ನಮೂನೆ - 12 ನಿಯಮ 18(5) ಸ್ವತ್ತುಗಳ ಹಸ್ತಾಂತರ ವರ್ಗಾವಣೆ ದೃಢೀಕರಣ ಪತ್ರ
ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997ರ 43ನೇ ಪ್ರಕರಣದ ಅಡಿ ಪ್ರಸ್ತಾಪಿಸಲಾದ ಅವಾರ್ಡ್ ಅಥವಾ ಆದೇಶ ಅಥವಾ ಆವಾರ್ಡ್ಗಳ ಅಥವಾ ಆದೇಶಗಳನ್ವಯ ಜಾರಿ ಆದೇಶ ಇಲ್ಲವೇ ಸಮಾಪಕನು 50ನೇ ಪ್ರಕರಣದ ಅಡಿ ಸಹಕಾರಿಯ ಪರವಾಗಿ ಮಾಡಿದ ಆದೇಶ ಅಥವಾ ಆದೇಶಗಳನ್ವಯ, ಈ ಕೆಳಗೆ ನಮೂದಿಸಲಾದ ವ್ಯಕ್ತಿ ಅಥವಾ ವ್ಯಕ್ತಿಗಳ (ಸಾಲಗಾರನ ಅಥವಾ ಸಾಲಗಾರರ) ಆಸ್ತಿಗಳನ್ನು ಮಾರಾಟ ಮಾಡುವ ಸಲುವಾಗಿ .................... ದಿನಾಂಕದಂದು ಆದೇಶಿಸಲಾಗಿದೆ ಮತ್ತು ಸದರಿ ಸ್ವತ್ತನ್ನು ಕೊಂಡುಕೊಳ್ಳುವವರು ಇಲ್ಲವೆಂದು ಮತ್ತು ಮಾರಾಟ ಮಾಡಲಿಕ್ಕಾಗುವುದಿಲ್ಲವೆಂದು ನ್ಯಾಯಾಲಯ / ಜಿಲ್ಲಾಧಿಕಾರಿ / ರಿಜಿಸ್ಟಾರ್ ಅವರಿಗೆ ಮನವರಿಕೆಯಾಗಿದೆ.
ಆದ್ದರಿಂದ, ಅಂತಹ ಆಸ್ತಿಯ ಮೇಲೆ ಇರುವ ಸುಸ್ತಿದಾರನ ಹಕ್ಕು, ಸ್ವಾಮ್ಯ ಮತ್ತು ಹಿತಾಸಕ್ತಿ ಇವು ಸದರಿ ಸಹಕಾರಿಯಲ್ಲಿ ನಿಹಿತವಾಗತಕ್ಕದ್ದೆಂದೂ ಮತ್ತು ಅನುಸೂಚಿಯಲ್ಲಿರುವ ನಿಬಂಧನೆ ಮತ್ತು ಷರತ್ತುಗಳಿಗೆ ಒಳಪಟ್ಟು ಸದರಿ ಸ್ವತ್ತು ಸಹಕಾರಿಗೆ ಹಸ್ತಾಂತರಿಸತಕ್ಕದ್ದೆಂದು ಈ ಮೂಲಕ ಆದೇಶಿಸಲಾಗಿರುತ್ತದೆ.
ಸ್ವತ್ತಿನ ವಿವರಗಳು
| ಸರ್ವೆ ನಂ. | ವಿಸ್ತೀರ್ಣ ಮತ್ತು ಕಂದಾಯ ನಿರ್ಧರಣೆ | ಸುಸ್ತಿ ಸಾಲಗಾರನ ಹಕ್ಕು, ಸ್ವಾಮ್ಯ, ಆಸಕ್ತಿ ಸ್ವರೂಪ | ಸ್ವತ್ತಿಗೆ ಸಂಬಂಧಿಸಿದ ಋಣಭಾರಗಳ ವಿವರಗಳು |
| 1 | 2 | 3 | 4 |