ಅನುಸೂಚಿ
ಇಲ್ಲಿ ಜಫ್ತಿ ಮಾಡಬೇಕಾದ ಸ್ವತ್ತುಗಳ ವಿವರಗಳನ್ನು ದಾಖಲಿಸತಕ್ಕದ್ದು.
ಈ ನೋಟೀಸನ್ನು ಜಾರಿ ಮಾಡುವ ವ್ಯಕ್ತಿಯು ಈ ನೋಟೀಸನ್ನು ಸುಸ್ತಿದಾರನಿಗೆ ಅಥವಾ ಅವನ ಕುಟುಂಬದ ಒಬ್ಬ ವಯಸ್ಕ ಪುರುಷ ಸದಸ್ಯನಿಗೆ ಅವರ ಮೇಲ್ಕಾಣಿಸಿದ ಸಾಮಾನ್ಯ ವಿಳಾಸದಲ್ಲಿ ತಲುಪಿಸತಕ್ಕದ್ದು ಅಥವಾ ಅವನಿಂದ ಅಧಿಕಾರ ಹೊಂದಿದ ಏಜೆಂಟನಿಗೆ ತಲುಪಿಸತಕ್ಕದ್ದು ಅಥವಾ ಈ ರೀತಿ ವೈಯಕ್ತಿಕವಾಗಿ ಜಾರಿ ಮಾಡಲು ಆಗದಿದ್ದ ಪಕ್ಷದಲ್ಲಿ, ಸುಸ್ತಿದಾರನ ಗೊತ್ತಿರುವ ಅಂಚೆಯ ವಿಳಾಸದಲ್ಲಿ ಅಥವಾ ಜಫ್ತಿ ಮಾಡಬೇಕಾಗಿರುವ/ಮಾಡಬೇಕಾದ ಸ್ಥಿರಾಸ್ತಿಯ ಎದ್ದುಕಾಣುವ ಭಾಗದಲ್ಲಿ ಅಂಟಿಸತಕ್ಕದ್ದು.
ಯಾವ ರೀತಿ ನೋಟೀಸನ್ನು ಜಾರಿ ಮಾಡಲಾಗಿದೆಯೆನ್ನುವ ಬಗ್ಗೆ ಜಾರಿಗೊಳಿಸುವ ವ್ಯಕ್ತಿಯು ಸದರಿ ನೋಟೀಸಿನ ಮೇಲೆ ದಾಖಲೆ ಮಾಡತಕ್ಕದ್ದು.