ ಅದರ ಶೇಕಡಾ 15ಕ್ಕೆ ಸಮನಾದ ಮೊಬಲಗನ್ನು ಹರಾಜಿನ ಸಮಯದಲ್ಲಿ ಠೇವಣಿ ಇಡತಕ್ಕದ್ದು ಮತ್ತು ಬಿಡ್ಡು ಹಣದ ಉಳಿದ ಮೊಬಲಗನ್ನು ಮಾರಾಟದ ದಿನಾಂಕದಿಂದ 15 ದಿವಸಗಳೊಳಗಾಗಿ ಸಂದಾಯ ಮಾಡಲು ತಪ್ಪಿದರೆ ಅವರು ಇಟ್ಟಿದ್ದ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಗುರಿಯಾಗತಕ್ಕದ್ದು.
-
ಮೇಲೆ ಹೇಳಿದ ಪ್ರಕಾರ ನಿಗದಿತ ಸಮಯದೊಳಗೆ ಹಣವನ್ನು ಠೇವಣಿ ಇಡದಿದ್ದರೆ ಅಥವಾ ಅಂಥ ಮೊಬಲಗಿನ ಪೈಕಿ ಉಳಿದ ಮೊಬಲಗನ್ನು ಸಂದಾಯ ಮಾಡದಿದ್ದರೆ ಪ್ರಥಮ ಬಿಡ್ಡುದಾರನ ಸಂಬಂಧದಲ್ಲಿ ಆದ ವೆಚ್ಚ ಅಥವಾ ನಷ್ಟ ಒಳಗೊಂಡಂತೆ, ಆ ಸ್ವತ್ತಿನ ಮರು ಮಾರಾಟಕ್ಕಾಗಿ ಹೊಸ ಅಸೂಚನೆಯನ್ನು ಪ್ರಕಟಿಸಿದ ನಂತರ ಭೂಮಿಗಳನ್ನು ಪುನಃ ಮಾರಾಟ ಮಾಡಲಾಗುವುದು.
-
ಮಾರಾಟದ ಕಾಲದಲ್ಲಿ ಬಿಡ್ಡು ಮಾಡುವವರು ತಾವು ತಮ್ಮ ಪರವಾಗಿಯೇ ಬಿಡ್ಡು ಮಾಡುತ್ತಾರೋ ಅಥವಾ ಅನ್ಯ ವಕ್ತಿಯ ಪರವಾಗಿ ಬಿಡ್ಡು ಮಾಡುತ್ತಾರೋ ಎಂಬುವುದನ್ನು ತಿಳಿಸಬೇಕೆಂದು ಕೋರಬಹುದು. ಅನ್ಯ ವ್ಯಕ್ತಿಯ ಪರವಾಗಿ ಬಿಡ್ಡು ಮಾಡುವ ಪಕ್ಷದಲ್ಲಿ ಬಿಡ್ಡುದಾರರು ಆ ಅನ್ಯ ವ್ಯಕ್ತಿಯು ಸ್ವತಃ ಸಹಿ ಮಾಡಿದ ಅಧಿಕಾರ ಪತ್ರವನ್ನು ಹಾಜರು ಮಾಡುವಂತೆ ಕೋರಬಹುದು. ಈ ಪ್ರಕಾರ ಹಾಜರುಪಡಿಸದೇ ಇದ್ದರೆ ಅವರ ಬಿಡ್ಡನ್ನು ತಿರಸ್ಕರಿಸಬಹುದು.
-
ಸುಸ್ತಿದಾರನಾಗಲೀ ಅಥವಾ ಅವರ ಪರವಾಗಿ ಯಾಮೊಬ್ಬ ಏಜೆಂಟನಾಗಲೀ ಅಥವಾ ಜಫ್ತಿ ಮಾಡಲಾದ ಸ್ವತ್ತುಗಳ ಸಂಬಂಧದಲ್ಲಿ ಹಿತಾಸಕ್ತಿಯುಳ್ಳ ಕ್ಲೇಮುದಾರನಾಗಲಿ ಅಥವಾ ಯಾರೊಬ್ಬರು ಬಡ್ಡಿ ಮತ್ತು ಇತರ ಖರ್ಚುಗಳ ಸಹಿತ ಪೂರಾ ಮೊಬಲಗನ್ನು ಸಂದಾಯ ಮಾಡಿದರೆ ಹರಾಜನ್ನು ನಿಲ್ಲಿಸತಕ್ಕದ್ದು. ಪರಂತು, ಹಾಗೆ ಸಂದಾಯ ಮಾಡುವುದು ಹರಾಜು ಮಾಡಲು ನಿಗದಿಪಡಿಸಿದ ದಿನಾಂಕದ ಹಿಂದಿನ ದಿನದ ಸೂರ್ಯಾಸ್ತಕ್ಕೆ ಮುಂಚೆಯಾಗಿರತಕ್ಕದ್ದು.
-
ಹರಾಜು, ಉಪ ವಿಭಾಗೀಯ ಸಹಕಾರಿಯ ರಿಜಿಸ್ಟ್ರಾರರು ಅದನ್ನು ಖಾಯಂ ಮಾಡುವವರಿಗೆ ಖಾಯಂ ಆಗತಕ್ಕದ್ದಲ್ಲ. ಮಾರಾಟವು ಮುಕ್ತಾಯವಾದ ನಂತರ ಅದರ ಮೇಲಣ ಸ್ಟಾಂಪು ಶುಲ್ಕವನ್ನು ಪಾವತಿ ಮಾಡಿದಲ್ಲಿ ಸದರಿ ಉಪ ವಿಭಾಗದ ಸಹಾಯಕ ರಿಜಿಸ್ಟ್ರಾರನು ಸಹಿ ಹಾಗೂ ಮೊಹರು ಹಾಕಿರುವ ಮಾರಾಟದ ಪ್ರಮಾಣಪತ್ರವನ್ನು ಅವನಿಗೆ ನೀಡತಕ್ಕದ್ದು.
-
ಭೂಮಿಗಳ ವಿವರಣೆಯಲ್ಲಿ ಅಥವಾ ಅವುಗಳ ಅಂದಾಜು ವಿಸ್ತೀರ್ಣ ವಿಷಯದಲ್ಲಿ ತಪ್ಪುಗಳೇನಾದರೂ ಇದ್ದಲ್ಲಿ ಅವುಗಳ ಬಗ್ಗೆ ಸರ್ಕಾರವು ಜವಾಬ್ದಾರಿಯಾಗಿರುವುದಿಲ್ಲ ಎಂಬುದನ್ನು ಗಮನಿಸಿಬೇಕು.
| ತಾಲ್ಲೂಕು | ಗ್ರಾಮ | ಸುಸ್ತಿದಾರನ ಹೆಸರು | ಸುಸ್ತಿದಾರನಿಗೆ ಸೇರಿದ ಸ್ಥಿರ ಸ್ವತ್ತುಗಳ ವಿವರ, ಭೂಮಿಯ ಸ.ನಂ. | ಅಂದಾಜು ವಿಸ್ತೀರ್ಣ | ತೀರ್ಪು ಮೊಬಲಗು | ಸ್ವತ್ತುಗಳ ಮೇಲೆ ಯಾವುದಾದರೂ ಋಣಗಳು ಇದ್ದ ಪಕ್ಷಕ್ಕೆ ಅವುವಗಳ ವಿವರ | ಷರಾ | ||
| 1 | 2 | 3 | 4 | 5 | 6 | 7 | 8 | ||
| ಎ | ಸಂ | ರೂ. | ಪೈ. | ||||||
ಸ್ಥಳ: ಥಿ ದಿನಾಂಕ : ...
ಸಹಾಯಕ ರಿಜಿಸ್ಟಾರ್
ಸ್ಥಳ : ಸಹಾಯಕ ರಿಜಿಸ್ಟ್ರಾರ್ ದಿನಾಂಕ : ..................... ...... ಉಪವಿಭಾಗ
» ..... ಉಪವಿಭಾಗ
ಷರಾ : ಈ ನೋಟೀಸನ್ನು ಮಾರಾಟದ ಮೂವತ್ತು ದಿನಗಳ ಮುಂಚಿತವಾಗಿಯಾದರೂ ಸಹಾಯಕ ರಿಜಿಸ್ಟಾರ್ರವರ ಕಛೇರಿಯಲ್ಲಿ ತಾಲ್ಲೂಕು ಕಛೇರಿಯಲ್ಲಿ ಸೂಚನಾ ಫಲಕದಲ್ಲಿ ಪ್ರಕಟಿಸಿ ಮತ್ತು ಮಾರಾಟದ ದಿನಾಂಕಕ್ಕೆ ಮುಂಚೆ ನಿರಂತರ ಮೂರು ದಿನಗಳು ಸದರೀ ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಪ್ರಕಟಿಸತಕ್ಕದ್ದು.