(i) ಒಂದು ಸಹಕಾರಿಯನ್ನು ಸಂಘಟಿಸಲು ಬಯಸುವ ಆದರೆ ಹತ್ತಕ್ಕೆ ಕಡಿಮೆ ಇಲ್ಲದ ವ್ಯಕ್ತಿಗಳ ಗುಂಪೊಂದು ಒಟ್ಟಿಗೆ ಸೇರಿ ಅವರಲ್ಲಿ ಒಬ್ಬ ಮುಖ್ಯ ಪ್ರವರ್ತಕನನ್ನು ಆಯ್ಕೆ ಮಾಡಿ ಅವನಿಗೆ ಸಹಾಯ ಮಾಡಲು ಕೆಲವು ಪ್ರವರ್ತಕರನ್ನು ನೇಮಿಸಿ ಮುಖ್ಯ ಪ್ರವರ್ತಕನು ಅಂತಹ ಪ್ರಸ್ತಾಪಿತ ಸಹಕಾರಿಯನ್ನು ನೋಂದಾಯಿಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರ ನೀಡಬಹುದು. ಅಂತಹ ವ್ಯಕ್ತಿಗಳ ಗುಂಪು ಪ್ರಸ್ತಾಪಿತ ಸಹಕಾರಿಯ ಹೆಸರು ಮತ್ತು ಕಾರ್ಯಕ್ಷೇತ್ರವನ್ನು ನಿರ್ಧರಿಸಿ ಪ್ರಸ್ತಾಪಿತ ಸಹಕಾರಿಯ ಉಪವಿಧಿಗಳನ್ನು ಅಳವಡಿಸಿಕೊಂಡು ಮುಖ್ಯ ಪ್ರವರ್ತಕನಿಗೆ ಪ್ರಸ್ತಾಪಿತ ಸಹಕಾರಿಯ ಸದಸ್ಯರಾಗಲು ಬಯಸುವ ವ್ಯಕ್ತಿಗಳಿಂದ ಅಗತ್ಯ ಷೇರು ಬಂಡವಾಳವನ್ನು ಸಂಗ್ರಹಿಸಲು ಅಧಿಕಾರ ನೀಡಲು ನಿರ್ಣಯಿಸತಕ್ಕದ್ದು.
(ii) ಮುಖ್ಯ ಪ್ರವರ್ತಕನು ಪ್ರಸ್ತಾಪಿತ ಸಹಕಾರಿಯನ್ನು ಸ್ಥಾಪಿಸಲು ಒಟ್ಟು ಗೂಡಿರುವ ವ್ಯಕ್ತಿಗಳ ಪಟ್ಟಿ, ಅಂತಹ ಗುಂಪಿನ ವ್ಯಕ್ತಿಗಳ ಹೆಸರು, ವಿಳಾಸ ಮತ್ತು ಸಹಿಗಳನ್ನು ಸಭಾ ನಡೆವಳಿಗಳ ಪ್ರತಿ, ಪ್ರಸ್ತಾಪಿತ ಸಹಕಾರಿಯ ಉಪವಿಧಿಗಳ ದ್ವಿಪ್ರತಿಗಳು ಮತ್ತು ಪ್ರಸ್ತಾಪಿತ ಸಹಕಾರಿಯು ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಯುಕ್ತ ಅವಕಾಶಗಳಿರುವ ಮತ್ತು ಅದು ಸದೃಢವಾಗಿ ಬೆಳವಣಿಗೆ ಹೊಂದುವ ಸಾಧ್ಯತೆ ಇದೆ ಎಂಬುದನ್ನು ತೋರಿಸುವ ಪ್ರಾಜೆಕ್ಟ್ ವರದಿಯ ಸಹಿತ ವ್ಯಾಪ್ತಿಯುಳ್ಳ ರಿಜಿಸ್ಟ್ರಾರನನ್ನು ಸಂಪರ್ಕಿಸತಕ್ಕದ್ದು.
(iii) ರಿಜಿಸ್ಟ್ರಾರನು ಪ್ರಸ್ತಾಪಿತ ಸಹಕಾರಿಯು ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಯುಕ್ತ ಅವಕಾಶಗಳಿವ ಹಾಗೂ ಅದು ಆರ್ಥಿಕ ಸದೃಢತೆಯಿಂದ ಬೆಳವಣಿಗೆ ಹೊಂದುವ ಅವಕಾಶಗಳಿವ ಎಂದು ಮನಗಂಡಲ್ಲಿ, ಪ್ರಸ್ತಾಪಿತ ಸಹಕಾರಿಯ ಸದಸ್ಯರಾಗಲು ಬಯಸುವ ತಾನು ನಿಗದಿಪಡಿಸುವ ಅಂಥ ಸಂಖ್ಯೆಯ ವ್ಯಕ್ತಿಗಳಿಂದ ಅಂಥ ಷೇರು ಬಂಡವಾಳವನ್ನು ಅಂಥ ಅವಧಿಯೊಳಗೆ ಸಂಗ್ರಹಿಸಲು ಮುಖ್ಯ ಪ್ರವರ್ತಕನಿಗೆ ಅನುಮತಿ ನೀಡಬಹುದು.
(iv) ರಿಜಿಸ್ಟ್ರಾರನಿಂದ ಅನುಮತಿ ಪಡೆದ ನಂತರ, ಮುಖ್ಯ ಪ್ರವರ್ತಕನು ಪ್ರಸ್ತಾಪಿತ ಸಹಕಾರಿಯ ಹೆಸರಿನಲ್ಲಿ ರಶೀದಿ ಪುಸ್ತಕಗಳನ್ನು ಮುದ್ರಣ ಮಾಡಿಸತಕ್ಕದ್ದು ಮತ್ತು ಪ್ರಸ್ತಾಪಿತ ಸಹಕಾರಿಯ ಸದಸ್ಯರಾಗ ಬಯಸುವ ವ್ಯಕ್ತಿಗಳಿಂದ ಷೇರು ಬಂಡವಾಳವನ್ನು ಸಂಗ್ರಹಿಸತಕ್ಕದ್ದು. ಪ್ರಸ್ತಾಪಿತ ಸದಸ್ಯರಿಂದ ಸಂಗ್ರಹಿಸುವ ಮೊಬಲಗಿಗೆ ತನ್ನ ಹೆಸರು, ಪದನಾಮ ಮತ್ತು ಸಹಿಯೊಂದಿಗೆ ರಶೀದಿಗಳನ್ನು ನೀಡತಕ್ಕದ್ದು. ಆತನು ಸಂಗ್ರಹಿಸಿದ ಹಣವನ್ನು ರಿಜಿಸ್ಟ್ರಾರನು ನಿಗದಿಪಡಿಸುವ ಯಾವುದೇ ಸಹಕಾರ ಬ್ಯಾಂಕಿನಲ್ಲಿ ಏಳು ದಿನಗಳೊಳಗೆ ಠೇವಣಿ ಇಡತಕ್ಕದ್ದು. ಆತನು ಒಂದು ನಗದು ಪುಸ್ತಕ, ರಶೀದಿ ಪುಸ್ತಕ, ಓಚರ್ ಪುಸ್ತಕ ಮತ್ತು ತಾನು ಸಂಗ್ರಹಿಸಿ ಬ್ಯಾಂಕಿಗೆ ಪಾವತಿಸಿದ ಹಣಕ್ಕೆ ಇತರ ಲೆಕ್ಕಗಳನ್ನು ನಿರ್ವಹಿಸತಕ್ಕದ್ದು. ಆದಾಗ್ಯೂ ಆತನು ಮುದ್ರಣ, ಲೇಖನ ಸಾಮಗ್ರಿ, ಬೆರಳಚ್ಚು, ಅಂಚೆ ವೆಚ್ಚ, ಇತ್ಯಾದಿ ಪ್ರಾಸಂಗಿಕ ವೆಚ್ಚಗಳನ್ನು ಭರಿಸಲು ಅಗತ್ಯವಿರುವ ಮತ್ತು ತಕ್ಕಷ್ಟಾದ ಹಣವನ್ನು ಉಳಿಸಿಕೊಳ್ಳಲು ಸಕ್ಷಮನಿರುತ್ತಾನೆ.
(v) ನಿರ್ದಿಷ್ಟಪಡಿಸಿದ ಸಂಖ್ಯೆಯ ವ್ಯಕ್ತಿಗಳಿಂದ ರಿಜಿಸ್ಟ್ರಾರನು ಅನುಮತಿಸಿದ ಪ್ರಮಾಣದ ಷೇರು ಬಂಡವಾಳವನ್ನು ಸಂಗ್ರಹಿಸಿದ ನಂತರ, ಮುಖ್ಯ ಪ್ರವರ್ತಕನು ಪ್ರಸ್ತಾಪಿತ ಸಹಕಾರಿಯ ಪ್ರವರ್ತಕರ ಸಭೆಯನ್ನು ಕರೆದು ಅದರಲ್ಲಿ ಷೇರು ಬಂಡವಾಳವನ್ನು ಸಂಗ್ರಹಿಸಿರುವ ಪ್ರಸ್ತಾಪಿತ ಸದಸ್ಯರುಗಳ ಹೆಸರುಗಳನ್ನು ಮತ್ತು ಜಮಾ ಖರ್ಚುಗಳ ವಿವರಗಳನ್ನು ಮಂಡಿಸತಕ್ಕದ್ದು. ಸದರಿ ಪ್ರವರ್ತಕರ ಸಭೆಯಲ್ಲಿ ನಿರ್ಣಯವಾದ ನಂತರ ಪ್ರಸ್ತಾಪಿತ ಸದಸ್ಯರ ಹೆಸರು ವಿಳಾಸಗಳುಳ್ಳ ಪಟ್ಟಿ ಮತ್ತು ಉಪವಿಧಿಗಳ-5 ಪ್ರತಿಗಳ ಸಹಿತ ಪ್ರಸ್ತಾಪಿತ ಸಹಕಾರಿಯ ನೋಂದಣಿಗಾಗಿ ನಿಗದಿತ ಅರ್ಜಿಯಲ್ಲಿ ಪ್ರಸ್ತಾವವನ್ನು ವ್ಯಾಪ್ತಿಯುಳ್ಳ ರಿಜಿಸ್ಟ್ರಾರನಿಗೆ ಸಲ್ಲಿಸತಕ್ಕದ್ದು. ಬಿಡಿ ವ್ಯಕ್ತಿಯಾಗಿರುವ ಪ್ರತಿಯೊಬ್ಬ ಅರ್ಜಿದಾರನು ಮತ್ತು ಯಾವುದೇ ಸಹಕಾರಿಯು ಅರ್ಜಿದಾರನಾಗಿದ್ದಲ್ಲಿ ಅದರ ಪರವಾಗಿ ಪ್ರಾಧಿಕೃತನಾದ ವ್ಯಕ್ತಿಯು ಸದರಿ ಅರ್ಜಿಗೆ ಸಹಿ ಮಾಡಿರತಕ್ಕದ್ದು ಮತ್ತು ಸದರಿ ಅರ್ಜಿಯು ನಿಗದಿತ ನೋಂದಣಿ ಶುಲ್ಕವನ್ನು ಪಾವತಿಸಿದ ಚಲನ್ ಅನ್ನು ಒಳಗೊಂಡಿರತಕ್ಕದ್ದು.]
1 [(2) ನೋಂದಣಿಗಾಗಿ ಅರ್ಜಿ ಮತ್ತು ಕಾರ್ಯ ವಿಧಾನ :
ಎ) ಒಂದು ಸಹಕಾರಿಯ ನೋಂದಣಿಗಾಗಿ ಅಥವಾ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ ಅಡಿಯಲ್ಲಿ ನೋಂದಾಯಿತವಾದ ಒಂದು ಸಂಘವು, ಸೌಹಾರ್ದ ಸಹಕಾರಿಯಾಗಿ ಪರಿವರ್ತನೆಗೊಳ್ಳಲು 5ನೇ ಪ್ರಕರಣಕ್ಕೆ ಅನುಸಾರ ಸಲ್ಲಿಸುವ ಪ್ರತಿಯೊಂದು ಅರ್ಜಿಯು, ಈ ನಿಯಮದಲ್ಲಿ ನಿಯಮಿಸಲಾದ ನಮೂನೆ 1ರಲ್ಲಿ ನಿರ್ದಿಷ್ಟಪಡಿಸಿದ ವಿವರಗಳನ್ನು ಒಳಗೊಂಡಿರತಕ್ಕದ್ದು ಮತ್ತು ಆ ನಮೂನೆಯಲ್ಲೇ ಇರತಕ್ಕದ್ದು.
- ಅಧಿಸೂಚನೆ ಸಂಖ್ಯೆ ಸಿಒ 15 ಸಿಎಲ್ಎಂ 2013 ಮೂಲಕ ಸೇರಿಸಲ್ಪಟ್ಟು 19.09.2013ರಿಂದ ಜಾರಿಗೆ ಬಂದಿರುತ್ತದೆ. 1. ಅಧಿಸೂಚನೆ ಸಂಖ್ಯೆ ಸಿಒ 15 ಸಿಎಲ್ಎಂ 2013 ಮೂಲಕ ಮರುಸಂಖ್ಯೆ ನೀಡಲ್ಪಟ್ಟು 19.09.2013ರಿಂದ ಜಾರಿಗೆ ಬಂದಿರುತ್ತದೆ. ಬಿ) 5ನೇ ಪ್ರಕರಣದ ಮೇರೆಗೆ ನೋಂದಣಿಗಾಗಿ ಸಲ್ಲಿಸಲಾದ ಅರ್ಜಿಗೆ ಅರ್ಜಿದಾರರ ಪೈಕಿ ಒಬ್ಬರಾದ ಯಾವುದೇ ಸಹಕಾರಿಯ ಪರವಾಗಿ ಅಧಿಕೃತವಾದ ವ್ಯಕ್ತಿಯು ಸಹಿ ಮಾಡಿರುವ ಸಂದರ್ಭಗಳಲ್ಲಿ ಅಂಥ ಪ್ರಾಧಿಕಾರವನ್ನು ನೀಡುವ ಅಂಥ ಸಹಕಾರಿಯ ನಿರ್ದೇಶಕ ಮಂಡಳಿಯ ನಿರ್ಣಯದ ಪ್ರತಿಯನ್ನು ಅರ್ಜಿಯೊಡನೆ ಲಗತ್ತಿಸತಕ್ಕದ್ದು.
ಸಿ) 5ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳ ಬಗ್ಗೆ ರಿಜಿಸ್ಟ್ರಾರನು, ಸ್ವಯಂ ಖಚಿತಪಡಿಸಿಕೊಳ್ಳಲು ಅಗತ್ಯವಾದಂಥ ವಿವರಗಳನ್ನು ತರಿಸಿಕೊಳ್ಳಬಹುದು ಅಥವಾ ಅಂಥ ವಿಚಾರಣೆಯನ್ನು ಮಾಡಬಹುದು.
ಡಿ) ಅರ್ಜಿದಾರರು, ನೋಂದಣಿಗಾಗಿ ಅರ್ಜಿಯೊಡನೆ ಸಲ್ಲಿಸಿರುವ ಉಪವಿಧಿಗಳು ಅಧಿನಿಯಮದ ಮತ್ತು ನಿಯಮಗಳ ಉಪಬಂಧಗಳಿಗೆ ಅನುಗುಣವಾಗಿ ಇರುವಂತೆ ಮಾಡುವುದಕ್ಕಾಗಿ, ಅವುಗಳಿಗೆ ಸೂಕ್ತವಾದಂಥ ಬದಲಾವಣೆಗಳನ್ನು ಮಾಡಲು ಅಥವಾ ಸೇರ್ಪಡೆ ಮಾಡಿಕೊಡಬೇಕೆಂದು ಅಪೇಕ್ಷಿಸಿದಲ್ಲಿ ಅವರಿಗೆ ಲಿಖಿತದಲ್ಲಿ ರಿಜಿಸ್ಟ್ರಾರನು ಅನುಮತಿ ನೀಡಬಹುದು.
ಈ) ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ ಅಡಿಯಲ್ಲಿ ನೋಂದಣಿ ಆದ ಸಂಘವು, ಸಹಕಾರಿಯಾಗಲು ಇಚ್ಛಿಸಿದಲ್ಲಿ ಅಂಥ ಪ್ರಸ್ತಾವವನ್ನು ಸರ್ವ ಸದಸ್ಯರ ಸಭೆಯು ಅಂಗೀಕರಿಸಿದ ದಿನಾಂಕದಿಂದ 60 ದಿನಗಳೊಳಗಾಗಿ ಕಳುಹಿಸತಕ್ಕದ್ದು.
(3) ಆರ್ಥಿಕ ಸದೃಢತೆಯ ಮಾನದಂಡಗಳು : ಒಂದು ಸಹಕಾರಿಯು, ನೋಂದಾಯಿತವಾದ ನಂತರ, ಅರ್ಥಿಕ ಸದೃಢತೆಯಿಂದ ಮುನ್ನಡೆಯುವ ಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಪ್ರಸ್ತಾವಿತ ಸಹಕಾರಿಯ ಮುಖ್ಯ ಪ್ರವರ್ತಕನು ನೋಂದಾಯಿಸಬೇಕಾದ ಸದಸ್ಯರ ಸಂಖ್ಯೆ, ಸಂಗ್ರಹಿಸಬೇಕಾದ ಷೇರು ಬಂಡವಾಳ ಮತ್ತು ನಿರ್ವಹಿಸಬೇಕಾದ ಇತರೆ ಮಾನದಂಡಗಳನ್ನು ರಿಜಿಸ್ಟ್ರಾರನು ಕಾಲಕಾಲಕ್ಕೆ ನಿಗದಿಪಡಿಸತಕ್ಕದ್ದು.] 1 [(4) ಉಪವಿಧಿಗಳು:
(ಎ) ಸಂಯುಕ್ತ ಸಹಕಾರಿಯನ್ನು ಒಳಗೊಂಡಂತೆ ಪ್ರತಿ ಸಹಕಾರಿಯು ಈ ಅಧಿನಿಯಮ ಮತ್ತು ಅದರಡಿ ರಚಿಸಲಾದ ನಿಯಮಗಳ ಉಪಬಂಧಗಳಿಗೆ ಅನುಗುಣವಾಗಿ ತನ್ನ ಉಪವಿಧಿಗಳನ್ನು ರೂಪಿಸತಕ್ಕದ್ದು. (ಬಿ) ಸಂಯುಕ್ತ ಸಹಕಾರಿಯನ್ನು ಒಳಗೊಂಡಂತೆ ಯಾವುದೇ ಸಹಕಾರಿಯು, ಕಾಲಕಾಲಕ್ಕೆ ಅಧಿನಿಯಮ ಮತ್ತು ಈ ನಿಯಮಗಳ ಉಪಬಂಧಗಳಿಗೆ ಅನುಸಾರವಾಗಿ ತನ್ನ ಉಪವಿಧಿಗಳನ್ನು ತಿದ್ದುಪಡಿ ಮಾಡತಕ್ಕದ್ದು. ಪರಂತು ಸಂಯುಕ್ತ ಸಹಕಾರಿಯನ್ನೊಳಗೊಂಡಂತೆ ಪ್ರತಿ ಸಹಕಾರಿಯು ಅಧಿನಿಯಮ ಮತ್ತು ನಿಯಮಗಳಿಗೆ ಕಾಲಕಾಲಕ್ಕೆ ಮಾಡಲ್ಪಟ್ಟ ತಿದ್ದುಪಡಿಗಳಿಗೆ ಅನುಗುಣವಾಗಿ ತಿದ್ದುಪಡಿಗಳು ಜಾರಿಗೆ ಬರುವ ದಿನಾಂಕದಿಂದ ಮುಂಬರುವ ಮೊದಲನೇ ಸರ್ವ ಸದಸ್ಯರ ಸಭೆಯಲ್ಲಿ ತನ್ನ ಉಪವಿಧಿಗಳಿಗೆ ಅಗತ್ಯವಾದ ತಿದ್ದುಪಡಿಗಳನ್ನು ಮಾಡಿಕೊಳ್ಳಬೇಕಾಗಿರುತ್ತದೆ.
(ಸಿ) ಸಹಕಾರಿ ಪಡೆಯಬಹುದಾದ ಸಾಲ ಮತ್ತು ಠೇವಣಿಗಳ ಪ್ರಮಾಣವು ಸಹಕಾರಿಯ ಸಂದಾಯಿತ ಷೇರು ಬಂಡವಾಳ, ಮೀಸಲು ನಿಧಿ ಮತ್ತು ಕಟ್ಟಡ ನಿಧಿಗಳನ್ನು ಕೂಡಿಸಿದಾಗ ಬರುವ ಮೊತ್ತದ 50ಪಟ್ಟು ಮೊಬಲಗಿನಲ್ಲಿ ಸಂಚಿತ ನಷ್ಟವನ್ನು ಕಳೆದಾಗ ಪ್ರಾಪ್ತವಾಗುವ ಮೊತ್ತವನ್ನು ಮೀರತಕ್ಕದ್ದಲ್ಲ. ಪ್ರತಿ ಸದಸ್ಯನಿಗೆ ಸಹಕಾರಿಯು ಕೊಡಬಹುದಾದ ಸಾಲದ ಪ್ರಮಾಣವು ಸಾಲದ ಉದ್ದೇಶ ಮತ್ತು ಸಹಕಾರಿಯಲ್ಲಿನ ನಿಧಿಗಳ ಲಭ್ಯತೆಯ ಆಧಾರದ ಮೇಲೆ ಉಪವಿಧಿಗಳಲ್ಲಿ ನಿಗದಿಪಡಿಸತಕ್ಕದ್ದು
(ಡಿ) ಸಹಕಾರಿ ಮತ್ತು ಸಂಯುಕ್ತ ಸಹಕಾರಿಗಳಲ್ಲಿ ಸಿಬ್ಬಂದಿಗಳ ನೇಮಕಾತಿ ಮತ್ತು ಸೇವೆಗೆ ಸಂಬಂಧಿಸಿದ ನಿಯಮಗಳಿಗೆ ಉಪವಿಧಿಗಳಲ್ಲಿ ಸೂಕ್ತವಾಗಿ ಅವಕಾಶ ಮಾಡಿಕೊಳ್ಳುವುದು.] 1 [3ಎ. ಉಪವಿಧಿ ತಿದ್ದುಪಡಿಗೆ ಶುಲ್ಕ - ಪ್ರಕರಣ 11ರ ಪ್ರಕಾರ ಉಪವಿಧಿ ತಿದ್ದುಪಡಿಗೆ ಪ್ರಸ್ಥಾವೆ ಸಲ್ಲಿಸುವ ಸಂದರ್ಭದಲ್ಲಿ ಕೆಳಗೆ ನಿರ್ದಿಷ್ಟಪಡಿಸಿರುವ ಶುಲ್ಕವನ್ನು ರಿಜಿಸ್ಟ್ರಾರನ ಹೆಸರಿಗೆ ಪಾವತಿ ಮಾಡಿದ ಬಗ್ಗೆ ಖಜಾನೆಯ ಚಲನ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ನ್ನು ಲಗತ್ತಿಸತಕ್ಕದ್ದು, ಎಂದರೆ –
ಸಹಕಾರಿಯ ವ್ಯಾಪ್ತಿ ಪಾವತಿಸಬೇಕಾದ ಸಹಕಾರಿಯ ಕಾರ್ಯಾಚರಣೆಯ ಕ್ಷೇತ್ರವು ಮೊತ್ತ 1) ತಾಲ್ಲೂಕಿಗಿಂತ ಕಡಿಮೆ ವ್ಯಾಪ್ತಿ ರೂ.400-00 1. ಅಧಿಸೂಚನೆ ಸಂಖ್ಯೆ ಸಿಒ 15 ಸಿಎಲ್ಎಂ 2013 ಮೂಲಕ ಸೇರಿಸಲ್ಪಟ್ಟು 19.09.2013ರಿಂದ ಜಾರಿಗೆ ಬಂದಿರುತ್ತದೆ.
- ಅಧಿಸೂಚನೆ ಸಂಖ್ಯೆ ಸಿಒ 6 ಸಿಎಲ್ಎಂ 2015 ಮೂಲಕ ಸೇರಿಸಲ್ಪಟ್ಟು 20.06.2015ರಿಂದ ಜಾರಿಗೆ ಬಂದಿರುತ್ತದೆ.
- ತಾಲ್ಲೂಕು ಮತ್ತು ತಾಲ್ಲೂಕಿಗಿಂತ ಹೆಚ್ಚಾಗಿ ರೂ.1000-00 ಆದರೆ ಜಿಲ್ಲೆಗಿಂತ ಕಡಿಮೆ ವ್ಯಾಪ್ತಿ 3) ಜಿಲ್ಲೆ ಮತ್ತು ಜಿಲ್ಲೆಗಿಂತ ಹೆಚ್ಚಾದ ವ್ಯಾಪ್ತಿ ರೂ.2000-00]