(1) ಒಂದು ಸಹಕಾರಿಯು ತನ್ನ ಮೀಸಲು ನಿಧಿಯನ್ನು ಯಾವುದೇ ಸಹಕಾರಿ ಬ್ಯಾಂಕು ಅಥವಾ ಅನುಸೂಚಿತ ಬ್ಯಾಂಕಿನಲ್ಲಿ ಹೂಡಬಹುದು ಅಥವಾ ಠೇವಣಿ ಇಡಬಹುದು.
(ಎ) ಮೀಸಲು ನಿಧಿಯನ್ನು ಸಹಕಾರಿಯು ಯಾವುದೇ ವ್ಯವಹಾರಕ್ಕೆ ಬಳಸತಕ್ಕದ್ದಲ್ಲ ಮತ್ತು ಇದರಲ್ಲಿ ಯಾವುದೇ ಪಾಲು ಸದಸ್ಯರಿಗೆ ಸಲ್ಲತಕ್ಕದ್ದಲ್ಲ.
(ಬಿ) ಸಹಕಾರಿಯ ಉದ್ದೇಶ ಸಾಧನೆಗಳಿಗೆ ಅಗತ್ಯವಾದ ನಿವೇಶನ ಖರೀದಿ, ಕಟ್ಟಡ ನಿರ್ಮಾಣ ಅಥವಾ ನವೀಕರಣಕ್ಕೆ ಹಣದ ಅವಶ್ಯಕತೆ ಇದ್ದಲ್ಲಿ, 1 [ಸಾಮಾನ್ಯ ನಿಕಾಯವು ಅದರ ಸಾಮಾನ್ಯ ಸಭೆಯಲ್ಲಿ ಹಾಜರಿದ್ದು ಮತ ನೀಡಿದ ಮತದಾನದ ಹಕ್ಕುಳ್ಳ ಸದಸ್ಯರ ಬಹುಮತದಿಂದ ಅಂಗೀಕರಿಸಲ್ಪಟ್ಟ ನಿರ್ಣಯದ ಮೂಲಕ ಸಾಮಾನ್ಯ ನಿಕಾಯದ] ಅನುಮೋದನೆ ಪಡೆದು ನಿಯ ಶೇ.80ರ ವರೆಗಿನ ಮೊಬಲಗನ್ನು ಈ ಉದ್ದೇಶಕ್ಕಾಗಿ ಬಳಸಬಹುದು. ಅದಾಗ್ಯೂ, ಮುಂದಿನ ಹಣಕಾಸಿನ ವರ್ಷಗಳಲ್ಲಿ ದೊರೆತ ಲಾಭದಿಂದ ಈ ಮೊತ್ತವನ್ನು ಮೀಸಲು ನಿಧಿಗೆ ವರ್ಗಾಯಿಸತಕ್ಕದ್ದು.
(2) ಒಂದು ಸಹಕಾರಿಯನ್ನು ಸಮಾಪನಗೊಳಿಸಿದ ನಂತರ ಅದರ ಆಸ್ತಿಗಳಿಂದ ತೀರಿಸಲಾಗದೇ ಉಳಿದ ಹೊಣೆಗಳನ್ನು ತೀರಿಸಲು, ಸಮಾಪಕರು ಮೀಸಲು ನಿಧಿಯನ್ನು ಮತ್ತು ಉಪವಿಧಿಗಳಿಗನುಸಾರ ರಚಿಸಿದ್ದ ಇತರ ನಿಧಿಗಳನ್ನು ಕೆಳಕಂಡ ಕ್ರಮದಲ್ಲಿ ವಿನಿಯೋಗಿಸತಕ್ಕದ್ದು.
(ಎ) ಸಹಕಾರಿಯ ಸಾಲಗಳು.
(ಬಿ) ಲಾಭಾಂಶವನ್ನು ವಿತರಿಸದೆ ಇದ್ದ ಯಾವುದೇ ಅವಧಿಗೆ ಅಥವಾ ಅವಧಿಗಳಿಗೆ ಪಾವತಿಯಾದ ಷೇರುಗಳ ಮೇಲೆ ಶೇ.6ಕ್ಕೆ ಹೆಚ್ಚಾಗದಂತೆ ಲಾಭಾಂಶವನ್ನು ಹಂಚುವುದು, ಆದರೆ ಸಹಕಾರಿಯ ಉಪವಿಧಿಗಳಲ್ಲಿ ಲಾಭಾಂಶ ಹಂಚಿಕೆಗೆ ಅವಕಾಶ ಮಾಡದಿದ್ದ ಪಕ್ಷದಲ್ಲಿ, ಷೇರು ಬಂಡವಾಳದ ಮೇಲೆ ಯಾವುದೇ ಲಾಭಾಂಶವನ್ನು ಹಂಚಿಕೆ ಮಾಡತಕ್ಕದ್ದಲ್ಲ.
(3) ಮೇಲ್ಕಂಡ ಉಪ ನಿಯಮ (2)ರಂತೆ ಹಣವನ್ನು ಸಂದಾಯ ಮಾಡಿ ನಂತರ ಉಳಿಯುವ ಯಾವುದೇ ಹೆಚ್ಚುವರಿ ನಿಧಿಗಳನ್ನು ಕೆಳಕಂಡ ರೀತಿಯಲ್ಲಿ ಮತ್ತು ಈ ಕೆಳಗಿನ ಷರತ್ತುಗಳಿಗೊಳಪಟ್ಟು ವಿನಿಯೋಗಿಸತಕ್ಕದ್ದು. (ಎ) ಹಣಕಾಸು ಒದಗಿಸುವ ಬ್ಯಾಂಕಿನ ಹೊರತಾಗಿ ಇತರ ಸಹಕಾರಿಗಳಾದಲ್ಲಿ;
(i) ಸಮಾಪನೆಗೊಳಿಸಲಾದ ಸಹಕಾರಿಯ ಸರ್ವ ಸದಸ್ಯರ ಸಭೆಯು ಆಯ್ಕೆ ಮಾಡಿದ ಉದ್ದೇಶಕ್ಕಾಗಿ ಹೆಚ್ಚುವರಿ ನಿಧಿಗಳನ್ನು ಉಪಯೋಗಿಸತಕ್ಕದ್ದು. ಅಂಥ ಉದ್ದೇಶವನ್ನು ಈಡೇರಿಸುವುದಕ್ಕಾಗಿ ವ್ಯಕ್ತಿಗಳ ಪೈಕಿ ಒಬ್ಬ ನ್ಯಾಸಧಾರಿ (ಟ್ರಸ್ಟೀ) ಅಥವಾ ನ್ಯಾಸಧಾರಿಗಳನ್ನು ಆಯ್ಕೆ ಮಾಡುವಂತೆ ಸರ್ವ ಸದಸ್ಯರ ಸಭೆಯನ್ನು ಕೋರಲು ಸಮಾಪಕರು ಸಕ್ಷಮನಾಗಿರತಕ್ಕದ್ದು. ಸರ್ವ ಸದಸ್ಯರ ಸಭೆಯು ನ್ಯಾಸಧಾರಿ ಅಥವಾ ನ್ಯಾಸಧಾರಿಗಳನ್ನು ಆಯ್ಕೆ ಮಾಡದಿದ್ದಲ್ಲಿ ಅಥವಾ ಸರ್ವ ಸದಸ್ಯರ ಸಭೆ ಆಯ್ಕೆ ಮಾಡಿದ ನ್ಯಾಸಧಾರಿ ಅಥವಾ ನ್ಯಾಸದಾರಿಗಳು ಸಮಾಪಕನಿಗೆ ಒಪ್ಪಿಗೆಯಾಗದಿದ್ದಲ್ಲಿ, ಸಮಾಪಕರು ಸ್ವತಃ ಒಬ್ಬ ನ್ಯಾಸಧಾರಿ ಅಥವಾ ನ್ಯಾಸಧಾರಿಗಳನ್ನು ನೇಮಕ ಮಾಡಬಹುದು. ನ್ಯಾಸಧಾರಿ ಅಥವಾ ನ್ಯಾಸಧಾರಿಗಳು ರಿಜಿಸ್ಟ್ರಾರನು ಆಗಿಂದಾಗ್ಗೆ ನಿರ್ದಿಷ್ಟಪಡಿಸಬಹುದಾದಂಥ ನಮೂನೆಯಲ್ಲಿ ಕರಾರು ಪತ್ರವನ್ನು ಬರೆದುಕೊಡತಕ್ಕದ್ದು. ಈ ಉಪಖಂಡದ ಮೇರೆಗೆ ರಚಿಸಲಾದ ನ್ಯಾಸವು (ಟ್ರಸ್ಟ್) ತತ್ಕಾಲದಲ್ಲಿ ಜಾರಿಯಲ್ಲಿರುವ ಸಾರ್ವಜನಿಕ ಧರ್ಮಾರ್ಥ ನ್ಯಾಸಿಗಳಿಗೆ ಸಂಬಂಧಪಡುವ ಕಾನೂನಿನ ಉಪಬಂಧಗಳಿಗೊಳಪಟ್ಟಿರತಕ್ಕದ್ದು.
(ii) ಸಹಕಾರಿಯ ವ್ಯವಹಾರಗಳನ್ನು ಸಮಾಪನೆಗೊಳಿಸಲು ನೇಮಿಸಲಾದ ಸಮಾಪಕನು ನೋಟೀಸು ನೀಡಿದ ನಂತರದ 30 ದಿವಸಗಳೊಳಗಾಗಿ ಸರ್ವ ಸದಸ್ಯರ ಸಭೆಯು ಯಾವುದೇ ಆಯ್ಕೆಯನ್ನು ಮಾಡಲು ತಪ್ಪಿದಲ್ಲಿ ಅಂಥ ಪ್ರದೇಶದಲ್ಲಿ ಅಂಥದೇ ಉದ್ದೇಶಗಳುಳ್ಳ ಒಂದು ಸಹಕಾರಿಯು ನೋಂದಣಿ ಆಗುವವರೆಗೆ ಸಮಾಪಕನು ಹೆಚ್ಚುವರಿ ನಿಧಿಗಳನ್ನು, ಸಮಾಪನಗೊಳ್ಳಲಿರುವ ಸಹಕಾರಿಯು, ಕಾರ್ಯನಿರ್ವಹಿಸುತ್ತಿದ್ದ ಪ್ರದೇಶದಲ್ಲಿನ ಒಂದು ಹಣಕಾಸು ವ್ಯವಹಾರ ನಡೆಸುವ ಬ್ಯಾಂಕಿನಲ್ಲಿ ಠೇವಣಿಯಾಗಿಡಬಹುದು. ಅಂಥವೇ ಉದ್ದೇಶಗಳುಳ್ಳ ಸಹಕಾರಿಯು ನೋಂದಣಿಯಾದ ಸಂದರ್ಭದಲ್ಲಿ, ಸದರಿ ನಿಧಿಗಳನ್ನು ಹೊಸ ಸಹಕಾರಿಯ ಮೀಸಲು ನಿಗೆ ಜಮಾ ಮಾಡತಕ್ಕದ್ದು. ಸೂಕ್ತ ಸಮಯದೊಳಗೆ ಅಂಥ ಪ್ರದೇಶದಲ್ಲಿ ಹೊಸ ಸಹಕಾರಿಯು ನೋಂದಣಿಯಾಗುವ ಸಂಭವ ಇಲ್ಲದಿರುವಲ್ಲಿ ಸಮಾಪಕನು ಸದರಿ ಮೊಬಲಗನ್ನು ಅಂಥ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಣಕಾಸು ವ್ಯವಹಾರ ನಡೆಸುವ ಬ್ಯಾಂಕಿನಲ್ಲಿ ವಸೂಲಾಗದ ಸಾಲದ ನಿಧಿಗೆ ಅಥವಾ ಮೀಸಲು ನಿಧಿಗೆ ವರ್ಗಾಯಿಸತಕ್ಕದ್ದು.
(ಬಿ) ಸಮಾಪನಗೊಳ್ಳಲಿರುವ ಸಹಕಾರಿಯು, ಹಣಕಾಸಿನ ಬ್ಯಾಂಕು ಆಗಿದ್ದಲ್ಲಿ, ಅಂಥ ಬ್ಯಾಂಕು ಯಾವ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿತ್ತೋ, ಆ ಪ್ರದೇಶದಲ್ಲಿರುವ ಸಹಕಾರಿಗಳು ಸಂಯೋಜಕತ್ವವನ್ನು ಪಡೆದ ಇತರ ಹಣಕಾಸು ಬ್ಯಾಂಕು ಅಥವಾ ಬ್ಯಾಂಕುಗಳ ಮೀಸಲು ಅಥವಾ ಇತರ ನಿಧಿಗಳಿಗೆ ಅಂಥ ಹೆಚ್ಚುವರಿ ಹಣವನ್ನು ಸಮಾಪಕನು ಠೇವಣಿಯಾಗಿ ಇಡತಕ್ಕದ್ದು. ಒಂದು ವೇಳೆ ಅಂಥ ಹಣಕಾಸು ಬ್ಯಾಂಕು ಇಲ್ಲದಿದ್ದಲ್ಲಿ ಹೊಸ ಬ್ಯಾಂಕು ಸ್ಥಾಪನೆಯಾಗುವವರೆಗೆ ಅಂಥ ಹೆಚ್ಚುವರಿ ಹಣವನ್ನು ರಾಜ್ಯ ಸಹಕಾರ ಬ್ಯಾಂಕಿನಲ್ಲಿರಿಸಿ, ಹೊಸ ಬ್ಯಾಂಕು ಸ್ಥಾಪನೆಯಾದ ಕೂಡಲೇ ಆ ಬ್ಯಾಂಕಿನ ಮೀಸಲು ನಿಧಿಗೆ ವರ್ಗಾಯಿಸತಕ್ಕದ್ದು.