ಯಾವುದೇ ಸಹಕಾರಿ ಸಮಾಪನೆಯಲ್ಲಿರುವಾಗ ಇಲಾಖೆಯ ಅಂತರ್ಜಾಲ ತಾಣದಲ್ಲಿ ಪ್ರಚುರಪಡಿಸಿರುವ ಅರ್ಹ ಲೆಕ್ಕಪರಿಶೋಧಕರು ಅಥವಾ ಲೆಕ್ಕಪರಿಶೋಧನಾ ಸಂಸ್ಥೆಯ ಪಟ್ಟಿಯಿಂದ ಲೆಕ್ಕಪರಿಶೋಧಕ ಅಥವಾ ಲೆಕ್ಕಪರಿಶೋದನಾ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಸಾಮಾನ್ಯ ನಿಕಾಯ ಸಭೆಯನ್ನು ಆಯೋಜಿಸತಕ್ಕದ್ದು. ಸಾಮಾನ್ಯ ನಿಕಾಯ ಸಭೆಯನ್ನು ಸಮಾಪಕನು ಸಮಾವೇಶಗೊಳಿಸುವುದು ಸಾದ್ಯವಾಗದಿದ್ದಲ್ಲಿ ಸಮಾಪಕನು ಕರ್ನಾಟಕ ಸಹಕಾರಿಗಳ ಅಧಿನಿಯಮದ ಪ್ರಕರಣ 47 ರ ವಿಧಾನವನ್ನು ಅನುಸರಿಸತಕ್ಕದು.
9ಎ. ಅಪೆಕ್ಸ್ ಸಹಕಾರಿಯ ಲೆಕ್ಕಪರಿಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು:- ಪ್ರಕರಣ 33ರ ಉಪಪ್ರಕರಣ (11)ರ ಉದ್ದೇಶಕ್ಕಾಗಿ, ಲೆಕ್ಕಪರಿಶೋಧನಾ ನಿರ್ದೇಶಕನು ಅಪೆಕ್ಸ ಸಹಕಾರಿಯ ಆಡಿಟ್ ವರದಿಯ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದರ ಮೂಲಕ ಅದನ್ನು ವಿಧಾನಮಂಡಲದ ಮುಂದೆ ಮಂಡಿಸಲು ಅನುವಾಗುವಂತೆ ಕ್ರಮವಿಡತಕ್ಕದ್ದು.
9ಬಿ. ಸಾಮಾನ್ಯ ಸಭೆಯ ಕೋರಿಕೆ ಮೇರೆಗೆ ಯಾವುದೇ ಲೆಕ್ಕದ ಮರು ಪರಿಶೋಧನೆ:- ಯಾವುದೇ ಸಹಕಾರಿಯ ಸಾಮಾನ್ಯ ನಿಕಾಯವು ಸಹಕಾರಿಯ ಯಾವುದೇ ಲೆಕ್ಕವನ್ನು ಪ್ರಕರಣ 33ರ ಉಪಪ್ರಕರಣ (12)ರಡಿ ಮರು ಲೆಕ್ಕಪರಿಶೋಧಿಸಲು ತೀರ್ಮಾನಿಸಿದಲ್ಲಿ, ಅದು ಅಂಥ ಮರು ಲೆಕ್ಕಪರಿಶೋಧನೆ ನಡೆಸಲು ಬೇರೆಯಾದ ಒಬ್ಬ ಲೆಕ್ಕಪರಿಶೋಧಕ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯನ್ನು ನೇಮಿಸತಕ್ಕದ್ದು. ಅಂಥ ಮರುಲೆಕ್ಕಪರಿಶೋಧನೆಯ ವೆಚ್ಚವನ್ನು ಸಹಕಾರಿಯು ಭರಿಸತಕ್ಕದ್ದು.
9ಸಿ. ರಾಜ್ಯ ಸಹಕಾರದ ಆದೇಶದ ಮೇರೆಗೆ ಲೆಕ್ಕಗಳ ಮರು ಪರಿಶೋಧನೆ:- ಯಾವುದೇ ಸಹಕಾರಿಯ ಲೆಕ್ಕಪತ್ರಗಳ ಮರುಲೆಕ್ಕಪರಿಶೋಧನೆಗೆ ರಾಜ್ಯ ಸರ್ಕಾರವು ಆದೇಶಿಸಿದಾಗ, ಸಹಕಾರಿ ಲೆಕ್ಕಪರಿಶೋಧನಾ ನಿರ್ದೇಶಕನು ಬೇರೊಬ್ಬ ಲೆಕ್ಕಪರಿಶೋಧಕನಿಂದ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯಿಂದ ಅಂಥ ಮರುಲೆಕ್ಕಪರಿಶೋಧನೆಗೆ ವ್ಯವಸ್ಥೆ ಮಾಡತಕ್ಕದ್ದು. ಅಂಥ ಮರುಲೆಕ್ಕಪರಿಶೋಧನೆಯ ವೆಚ್ಚವನ್ನು ಸಹಕಾರಿಯು ಭರಿಸತಕ್ಕದ್ದು.
9ಡಿ. ಲೆಕ್ಕಪರಿಶೋಧಕ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಗೆ ಕೊಡಮಾಡುವ ಸಂಭಾವನೆ:- ಒಂದು ಸಹಕಾರಿಯು ಯಾವುದೇ ಸಹಕಾರಿ ವರ್ಷದ ಲೆಕ್ಕ ಪತ್ರಗಳನ್ನು ಪರಿಶೋಧಿಸಲು ಅಥವಾ ಪರಿಶೋಧನೆ ಮಾಡಿದಲ್ಲಿ ಆ ಬಗ್ಗೆ ಲೆಕ್ಕಪರಿಶೋಧಕರಿಗೆ ಅಥವಾ ಲೆಕ್ಕಪರಿಶೋಧನಾ ಸಂಸ್ಥೆಗೆ ಸಂಭಾವನೆಯನ್ನು ಸಹಕಾರಿ ಸಂಸ್ಥೆಯ ಸಾಮಾನ್ಯ ನಿಕಾಯವು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರಿಂದ ದುಡಿಯುವ ಬಂಡವಾಳ ಮತ್ತು ವ್ಯಾಪಾರ ವಹಿವಾಟು ಆಧರಿಸಿ ಕಾಲಕಾಲಕ್ಕೆ ನೀಡುವ ಮಾರ್ಗ ಸೂಚಿಗಳನ್ವಯ ನಿಗದಿಪಡಿಸತಕ್ಕದ್ದು.]